RCB Playoff: ಆರ್‌ಸಿಬಿ ಪ್ಲೇ-ಆಫ್ ಪ್ರವೇಶದ ಲೆಕ್ಕಾಚಾರ
RCB Playoff IPL 2026: ಐಪಿಎಲ್ 2026ರ ಲೀಗ್ ಹಂತದ ಪಂದ್ಯಗಳು ಕೊನೇ ಘಟನಕ್ಕೆ ಬಂದು ತಲುಪಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬುಧವಾರ (ಮೇ 13) ರಾಯ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ 16 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. ಹಾಗಾದ್ರೆ ಆರ್‌ಸಿಬಿ ಪ್ಲೇ-ಆಫ್ ಲೆಕ್ಕಾಚಾರ ಹೇಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮೇ 13ರಂದು ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಜವಾಬ್ದಾರಿಯುತ ಆಟವಾಡಿದ ವಿರಾಟ್ ಕೊಹ್ಲಿ ಅಜೇಯ 105 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಗೆಲುವಿನೊಂದಿಗೆ ಆರ್‌ಸಿಬಿ 12 ಪಂದ್ಯಗಳಲ್ಲಿ 8ರಲ್ಲಿ ಗೆದ್ದು 16 ಅಂಕಗಳನ್ನು ಗಳಿಸಿದೆ. ಈ ಮೂಲಕ ಪ್ಲೇ-ಆಫ್ ಹಾದಿ ತುಸು ಸುಗಮ ಆದಂತಾಗಿದೆ.

ಆರ್‌ಸಿಬಿ ಪ್ಲೇ-ಆಫ್ ಲೆಕ್ಕಾಚಾರ
ಲೀಗ್ ಹಂತದಲ್ಲಿ ಆರ್‌ಸಿಬಿಗೆ ಇನ್ನು ಕೇವಲ 2 ಪಂದ್ಯಗಳು ಬಾಕಿ ಇವೆ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಆಡಬೇಕಿದೆ. ಇದೀಗ ಸದ್ಯ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೂ ಅಗ್ರ 4 ರಿಂದ ಹೊರಬೀಳುವ ಭೀತಿ ಇನ್ನೂ ತಪ್ಪಿಲ್ಲ. ಒಂದು ವೇಳೆ ಮುಂದಿನ ಎರಡೂ ಪಂದ್ಯಗಳನ್ನು ಸೋತರೆ ತಂಡವು ಅತ್ಯಂತ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
ಆರ್‌ಸಿಬಿ ಪ್ಲೇ-ಆಫ್‌ಗೆ ಎಷ್ಟು ಪಂದ್ಯಗಳನ್ನ ಗೆಲ್ಲಬೇಕು?
ಆರ್‌ಸಿಬಿ ಎರಡರಲ್ಲಿ ಒಂದು ಪಂದ್ಯ ಗೆದ್ದರೂ 18 ಅಂಕಗಳನ್ನು ಪಡೆಯುತ್ತದೆ. ಆದರೆ ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳೂ ಸಹ 18 ಅಂಕಗಳನ್ನು ತಲುಪುವ ಅವಕಾಶ ಹೊಂದಿವೆ. ಆದ್ದರಿಂದ ಆರ್‌ಸಿಬಿ ಉಳಿದ ಎರಡೂ ಪಂದ್ಯಗಳಲ್ಲಿ ಗೆದ್ದರೆ ಯಾವುದೇ ಆತಂಕ ಇರುವುದಿಲ್ಲ. ಒಂದು ವೇಳೆ ಇದು ಸಾಧ್ಯವಾದರೆ ನೇರವಾಗಿ ಪ್ಲೇ-ಆಫ್ ಪ್ರವೇಶ ಪಡೆಯುವುದರಲ್ಲಿ ಅನುಮಾನವಿಲ್ಲ.
ಸದ್ಯದ ಫಲಿತಾಂಶಗಳ ಆಧಾರದ ಮೇಲೆ ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕೂಡ 18 ಅಂಕಗಳನ್ನು ತಲುಪುವ ಅಥವಾ ಆ ಮೊತ್ತವನ್ನು ದಾಟುವ ಸಾಧ್ಯತೆಗಳಿವೆ. ಕೆಕೆಆರ್ ವಿಷಯಕ್ಕೆ ಬಂದರೆ ಅವರು ತಮ್ಮ ಉಳಿದಿರುವ ಎಲ್ಲಾ 3 ಪಂದ್ಯಗಳನ್ನು ಕಡ್ಡಾಯವಾಗಿ ಗೆಲ್ಲಬೇಕಿದೆ. ಹಾಗಾದಲ್ಲಿ ಮಾತ್ರ ಅವರ ಒಟ್ಟು ಅಂಕಗಳು 15ಕ್ಕೆ ಏರಲಿದೆ.
ಹೆಚ್ಚು ಅವಕಾಶ ಇರುವುದು ಯಾವ ತಂಡಕ್ಕೆ?
ಮೂರು ಬಾರಿ ಚಾಂಪಿಯನ್ ಆಗಿರುವ ಕೆಕೆಆರ್ ತಂಡ ಇನ್ನೂ ಪ್ಲೇ ಆಫ್ ರೇಸ್‌ನಲ್ಲಿದೆ. ಆದರೂ ಅವರು ಅಗ್ರ 4ರ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕೇವಲ ತಮ್ಮ ಗೆಲುವಷ್ಟೇ ಸಾಲದು. ಇತರ ಪಂದ್ಯಗಳ ಫಲಿತಾಂಶಗಳು ಕೂಡ ಅವರ ಪರವಾಗಿ ಬರಬೇಕಾದ ಅನಿವಾರ್ಯತೆ ಇದೆ. ಅಂಕಪಟ್ಟಿಯಲ್ಲಿ ಆರ್‌ಸಿಬಿ ಅಗ್ರಸ್ಥಾನದಲ್ಲಿದ್ದರೂ ಪ್ರಸ್ತುತ ಪ್ಲೇ ಆಫ್ ತಲುಪುವ ಅತಿ ಹೆಚ್ಚು ಅವಕಾಶ ಇರುವುದು ಗುಜರಾತ್ ಟೈಟಾನ್ಸ್ ತಂಡಕ್ಕೆ. ಮಾಹಿತಿಯ ಪ್ರಕಾರ ಶುಭಮನ್ ಗಿಲ್ ನಾಯಕತ್ವದ ಈ ತಂಡವು ಪ್ಲೇ ಆಫ್ ತಲುಪಲು ಶೇಕಡಾ 94.8 ರಷ್ಟು ಅವಕಾಶವನ್ನು ಹೊಂದಿದೆ.
ಒಂದು ವೇಳೆ ಗುಜರಾತ್ ಟೈಟಾನ್ಸ್ ಎರಡಕ್ಕೆ ಎರಡರಲ್ಲಿ ಸೋತರೆ ಹಾಗೂ ಪಂಜಾಬ್ ಕಿಂಗ್ಸ್ ಉಳಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತರೆ ಆಗ ಪೈಪೋಟಿ ಇರುವುದಿಲ್ಲ. ಆರ್‌ಸಿಬಿಗೆ ಹೆಚ್ಚು ಅವಕಾಶ ಇರಲಿದೆ. ಆರ್‌ಸಿಬಿಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇದ್ದು, ಮೇ 17ರಂದು ಪಂಜಾಬ್ ಕಿಂಗ್ಸ್ ಹಾಗೂ ಮೇ 22ರಂದು ತನ್ನ ಲೀಗ್ ಹಂತದ ಕೊನೇ ಪಂದ್ಯವನ್ನು ಎಸ್‌ಆರ್‌ಎಚ್ ವಿರುದ್ಧ ಆಡಬೇಕಿದೆ. ಇವೆರಡಲ್ಲೂ ಗೆದ್ದರೆ ಆರ್‌ಸಿಬಿ ತಂಡಕ್ಕೆ ಯಾವುದೇ ತಲೆನೋವು ಇರುವುದಿಲ್ಲ.












Click it and Unblock the Notifications