ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ ಪಯಣ ಆರಂಭವಾಗಿದ್ದು ಮೈದಾನ, ಕೋಚ್ ಮೂಲಕ ಅಲ್ವಂತೆ: 'ಕ್ರಿಕೆಟ್ ದೇವರ' ಸುದೀರ್ಘ ಟ್ವಿಟ್ ವೈರಲ್

Sachin Tendulkar: ಕ್ರಿಕೆಟ್‌ ದೇವರು ಅಂತಲೇ ಪ್ರಸಿದ್ಧಿ ಪಡೆದಿರುವ ಸಚಿನ್ ತೆಂಡೂಲ್ಕರ್ ಮಹತ್ವದ ಕಾರ್ಯಗಳನ್ನು ಮಾಡುತ್ತಲಿರುತ್ತದೆ. ಇದೀಗ ಶಿಕ್ಷಕರ ದಿನಾಚರಣೆಯ ಅಂಗವಾಗಿ ಅವರು ತಮ್ಮ ಮೊದಲ ಗುರು ಹಾಗೂ ತಂದೆ ದಿವಂಗತ ಪ್ರೊಫೆಸರ್ ರಮೇಶ್ ತೆಂಡೂಲ್ಕರ್ ಅವರನ್ನು ಸ್ಮರಿಸಿದ್ದಾರೆ. ಇದೇ ವೇಳೆ ಅವರು ಮಹತ್ವದ ಘೋಷಣೆ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಮಾಡುತ್ತಲಿದೆ.

ಸಾಮಾಜಿಕ ಜಾಲತಾಣ ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ತಮ್ಮ ಜೀವನವನ್ನು ರೂಪಿಸಿದ ತಂದೆಯ ಮೌಲ್ಯಯುತ ಪಾಠಗಳನ್ನು ನೆನಪಿಸಿಕೊಂಡಿದ್ದು, ಯುವ ವೈದ್ಯರಿಗಾಗಿ 'ಪ್ರೊಫೆಸರ್ ರಮೇಶ್ ತೆಂಡೂಲ್ಕರ್ ಮೆಮೋರಿಯಲ್ ಫೆಲೋಶಿಪ್' ಅನ್ನು ಆಯೋಜಿಸುವುದಾಗಿ ಘೋಷಣೆ ಮಾಡಿದ್ದಾರೆ.

Sachin Tendulkar Announces Professor Ramesh Tendulkar Memorial Fellowship Cricket God Tweet Viral

ತಮ್ಮ ಸಾಧನೆಗೆ ಕಾರಣ ತಿಳಿಸಿದ ಸಚಿನ್ ತೆಂಡೂಲ್ಕರ್

ಟೀಮ್ ಇಂಡಿಯಾ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯ ಅಂಗವಾಗಿ ತಮ್ಮ ಜೀವನಕ್ಕೆ ದಾರಿ ದೀಪವಾದ ಮಾರ್ಗದರ್ಶಿ, ತಂದೆ ದಿ. ರಮೇಶ್ ತೆಂಡೂಲ್ಕರ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ತಮ್ಮ ಸಾಧನೆ ಮತ್ತು ಜೀವನದ ಮೌಲ್ಯಗಳಿಗೆ ತಂದೆಯವರೇ ಪ್ರಮುಖ ಕಾರಣ ಎಂದು ಹೇಳುವ ಮೂಲಕ ಈ ಮಹತ್ವದ ಘೋಷಣೆ ಮಾಡಿದ್ದಾರೆ.

'ಕ್ರಿಕೆಟ್ ಪ್ರಯಾಣ ಆರಂಭವಾಗಿದ್ದು ಮೈದಾನ, ಕೋಚ್ ಮೂಲಕ ಅಲ್ಲ'

ಪ್ರೊಫೆಸರ್ ರಮೇಶ್ ತೆಂಡೂಲ್ಕರ್ ಅವರು ಒಬ್ಬ ಬರಹಗಾರ, ಕವಿ ಮತ್ತು ಶಿಕ್ಷಕರಾಗಿದ್ದರು. 'ನನ್ನ ಕ್ರಿಕೆಟ್ ಪ್ರಯಾಣ ಆರಂಭವಾದದ್ದು ಕ್ರಿಕೆಟ್ ಮೈದಾನದಲ್ಲಾಗಲಿ ಅಥವಾ ಕೋಚ್ ಮೂಲಕವಾಗಲಿ ಅಲ್ಲ, ಬದಲಾಗಿ ನನ್ನ ಮನೆಯಲ್ಲಿ. ತಮ್ಮಲ್ಲಿದ್ದ ಕ್ರಿಕೆಟ್ ಪ್ರೀತಿಯನ್ನು ಮೊದಲು ಗುರುತಿಸಿ, ಅದರಲ್ಲಿ ಮುಂದುವರಿಯಲು ತಂದೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು,' ಎಂದು ಸಚಿನ್ ತೆಂಡೂಲ್ಕರ್ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ತಂದೆ ಮಾತುಗಳನ್ನ ಸ್ಮರಿಸಿದ ಕ್ರಿಕೆಟ್‌ ದೇವರು

'ಸೋಲು ಅನುಭವಿಸಿದರೂ ಪರವಾಗಿಲ್ಲ, ಆದರೆ ಮೋಸ ಮಾಡಬಾರದು ಮತ್ತು ಎಂದಿಗೂ ಅಡ್ಡದಾರಿ ಹಿಡಿಯಬಾರದು ಎಂದು ತಂದೆ ಹೇಳಿಕೊಟ್ಟ ಮಾತುಗಳು ನನ್ನ ಇಡೀ ಜೀವನದ ಮಾರ್ಗದರ್ಶಕ ತತ್ವಗಳಾಗಿವೆ,' ಎಂದು ಸಚಿನ್ ತೆಂಡೂಲ್ಕರ್ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದೇ ಮಾತನ್ನ ಆಗಾಗ ನೆನೆಪಿಸಿಕೊಳ್ಳುತ್ತಾ ಬಂದಿದ್ದಾರೆ.

ಸಾಮರ್ಥ್ಯ ಗುರುತಿಸುವ ಕಾರ್ಯವೇ ನಿಜವಾದ ಶಿಕ್ಷಣ

ಭಾರತದಲ್ಲಿ ಯುವ ಪ್ರತಿಭೆಗಳಿಗೆ ಕೊರತೆಯಿಲ್ಲ. ಪ್ರತಿಯೊಂದು ಮಗುವಿನಲ್ಲೂ ಯಾವುದಾದರೊಂದು ವಿಶಿಷ್ಟ ಸಾಮರ್ಥ್ಯವಿರುತ್ತದೆ. ಆದರೆ ಬಹುತೇಕ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸೂಕ್ತ ಮಾರ್ಗದರ್ಶಕರು, ಆರೋಗ್ಯ ಮತ್ತು ಶೈಕ್ಷಣಿಕ ವಾತಾವರಣ ದೊರೆಯುತ್ತಿಲ್ಲ. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದಲೇ ಸಚಿನ್ ಹಾಗೂ ಅವರ ಪತ್ನಿ ಅಂಜಲಿ ಅವರು 'ಸಚಿನ್ ತೆಂಡೂಲ್ಕರ್ ಫೌಂಡೇಶನ್' ಅನ್ನು ಪ್ರಾರಂಭಿಸಿದರು. ದೇಶದ ಪ್ರತಿಯೊಂದು ಮಗುವಿಗೂ ಕ್ರೀಡೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಮಾನ ಅವಕಾಶ ಸಿಗಬೇಕು ಎಂಬುದು ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ.

'ಪ್ರೊಫೆಸರ್ ರಮೇಶ್ ತೆಂಡೂಲ್ಕರ್ ಮೆಮೋರಿಯಲ್ ಫೆಲೋಶಿಪ್'

ತಮ್ಮ ತಂದೆಯವರ ಶೈಕ್ಷಣಿಕ ಸೇವೆ ಮತ್ತು ಕೊಡುಗೆಗೆ ಗೌರವ ಸಲ್ಲಿಸುವ ಸಲುವಾಗಿ, 'ಇಂಗಾ ಹೆಲ್ತ್ ಫೌಂಡೇಶನ್' (Inga Health Foundation) ಸಹಯೋಗದೊಂದಿಗೆ 'ಪ್ರೊಫೆಸರ್ ರಮೇಶ್ ತೆಂಡೂಲ್ಕರ್ ಮೆಮೋರಿಯಲ್ ಫೆಲೋಶಿಪ್' ಅನ್ನು ಘೋಷಿಸಲಾಗಿದೆ. ಈ ಯೋಜನೆಯಡಿ, ಪ್ರತಿ ವರ್ಷ ಒಬ್ಬ ಎಂಡಿ ವೈದ್ಯರಿಗೆ ಶ್ರೀನಗರದಲ್ಲಿ Cleft and Craniofacial Care ಚಿಕಿತ್ಸೆಯಲ್ಲಿ ಒಂದು ವರ್ಷದ ಉನ್ನತ ತರಬೇತಿ ಪಡೆಯಲು ಸಂಪೂರ್ಣ ಆರ್ಥಿಕ ನೆರವು ನೀಡಲಾಗುತ್ತದೆ.

ತರಬೇತಿ ಪೂರ್ಣಗೊಳಿಸಿದ ನಂತರ ಸಚಿನ್ ತೆಂಡೂಲ್ಕರ್ ಫೌಂಡೇಶನ್‌ನಿಂದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಈ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಕಷ್ಟಕರ ಚಿಕಿತ್ಸಾ ವಿಭಾಗಗಳಲ್ಲಿ ತೊಡಗಿಸಿಕೊಳ್ಳುವ ಯುವ ವೈದ್ಯರನ್ನು ಪ್ರೋತ್ಸಾಹಿಸುವ ಗುರಿ ಹೊಂದಲಾಗಿದೆ.

'ಇದು ಕೇವಲ ಒಂದು ಫೆಲೋಶಿಪ್ ಮಾತ್ರವಲ್ಲ, ಶಿಕ್ಷಣವು ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಆ ಅವಕಾಶಗಳನ್ನು ಸಮಾಜ ಸೇವೆಗೆ ಬಳಸಿದಾಗ ಮಾತ್ರ ಅದಕ್ಕೊಂದು ಅರ್ಥ ಸಿಗುತ್ತದೆ ಎಂಬ ನನ್ನ ತಂದೆಯ ನಂಬಿಕೆಯನ್ನು ಮುಂದುವರಿಸುವ ಸಣ್ಣ ಪ್ರಯತ್ನ,' ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.

ಹೀಗೆ ತಮ್ಮ ತಂದೆಯ ಆಶಯದಂತೆ ಶಿಕ್ಷಣ ಮತ್ತು ಅವಕಾಶಗಳು ಸಮಾಜ ಸೇವೆಯಲ್ಲಿ ಸಾರ್ಥಕತೆ ಪಡೆಯಬೇಕು ಎಂಬ ನಂಬಿಕೆಯನ್ನು ಈ ಫೆಲೋಶಿಪ್ ಮೂಲಕ ಮುಂದುವರಿಸಲಾಗುತ್ತಿದೆ ಎಂದು ಸಚಿನ್ ತಿಳಿಸಿದ್ದು, ಪ್ರತಿಯೊಬ್ಬರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿ ಗಮನ ಸೆಳೆದಿದ್ದಾರೆ. ಸದ್ಯ ಈ ಟ್ವೀಟ್‌ ಭಾರಿ ವೈರಲ್‌ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+