Tim David: ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಪರ ಆಡಲಿರುವ RCB ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್!
Tim David: ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾದ ಮೇಲೆ ಜಗತ್ತಿನ ಕ್ರಿಕೆಟ್ ನಿಯಮವೇ ಬದಲಾಗಿ ಹೋಗಿದೆ. ವಿಶ್ವದ ಯಾವುದೋ ದೇಶದ ಆಟಗಾರ ಮತ್ತೊಂದು ದೇಶದ ಫ್ರಾಂಚೈಸಿ ಪರವಾಗಿ ಆಟವಾಡುವುದು ಸಾಮಾನ್ಯ. ದೇಶ - ವಿದೇಶದ ಆಟಗಾರರು ಒಂದೆಡೆ ಸೇರಿ ಆಟವಾಡುವುದೇ ಐಪಿಎಲ್‌ನ ಪ್ರಮುಖ ಸೊಬಗುಗಳಲ್ಲಿ ಒಂದು. ಅದರಲ್ಲೂ ಒಂದು ತಂಡದಲ್ಲಿ ಇರುವ ಆಟಗಾರರು ಮತ್ತೊಂದು ತಂಡಕ್ಕೆ ಬದಲಾಗುವುದು ಅಥವಾ ಸೇರ್ಪಡೆ ಆಗುವುದು ಸಹ ಇದೆ. ಆ ಪಟ್ಟಿಯಲ್ಲಿ ನೋಡಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಯುಜ್ವೇಂದ್ರ ಚಹಾಲ್ ಹಾಗೂ ಮೊಹಮ್ಮದ್ ಸಿರಾಜ್ ಪ್ರಮುಖರು. ಇದೀಗ ಟಿಮ್ ಡೇವಿಡ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಆಟವಾಡಿದ ನಂತರ ಮತ್ತೊಂದು ಲೀಗ್ ಹಂತದ ಕ್ರಿಕೆಟ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಅದೂ ಸಹ ಈ ಭಾರಿ ಆರ್‌ಸಿಬಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ತಂಡದ ಪರವಾಗಿ ಆಡುವುದಕ್ಕೆ ಸಿದ್ಧರಾಗುತ್ತಿದ್ದಾರೆ.
ಈ ಬಾರಿ ಬರೋಬ್ಬರಿ 17 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಿದೆ. ಆರ್‌ಸಿಬಿ ಗೆಲುವಿನಲ್ಲಿ ಟಿಮ್ ಡೇವಿಡ್ ಅವರ ಪಾತ್ರವೂ ಪ್ರಮುಖವಾಗಿದೆ. ಟಿಮ್ ಡೇವಿಡ್ ಅವರ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಆರ್‌ಸಿಬಿ ತಂಡವು ಹಲವು ಪಂದ್ಯಗಳಲ್ಲಿ ಗೆಲುವು ಸಾಧಿಸುವುದಕ್ಕೆ ಸಾಧ್ಯವಾಗಿತ್ತು. ಬಂಡೆಯಂತೆ ನಿಲ್ಲುತ್ತಿದ್ದ ಡೇವಿಡ್ ಆರ್‌ಸಿಬಿಗೆ ಈ ಬಾರಿಯ ಟೂರ್ನಿಯಲ್ಲಿ ಅತ್ಯುತ್ತಮ ಕೊಡುಗೆಯನ್ನೇ ಕೊಟ್ಟಿದ್ದಾರೆ. ಆರ್‌ಸಿಬಿ ಪರವಾಗಿ ಬಂಪರ್ ಆಟವಾಡಿದ್ದ ಹಾಗೂ ಮೈದಾನದ ಆಚೆಯೂ ಅಭಿಮಾನಿಗಳಿಗೆ ಕಚಗುಳಿ ಇರಿಸಿದ್ದ ಟಿಮ್ ಡೇವಿಡ್ ಅವರು ಇದೀಗ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಪರವಾಗಿ ಆಟವಾಡುವುದಕ್ಕೆ ರೆಡಿಯಾಗಿದ್ದಾರೆ. ಆದರೆ ಇದು ಐಪಿಎಲ್‌ಗಿಂತ ಭಿನ್ನವಾಗಿದೆ.

ಇದೇ ಆಗಸ್ಟ್ 15 ರಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್ ಶುರುವಾಗಲಿದೆ. ಇದರಲ್ಲಿ ಟಿಮ್ ಡೇವಿಡ್ ಸೇಂಟ್ ಲೂಸಿಯಾ ಕಿಂಗ್ಸ್ ಪರ ಕಣಕ್ಕಿಳಿಯಲಿದ್ದಾರೆ. ಇನ್ನು ಸೇಂಟ್ ಲೂಸಿಯಾ ಕಿಂಗ್ಸ್ ತಂಡವು ಐಪಿಎಲ್ನ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಒಡೆತನದ ತಂಡವಾಗಿದೆ. ಈ ಫ್ರಾಂಚೈಸಿಯು ಹೊಸ ಟೂರ್ನಿಗೆ ಟಿಮ್ ಡೇವಿಡ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಡೇವಿಡ್ ಅವರು ಲೂಸಿಯಾ ತಂಡದ ಪರವಾಗಿ ಆಟವಾಡಲಿದ್ದಾರೆ.
ಕೆರಿಬಿಯನ್ ಪ್ರೀಮಿಯರ್ ಲೀಗ್: ಕ್ರಿಕೆಟ್ ಲೋಕದ ಪ್ರಮುಖ ಟೂರ್ನಿಗಳಲ್ಲಿ ಒಂದಾಗಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಹಲವು ವಿದೇಶಿ ಆಟಗಾರರು ಇರಲಿದ್ದಾರೆ. ಇನ್ನು ಆರ್‌ಸಿಬಿಯ ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಅವರು ಈ ಟೂರ್ನಿಯಲ್ಲಿ ಬರೋಬ್ಬರಿ 24 ಪಂದ್ಯಗಳಲ್ಲಿ ಆಟವಾಡಿದ್ದಾರೆ.
ಟಿಮ್ ಡೇವಿಡ್ ಹಿನ್ನೆಲೆ: ಇನ್ನು ಟಿಮ್ ಡೇವಿಡ್ ಅವರು ಮೂಲತಃ ಸಿಂಗಾಪುರ ದೇಶದವರು. ಸಿಂಗಾಪುರ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಆಟವಾಡಿದ್ದಾರೆ. ಸೌಮ್ಯ ಸ್ವಭಾವದ ಡೇವಿಡ್ ಆನ್‌ಫೀಲ್ಡ್ ಮಾತ್ರವಲ್ಲ ಆಫ್ ಫೀಲ್ಡ್‌ನಲ್ಲೂ ಮಿಂಚಿದ್ದಾರೆ. ಡೇವಿಡ್ ಅವರು ಆರ್‌ಸಿಬಿ ಪರವಾಗಿ ಆಡುವಾಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ವಿಮ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.












Click it and Unblock the Notifications