ಆರ್‌ಸಿಬಿ ಪ್ಲೇ-ಆಫ್‌ ಹಾದಿ ಸುಗಮಗೊಳಿಸಿದ ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ ಸಿಡಿಸಿದ ಶತಕ

RCB Vs KKR IPL 2026: ರಾಯ್‌ಪುರ್‌ನಲ್ಲಿ ಬುಧವಾರ (ಮೇ 13) ನಡೆದ ಐಪಿಎಲ್ 2026ರ 57ನೇ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ವಿರಾಟ್‌ ಕೊಹ್ಲಿ ಅವರ ಸ್ಫೋಟಕ ಶತಕದ ನೆರವಿನಿಂದ ಕೆಕೆಆರ್ ವಿರುದ್ಧ 6 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಆಕ್ರಮಣಕಾರಿ ಆಟದ ಮೂಲಕ ಕಿಂಗ್ ಟ್ರೋಲಿಗರಿಗೆ ತಮ್ಮ ಬ್ಯಾಟ್‌ ಮೂಲಕ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

ಟಾಸ್‌ ಗೆದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ಕೆ ಮಾಡಿಕೊಂದರು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 192 ರನ್‌ಗಳ ಬೃಹತ್‌ ಮೊತ್ತವನ್ನು ಪೇರಿಸಿತು. 193 ರನ್‌ಗಳ ಗುರಿಯನ್ನು ಆರ್‌ಸಿಬಿ 19.1 ಓವರ್‌ಗಳಿಗೆ ಮುಗಿಸುವ ಮೂಲಜ ತನ್ನ ಪ್ಲೇ-ಆಫ್‌ ಹಾದಿಯನ್ನು ಸುಲಭವಾಗಿಸಿಕೊಂಡಿರು.

RCB vs KKR IPL 2026 Virat Kohli Explosive Century Powers RCB to 6-Wicket Win in Raipur on May 14

ಸ್ಫೋಟಕ ಶತಕ ಸಿಡಿಸಿದ ವಿರಾಟ್ ಕೊಹ್ಲಿ

ಕಳೆದ ಎರಡು ಪಂದ್ಯಗಳ ವೈಫಲ್ಯದಿಂದ ಚೇತರಿಸಿಕೊಂಡ ವಿರಾಟ್ ಕೊಹ್ಲಿ ಸಿಡಿಸಿದ ಅಜೇಯ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. 193 ರನ್‌ಗಳ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ಪರ ಕೊಹ್ಲಿ ಕೇವಲ 60 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ ಅಜೇಯ 105 ರನ್ ಚಚ್ಚಿದರು. ಕನ್ನಡಿಗ ದೇವದತ್ ಪಡಿಕ್ಕಲ್ (27 ಎಸೆತಗಳಲ್ಲಿ 37 ರನ್) ಅವರೊಂದಿಗೆ ಎರಡನೇ ವಿಕೆಟ್‌ಗೆ 92 ರನ್‌ಗಳ ಅಮೂಲ್ಯ ಜೊತೆಯಾಟವಾಡಿದ ಕೊಹ್ಲಿ ತಂಡವನ್ನು 19.1 ಓವರ್‌ಗಳಲ್ಲಿ ಗುರಿ ತಲುಪಿಸುವಲ್ಲಿ ಯಶಸ್ವಿಯಾದರು.

ದುಬಾರಿಯಾದ ಕೆಕೆಆರ್ ಬೌಲರ್ಸ್‌

ಕೆಕೆಆರ್ ಪರ ಕಾರ್ತಿಕ್ ತ್ಯಾಗಿ ನಾಲ್ಕು ಓವರ್ ಬೌಲಿಂಗ್ ಎಸೆದು 32 ರನ್‌ ನೀಡಿ ಮೂರು ಪ್ರಮುಖ ವಿಕೆಟ್‌ಗಳನ್ನು ಉರುಳಿಸಿ ಮಿಂಚಿದರು. ಸುನಿಲ್ ನರೈನ್ ನಾಲ್ಕು ಓವರ್ ಎಸೆದು 31 ರನ್‌ ನೀಡಿ ಒಂದು ವಿಕೆಟ್‌ ಕಬಳಿಸಿದರು. ಆದರೆ ಉಳಿದ ಬೌಲರ್‌ಗಳು ಹೆಚ್ಚು ರನ್‌ ಬಿಟ್ಟುಕೊಟ್ಟು ದುಬಾರಿಯಾಗಿ ತಂಡದ ಸೋಲಿಗೆ ಪ್ರಮುಖ ಕಾರಣರಾದರು. ಸೌರಭ್‌ ದುಬೆ 2.1 ಓವರ್‌ ಎಸೆದು 21 ರನ್‌ ನೀಡಿದರೆ, ವೈಭವ್ ಅರೋರಾ 4 ಓವರ್‌ ಬೌಲಿಂಗ್‌ ಎಸೆದು 48 ರನ್‌ ಬಿಟ್ಟುಕೊಟ್ಟರು. ಅನುಕುಲ್ ರಾಯ್ 3 ಓವರ್ ಎಸೆದು 36 ರನ್‌ಗಳನ್ನು ನೀಡಿ ದುಬಾರಿಯಾದರು.

ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ

ಈ ಗೆಲುವಿನೊಂದಿಗೆ ಆರ್‌ಸಿಬಿ ಒಟ್ಟು ಪಾಯಿಂಸ್ಟ್‌ ಟೇಬಲ್‌ನಲ್ಲಿ 16 ಅಂಕಗಳನ್ನು ಗಳಿಸಿ ಅಗ್ರಸ್ಥಾನಕ್ಕೇರಿದೆ. ಸದ್ಯ ಗುಜರಾತ್ ಟೈಟಾನ್ಸ್ ಸಹ 16 ಅಂಕಗಳನ್ನು ಹೊಂದಿದೆ. ಆದರೂ ಉತ್ತಮ ರನ್ ರೇಟ್ ಆಧಾರದ ಮೇಲೆ ಬೆಂಗಳೂರು ಮೊದಲ ಸ್ಥಾನ ಅಲಂಕರಿಸಿದೆ. ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಕೊಲ್ಕಾತ್ ನೈಟ್ಸ್‌ ರೈಡರ್ಸ್‌ ತಂಡವು ವಿಕೆಟ್ ಕೀಪರ್-ಬ್ಯಾಟರ್ ಅಂಗ್‌ಕ್ರಿಶ್ ರಘುವಂಶಿ ಅವರ ಆಕರ್ಷಕ 71 ರನ್‌ಗಳ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 192 ರನ್‌ಗಳ ಬೃಹತ್‌ ಮೊತ್ತ ಪೇರಿಸಿತ್ತು.

ರಘುವಂಶಿ ಅರ್ಧಶತಕದ ಹೋರಾಟ ವ್ಯರ್ಥ

ಕೆಕೆಆರ್ ಪರ ಅಂಗ್‌ಕ್ರಿಶ್ ರಘುವಂಶಿ ಕೇವಲ 46 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 71 ರನ್‌ ಕಲೆಹಾಕಿ ರನ್‌ ವೇಗವನ್ನು ಹೆಚ್ಚಿಸಿದರು. ಉಳಿದಂತೆ ಕ್ಯಾಮೆರಾನ್ ಗ್ರೀನ್ 3 ಬೌಂಡರಿ, 1 ಸಿಕ್ಸರ್‌ ಸಹಿತ 32 ರನ್‌ಗಳ ಕೊಡುಗೆ ನೀಡಿದರೆ, ರಿಂಕು ಸಿಂಗ್ 29 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 49 ರನ್‌ ಗಳಿಸಿ ತಂಡದ ಮೊತ್ತವನ್ನು 190ರ ಗಡಿ ದಾಟಿಸಿದು. ಆದರೂ ಆರ್‌ಸಿಬಿ ಕೊಹ್ಲಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್‌ಗಳಿಂದ ಗೆದ್ದು ಬೀಗಿತು. ಈ ಮೂಲಕ ರಘುವಂಶಿಯ ಸ್ಫೋಟಕ ಅರ್ಧಶತಕದ ಹೋರಾಟ ವ್ಯರ್ಥವಾದಂತಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+