RCB Playoff: ಆರ್‌ಸಿಬಿ ಪ್ಲೇ-ಆಫ್‌ ಲೆಕ್ಕಾಚಾರ ಹೀಗಿದೆ

IPL 2026 RCB Playoff: ಐಪಿಎಲ್‌ 2026ರ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಅಂತಿಮ ಘಟ್ಟಕ್ಕೆ ಬಂದು ತಲುಪಿವೆ. ಈ ಭಾರಿ ಪ್ಲೇಆಫ್‌ ರೇಸ್‌ಗೆ ಭಾರಿ ಪೈಪೋಟಿ ಏರ್ಪಟ್ಟಿದೆ. ಹಾಗಾದ್ರೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಈ ಹಾದಿ ತಲುಪಬೇಕೆಂದರೆ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಐಪಿಎಲ್ 2026ರ ಲೀಗ್ ಹಂತವು ಈಗ ಕ್ಲೈಮ್ಯಾಕ್ಸ್ ತಲುಪಿದೆ. ಪ್ರತಿ ಪಂದ್ಯದ ಫಲಿತಾಂಶವೂ ತಂಡಗಳ ಭವಿಷ್ಯವನ್ನು ಬದಲಿಸುತ್ತಿದೆ. ಅಂಕಪಟ್ಟಿಯಲ್ಲಿ ಭದ್ರವಾಗಿದ್ದ ತಂಡಗಳು ಸೋಲಿನ ಸುಳಿಯಲ್ಲಿ ಸಿಲುಕಿದ್ದರೆ, ಕೆಳ ಸ್ಥಾನದಲ್ಲಿದ್ದ ತಂಡಗಳು ಗೆಲುವಿನ ಓಟ ಮುಂದುವರಿಸಿ ಪ್ಲೇ ಆಫ್ ರೇಸ್‌ನತ್ತ ಮರಳಿರುವುದು ಅಚ್ಚರಿ ಸಂಗತಿಯಾಗಿದೆ.

RCB Playoff Scenario IPL 2026 How Many Matches Must Royal Challengers Bengaluru Win Know details

ಆರ್‌ಸಿಬಿ ಪ್ಲೇಆಫ್ ಲೆಕ್ಕಾಚಾರ

ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸದ್ಯ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಇಳಿದಿದೆ. 10 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿರು 12 ಅಂಕಗಳನ್ನು ಗಳಿಸಿದೆ. ಪ್ಲಸ್ ಪಾಯಿಂಟ್ ಎಂದರೆ ತಂಡವು +1.234 ರ ಅತ್ಯುತ್ತಮ ನೆಟ್ ರನ್ ರೇಟ್ ಹೊಂದಿದೆ. ಆರ್‌ಸಿಬಿಗೆ ಇನ್ನು 4 ಲೀಗ್ ಹಂದ ಪಂದ್ಯಗಳು ಬಾಕಿ ಇವೆ. ಮುಂಬೈ ಇಂಡಿಯನ್ಸ್, ಕೆಕೆಆರ್, ಪಂಜಾಬ್ ಕಿಂಗ್ಸ್ ಮತ್ತು ಎಸ್‌ಆರ್‌ಹೆಚ್ ವಿರುದ್ಧ ಆಡಬೇಕಿದೆ. ಇದರಲ್ಲಿ ಕನಿಷ್ಠ 2 ಪಂದ್ಯ ಗೆದ್ದರೆ 16 ಅಂಕಗಳೊಂದಿಗೆ ಸುಲಭವಾಗಿ ಪ್ಲೇ ಆಫ್ ಪ್ರವೇಶಿಸಬಹುದು.

ಆರ್‌ಸಿಬಿ ಎಷ್ಟು ಪಂದ್ಯಗಳಲ್ಲಿ ಗೆಲ್ಲಬೇಕು?

ಒಂದು ವೇಳೆ ಪಂದ್ಯಗಳಲ್ಲಿ 1 ಪಂದ್ಯ ಮಾತ್ರ ಗೆದ್ದರೆ 14 ಅಂಕ ಗಳಿಸುತ್ತದೆ. ಆಗ ನೆಟ್ ರನ್ ರೇಟ್ ಆಧಾರದ ಮೇಲೆ ಇತರ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ. ಈ ಬಾರಿ ಸದ್ಯದ ಪರಿಸ್ಥಿತಿ ನೋಡಿದರೆ ಆರ್‌ಸಿಬಿ ಸುಲಭವಾಗಿ ಪ್ಲೇಆಫ್‌ ಪ್ರವೇಶ ಪಡೆಯಬೇಕೆಂದರೆ 16 ಅಂಕಗಳು ಅತ್ಯಗತ್ಯವಾಗಿ ಬೇಕಾಗುತ್ತದೆ. ಒಂದು ವೇಳೆ 18 ಅಂಕ ಪಡೆದರೆ ಯಾವುದೇ ಆತಂಕವಿಲ್ಲದೆ ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆಯಬಹುದು. ಇದು ಆಗಬೇಕಂದ್ರೆ ಉಳಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲ್ಲಬೇಕಿದೆ.

ಪ್ಲೇ-ಆಫ್‌ ರೇಸ್‌ಗೆ ಭಾರಿ ಪೈಪೋಟಿ

ಟೂರ್ನಿಯ ಆರಂಭದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಈಗ ಫೀನಿಕ್ಸ್‌ನಂತೆ ಎದ್ದುಬಂದಿದೆ. ಸತತ 4 ಪಂದ್ಯಗಳನ್ನು ಗೆದ್ದಿರುವ ಕೆಕೆಆರ್ ಈಗ 9 ಅಂಕಗಳೊಂದಿಗೆ 7ನೇ ಸ್ಥಾನಕ್ಕೇರಿದೆ. ಉಳಿದ 4 ಪಂದ್ಯಗಳಲ್ಲೂ ಜಯ ಸಾಧಿಸಿದರೆ ತಂಡದ ಒಟ್ಟು ಅಂಕ 17ಕ್ಕೆ ಏರಲಿದೆ. ಈ ಮೂಲಕ ರಹಾನೆ ಪಡೆ ಅಂತಿಮ ನಾಲ್ಕರ ಘಟ್ಟಕ್ಕೆ ಅಚ್ಚರಿಯ ಎಂಟ್ರಿ ನೀಡುವ ಅವಕಾಶ ಹೊಂದಿದೆ. ಮತ್ತೊಂದೆಡೆ ಸಿಎಸ್‌ಕೆ ಪರಿಸ್ಥಿತಿ ಒಂದು ಲೆಕ್ಕದಲ್ಲಿ ಇದೇ ರೀತಿ ಇದೆ. ಅವರು ಉಳಿದ ನಾಲ್ಕು ಪಂದ್ಯಗಳಲ್ಲಿ ಕನಿಷ್ಠ ಮೂರರಲ್ಲಿ ಗೆದ್ದರೂ 16 ಅಂಕ ಗಳಿಸಿ ಪ್ಲೇ ಆಫ್‌ ರೇಸ್‌ನಲ್ಲಿರುತ್ತಾರೆ.

ಈ ಬಾರಿಯ ಸ್ಪರ್ಧೆಯನ್ನು ಗಮನಿಸಿದರೆ ಪ್ಲೇ-ಆಫ್ ಹಂತ ತಲುಪಲು ಒಂದು ತಂಡಕ್ಕೆ ಕನಿಷ್ಠ 14 ರಿಂದ 16 ಅಂಕಗಳು ಅತ್ಯಗತ್ಯವಾಗಿ ಬೇಕಿದೆ. ಒಂದು ವೇಳೆ ಯಾವುದೇ ಆತಂಕವಿಲ್ಲದೆ ಅಗ್ರ 2 ಸ್ಥಾನಗಳಲ್ಲಿ ಕಾಣಿಸಿಕೊಳ್ಳಬೇಕೆಂದರೆ 18 ಅಂಕಗಳನ್ನು ಗಳಿಸಬೇಕಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಮುಂಬರುವ ಪಂದ್ಯಗಳು ಐಪಿಎಲ್ 2026ರ ಅಂತಿಮ ಚಿತ್ರಣವನ್ನು ನಿರ್ಧರಿಸಲಿವೆ. ಆರ್‌ಸಿಬಿಗೆ ಫಾರ್ಮ್‌ಗೆ ಮರಳುವ ಸವಾಲಿದ್ದರೆ ಕೆಕೆಆರ್‌, ಸಿಎಸ್‌ಕೆ ತನ್ನ ಗೆಲುವಿನ ಓಟವನ್ನು ಮುಂದುವರಿಸುವ ಅನಿವಾರ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+