RCB Vs DC Final: ಪಂದ್ಯದ ದಿಕ್ಕು ಬದಲಿಸಿದ ಸೋಫಿ ಮೊಲಿನ್ಯೂ WOWW ಓವರ್

ಮಹಿಳಾ ಪ್ರೀಮಿಯರ್ 2024ರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅತ್ಯುತ್ತಮ ಆರಂಭ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ದಿಢೀರ್ ಕುಸಿತ ಕಂಡಿತು. ಪಂದ್ಯದ ಗತಿಯನ್ನೇ ಬದಲಿಸಿದ್ದು ಅದೊಂದು ಓವರ್.

7 ಓವರ್ ಮುಕ್ತಾಯದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕಳೆದುಕೊಳ್ಳದೆ 64 ರನ್ ಗಳಿಸಿತ್ತು. ಶೆಫಾಲಿ ವರ್ಮಾ 26 ಎಸೆತಗಳಲ್ಲಿ 44 ರನ್ ಗಳಿಸಿ ಅತ್ಯುತ್ತಮವಾಗಿ ಆಡುತ್ತಿದ್ದರು. ಮತ್ತೊಂದು ಕಡೆ ನಾಯಕಿ ಮೆಗ್ ಲ್ಯಾನಿಂಗ್ 16 ಎಸೆತಗಳಲ್ಲಿ 18 ರನ್ ಗಳಿಸಿ ಸೆಟ್ ಆಗಿದ್ದರು.

Sophie Molineux

8ನೇ ಓವರ್ ನಲ್ಲಿ ದಾಳಿಗಿಳಿದ ಸ್ಪಿನ್ ಬೌಲರ್ ಸೋಫಿ ಮೊಲಿನ್ಯೂ ಪಂದ್ಯದ ಗತಿಯನ್ನೇ ಬದಲಿಸಿದರು. 8ನೇ ಓವರ್ ನ ಮೊದಲ ಎಸೆತದಲ್ಲೇ ಅವರು ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಶೆಫಾಲಿ ವರ್ಮಾ ಜಾರ್ಜಿಯಾ ವೇರ್ಹ್ಯಾಮ್‌ಗೆ ಕ್ಯಾಚ್ ನೀಡಿ ಔಟಾದರು.

ಬಳಿಕ ಕ್ರೀಸ್‌ಗೆ ಬಂದ ಜೆಮಿಮಾ ರೋಡ್ರಿಗಸ್ ಮೊದಲನೇ ಎಸೆತವನ್ನು ರಕ್ಷಣಾತ್ಮಕವಾಗಿ ಆಡಿದರೂ, ಮುಂದಿನ ಎಸೆತದಲ್ಲೇ ಸ್ವೀಪ್ ಮಾಡಲು ಹೋಗಿ ಬೌಲ್ಡ್ ಆದರು. ಆದಾದ ಮುಂದಿನ ಎಸೆತದಲ್ಲೇ ಅಲಿಸ್ ಕ್ಯಾಪ್ಸಿ ಕೂಡ ಬೌಲ್ಡ್ ಆದರು. ಮೊದಲ ನಾಲ್ಕು ಎಸೆತಗಳಲ್ಲಿ ವಾವ್ (W,0,W,W) ಬೌಲಿಂಗ್ ಮಾಡಿ ಪಂದ್ಯದ ದಿಕ್ಕನ್ನೇ ಬದಲಿಸಿದರು.

113 ರನ್‌ಗಳಿಗೆ ಆಲೌಟ್

ಸೋಫಿ ಮೊಲಿನ್ಯೂ ನೀಡಿದ ಆಘಾತದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸುಧಾರಿಸಿಕೊಳ್ಳಲೇ ಇಲ್ಲ. ಮತ್ತೊಂದು ಕಡೆಯಿಂದ ದಾಳಿ ಆರಂಭಿಸಿದ ಶ್ರೇಯಾಂಕ ಪಾಟೀಲ್ ಮತ್ತುಆಶಾ ಶೋಭನಾ ಡೆಲ್ಲಿ ಬ್ಯಾಟರ್ ಗಳೀಗೆ ಪೆವಿಲಿಯನ್ ದಾರಿ ತೋರಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ಅಂತಿಮವಾಗಿ 18.3 ಓವರ್ ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು. ಶ್ರೇಯಾಂಕಾ ಪಾಟೀಲ್ 3.3 ಓವರ್ ಗಳಲ್ಲಿ ಕೇವಲ 12 ನೀಡಿ 4 ವಿಕೆಟ್ ಪಡೆದುಕೊಂಡರು. ಸೋಫಿ ಮೊಲಿನ್ಯೂ 4 ಓವರ್ ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರು. ಆಶಾ ಶೋಭನಾ 3 ಓವರ್ ಗಳಲ್ಲಿ 14 ರನ್ ನೀಡಿ 2 ವಿಕೆಟ್ ಪಡೆದರು.

ಫೈನಲ್ ಪಂದ್ಯದಲ್ಲೇ ಯಾವುದೇ ತಂಡ ಗೆದ್ದರೂ ಮೊದಲ ಬಾರಿ ಕಪ್ ಗೆದ್ದ ಸಾಧನೆ ಮಾಡಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಐಪಿಎಲ್‌ನಲ್ಲಿ ಈವರೆಗೂ ಪ್ರಶಸ್ತಿ ಗೆದ್ದಿಲ್ಲ. ಈಗ ಮಹಿಳಾ ತಂಡ ಮೊದಲ ಪ್ರಶಸ್ತಿ ಗೆದ್ದು ಕೊಡುವ ತವಕದಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+