RCB: ಮೆಗಾ ಹರಾಜಿನ ಬಳಿಕ ಆರ್‌ಸಿಬಿ ತಂಡ ಹೇಗಿದೆ? ಎಲ್ಲಾ ಆಟಗಾರರ ವಿವರ

ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜು ಮುಕ್ತಾಯಗೊಂಡಿದೆ. ಎಲ್ಲಾ 10 ಫ್ರಾಂಚೈಸಿಗಳು ಎರಡು ದಿನ ಹರಾಜು ಟೇಬಲ್‌ನಲ್ಲಿ ಬಿರುಸಿನ ಸ್ಪರ್ಧೆ ನಡೆಸಿ ಬಲಿಷ್ಠ ತಂಡಗಳನ್ನು ಕಟ್ಟಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಹಳೆ ಆಟಗಾರರನ್ನು ಕೈಬಿಟ್ಟಿದ್ದು, ಹೊಸ ಮುಖಗಳನ್ನು ತಂಡಕ್ಕೆ ಕರೆತಂದಿದೆ. ಮೊದಲ ದಿನ ಆರ್ ಸಿಬಿ ಪ್ರಮುಖ ಆಟಗಾರರನ್ನು ಖರೀದಿ ಮಾಡಲು ಆಸಕ್ತಿ ತೋರಿಸದೇ ಇರುವುದಕ್ಕೆ ಟ್ರೋಲ್‌ಗೆ ಗುರಿಯಾಗಿತ್ತು, ಅಂತಿಮವಾಗಿ ಆರ್ ಸಿಬಿ ಫ್ರಾಂಚೈಸಿ ಬ್ಯಾಟಿಂಗ್‌ಗಿಂತ ಬೌಲಿಂಗ್ ವಿಭಾಗದ ಕಡೆ ಹೆಚ್ಚು ಗಮನ ಕೊಡುವಲ್ಲಿ ಯಶಸ್ವಿಯಾಗಿದೆ.

83 ಕೋಟಿ ಪರ್ಸ್‌ನೊಂದಿಗೆ ಹರಾಜಿಗೆ ಬಂದ ಆರ್ ಸಿಬಿ ಮೊದಲ ದಿನ ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಸುಯಶ್ ಶರ್ಮಾ, ರಸಿಖ್ ಧಾರ್, ಜೋಶ್ ಹೇಜಲ್‌ವುಡ್‌ರನ್ನು ಖರೀದಿ ಮಾಡಿತ್ತು. ನಾವು ನಮ್ಮದೇ ಆದ ಪ್ಲಾನ್ ಜೊತೆ ಬಂದಿದ್ದೇವೆ ಅಭಿಮಾನಿಗಳು ತಾಳ್ಮೆಯಿಂದ ಇರಬೇಕು ಎಂದು ತಂಡದ ಮ್ಯಾನೇಜ್‌ಮೆಂಟ್ ಮನವಿ ಮಾಡಿತ್ತು.

RCB Team After Ipl mega auction 2025 key players

ಎರಡನೇ ದಿನ ಆರ್ ಸಿಬಿ ಎಡಗೈ ಸ್ಪಿನ್ ಆಲ್‌ರೌಂಡರ್ ಕೃನಾಲ್‌ ಪಾಂಡ್ಯರನ್ನು ಖರೀದಿ ಮಾಡಿತು. ಬಳಿಕ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು 10.75 ಕೋಟಿ ರೂಪಾಯಿಗೆ ಖರೀದಿ ಮಾಡಿ ಬೌಲಿಂಗ್‌ಗೆ ಮತ್ತಷ್ಟು ಬಲ ತುಂಬಿತು. ವಿಲ್‌ ಜ್ಯಾಕ್ಸ್‌ರನ್ನು ಖರೀದಿ ಮಾಡುತ್ತಾರೆ ಎಂದು ನಂಬಿದ್ದ ಅಭಿಮಾನಿಗಳಿಗೆ ಆಘಾತ ಸಿಕ್ಕಿತು, ಟಿಮ್ ಡೇವಿಡ್‌ರನ್ನು 3 ಕೋಟಿ ರೂಪಾಯಿಗೆ ಖರೀದಿ ಮಾಡಿದ ಆರ್ ಸಿಬಿ ವಿಲ್‌ ಜ್ಯಾಕ್ಸ್‌ರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಟ್ಟುಕೊಟ್ಟಿತು.

ಸ್ವಪ್ನಿಲ್ ಸಿಂಗ್, ಮನೋಜ್ ಭಾಂಡಗೆ ವಾಪಸ್‌

ಕಳೆದ ವರ್ಷ ಆರ್ ಸಿಬಿ ತಂಡದಲ್ಲಿದ್ದ ಸ್ಪಿನ್ ಆಲ್‌ರೌಂಡರ್ ಸ್ವಪ್ನಿಲ್ ಸಿಂಗ್ ಮತ್ತು ಮನೋಜ್ ಭಾಂಡಗೆ ಮತ್ತೆ ತಂಡಕ್ಕೆ ವಾಪಸ್ ಆಗಿದ್ದಾರೆ. ಸ್ವಪ್ನಿಲ್ ಸಿಂಗ್‌ರನ್ನು 50 ಲಕ್ಷ ರೂಪಾಯಿಗೆ ರಿಟೇನ್ ಮಾಡಿಕೊಂಡರೆ, ಮನೋಜ್ ಭಾಂಡಗೆ ಮೂಲ ಬೆಲೆ 30 ಲಕ್ಷ ರೂಪಾಯಿಗೆ ಸಿಕ್ಕರು.

ಇಂಗ್ಲೆಂಡ್‌ನ ಆಲ್‌ರೌಂಡರ್ ಜಾಕೋಬ್ ಬೆಥೆಲ್ ಬೆಥೆಲ್, ಶ್ರೀಲಂಕಾ ವೇಗಿ ನುವಾನ್ ತುಷಾರ, ವೆಸ್ಟ್ ಇಂಡೀಸ್ ಆಲ್‌ರೌಂಡರ್ ರೊಮಾರಿಯೋ ಶೆಫರ್ಡ್ ಆರ್ ಸಿಬಿ ಸೇರಿದ್ದಾರೆ. ಕರ್ನಾಟಕದ ಬ್ಯಾಟರ್ ದೇವದತ್ ಪಡಿಕ್ಕಲ್ ಮೂಲ ಬೆಲೆ 2 ಕೋಟಿಗೆ ಆರ್ ಸಿಬಿ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.

2025ರ ಐಪಿಎಲ್‌ಗೆ ಆರ್ ಸಿಬಿ ತಂಡ

ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಟಿದಾರ್, ದೇವದತ್ ಪಡಿಕ್ಕಲ್ , ಜಾಕೋಬ್ ಬೆಥೆಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್, ಕೃನಾಲ್‌ ಪಾಂಡ್ಯ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಸಿಖ್ ಧಾರ್, ಜೋಶ್ ಹೇಜಲ್‌ವುಡ್‌, ಸುಯಶ್ ಶರ್ಮಾ, ಮನೋಜ್ ಭಾಂಡಗೆ, ಸ್ವಪ್ನಿಲ್ ಸಿಂಗ್, ರೊಮಾರಿಯೋ ಶೆಫರ್ಡ್, ಯಶ್ ದಯಾಳ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+