RCB Romario Shepherd: ಕೇವಲ ಒಂದೇ ಬಾಲ್‌ಗೆ 22 ರನ್ ಬಾರಿಸಿದ ಆರ್‌ಸಿಬಿ 'ಬ್ಲ್ಯಾಕ್ ಡ್ರ್ಯಾಗನ್'
RCB Romario Shepherd: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲುವ ಮೂಲಕ 18 ವರ್ಷಗಳ ಬಳಿಕ ಮೊಟ್ಟ ಮೊದಲ ಟ್ರೋಫಿಗೆ ಮುತ್ತಿಟ್ಟಿತು. ಈ ಗೆಲುವಿಗೆ ವೆಸ್ಟ್ ವಿಂಡೀಸ್‌ನ ದೈತ್ಯ ರೊಮಾರಿಯೋ ಶೆಫರ್ಡ್ ಪಾತ್ರ ಕೂಡ ಪ್ರಮುಖವಾಗಿದೆ. ಇದೀಗ ಅವರು ಕೇವಲ ಒಂದೇ ಒಂದು ಬಾಲ್‌ಗೆ 22 ರನ್‌ಗಳನ್ನು ಸಿಡಿಸಿ ಎದುರಾಳಿ ತಂಡದ ಬೌಲರ್‌ಗಳ ಚಳಿ ಬಿಡಿಸಿದ್ದಾರೆ. ಹಾಗಾದ್ರೆ, ಇದು ಹೇಗೆ ಸಾಧ್ಯ ಎನ್ನುವ ಸಾಧ್ಯ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
2025ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ರೊಮಾರಿಯೋ ಶೆಫರ್ಡ್ ಅಬ್ಬರದ ಬ್ಯಾಟ್ ಬೀಸುವ ಮೂಲಕ ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದರು. ಅದರಲ್ಲೂ, ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ ನರರಾಕ್ಷಸನ ರೂಪ ತಾಳಿ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಅಂದಿನ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು.

ಈ ಮೂಲಕ ಅಂದಿನ ಆರ್‌ಸಿಬಿ ಗೆಲುವಿಗೆ ರೊಮಾರಿಯೋ ಶೆಫರ್ಡ್ ಅಬ್ಬರದ ಬ್ಯಾಟಿಂಗ್‌ನಿಂದ ಮೂಡಿದ ಬಂದ ಬೃಹತ್ ರನ್‌ಗಳೇ ಕಾರಣ. ಆಗಿನಿಂದ ಅವರನ್ನು ತಂಡದಲ್ಲಿ ಬ್ಲ್ಯಾಕ್ ಡ್ರ್ಯಾಗನ್ ಅಂತಾ ಕರೆಯಲಾಗುತ್ತಿದೆ. ಇದೀಗ ಸಿಪಿಎಲ್‌ನಲ್ಲೂ ಸಹ ಸ್ಫೋಟಕ ಬ್ಯಾಟಿಂಗ್‌ನಿಂದ ಅಂತಹದ್ದೇ ಒಂದು ದಾಖಲೆ ನಿರ್ಮಿಸಿದ್ದಾರೆ.
ರೊಮಾರಿಯೊ ಶೆಫರ್ಡ್ ವೆಸ್ಟ್ ವಿಂಡೀಸ್‌ನ ಆಲ್ರೌಂಡರ್ ಆಟಗಾರನಾಗಿದ್ದು, ಇವರು ಬ್ಯಾಟಿಂಗ್, ಬೌಲಿಂಗ್ ಮಾಡಲಿದ್ದಾರೆ. ಈಗಾಗಲೇ ಐಪಿಎಲ್ ವೇಳೆ ತಮ್ಮ ಸಾಮರ್ಥ್ಯ ಏನು ಅಂತಾ ಎದುರಾಳಿ ತಂಡಗಳಿಗೆ ನೆನಪಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ 14 ಬಾಲ್ನಲ್ಲಿ ಸಿಎಸ್‌ಕೆ ವಿರುದ್ಧ ಅರ್ಧ ಶತಕ ಬಾರಿಸಿ ಗಮನ ಸೆಳೆದಿದ್ದರು. ಇದೀಗ ಸಿಪಿಎಲ್‌ನಲ್ಲೂ ಒಂದೇ ಒಂದು ಎಸೆತದಲ್ಲಿ ಬರೋಬ್ಬರಿ 22 ರನ್‌ಗಳನ್ನು ಸಿಡಿಸುವ ಮೂಲಕ ಮಿಂಚಿದ್ದಾರೆ.
ಸದ್ಯ ಇದೀಗ ವೆಸ್ಟ್ ವಿಂಡೀಸ್ನಲ್ಲಿ ಸದ್ಯ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ನಡೆಯುತ್ತಿದೆ. ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ ಪರ ಆಡುತ್ತಿರುವ ಶೆಫರ್ಡ್, ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಳಿದ ಅವರು, ಗಯಾನಾ ಅಮೆಜಾನ್ ವಾರಿಯರ್ಸ್ ಪರ ಕೇವಲ 34 ಎಸೆತಗಳಲ್ಲಿ 73 ರನ್‌ಗಳನ್ನು ಚಚ್ಚಿದರು.
ಅದರಲ್ಲೂ 15ನೇ ಓವರ್‌ನ ಮೂರನೇ ಎಸೆತದಲ್ಲಿ ದೊಡ್ಡ ಚಂಕ್ ನಡೆದುಹೋಯಿತು. 15ನೇ ಓವರ್ ಅನ್ನು ಓಶೇನ್ ಎಸೆದಿದ್ದು, ಮೂರನೇ ಎಸೆತ ನೋ-ಬಾಲ್ ಆಯಿತು. ಬಳಿಕ ವೈಡ್ ಹಾಕಿದರು. ಕೊನೆಗೆ ಎಸೆದ ಬಾಲ್‌ಗೆ ಶೆಫರ್ಡ್ ಸಿಕ್ಸರ್ ಬಾರಿಸಿದರು. ಆದರೆ, ಅದು ನೋ ಬಾಲ್ ಆಗಿತ್ತು. ನೋ-ಬಾಲ್ ಆಗಿದ್ದರಿಂದ ಸಿಕ್ಕ ಫ್ರೀ-ಹಿಟ್ನಲ್ಲಿ ಸಿಕ್ಸರ್ ಬಾರಿಸಿದರು. ಕೊನೆಗೆ ಎಸೆದ ಬಾಲ್‌ಗೂ ಸಿಕ್ಸ್ ಬಾರಿಸಿದರು. 1nb, 1w, 7nb, 7nb, 6. ಅಂದರೆ ಕೇವಲ ಒಂದು ಎಸೆತದಲ್ಲಿ 22 ರನ್‌ಗಳನ್ನು ಕದ್ದುಬಿಟ್ಟರು. ಈ ಮೂಲಕ ಆರ್‌ಸಿಬಿ ಸ್ಫೋಟಕ ಆಟಗಾರ ಸಿಪಿಎಲ್‌ನಲ್ಲೂ ತಮ್ಮ ಸಾಮರ್ಥದ್ಯ ಏನು ಅಂತಾ ರೊಮಾರಿಯೋ ಶೆಫರ್ಡ್ ಸಾಬೀತು ಪಡಿಸಿದ್ದಾರೆ.












Click it and Unblock the Notifications