IPL 2023: ಆರ್‌ಸಿಬಿ ವಿರುದ್ಧ ಕೆಕೆಆರ್ ಸಂಭಾವ್ಯ 11ರ ಬಳಗ; ಜೇಸನ್ ರಾಯ್, ಲಾಕಿ ಫರ್ಗ್ಯುಸನ್ ಆಡುತ್ತಾರಾ?

ಗುರುವಾರ, ಏಪ್ರಿಲ್ 6ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ 2023 ಐಪಿಎಲ್ ಪಂದ್ಯದಲ್ಲಿ ನಿತೀಶ್ ರಾಣಾ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡಿಎಲ್ಎಸ್ ವಿಧಾನದಡಿ 7 ರನ್‌ಗಳಿಂದ ಸೋಲು ಕಂಡಿದೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ಆರ್‌ಸಿಬಿ ತಂಡ ತಮ್ಮ ಅಭಿಯಾನವನ್ನು ಸ್ಮರಣೀಯವಾಗಿ ಪ್ರಾರಂಭಿಸಿ ಹೆಚ್ಚಿನ ಆತ್ಮವಿಶ್ವಾಸದಲ್ಲಿದೆ.

RCB vs KKR IPL 2023: Will Play Jason Roy And Lockie Ferguson; KKRs Probable Playing 11

ಇನ್ನು ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡದ ಹಿರಿಯ ಬೌಲರ್‌ಗಳಾದ ಸುನಿಲ್ ನರೈನ್ ಮತ್ತು ಟಿಮ್ ಸೌಥಿ ಕ್ರಮವಾಗಿ 40 ಮತ್ತು 54 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿಯಾದರು. ಹೀಗಾಗಿ ಟಿಮ್ ಸೌಥಿ ಅವರ ಬದಲಾಗಿ ಲಾಕಿ ಫರ್ಗ್ಯುಸನ್ ಅವರನ್ನು ಆಡಿಸುವ ಸಾಧ್ಯತೆ ಹೆಚ್ಚಿದೆ.

2023ರ ಐಪಿಎಲ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಜೇಸನ್ ರಾಯ್‌ ಅವರನ್ನು ಆಯ್ಕೆ ಮಾಡಿಕೊಂಡಿದೆ. ಬೆನ್ನು ನೋವಿನ ಕಾರಣ ತಮ್ಮ ಖಾಯಂ ಶ್ರೇಯಸ್ ಅಯ್ಯರ್ ಅವರ ಸೇವೆ ಕಳೆದುಕೊಂಡಿರುವ ಕೆಕೆಆರ್ ತಂಡಕ್ಕೆ, ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದು, ಗಾಯದ ಮೇಲೆ ತುಪ್ಪ ಸುರಿದಂತೆ ಆಗಿದೆ.

RCB vs KKR IPL 2023: Will Play Jason Roy And Lockie Ferguson; KKRs Probable Playing 11

ಹೀಗಾಗಿ ಶ್ರೇಯಸ್ ಅಯ್ಯರ್ ಅವರ ಬದಲಿಯಾಗಿ ಜೇಸನ್ ರಾಯ್ ಅವರನ್ನು ಹೆಸರಿಸಲಾಗಿದೆ. ಜೇಸನ್ ರಾಯ್ ಅವರ ಮೂಲ ಬೆಲೆ 1.5 ಕೋಟಿ ರೂ. ಆಗಿತ್ತು. ಇದೀಗ 2023ರ ಐಪಿಎಲ್‌ಗಾಗಿ ಇಂಗ್ಲೆಂಡ್‌ನ ಜೇಸನ್ ರಾಯ್ ಅವರಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 2.8 ಕೋಟಿ ರೂ. ನೀಡಿ ತೆಕ್ಕೆಗೆ ತೆಗೆದುಕೊಂಡಿದೆ.

ಇದೀಗ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಜೇಸನ್ ರಾಯ್‌ ಆಡುತ್ತಾರೋ ಇಲ್ಲವೋ ಎಂಬುದು ಕುತೂಹಲವಾಗಿ ಉಳಿದಿದೆ. ಇದಕ್ಕೆ ಸಂಬಂಧಿಸಿದಂತೆ ಕೆಕೆಆರ್ ತಂಡ ಒಂದು ದೊಡ್ಡ ಅಪ್‌ಡೇಟ್‌ ಒದಗಿಸಿದೆ ಮತ್ತು ಜೇಸನ್ ರಾಯ್ ಕೆಕೆಆರ್ ತಂಡಕ್ಕೆ ಯಾವಾಗ ಆಡಬಹುದೆಂದು ದೃಢಪಡಿಸಿದೆ.

RCB vs KKR IPL 2023: Will Play Jason Roy And Lockie Ferguson; KKRs Probable Playing 11

ಆರ್‌ಸಿಬಿ ವಿರುದ್ಧ ಕೆಕೆಆರ್ ತಂಡದ ಮುಂಬರುವ ಪಂದ್ಯದಲ್ಲಿ ಜೇಸನ್ ರಾಯ್ ಆಡುತ್ತಿಲ್ಲ. ಭಾನುವಾರ, ಏಪ್ರಿಲ್ 9ರಂದು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ನೇರವಾಗಿ ಅಹಮದಾಬಾದ್‌ಗೆ ಪ್ರಯಾಣಿಸುತ್ತಾರೆ ಮತ್ತು ಅಲ್ಲಿ ಕೆಕೆಆರ್ ತಂಡದ ಉಳಿದ ಆಟಗಾರರನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಜೇಸನ್ ರಾಯ್ ಕೊನೆಯ ಬಾರಿಗೆ 2021ರ ಐಪಿಎಲ್ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದರು ಮತ್ತು 2017, 2018ರ ಸೀಸನ್‌ಗಳಲ್ಲಿಯೂ ಆಡಿದ್ದರು. 2021ರಲ್ಲಿ ಆಡಿದ ಐದು ಪಂದ್ಯಗಳಲ್ಲಿ ಏಕೈಕ ಅರ್ಧಶತಕ ಸೇರಿದಂತೆ 150 ರನ್ ಗಳಿಸಿದ್ದರು. 32 ವರ್ಷದ ಜೇಸನ್ ರಾಯ್ ಇಂಗ್ಲೆಂಡ್‌ ತಂಡದ ಪರ 64 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ, 8 ಅರ್ಧಶತಕಗಳನ್ನು ಒಳಗೊಂಡ ಮತ್ತು 137.61ರ ಸರಾಸರಿಯಲ್ಲಿ 1522 ರನ್‌ಗಳನ್ನು ಗಳಿಸಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಂಭಾವ್ಯ ಆಡುವ 11ರ ಬಳಗ

ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಮನ್‌ದೀಪ್ ಸಿಂಗ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ಲಾಕಿ ಫರ್ಗ್ಯುಸನ್, ಅನುಕೂಲ್ ರಾಯ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+