Virat Kohli: ಕೇವಲ ಒಂದೇ ಒಂದು ರನ್‌ ಗಳಿಸಿ ಮೈದಾನದಲ್ಲೇ ಕುಣಿದಾಡಿದ ವಿರಾಟ್ ಕೊಹ್ಲಿ; ಇಲ್ಲಿದೆ ಕಾರಣ

RCB Virat Kohli: ರಾಯ್‌ಪುರದಲ್ಲಿ ಬುಧವಾರ (ಮೇ 13) ನಡೆದ ಹೈವೋಲ್ಟೇಟ್ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್‌ ಪೇರಿಸಿದೆ. 193 ರನ್‌ಗಳ ಬೆನ್ನತ್ತಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ವಿರಾಟ್‌ ಕೊಹ್ಲಿ ಕೇವಲ ಒಂದೇ ಒಂದು ರನ್ ಗಳಿಸಿ ಮೈದಾನದಲ್ಲಿ ಕುಣಿದಾಡುತ್ತಾ ಸಂಭ್ರಮಾಚರಣೆ ಮಾಡಿದರು. ಇದಕ್ಕೆ ನೆಟ್ಟಿಗರು ಇವರಲ್ಲಿ ಒಬ್ಬ ಪುಟ್ಟ ಮಗು ಇರವುದಂತೂ ಗ್ಯಾರಂಟಿ ಎಂದು ಹೇಳಿದ್ದಾರೆ. ಇನ್ನೂ ಕೊಹ್ಲಿ ಅವರ ಈ ಸೆಲೆಬ್ರೆಷನ್‌ ಹಿಂದಿದೆ ಮಹತ್ವದ ಕಾರಣ. ಇಲ್ಲಿದೆ ನೋಡಿ ಮಾಹಿತಿ.

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ ಒಂದು ರನ್ ಗಳಿಸಿ ವಿಶಿಷ್ಟವಾಗಿ ಸಂಭ್ರಮಿಸಿದ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ಐಪಿಎಲ್ 2026ರ ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಶೂನ್ಯಕ್ಕೆ ಔಟ್ ಆಗಿದ್ದ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಆದರೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ತಮ್ಮ ಮೊದಲ ರನ್ ಗಳಿಸಿದ ತಕ್ಷಣ ಕೊಹ್ಲಿ ನೀಡಿದ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದೆ.

RCB Virat Kohli Viral Celebration After 1 Run vs KKR Leaves Fans Talking in IPL 2026 Know Reason

ಸಂಭ್ರಮಾಚರಣೆಯ ಹಿಂದಿನ ಉದ್ದೇಶನು?

ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಮೊದಲ ರನ್ ಗಳಿಸುತ್ತಿದ್ದಂತೆ ವಿರಾಟ್‌ ಕೊಹ್ಲಿ ಬ್ಯಾಟ್ ಎತ್ತಿ .. yes.. yes.. yes ಎಂದು ಹೇಳುತ್ತಾ ಕುಣಿದಾಡುತ್ತಾ ಸಂಭ್ರಮಿಸಿದರು. ಇದು ಕೇವಲ ಒಂದು ರನ್ ಗಳಿಸಿದ್ದಕ್ಕಾಗಿ ಮಾಡಿದ ಸಂಭ್ರಮವಾಗಿರಲಿಲ್ಲ. ಬದಲಾಗಿ "ನಾನು ರನ್ ಗಳಿಸಲು ಆರಂಭಿಸಿದ್ದೇನೆ, ಈಗ ಟೀಕೆ ನಿಲ್ಲಿಸಿ," ಎಂದು ಕಾಮೆಂಟ್ ಮಾಡುವವರಿಗೆ ನೀಡಿದ ಪರೋಕ್ಷ ಉತ್ತರದಂತಿತ್ತು.

ಟ್ರೋಲ್‌ಗಳಿಗೆ ವಿರಾಟ್ ತಿರುಗೇಟು

ಸತತವಾಗಿ ಶೂನ್ಯಕ್ಕೆ ಔಟ್ ಆದಾಗ ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ ಅವರ ಫಾರ್ಮ್ ಬಗ್ಗೆ ಸಾಕಷ್ಟು ವ್ಯಂಗ್ಯವಾಡಲಾಗಿತ್ತು. ಆ ಎಲ್ಲಾ ಟೀಕೆಗಳನ್ನು ಗಮನಿಸಿದ್ದ ವಿರಾಟ್‌ ಕೊಹ್ಲಿ ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗುತ್ತಿದೆ. ಇದಕ್ಕೆ ಕೆಲವರು "ಯಾರು ಕೂಡ ತಮಾಷೆಗಾಗಿಯೂ ಕೊಹ್ಲಿ ಅವರನ್ನು ಕೆಣಕಬೇಡಿ. ಒಂದು ವೇಳೆ ಕಣಕಬೆಕೆಂದಿದ್ರೆ ನಂತರ ಅವರು ಕೊಡುವ ತಕ್ಕ ಉತ್ತರಕ್ಕೆ ರೆಡಿಯಾಗಿರಿ," ಎಂದು ಹೇಳಿದ್ದಾರೆ. ಇನ್ನೂ ಕೆಲವರು "ವಿರಾಟ್‌ ಕೊಹ್ಲಿ ಅವರಲ್ಲಿ ಪುಟ್ಟ ಮಗು ಇದೆ," ಎಂದು ಹೇಳಿದ್ಧಾರೆ.

ಒಬ್ಬ ಶ್ರೇಷ್ಠ ಆಟಗಾರ ಕಠಿಣ ಸಮಯದಲ್ಲಿ ಒಂದು ಸಣ್ಣ ಯಶಸ್ಸನ್ನೂ ಹೇಗೆ ಸಕಾರಾತ್ಮಕವಾಗಿ ಸ್ವೀಕರಿಸುತ್ತಾನೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಯಿತು. ಈ ಸಂಭ್ರಮಾಚರಣೆಯ ಮೂಲಕ ಅವರು ತಮ್ಮ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡಿಕೊಂಡಂತೆ ಕಂಡಿತು. ಇದೀಗ ಕೊಹ್ಲಿ ಅವರ ಈ ನಡೆ ಈಗ ವೈರಲ್ ಆಗಿದ್ದು, ಅಭಿಮಾನಿಗಳು ಇದನ್ನು "ಕಿಂಗ್ ಈಸ್ ಬ್ಯಾಕ್" ಎಂದು ಸಂಭ್ರಮಿಸುತ್ತಿದ್ದಾರೆ. ಅಲ್ಲದೆ "ಕೇವಲ ಒಂದು ರನ್ ಮೂಲಕವೂ ಸುದ್ದಿಯಾಗುವ ಸಾಮರ್ಥ್ಯ ಕೊಹ್ಲಿ ಅವರಿಗೆ ಮಾತ್ರ ಇದೆ," ಎಂದು ಹಲವು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+