"49" ನೆನಪಿದೆಯೇ?: ಪಂಜಾಬ್ ಕಿಂಗ್ಸ್ ತಂಡಕ್ಕೆ ಆರ್‌ಸಿಬಿ ಕೊಟ್ಟ ಖಡಕ್ ಟಾಂಗ್ ಭಾರಿ ವೈರಲ್

RCB Entered Playoffs: ಧರ್ಮಶಾಲಾದಲ್ಲಿ ಭಾನುವಾರ (ಮೇ 17) ನಡೆದ ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಆರ್‌ಸಿಬಿ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 23 ರನ್‌ಗಳ ಭರ್ಜರಿ ಜಯ ಸಾಧಿಸಿ ಪ್ಲೇ-ಅಫ್‌ಗೇ ಪ್ರವೇಶಿಸಿದೆ. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾಮಾಜಿಕ ಜಾಲತಾಣದಲ್ಲಿ ಪಂಜಾಬ್ ತಂಡದ ಹಳೆಯ ಟ್ರೋಲ್‌ಗೆ ತಿರುಗೇಟು ನೀಡಿದೆ. ಇದು ಇದೀಗ ಸಖತ್ ವೈರಲ್ ಆಗುತ್ತಿದೆ.

ಆರ್‌ಸಿಬಿ ತಂಡವು ಸಾಮಾಜಿಕ ಜಾಲತಾಣದದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಕಾಲೆಳೆಯುವ ಉದ್ದೇಶದಿಂದ ಒಂದು ಸಂದೇಶವನ್ನು ಹಂಚಿಕೊಂಡಿದೆ. ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ತಂಡವು ಕೆಕೆಆರ್ ವಿರುದ್ಧ ಕೇವಲ 49 ರನ್‌ಗಳಿಗೆ ಆಲೌಟ್ ಆಗಿದ್ದನ್ನು ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡವು ಟ್ರೋಲ್ ಮಾಡಿತ್ತು. ಈಗ ಅದೇ ಸಂಖ್ಯೆಯನ್ನು ಬಳಸಿ ಆರ್‌ಸಿಬಿ ತಿರುಗೇಟು ನೀಡಿದೆ.

RCB Trolls Punjab Kings After IPL 2026 Win in Dharmashala Viral Reply Takes Social Media by Storm

ಪಂಜಾಬ್‌ ಕಿಂಗ್ಸ್‌ಗೆ ಆರ್‌ಸಿಬಿ ತಿರುಗೇಟು

ಪಂದ್ಯದ ನಂತರ ಆರ್‌ಸಿಬಿ ತಂಡವು ಪಂಜಾಬ್ ತಂಡಕ್ಕೆ ತಿರುಗೇಟು ನೀಡುತ್ತಾ, "ನಾವು ಧರ್ಮಶಾಲಾದಲ್ಲಿ ಗೆದ್ದಿದ್ದೇವೆ ಮತ್ತು ನಮ್ಮ ಪ್ಲೇ-ಆಫ್ ಹಾದಿ ಈಗ ಸ್ಪಷ್ಟವಾಗಿದೆ. ಹಳೆಯದನ್ನು ನೆನಪಿಸುವ ಅಗತ್ಯವಿಲ್ಲ ಎಂದು ನಮಗೆ ಗೊತ್ತು, ಆದರೆ ವಿಜಯದ ರುಚಿ ಹಾಗಿದೆ!," ಎಂಬ ಅರ್ಥದಲ್ಲಿ ಟಾಂಗ್ ನೀಡಿದೆ. ಪಂದ್ಯ ಮುಗಿದ ಕೆಲವೇ ನಿಮಿಷಗಳಲ್ಲಿ ಆರ್‌ಸಿಬಿ ತಂಡದ ಈ ಪೋಸ್ಟ್‌ ಸಾವಿರಾರು ಲೈಕ್ಸ್ ಮತ್ತು ಶೇರ್ ಪಡೆದುಕೊಂಡಿದೆ.

ಆರ್‌ಸಿಬಿ ಪೋಸ್ಟ್‌ ಬಗ್ಗೆ ಅಭಿಮಾನಿಗಳು ಹೇಳೋದೇನು?

"ಸರಿಯಾದ ಸಮಯಕ್ಕೆ ಸರಿಯಾದ ತಿರುಗೇಟು ನೀಡಿದ್ದೀರಿ," ಎಂದು ಆರ್‌ಸಿಬಿ ಅಭಿಮಾನಿಗಳು ಪಂಜಾಬ್ ತಂಡದ ಹಳೆಯ ಪೋಸ್ಟ್‌ಗಳನ್ನು ನೆನಪಿಸಿ ಕಾಲೆಳೆಯುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿ 222 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು. ಆದರೆ ಪಂಜಾಬ್ ಕಿಂಗ್ಸ್ 199 ರನ್‌ಗಳನ್ನ ಗಳಿಸಿ ಸೋಲೊಪ್ಪಿಕೊಂಡಿತು.

ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇ-ಆಫ್ ತಲುಪಿದ್ದಂತೆ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದವರಿಗೆ ಮೈದಾನದಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡುವ ಕೆಲಸ ಮಾಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಕ್ರಿಕೆಟ್ ಎಂದರೆ ಕೇವಲ ಮೈದಾನದ ಆಟವಲ್ಲ, ಅದು ಇಂತಹ ತಮಾಷೆಯ ಜಟಾಪಟಿಗಳಿಗೂ ವೇದಿಕೆಯಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಆರ್‌ಸಿಬಿ ಪ್ಲೇಯಿಂಗ್ 11: ಜೇಕಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ವೆಂಕಟೇಶ್ ಅಯ್ಯರ್, ಜಿತೇಶ್ ಶರ್ಮಾ (ನಾಯಕ ಹಾಗೂ ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಸ್‌ ಹ್ಯಾಜಲ್‌ವುಡ್, ಸುಯಶ್ ಶರ್ಮಾ.

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರನ್ ಸಿಂಗ್, ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ಸೂರ್ಯಾಂಶ್‌ ಶೆಡ್ಗೆ, ಶಶಾಂಕ್ ಸಿಂಗ್, ಅಜ್ಮತುಲ್ಲಾ ಒಮರ್ಜಾಯ್, ಹರ್‌ಪ್ರೀತ್ ಬ್ರಾರ್, ಲಾಕಿ ಫರ್ಗುಸನ್, ಅರ್ಷದೀಪ್ ಸಿಂಗ್, ಯಜ್ವೇಂದ್ರ ಚಹಾಲ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+