ವಿರಾಟ್ ಕೊಹ್ಲಿ ಹಾಗೂ ಎಂ.ಎಸ್.ಧೋನಿ ಬ್ಯಾಟಿಂಗ್ ಪ್ರದರ್ಶನದ ವೇಳೆ ವೀಕ್ಷಕರ ಸಂಖ್ಯೆಯಲ್ಲಿ ಐತಿಹಾಸಿಕ ದಾಖಲೆ
ವಿಶ್ವದಲ್ಲೇ ಅತ್ಯಂತ ಶ್ರೀಮಂತ ಲೀಗ್ ಅಂದರೆ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಮಾತ್ರ. ಅದರಲ್ಲೂ ಆರ್‌ಸಿಬಿ ಇದುವರೆಗೂ ಒಂದು ಕಪ್ ಗೆಲ್ಲದಿದ್ದರೂ ಕೂಡ ವಿಶ್ವಾದಾದ್ಯಂತ ಎಲ್ಲಾ ಟೀಂಗಳಿಗಿಂತಲೂ ಅಪಾರ ಅಭಿಮಾನಿ ಬಳಗವನ್ನೇ ಹೊಂದಿದೆ. ಇನ್ನು ಯಾವುದೇ ಟೀಂಗಳ ಮೇಲೆ ಆರ್‌ಸಿಬಿ ಬಿದ್ದರೆ, ಈ ಪಂದ್ಯವನ್ನು ಅತೀ ಹೆಚ್ಚು ವೀಕ್ಷಣೆ ಮಾಡಿರುವ ದಾಖಲೆಗಳಿವೆ. ಹಾಗೆಯೇ ನಿನ್ನೆ (ಮೇ 18) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ನಡೆದ ಆರ್‌ಸಿಬಿ ಪಂದ್ಯವನ್ನು ಜಿಯೋ ಸಿನಿಮಾದಲ್ಲೇ ದಾಖಲೆ ಮಟ್ಟದಲ್ಲಿ ವೀಕ್ಷಣೆ ಮಾಡಿದ್ದಾರೆ.
ಒಂದು ಬಾರಿಯೂ ಕಪ್ ಗೆಲ್ಲದಿದ್ದರೂ ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಟೀಂ ಆರ್‌ಸಿಬಿ ಆಗಿದೆ. ಬರೀ ಬೆಂಗಳೂರು, ಕರ್ನಾಟಕ, ಭಾರತ ಅಲ್ಲದೇ, ವಿದೇಶಗಳಲ್ಲೂ ಕೂಡ ಅಭಿಮಾನಿಗಳನ್ನು ಆರ್‌ಸಿಬಿ ಹೊಂದಿದೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮ್ಯಾಚ್ ಇದ್ದರೆ ಸಾಕು ಮನೆ, ಕಂಪನಿ, ರೆಸ್ಟೋರೆಂಟ್‌ಗಳಲ್ಲಿ ಟಿವಿಗಳು ಮಾತ್ರವಲ್ಲದೇ, ಜಿಯೋ ಸಿನಿಮಾದಲ್ಲೇ ಅತೀ ಹೆಚ್ಚು ಜನ ವೀಕ್ಷಣೆ ಮಾಡುತ್ತಾರೆ.

ಇನ್ನು ನಿನ್ನೆ (ಮೇ 18) ತವರು ಅಂಗಳ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡ ಸಿಎಸ್‌ಕೆ ವಿರುದ್ಧ ಗೆದ್ದು ಗೆಲುವಿನ ನಗೆ ಬೀರಿ ಪ್ಲೇ ಆಫ್‌ಗೆ ಕ್ವಾಲಿಫೈ ಆದಾಗ, ಜಿಯೋ ಸಿನಿಮಾದಲ್ಲಿ ಪಂದ್ಯ ವೀಕ್ಷಕರ ಸಂಖ್ಯೆ 50,00,00,000ಗೂ ಹೆಚ್ಚು ಇದ್ದು, ಇದು ಈ ಸೀಸನ್‌ನಲ್ಲಿ ದಾಖಲೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆರ್‌ಸಿಬಿ ಎಷ್ಟೇ ಬಾರೀ ಸೋತರೂ ಕೂಡ ತುಂಬಾ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದೆ. ಗೆಲುವೇ ಇರಲಿ, ಸೋಲೇ ಇರಲಿ ಈ ಅಭಿಮಾನಿಗಳು ತಮ್ಮ ತಂಡದ ಪರವಾಗಿಯೇ ನಿಲ್ಲುತ್ತಾರೆ. ಅದಕ್ಕೆ ಹೇಳೋದು ಈ ಅಭಿಮಾನಿಗಳ ಅಭಿಮಾನಕ್ಕೆ ಯಾರೂ ಸರಿಸಾಟಿಯೇ ಇಲ್ಲ ಅಂತಾ.
ಯಾವ ಮೈದಾನದಲ್ಲಿ ಆರ್‌ಸಿಬಿ ತಂಡದ ಪಂದ್ಯ ಇರುತ್ತದೆಯೋ ಆ ಮೈದಾನದ ಮೆರಗು ತುಸು ಹೆಚ್ಚಾಗುತ್ತದೆ. ಅಲ್ಲದೆ, ಆ ತಂಡದಲ್ಲಿ ಯಾರೂ ಆಡಿದರೂ ಕೂಡ ಅವರಿಗೆ ಅಪಾರ ಅಭಿಮಾನವನ್ನು ತೋರಿಸುವುದೇ ವಿಶೇಷವಾಗಿರುತ್ತದೆ. ಆದ್ದರಿಂದಲೇ ವಿದೇಶದವರೆಗೂ ಆರ್‌ಸಿಬಿಗೆ ಇದ್ದಷ್ಟು ಅಭಿಮಾನಿಗಳ ಬಳಗ ಯಾವ ಟೀಂಗೂ ಇಲ್ಲ ಅನ್ನೋದು. ಇನ್ನು ನಿನ್ನೆ (ಮೇ 18) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ ಮತ್ತು ಆರ್‌ಸಿಬಿ ಪಂದ್ಯ ನಡೆದಿದ್ದು, ಇದನ್ನು ವೀಕ್ಷಿಸಲು ಅಪಾರ ಅಭಿಮಾನಿಗಳ ಬಳಗವೇ ಸೇರಿತ್ತು.
JioCinema highest total cumulative views:
— Mufaddal Vohra (@mufaddal_vohra) May 19, 2024
RCB Vs CSK - 50cr.
RCB Vs CSK - 38cr.
SRH Vs MI - 28cr.
CSK Vs v MI - 26cr.
RCB Vs KKR - 25cr.
CSK Vs GT - 25cr.
RCB Vs PBKS - 24cr.
CSK Vs DC - 24cr.
RCB Vs SRH - 24cr.
RCB Vs MI - 23cr.
RCB Vs RR - 23cr.
- THE BRAND KNOWN AS RCB.
ಅದರಲ್ಲೂ ತವರು ಮೈದಾನವಾದ M.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆದಾಗ ಟಿಕೆಟ್‌ಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಬಹುತೇಕ ಜನರು ಟಿಕೆಟ್ ಸಿಗದೇ ಮನೆಗೆ ತೆರಳಿ ಟಿವಿ, ಫೋನ್‌ಗಳಲ್ಲೇ ಹೆಚ್ಚಾಗಿ ವೀಕ್ಷಣೆ ಮಾಡಿದ ಘಟನೆಗಳು ನಡೆದಿವೆ. ಈ ಋತುವಿನ RCB ಪಂದ್ಯಗಳು ನಡೆದ ಸಮಯದಲ್ಲಿ IPLನ ಲೈವ್ ಸ್ಟ್ರೀಮಿಂಗ್ ಪಾಲುದಾರರಾದ JioCinemaನಲ್ಲಿ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ ಎನ್ನುವ ಅಂಕಿಅಂಶಗಳು ಹೊರಬಿದ್ದಿವೆ.
ಐಪಿಎಲ್ ಎಲ್ಲಾ ವಯಸ್ಸಿನವರನ್ನು ತನ್ನತ್ತ ಸೆಳೆದೇಬಿಡುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು, ವಯಸ್ಕರು ಮತ್ತು ಹಿರಿಯರು ಕೂಡ ವೀಕ್ಷಣೆ ಮಾಡುತ್ತಾರೆ. ಅದರಲ್ಲೂ ಆರ್‌ಸಿಬಿ ಇದ್ದಾಗ ಹೆಚ್ಚಾಗಿ ಪಂದ್ಯ ವೀಕ್ಷಣೆ ಮಾಡುತ್ತಾರೆ. ಹಾಗೆಯೇ ಬೆಂಗಳೂರಿನಲ್ಲಿ ನಿನ್ನೆ ನಡೆದ RCB ಮತ್ತು CSK ಪಂದ್ಯವನ್ನು ಅತೀ ಹೆಚ್ಚಾಗಿ ವೀಕ್ಷಣೆ ಮಾಡಿದ್ದಾರೆ. ಈ ಪೈಕಿ ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಪ್ರದರ್ಶನವನ್ನು ಹೆಚ್ಚಾಗಿ ವೀಕ್ಷಣೆ ಮಾಡಿದ್ದು, ಈ ವೇಳೆ ಜಿಯೋ ಸಿನಿಮಾ ಆಪ್‌ನಲ್ಲಿ 50 ಕೋಟಿಗೂ ಹೆಚ್ಚು ಜನ ಪಂದ್ಯ ವೀಕ್ಷಣೆ ಮಾಡಿದ್ದಾರೆ. ಇದು ಈವೆಗೂ ನಡೆದ ಐಪಿಎಲ್ ಪಂದ್ಯಗಳಲ್ಲಿ ಅತ್ಯಧಿಕ ಸಂಖ್ಯೆಯಾಗಿದೆ.
ದಾಖಲೆ ಮಟ್ಟದಲ್ಲಿ ಪಂದ್ಯ ವೀಕ್ಷಣೆ
1. RCB Vs CSK - 50 ಕೋಟಿ
2. RCB Vs CSK - 38 ಕೋಟಿ
3. SRH Vs MI - 28 ಕೋಟಿ
4. CSK Vs vs MI - 26 ಕೋಟಿ
5. RCB Vs KKR - 25 ಕೋಟಿ
6. CSK Vs GT - 25 ಕೋಟಿ
7. RCB Vs PBKS - 24 ಕೋಟಿ
8. CSK Vs DC - 24 ಕೋಟಿ
9 RCB Vs SRH - 24 ಕೋಟಿ
10. RCB Vs MI - 23 ಕೋಟಿ
11. RCB Vs RR - 23 ಕೋಟಿ












Click it and Unblock the Notifications