IPL 2025 Umpire: ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಸ್ನೇಹಿತ ಐಪಿಎಲ್ ಕ್ರಿಕೆಟ್‌ಗೆ ಅಂಪೈರ್
ವಿಶ್ವದ ಅತೀ ದೊಡ್ಡ ಶ್ರೀಮಂತ ಲೀಕ್ ಐಪಿಎಲ್ ಆಗಿದೆ. ಈ ಬಾರಿಯ ಅಂದರೆ 18ನೇ ಆವೃತ್ತಿ ಮಾರ್ಚ್ 22, 2025ರಿಂದ ಆರಂಭ ಆಗಲಿದೆ. ವಿಶೇಷ ಅಂದ್ರೆ ಕಿಂಗ್ ಕೊಹ್ಲಿ ಜೊತೆ ಆಡಿರುವ ಸಹ ಆಟಗಾರೊಬ್ಬರು ಈ ಬಾರಿಯ ಐಪಿಎಲ್‌ನಲ್ಲಿಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಹಾಗಾದ್ರೆ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಐಪಿಎಲ್ 2025ರ ಮೊದಲ ಪಂದ್ಯ ಮಾರ್ಚ್ 22ರಂದು ನಡೆಯಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ನಡೆಯಲಿದೆ. ಈ ನಡುವೆಯೇ ವಿರಾಟ್ ಕೊಹ್ಲಿ ಜೊತೆ ಆಡಿರುವ ತನ್ಮಯ್ ಶ್ರೀವಾಸ್ತವ ಎಂಬುವವರಯ ಐಪಿಎಲ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾವಾಗಿದೆ.

ಇನ್ನೂ ಐಪಿಎಲ್‌ನಲ್ಲಿ ತನ್ನ ಸಹ ಆಟಗಾರ ಆಂಪೈರ್ ಆಗಿರುವುದಕ್ಕೆ ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ ಅವರು ತುಂಬಾ ಸಂತಸ ಪಟ್ಟಿದ್ದಾರೆ. ಮೊದಲಿನಿಂದಲೂ ವಿರಾಟ್ ಕೊಹ್ಲಿ ಬೆಳೆಯುವವರನ್ನು ಕಂರೆ ಪೊತ್ಸಾಹಿಸುವ ಕ್ರೀಡಾಪಟು ಆಗಿದ್ದಾರೆ. ಆಟ ಆಡುವಾಗ ಅದೆಷಗಟೇ ಕೋಪದಲ್ಲಿರಲಿ ಕೊನೆಗೆ ಶಾಂತ ರೀತಿಯಿಂದ ಯಾರ ಮೇಲೆ ಕೋಪ ಮಾಡಿಕೊಂಡಿರುತ್ತಾರೋ ಅವನ್ನು ಮತ್ತೆ ಸಹನೆಯಿಂದ ಮಾತನಾಡಿಸುವ ಗುಣ ಅವರದ್ದಾಗಿದೆ. ಇನ್ನೂ ಅವರ ಸಹ ಆಟಗಾರರು ಬೆಳೆದಿದ್ದಾರೆ ಅಂದ್ರೆ. ಅವರಿಗೆ ಪ್ರತ್ಸಾಹಿಸುವ ಗುಣ ಅವರದ್ದಾಗಿದೆ.
ತನ್ಮಯ್ ಶ್ರೀವಾಸ್ತವ ಕೊಹ್ಲಿ ನಾಯಕತ್ವದಲ್ಲಿ 2008ರ ಅಂಡರ್-19 ವಿಶ್ವಕಪ್‌ನಲ್ಲಿ ಆಡಿದ್ದರು. ಆಗ ಟೀಂ ಇಂಡಿಯಾ ಪ್ರಶಸ್ತಿ ಗೆದ್ದುಕೊಂಡಿದ್ದು, ಕೊಹ್ಲಿ ಜೊತೆ ಆಡಿದ್ದ ತನ್ಮಯ್ ಇದೀಗ ಐಪಿಎಲ್ ಸೀಸನ್ 18ರಲ್ಲಿ ಅಂಪೈರ್ ಆಗಿ ಗಮನ ಸೆಳೆಯಲಿದ್ದಾರೆ. ಐಪಿಎಲ್‌ನಲ್ಲಿ ಅಂಪೈರ್ ಆಗಿದ್ದು, ಆದರೆ ಅವರು ಆನ್-ಫೀಲ್ಡ್ ಅಂಪೈರಿಂಗ್ ಮಾಡುವುದಿಲ್ಲ. ಆ ಮೂಲಕ ಐಪಿಎಲ್ ಆಡಿದ ಓರ್ವ ಆಟಗಾರ ಐಪಿಎಲ್ಗೆ ಅಂಪೈರ್ ಆಗುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ.
ತನ್ಮಯ್ 5 ವರ್ಷಗಳ ಹಿಂದೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಬಳಿಕ ಅಂಪೈರಿಂಗ್ ಕೋರ್ಸ್ ಮುಂದುವರೆಸಿದರು. ತನ್ಮಯ್ ಎರಡು ವರ್ಷಗಳ ಕಾಲ ಲೆವೆಲ್ 2 ಕೋರ್ಸ್ ಮಾಡಿ ದೇಶೀಯ ಕ್ರಿಕೆಟ್‌ನಲ್ಲಿ ಅಂಪೈರಿಂಗ್ ಪ್ರಾರಂಭ ಮಾಡಿದರು. ಐಪಿಎಲ್‌ನಲ್ಲಿ ತನ್ಮಯ್ ಪಂಜಾಬ್ ಕಿಂಗ್ಸ್ ತಂಡದ ಪರ ಆಡಿದವರಾಗಿದ್ದಾರೆ.
2007 ರಿಂದ 2009ರ ವರೆಗೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಡಿದ್ದರು. ತನ್ಮಯ್ 90 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 4,918 ರನ್‌ಗಳನ್ನು ಕಲೆ ಹಾಕಿದ್ದಾರೆ. 10 ಶತಕ ಹಾಗೂ 27 ಅರ್ಧಶತಕ ಸಿಡಿಸಿದ್ದಾರೆ. ತನ್ಮಯ್ ಲಿಸ್ಟ್ ಎ ನಲ್ಲಿ 1,728 ರನ್‌ಗಳನ್ನು ಬಾರಿಸಿದ್ದು, ಲಿಸ್ಟ್ ಎ ನಲ್ಲಿ 7 ಶತಕ ಮತ್ತು 10 ಅರ್ಧಶತಕ ಬಾರಿಸಿದ್ದಾರೆ.
ಈಗಾಗಲೇ ನಡೆದ 17 ಐಪಿಎಲ್‌ನ ಆವೃತ್ತಿಯಲ್ಲೂ ಆರ್‌ಸಿಬಿ ಪುರುಷರ ತಂಡ ಕಪ್ ಗೆದ್ದಿಲ್ಲ. ಆದರೂ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಇದಾಗಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅಲ್ಲದೆ, ಎಷ್ಟೇ ಬಾರಿ ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರೇ ನಮ್ಮ ಫೇವರಿಟ್ ತಂಡ ಅನ್ನುತ್ತಿದ್ದಾರೆ. ಈ ನಡುವೆಯೇ ವಿರಾಟ್ ಕೊಹ್ಲಿ
18ನೇ ಆವೃತ್ತಿಯ ಐಪಿಎಲ್ ಮಾರ್ಚ್ 22, 2025 ರಿಂದ ಮೇ 25ರ ವರೆಗೆ ನಡೆಯಲಿದೆ. ಈ ಬಾರಿ ಒಟ್ಟು 10 ತಂಡಗಳು ಕಪ್‌ಗಾಗಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಕಾತರದಿಂದ ಕಾಯುತ್ತಿವೆ. ಮೊದಲ ಪಂದ್ಯ ಆರ್‌ಸಿಬಿ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ.












Click it and Unblock the Notifications