WPL RCB Vs DC: ಚಿನ್ನಸ್ವಾಮಿ ಅಂಗಳದಲ್ಲಿ ಆರ್‌ಸಿಬಿ-ಡೆಲ್ಲಿ ಕಾಳಗ: ಸ್ಮೃತಿ ಮಂದಾನ ಪಡೆಗೆ ಅಗ್ನಿ ಪರೀಕ್ಷೆ ಪಂದ್ಯ
WPL RCB Vs DC: ಮಹಿಳಾ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿ ನಡೆಯುತ್ತಿದೆ. ಈಗಾಗಲೇ ಆರ್‌ಸಿಬಿ ಆಡಿರುವ 5 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದು, ಮೂರರಲ್ಲಿ ಸೋಲನುಭವಿಸಿದೆ. ಅದರಲ್ಲೂ ತವರು ಚಿನ್ನಸ್ವಾಮಿ ಅಂಗಳದಲ್ಲೇ ಸತತವಾಗಿ ಸೋಲುಣ್ಣುವ ಮೂಲಕ ಕೆಟ್ಟ ದಾಖಲೆ ಬರೆದಿದೆ. ಇಂದು (ಮಾರ್ಚ್ 01) ಡೆಲ್ಲಿ ವಿರುದ್ಧ ಸೆಣಸಲಿದ್ದು, ಇರದಲ್ಲಿ ಸ್ಮೃತಿ ಮಂದಾನ ಪಡೆ ಗೆಲ್ಲಲ್ಲೇಬೇಕಾದ ಅನಿವಾರ್ಯ ಎದುರಾಗಿದೆ. ಹಾಗಾದ್ರೆ, ಇಂದಿನ ಮ್ಯಾಚ್ ಎಲ್ಲಿ ಹಾಗೂ ಎಷ್ಟು ಗಂಟೆಗೆ ನಡೆಯಲಿದೆ ಎಂದು ತಿಳಿಯಿರಿ.
ಸ್ಮೃತಿ ಮಂದನಾ ಪಡೆಯು ಮೊದಲೆರಡು ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದು ಬೀಗಿತ್ತು. ಆದರೆ, ಬಳಿಕ ತವರ ಅಂಗಳದಲ್ಲೇ ಸತತ ಸೋಲು ಕಂಡಿದೆ. ಈ ಸೋಲುಗಳ ಗಾಯದಿಂದ ಹೊರಬರಲು ಇಂದು ತವರು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಶತಾಯಗತಾಯ ಗೆಲ್ಲಲ್ಲೇಬೇಕೆಂಬ ಪಣ ತೊಟ್ಟಿದೆ.

ಯಾವ್ಯಾವ ತಂಡಗಳ ಮೇಲೆ ಸೋಲು: ಮೊದಲು ಮುಂಬೈ ಇಂಡಿಯನ್ಸ್ ಬಳಿಕ ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ಮೇಲೆ ಮೂರು ತಂಡಗಳ ಮೇಲೆ ಆಡಿರುವ ಪಂದ್ಯಗಳಲ್ಲಿ ಹ್ಯಾಟ್ರಿಕ್ ಸೋಲು ಕಂಡಿದೆ. ಸೋತಿರುವ ಮೂರು ಪಂದ್ಯಗಳು ನಡೆದಿದ್ದು ತವರು ಅಂಗಳ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಇದನ್ನು ಗಮನದಲ್ಲಿಟ್ಟುಕೊಂಡು ಆರ್‌ಸಿಬಿ ಇಂದು ಸೋತ ನೆಲದಲ್ಲೇ ಗೆಲ್ಲಲೇಬೇಕಿದೆ. ಇಂದಿನ ಪಂದ್ಯ ಸಂಜೆ 7:30ಕ್ಕೆ ಬೆಂಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇತ್ತೀಚೆಗಷ್ಟೇ ಈ ಆವೃತ್ತಿಯ 12ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ಆರ್‌ಸಿಬಿ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತ್ತು. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದು, ಟಾಸ್ ಗೆದ್ದ ಗುಜರಾತ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್‌ಸಿಬಿ 7 ವಿಕೆಟ್ ಕಳೆದುಕೊಂಡು ಬರೀ 125 ಕಡಿಮೆ ರನ್‌ಗಳನ್ನಷ್ಟೇ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಗುಜರಾತ್ ಜೈಂಟ್ಸ್ ತಂಡವು 17 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 126 ಹೊಡೆದು ಗೆಲುವಿವ ದಡ ಮುಟ್ಟಿತು.
ಗುಜರಾತ್ ಪರ ನಾಯಕಿ ಆಶ್ಲೇ ಗಾರ್ಡ್ನರ್ 58 ಮತ್ತು ಫೋಬೆ ಲಿಚ್‌ಫೀಲ್ಡ್ 30 ರನ್ ಗಳಿಸಿದರು. ಬೌಲಿಂಗ್‌ನಲ್ಲಿ ಡಿಯಾಂಡ್ರಾ ಡಾಟಿನ್ ಮತ್ತು ತನುಜಾ ಕನ್ವರ್ ತಲಾ 2 ವಿಕೆಟ್ ಪಡೆದರು. ಆರ್‌ಸಿಬಿ ಪರ ರೇಣುಕಾ ಠಾಕೂರ್ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ತಲಾ 2 ವಿಕೆಟ್ ಪಡೆದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭದಲ್ಲಿ ಕಳಪೆ ಪ್ರದರ್ಶನ ತೋರಿದ್ದು, 25 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು.
ನಾಯಕಿ ಸ್ಮೃತಿ ಮಂದಾನ 10 ರನ್ ಗಳಿಸಿ ಔಟಾದರೆ, ಡ್ಯಾನಿ ವ್ಯಾಟ್ ಹಾಡ್ಜ್ 4 ರನ್ ಗಳಿಸಿ ಔಟಾದರು. ಇನ್ನು ಸ್ಫೋಟಕ ಬ್ಯಾಟರ್ ಆಗಿರುವ ಎಲ್ಲಿಸ್ ಪೆರ್ರಿ ಯಾವುದೇ ರನ್‌ಗಳಿಲ್ಲದೆ ಔಟ್ ಆದರು. ರಾಘವಿ ಬಿಶ್ತ್ 22, ಕನಿಕಾ ಅಹುಜಾ 33 ರನ್ ಗಳಿಸಿ ತಂಡದ ಸ್ಕೋರ್ ಅನ್ನು 70ರ ಆಚೆಗೆ ಕೊಂಡೊಯ್ದರು.
ಬಳಿಕ ಬಂದ ರಿಚಾ ಘೋಷ್ ಕೇವಲ 9 ರನ್ ಗಳಿಸಿ ಔಟಾದರೆ, ಜಾರ್ಜಿಯಾ ವೇರ್‌ಹ್ಯಾಮ್ 20 ಮತ್ತು ಕಿಮ್ ಗಾರ್ತ್ 14 ರನ್ ಗಳಿಸಿ ತಂಡದ ಮೊತ್ತವನ್ನು 125ರ ವರೆಗೆ ಮುಟ್ಟಿಸಿದರು. ಇನ್ನು 5 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆಲುವು ಸಾಧಿಸಿರುವ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ 4 ಅಂಕಗಳ ಮೂಲಕ 3ನೇ ಸ್ಥಾನಕ್ಕಿಳಿದಿದೆ. ಈ ಮೂಲಕ ಉಳಿದ 3 ಪಂದ್ಯಗಳಲ್ಲಿ ಆರ್‌ಸಿಬಿ ಗೆಲ್ಲಲೇಬೇಕಾದ ಅನಿವಾರ್ಯತೆ ತಂದಿಟ್ಟುಕೊಟ್ಟಿದೆ.












Click it and Unblock the Notifications