RCB Vs KKR: ಪತ್ನಿ ಅನುಷ್ಕಾ ಜೊತೆ ಬೆಂಗಳೂರಿನತ್ತ ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ: ವಿಡಿಯೋ ಭಾರಿ ವೈರಲ್
IPl 2025 RCB Vs KKR: ಅರ್ಧಕ್ಕೆ ರದ್ದಾಗಿದ್ದ ಐಪಿಎಲ್ 2025 ಟೂರ್ನಿ ಮತ್ತೆ ಇದೇ ಮೇ 17ರಿಂದ ಆರಂಭವಾಗುತ್ತಿದೆ. ಮೊದಲ ಪಂದ್ಯ ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ಚಿನ್ನಸ್ವಾಮಿಯಲ್ಲಿ ನಡೆಯಲಿದೆ. ಈ ಹಿನ್ನೆಲೆ ವಿದೇಶಿ ಆಟಗಾರರು, ಸೇರಿದಂತೆ ದೇಶಿಯ ಆಟಗಾರರು ಬೆಂಗಳೂರಿಗೆ ಬಂದಿಳಿಯುತ್ತಿದ್ದು, ಈ ನಡುವೆಯೇ ವಿರಾಟ್ ಕೊಹ್ಲಿ ದಂಪತಿಯ ವಿಡಿಯೋ ವೈರಲ್ ಆಗುತ್ತಿದೆ.
ಭಾರತ-ಪಾಕಿಸ್ತಾನ ನಡುವೆ ಬಿಕ್ಕಟ್ಟು ಹಿನ್ನೆಲೆ ಆಟಗಾರರು, ಅಭಿಮಾನಿಗಳ ಹಿತದೃಷ್ಟಿಯಿಂದ ಪ್ರಾಂಚೈಸಿಗಳ ಮನವಿ ಮೇರೆಗೆ ಬಿಸಿಸಿಐ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಅರ್ಧಕ್ಕೆ ರದ್ದುಪಡಿಸಿ ಒಂದು ವಾರಕ್ಕೆ ಮುಂದೂಡಿಕೆ ಮಾಡಿತ್ತು. ಈ ವೇಳೆ ವಿದೇಶಿ ಆಟಗಾರರನ್ನು ಅವರವರ ದೇಶಕ್ಕೆ ವಾಪಾಸ್ ಕಳುಹಿಸಲಾಗಿತ್ತು. ಅಲ್ಲದೆ, ದೇಶಿಯ ಆಟಗಾರರು ಸಹ ತವರಿಗೆ ತೆರಳಿದ್ದರು.

ಇದೀಗ ಮತ್ತೆ ಹೊಸ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಈ ಪ್ರಕಾರ ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಈ ಹಿನ್ನೆಲೆ ತವರಿಗೆ ತೆರಳಿದ್ದ ಆಟಗಾರರು ಐಪಿಎಲ್ ಆಡಲು ಮತ್ತೆ ಮರಳುತ್ತಿದ್ದಾರೆ. ಹಾಗೆಯೇ ಕೆಕೆಆರ್ ವಿರುದ್ಧ ಪಂದ್ಯ ಆಡಲು ಆರ್‌ಸಿಬಿ ಆಟಗಾರರು ಸಹ ಬೆಂಗಳೂರಿಗೆ ಬಂದಿಳಿದಿದ್ದಾರೆ. ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸಹ ಪತ್ನಿ ಅನುಷ್ಕಾ ಜೊತೆ ಮುಂಬೈ ಏರ್ಪೋರ್ಟ್‌ನಿಂದ ಬೆಂಗಳೂರಿಗೆ ತೆರಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಗುರುವಾರ ವಿರಾಟ್ ಕೊಹ್ಲಿ ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಬೆಂಗಳೂರಿಗೆ ವಿಮಾನ ಹತ್ತಿದ್ದು ಕಂಡುಬಂದಿತು. ಮೇ 17ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ.
ಆರ್‌ಸಿಬಿ ಈ ಸವಾಲು ಎದುರಿಸಲಯ ಸಜ್ಜಾಗುತ್ತಿದ್ದು, ಮಾಜಿ ನಾಯಕ ವಿರಾಟ್ ಕೊಹ್ಲಿ ಆರ್‌ಸಿಬಿಗೆ ಈ ಬಾರಿಯಾದರೂ ಟ್ರೋಫಿ ಗೆಲ್ಲಿಸುವತ್ತ ಗಮನ ಹರಿಸುತ್ತಿದ್ದಾರೆ. ಗುರುವಾರ ವಿರಾಟ್ ಕೊಹ್ಲಿ ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಬೆಂಗಳೂರಿಗೆ ವಿಮಾನ ಹತ್ತುತ್ತಿರುವುದು ಕಂಡುಬಂದಿತು. ಈ ವಿಡಿಯೋ ಇದೀಗ ಸಾಮಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಇದರಿಂದ ಅಭಿಮಾನಿಗಳು ಸಂತಸದ ಅಲೆಯಲ್ಲಿ ತೇಲಾಡುತ್ತಿದ್ದಾರೆ.
Virat Kohli And @AnushkaSharma Spotted At Private Airport Today.😍❤️
— virat_kohli_18_club (@KohliSensation) May 15, 2025
.
.
.
Off To Bengaluru.✈️
.
.#Virushka #RCB #IPL2025 @imVkohli pic.twitter.com/fDCOctZUqV
ಇನ್ನು ಇದಕ್ಕೂ ಮೊದಲು, ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಪವಿತ್ರ ಪಟ್ಟಣವಾದ ವೃಂದಾವನಕ್ಕೆ ಪ್ರಯಾಣ ಬೆಳೆಸಿದ್ದರು, ನಂತರ ಐಪಿಎಲ್ ಉಳಿದ ಪಂದ್ಯಾವಳಿಯ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾರೆ.
ಇದೀಗ ಸದ್ಯ ಆರ್‌ಸಿಬಿ ತಂಡವು ಆಡಿರುವ 11 ಪಂದ್ಯಗಳಲ್ಲಿ 3ರಲ್ಲಿ ಸೋತು, 8ರಲ್ಲಿ ಗೆಲುವು ಸಾಧಿಸುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 16 ಅಂಕಗಳೊಂದಿದೆ ಎರಡನೇ ಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿ ಗುಜರಾತ್ ಟೈಟಾನ್ಸ್ ಇದೆ. ಇವೆರಡು ತಂಡಗಳು ಬಾಕಿ ಉಳಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದಾರೆ ಸಾಕು ಪ್ಲೇ ಆಫ್ ಪ್ರವೇಶ ಮಾಡಲಿವೆ.
ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಇದುವರೆದ ಆಡಿದ 11 ಪಂದ್ಯಗಳಲ್ಲಿ 7 ಅರ್ಧಶತಕಗಳು ಸೇರಿದಂತೆ 505 ರನ್‌ಗಳನ್ನು ಕಲೆಹಾಕಿದ್ದು, ಈ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಇದೀಗ ಸದ್ಯ ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ ಅವರು 12 ಪಂದ್ಯಗಳಲ್ಲಿ 510 ರನ್ ಕಲೆ ಹಾಕಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಈ ಗುರಿ ಮುಟ್ಟಲು ಇನ್ನೂ ಕೇವಲ 6 ರನ್‌ಗಳಷ್ಟೇ ಗಳಿಸಬೇಕಿದೆ.
ಮತ್ತೊಂದೆಡೆ ವಿದಾಯ ಪಂದ್ಯವಿಲ್ಲದೆ, ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿರುಚ ವಿರಾಟ್ ಕೊಹ್ಲಿಗೆ ಆರ್‌ಸಿಬಿ ಅಭಿಮಾನಿಗಳು ಕೆಕೆಆರ್ ವಿರುದ್ಧ ಐಪಿಎಲ್ ಪಂದ್ಯದ ವೇಳೆ ವೈಟ್ ಜೆರ್ಸಿ ಧರಿಸುವ ಮೂಲಕ ಗೌರವ ಸಲ್ಲಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮೂಲಕ ಅವರ ಟೆಸ್ಟ್ ದಿನಗಳನ್ನು ನೆನಪಿಸಲು ಮುಂದಾಗಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.












Click it and Unblock the Notifications