RCB Sale: ಐಪಿಎಲ್ 2026 ಆರಂಭಕ್ಕೂ ಮುನ್ನ ಆರ್‌ಸಿಬಿ ಖರೀದಿಗೆ ಮುಂದಾದ ಬಿಲಿಯನೇರ್ ಉದ್ಯಮಿ
RCB Sale: ಐಪಿಎಲ್‌ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ತಂಡವನ್ನು 2026ರ ಆವೃತ್ತಿಗೂ ಮುನ್ನ ಮಾರಾಟಕ್ಕೆ ಇಡಲಾಗಿದೆ. ಇದೀಗ ಈ ಫ್ರಾಂಚೈಸಿಯನ್ನು ಕೊಂಡುಕೊಳ್ಳಲು ಖ್ಯಾತ ಉದ್ಯಮಿಯೊಬ್ಬರು ಮುಂದೆ ಬಂದಿದ್ದಾರೆ. ಹಾಗಾದ್ರೆ, ಅವರು ಯಾರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹಾಲಿ ಚಾಂಪಿಯನ್ ಆರ್‌ಸಿಬಿಯನ್ನು ಐಪಿಎಲ್ 2026 ಆರಂಭಕ್ಕೂ ಮುನ್ನ ಮಾರಾಟಕ್ಕೆ ಇಡಲಾಗಿದ್ದು, ಉದ್ಯಮಿಯೊಬ್ಬರು ಕೊಂಡುಕೊಳ್ಳಲು ಮುಂದಾಗಿದೆ. ಹಾಗಾದ್ರೆ, ಈ ಐಪಿಎಲ್ ಶ್ರೀಮಂತ ತಂಡವನ್ನು ಖರೀದಿ ಮಾಡುವವರು ಯಾರು ಎನ್ನುವ ಪ್ರಶ್ನೆ ಬಹುತೇಕ ಮಂದಿಯ ತಲೆಯಲ್ಲಿರುತ್ತದೆ. ಅದೆಲ್ಲದಕ್ಕೂ ಉತ್ತರ ಇಲ್ಲಿದೆ ನೋಡಿ.

ಆರ್‌ಸಿಬಿ ಆಡಿದ 17 ಸೀಸನ್‌ಗಳಲ್ಲೂ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ, 18ನೇ ಆವೃತಿಯಲ್ಲಿ ಫೈನಲ್ ಪಂದ್ಯದಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿ ಕಪ್ ಇಲ್ಲ ಎಂಬ ಕೊರಗಿಗೆ ತೆರೆ ಎಳೆಯಿತು. ಚೊಚ್ಚಲ ಟ್ರೋಫಿಗೆ ಮುತ್ತಿಡುವ ಮೂಲಕ ಐಪಿಎಲ್‌ನಲ್ಲಿ ಹೊಸ ಇತಿಹಾಸ ಬರೆಯಿತು. ಪ್ರತಿ ಬಾರಿಯೂ ಸಹ ಅಭಿಮಾನಿಗಳು "ಈ ಸಲ ಕಪ್ ನಮ್ದೆ" ಎಂದು ಹೇಳುತ್ತಿದ್ದು, ಇದು ಕೊನೆಗೂ 2025ರಲ್ಲಿ ನನಸಾಯಿತು. ಆಗಿನಿಂದ "ಈ ಸಲ ಕಪ್ ನಮ್ದೆ" ಎಂದು ಘೋಷವಾಕ್ಯ ಕೂಡ ಬದಲಾಯಿತು.
ಫ್ರಾಂಚೈಸಿ ಮಾರಾಟ ಮಾಡುವ ನಿರ್ಧಾರ: ಟ್ರೋಫಿ ಗೆದ್ದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರಾಂಡ್ ವ್ಯಾಲ್ಯೂನಲ್ಲಿ ಎಲ್ಲಾ ತಂಡಗಳನ್ನು ಹಿಂದಿಕ್ಕಿತ್ತು. ಇದರ ಬೆನ್ನಲ್ಲೇ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಫ್ರಾಂಚೈಸಿಯನ್ನು ಮಾರಾಟ ಮಾಡುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿತ್ತು.
ಖರೀದಿ ಮಾಡುವವರು ಯಾರು?: ಹಾಲಿ ಚಾಂಪಿಯನ್ ಆರ್‌ಸಿಬಿ ಫ್ರಾಂಚೈಸಿಯನ್ನು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಮಾರಾಟಕ್ಕಿಟಕ್ಕೆ ಇಟ್ಟಿದೆ. ಇದನ್ನು ಔಷಧ ಉದ್ಯಮಿ ಆದಾರ್ ಪೂನಾವಾಲಾ ಖರೀದಿಗೆ ಬಿಡ್ ಮಾಡಿದ್ದಾರೆ. ವಿರಾಟ್ ಕೊಹ್ಲಿ, ಸ್ಮೃತಿ ಮಂಧನಾ ಅವರಂತಹ ದಿಗ್ಗಜರು ಇರುವ ಆರ್‌ಸಿಬಿ ತಂಡದ ಮೌಲ್ಯ 18,000-20,000 ಕೋಟಿ ರೂಪಾಯಿ ತಲುಪುವ ನಿರೀಕ್ಷೆ ಇದೆ. ಇದೀಹ ಸೀರಮ್ ಇನ್‌ಸ್ಟಿಟ್ಯೂಟ್ ಸಿಇಒ ಆದಾರ್ ಪೂನಾವಾಲಾ ಅವರು ಆರ್‌ಸಿಬಿ ಫ್ರಾಂಚೈಸಿ ಖರೀದಿಗೆ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆರ್‌ಸಿಬಿ ತನ್ನ ತವರು ಪಂದ್ಯಗಳನ್ನು ಎಲ್ಲಿ ಆಡಲಿದೆ ಎನ್ನುವ ಚಿಂತಯಲ್ಲಿ ಬಿಸಿಸಿಐ ಇದೆ. ಈ ನಡುವೆಯೇ ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನವೇ ಬೆಂಗಳೂರು ಫ್ರಾಂಚೈಸಿಗೆ ಹೊಸ ಮಾಲೀಕ ಸಿಗುವುದು ಖಚಿತ ಆದಂತಾಗಿದೆ. ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ತಂಡದ ಹಾಲಿ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಮುಂದಾಗಿದೆ. ಕಳೆದ 2025ರ ನವೆಂಬರ್‌ನಲ್ಲೇ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ತಂಡವನ್ನು ಮಾರಾಟಕ್ಕಿಟ್ಟಿತ್ತು.
ಇದೀಗ ಬಂದ ಮಾಹಿತಿಯ ಪ್ರಕಾರ, ಆದರ್ ಪೂನವಾಲಾ ಆರ್‌ಸಿಬಿ ಫ್ರಾಂಚೈಸಿಯನ್ನ ಖರೀದಿ ಮಾಡಲು ಮುಂದಾಗಿದ್ದಾರೆ. ಸ್ವತಃ ಈ ವಿಚಾರವನ್ನು ಪೂನವಲ್ಲ ಅವರೇ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಖಚಿತಪಡಿಸಿದ್ದು, ಆರ್‌ಸಿಬಿಯನ್ನು ಖರೀದಿಸಲು ಬಿಡ್ ಮಾಡುವುದಾಗಿ ತಿಳಿಸಿದ್ದಾರೆ. ಆದರೆ, ಅವರು ಆರ್‌ಸಿಬಿ ಖರೀದಿಗಾಗಿ ಎಷ್ಟು ಹಣ ಖರ್ಚು ಮಾಡಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿಲ್ಲ.
ಮಾಹಿತಿ ಪ್ರಕಾರ, ಆರ್‌ಸಿಬಿ 18,000 ಕೋಟಿಯಿಂದ 20,000 ಕೋಟಿಗೆ ಮಾರಾಟವಾಗುವ ನಿರೀಕ್ಷೆಯನ್ನು ಹಾಲಿ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಹೊಂದಿದೆ. ಇದಕ್ಕೆ ಕಾರಣವೂ ಇದ್ದು, ಆರ್‌ಸಿಬಿ ಹಾಲಿ ಚಾಂಪಿಯನ್ ಮಾತ್ರ ಅಲ್ಲದೆ, ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಹಾಗಾದ್ರೆ ಆರ್‌ಸಿಬಿ ಕೊಡುಕೊಳ್ಳಲು ಮುಂದಾಗಿರುವ ಆದರ್ ಪೂನವಾಲಾ ಯಾರು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಆದರ್ ಪೂನವಾಲಾ ಯಾರು?: ಆದರ್ ಪೂನವಾಲಾ ಒಬ್ಬ ಭಾರತೀಯ ಬಿಲಿಯನೇರ್ ಉದ್ಯಮಿ ಆಗಿದ್ದಾರೆ. ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII)ದ ಸಿಇಒ ಮತ್ತು ಬ್ಯಾಂಕೇತರ ಹಣಕಾಸು ಕಂಪನಿಯಾದ ಪೂನವಾಲಾ ಫಿನ್‌ಕಾರ್ಪ್‌ನ ಅಧ್ಯಕ್ಷರಾಗಿ ಪ್ರಸಿದ್ಧರಾಗಿದ್ದಾರೆ. ಇದೀಗ ಅವರು ಆರ್‌ಸಿಬಿ ಖರೀದಿಗೆ ಮುಂದಾಗಿದ್ದು, ಇದಕ್ಕೆ ಎಷ್ಟು ಮೊತ್ತ ಸುರಿಯಲಿದ್ದಾರೆ ಎಂಬುದು ಕಾದುನೋಡಬೇಕಿದೆ.












Click it and Unblock the Notifications