RCB Match: ಮುಂಬೈ ವಿರುದ್ಧ ಸೋಲಿನಲ್ಲೂ ದಾಖಲೆ ನಿರ್ಮಿಸಿದ ಆರ್‌ಸಿಬಿ ಮಹಿಳಾ ಮಣಿಗಳು
RCB Match: ನಿನ್ನೆ (ಫೆಬ್ರವರಿ 21) ತವರಿನಲ್ಲಿ ನಡೆದ WPL ಪಂದ್ಯದಲ್ಲಿ ಆರ್ ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನುಭವಿಸಿದೆ. ಆದರೂ ವಿಶೇಷ ದಾಖಲೆಯೊಂದನ್ನು ಸೃಷ್ಟಿಸಿದೆ. ಆರ್‌ಸಿಬಿ ಮ್ಯಾಚ್ ನಡೆಯುತ್ತದೆ ಅಂದ್ರೆ ಅಭಿಮಾನಿಗಳು ಟೀಂ ಇಂಡಿಯಾ-ಪಾಕ್ ಹೊರತುಪಡಿಸಿ ಎಂತಹ ಅಂತಾರಾಷ್ಟ್ರೀಯ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯ ನಡೆದರೂ ಅತ್ತ ಕ್ಯಾರೆ ಅನ್ನೋದಿಲ್ಲ. ಅದಕ್ಕೆ ಸೂಕ್ತ ಉದಾಹರಣೆ ಇಲ್ಲಿದೆ ಗಮನಿಸಿ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆದಿದೆ. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿಯು ಮುಂಬೈಗೆ 168 ರನ್‌ಗಳ ಗುರಿ ನೀಡಿತು. ಇದನ್ನ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ತಂಡವು 19.5 ಓವರ್‌ಗಳಿಗೆ ಎಲ್ಲಾ ರನ್‌ಗಳನ್ನು ಚಚ್ಚಿ ಜಯಭೇರಿ ಬಾರಿಸಿತು. ಆದರೂ ಆರ್‌ಸಿಬಿ ಅಭಿಮಾನಿಗಳ ಕ್ರೇಜ್ ಮಾತ್ರ ಕಡಿಮೆಯಾಗಲಿಲ್ಲ, ಬದಲಿಗೆ ತುಸು ಜೋರಾಯಿತು.

ನಿನ್ನೆ ನಡೆದ ಪಂದ್ಯವನ್ನು ದಾಖಲೆ ಮಟ್ಟದಲ್ಲಿ ವೀಕ್ಷಣೆ ಮಾಡಿದ್ದಾರೆ. ಚಾಂಪಿಯನ್ ಟ್ರೋಪಿ ಪಂದ್ಯವನ್ನು ಸಹ ಇಷ್ಟರ ಮಟ್ಟಿಗೆ ವೀಕ್ಷಣೆ ಮಾಡಿಲ್ಲ. ಈ ಮೂಲಕ ಆರ್‌ಸಿಬಿ ತಾಕತ್ತು ಅಂದ್ರೆ ಇದೇ ನೋಡಿ ಅಂತಾ ತೋರಿಸಿದ್ದಾರೆ. ತಂಡ ಸೋತರೂ ಗದ್ದರೂ ಆರ್‌ಸಿಬಿ ಅಭಿಮಾನಿಗಳ ಆರ್ಭಟ ಯಾವಾಗಲೂ ಜೋರಾಗಿಯೇ ಇರುತ್ತದೆ. ಅದರಲ್ಲೂ ಮುಂಬೈ, ಚೆನ್ನೈ ನಡುವೆ ನಡೆಯುವ ಪಂದ್ಯವನ್ನು ಅತೀ ಹೆಚ್ಚು ಜನ ವೀಕ್ಷಣೆ ಮಾಡುತ್ತಾರೆ.
ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವೆ ನಿನ್ನೆ (ಫೆಬ್ರವರಿ 21) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ಡಬ್ಲ್ಯುಪಿಎಲ್ ಲೀಗ್ ಪಂದ್ಯ ಹೊಸ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ. ಈ ಪಂದ್ಯ ವೀಕ್ಷಿಸಲು ಜನಸಾಗರವೇ ಹರಿದುಬಂದಿತ್ತು. ಪಂದ್ಯ ನಡೆಯುವ ಒಂದು ದಿನದ ಮುಂಚೆಯೇ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದ್ದವು. ಇದನ್ನು ಗಮನಿಸಿದರೆ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪುರುಷರ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೂ ಇಷ್ಟೊಂದು ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದಿರಲಿಲ್ಲ ಎನ್ನುವ ಮಾಹಿತಿ ಇದೆ.
ಈ ಪಂದ್ಯ ವೀಕ್ಷಣೆ ಮಾಡಲು ಬರೀ ಮೈದಾನದಲ್ಲಿ ಅಷ್ಟೇ ಅಲ್ಲ, ಜೊತೆಗೆ ಟಿವಿಯಲ್ಲಿಯೂ ಹೆಚ್ಚಿನ ಸಂಖ್ಯೆಯನ್ನು ಪಂದ್ಯ ವೀಕ್ಷಣೆ ಮಾಡಿದ್ದಾರೆ. 3 ಕೋಟಿಗೂ ಅಧಿಕ ಜನ ಟಿವಿಯಲ್ಲಿ ವೀಕ್ಷಣೆ ಮಾಡಿದ್ದಾರೆ. ಮಹಿಳೆಯ ಪಂದ್ಯವನ್ನು ಕೂಡ ಇಷ್ಟರ ಮಟ್ಟಿಗೆ ವೀಕ್ಷಣೆ ಮಾಡಿರುವುದು ಒಂದು ದೊಡ್ಡ ದಾಖಲೆ ಸರಿ ಸಂತಿದ್ದಾರೆ ನೆಟ್ಟಿಗರು.
ಕಳೆದ ಆವೃತ್ತಿಗೆ ಹೋಲಿಕೆ ಮಾಡಿದರೆ, ಈ ಬಾರಿ ಜಿಯೋ ಹಾಟ್ ಸ್ಟಾರ್ ಆಪ್‌ನಲ್ಲಿ ವೀಕ್ಷಣೆ ಮಾಡಿದ ಜನರ ಸಂಖ್ಯೆ ಶೇಕಡ 150ರಷ್ಟು ಹೆಚ್ಚಳ ಮತ್ತು ಸ್ಟಾರ್ ಸ್ಪೋರ್ಟ್‌ನಲ್ಲಿ ಶೇಕಡ 70ರಷ್ಟು ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಮಹಿಳೆಯರ ಕ್ರಿಕೆಟ್ ಅನ್ನು ಇಷ್ಟು ಮಂದಿ ವೀಕ್ಷಣೆ ಮಾಡಿರುವುದು ನಿಜಕ್ಕೂ ಒಂದು ದೊಡ್ಡ ದಾಖಲೆಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.
ಇತ್ತೀಚೆಗಷ್ಟೇ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಎರಡನೇ ಗೆಲವು, ಮೊದಲ ಉದ್ಘಾಟನಾ ಪಂದ್ಯದಲ್ಲಿ ಗುಜಾರಾತ್ ತಂಡವನ್ನು ಸೋಲಿಸಿತ್ತು. ಇನ್ನು ನಿನ್ನೆ ಮುಂಬೈ ವಿರುದ್ಧ ನಡೆದ ಮೂರನೇ ಪಂದ್ಯದಲ್ಲಿ ಸೋಲನುಭವಿದೆ. ಈ ಮೂಲಕ ಇದುವರೆಗೂ ಆಡಿರುವ 3 ಪಂದ್ಯಗಳಲ್ಲಿ 2 ಗೆದ್ದು ಒಂದರಲ್ಲಿ ಸೋಲನುವಿಸಿದೆ. ಇದೀಗ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ 4 ಪಾಯಿಂಟ್‌ಗಳೊಂದಿಗೆ ಅತೀ ಹೆಚ್ಚು ರನ್ ರೇಟ್ ಮೂಲಕ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮುಬೈ ಇಂಡಿಯನ್ಸ್ ಇದೆ.
ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಿಳಾ ಪ್ರೀಮಿಯರ್ ಲೀಗ್‌ನ 7ನೇ ಪಂದ್ಯ ನಡೆದಿದ್ದು, ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಮುಂಬೈ ಇಂಡಿಯನ್ಸ್ ತಂಡದ ಹರ್ಮನ್ ಪ್ರೀತ್ ಕೌರ್ ಪಡೆ ಆರ್‌ಸಿಬಿಯ ಹ್ಯಾಟ್ರಿಕ್ ಗೆಲುವನ್ನು ಕಸಿದುಕೊಂಡಿದೆ.
ಮೊದಲು ಆರ್‌ಸಿಬಿ ಪರ ಬ್ಯಾಟ್ ಮಾಡಿದ ಪೆರ್ರಿ ಬ್ಯಾಟಿಂಗ್ 43 ಬಾಲ್‌ಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಹಿತ ಬರೋಬ್ಬರಿ 81 ರನ್‌ಗಳನ್ನು ಚಚ್ಚಿ ತಂಡದ ಮೊತ್ತವನ್ನು ಏರಿಸಿದರು. ಇವರ ಬ್ಯಾಟಿಂಗ್ ಅಬ್ಬರಕ್ಕೆ ಮುಂಬೈ ಇಂಡಿಯನ್ಸ್ ತಂಡದ ಬೌಲರ್ಸ್ ತತ್ತರಿಸಿ ಹೋಗಿದ್ದರು. ಸ್ಮೃತಿ ಮಂದನಾ 26, ಡೇನಿಯಲ್ 9, ರಾಘ್ವಿ 1, ಕನಿಕಾ 3, ರಿಚಾ ಘೋಷ್ 28, ಜಾರ್ಝಿಯಾ 6 ರನ್. ಈ ಮೂಲಕ ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಈ ಗುರಿಯನ್ನು ಮುಬೈ ತಂಡವು 19.5 ಓವರ್‌ಗಳಿಗೆ ಮುಗಿಸಿ ಜಯ ಸಾಧಿಸಿತು.
ಆರ್‌ಸಿಬಿ ತಂಡ: ಸ್ಮೃತಿ ಮಂಧಾನ (ನಾಯಕಿ), ಡೇನಿಯಲ್ ವ್ಯಾಟ್-ಹಾಡ್ಜ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ರಾಘವಿ ಬಿಶ್ಟ್, ಕನಿಕಾ ಅಹುಜಾ, ಜಾರ್ಜಿಯಾ ವೇರ್‌ಹ್ಯಾಮ್, ಕಿಮ್ ಗಾರ್ತ್, ಏಕ್ತಾ ಬಿಶ್ಟ್, ಜೋಶಿತಾ ವಿಜೆ, ರೇಣುಕಾ ಸಿಂಗ್ ಠಾಕೂರ್.
ಮುಂಬೈ ಇಂಡಿಯನ್ಸ್ ತಂಡ: ಹೇಲಿ ಮ್ಯಾಥ್ಯೂಸ್, ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸ್ಕಿವರ್-ಬ್ರಂಟ್, ಹರ್ಮನ್ಪ್ರೀತ್ ಕೌರ್ (ನಾಯಕಿ), ಅಮೇಲಿಯಾ ಕೆರ್, ಸಜೀವ್ ಸಜ್ನಾ, ಜಿ ಕಮಲಿನಿ, ಅಮನ್‌ಜೋತ್ ಕೌರ್, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್, ಪರುಣಿಕಾ ಸಿಸೋಡಿಯಾ.












Click it and Unblock the Notifications