IPL 2026 Playoff: ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಂಡ ರಾಜಸ್ಥಾನ್ ರಾಯಲ್ಸ್, ಟೂರ್ನಿಯಿಂದ ಹೊರಬಿದ್ದ 6 ತಂಡಗಳು
RR Vs MI IPL 2026: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ (ಮೇ 24) ನಡೆದ ಐಪಿಎಲ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 30 ರನ್‌ಗಳಿಂದ ಭರ್ಜರಿ ಜಯ ಸಾಧಿತು. ಈ ಆರ್‌ಆರ್ ಪ್ಲೇಆಫ್‌ಗೆ ಲಗ್ಗೆ ಇಟ್ಟಿದ್ದು, ನಾಲ್ಕು ಸ್ಥಾನಗಳು ಭರ್ತಿಯಾಗಿವೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ರಾಜಸ್ಥಾನ್ ರಾಯಲ್ಸ್ ತಂಡವು ಧ್ರುವ್ ಜುರೆಲ್, ಜೋಫ್ರಾ ಆರ್ಚರ್, ದಸುನ್ ಶನಕ, ಯಶಸ್ವಿ ಜೈಸ್ವಾಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 205 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆದರೆ ಬಳಿಕ ಬ್ಯಾಟ್ ಬೀಸಿದ ಮುಂಬೈ 175 ರನ್‌ಗಳಿಸಿ 30 ರನ್‌ಗಳಿಂದ ಹೀನಾಯ ಸೋಲು ಕಂಡಿತು.

ಆರ್‌ಆರ್ ಪರ ಯಾರು ಎಷ್ಟು ರನ್ ಗಳಿಸಿದರು?
ರಾಜಸ್ಥಾನ್ ರಾಯಲ್ಸ್ ಪರ ಬ್ಯಾಟ್ ಬೀಸಿದ ಯಶಸ್ವಿ ಜೈಸ್ವಾಲ್ 27(17), ಧ್ರುವ್ ಜುರೆಲ್ 38(26), ದಸುನ್ ಶನಕ 29(15), ಡೊನೊವನ್ ಫೆರೆರಾ 18(15), ಜೋಫ್ರಾ ಆರ್ಚರ್ 32(15), ನಾಯಕ ರಿಯಾನ್ ಪರಾಗ್ 14(8), ರವೀಂದ್ರ ಜಡೇಜಾ ಅಜೇಯ 19(11), ನಂದ್ರೆ ಬರ್ಗರ್ ಅಜೇಯ 10(3) ರನ್‌ಗಳ ಕೊಡುಗೆ ನೀಡಿದರು.
ಎಂಐ ಪರ ಯಾರು ಎಷ್ಟು ರನ್ ಕಲೆಹಾಕಿದರು?
ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ 60(42), ವಿಲ್ ಜಾಕ್ಸ್ 33(18), ನಾಯಕ ಹಾರ್ದಕ್ ಪಾಂಡ್ಯ 34(25) ರನ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ಮಂಡಿಯೂರಿತು.
ಆರ್ಚರ್ ಬೌಲಿಂಗ್ ದಾಳಿಗೆ ತತ್ತರಿಸಿ ಮುಂಬೈ
ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್ ಉತ್ತಮ ಬೌಲಿಂಗ್ ದಾಳಿ ಮಾಡಿದರು. ಇವರ ಅದ್ಭುತ ಬೌಲಿಂಗ್ ಪ್ರದರ್ಶನದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 30 ರನ್‌ಗಳ ಜಯ ಸಾಧಿಸಿ ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ. ಜೋಫ್ರಾ ಆರ್ಚರ್ ನಾಲ್ಕು ಓವರ್ ಬೌಲಿಂಗ್ ಎಸೆದು ಕೇವಲ 17 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತು ಮಿಂಚಿದರು. ಉಳಿದಂತೆ ನಂದ್ರೆ ಬರ್ಗರ್, ಬ್ರಿಜೇಶ್ ಶರ್ಮಾ ಹಾಗೂ ಕರ್ನಾಟಕದ ಯಶ್ ರಾಜ್ ಪೂಂಜಾ ತಲಾ 2 ವಿಕೆಟ್ ಪಡೆದು ಮುಂಬೈ ಇಂಡಿಯನ್ಸ್ ರನ್ ವೇಗಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದರು.
ಮುಂಬೈ ಇಂಡಿಯನ್ಸ್ ವಿರುದ್ಧದ ಈ ಗೆಲುವಿನ ನಂತರ 16 ಅಂಕಗಳನ್ನು ಗಳಿಸಿದ ರಾಜಸ್ಥಾನ್ ರಾಯಲ್ಸ್ ರಾಯಲ್ ಪ್ಲೇಆಫ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಪ್ಲೇಆಫ್‌ನಲ್ಲಿ ಸ್ಥಾನ ಪಡೆದಿದ್ದವು. ಮತ್ತೊಂದೆಡೆ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಕ್ವಾಲಿಫೈ ಆಗುವುದರೊಂದಿಗೆ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಪ್ಲೇಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿವೆ.
ಪ್ಲೇಆಫ್ ತಲುಪಿರುವ ನಾಲ್ಕು ತಂಡಗಳು
* ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
* ಗುಜರಾತ್ ಟೈಟಾನ್ಸ್ (GT)
* ರಾಜಸ್ಥಾನ್ ರಾಯಲ್ಸ್ (RR)
* ಸನ್‌ರೈಸರ್ಸ್ ಹೈದರಾಬಾದ್ (SRH)
ಒಟ್ಟಿನಲ್ಲಿ ಉಳಿದಿದ್ದ ಒಂದು ಸ್ಥಾನವನ್ನು ರಾಕಜಸ್ಥಾನ್ ರಾಯಲ್ಸ್ ಅಲಂಕರಿಸಿದೆ. ಇದರಿಂದ ನಾಲ್ಕು ಸ್ಥಾನಗಳು ಭರ್ತಿಯಾಗಿವೆ. ಅಗ್ರ ಎರಡರಲ್ಲಿ ಆರ್‌ಸಿಬಿ ಹಾಗೂ ಗೂಜರಾತ್ ಟೈಟಾನ್ಸ್ ಇದ್ದರೆ, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರಮವಾಗಿ ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಇವೆ. ಉಳಿದಂತೆ ಎಲ್ಲಾ ತಂಡಗಳು ಅಧಿಕೃತವಾಗಿ ಈ ಬಾರಿಯ ಟೂರ್ನಿಯಿಂದಲೇ ಹೊರಬಿದ್ದಿವೆ.












Click it and Unblock the Notifications