ಹೊಸ ದಾಖಲೆ ಬರೆದ ಆರ್‌ಸಿಬಿ-ಪಂಜಾಬ್ ಕಿಂಗ್ಸ್ ಫೈನಲ್ ಪಂದ್ಯ; ಯಾವುದರಲ್ಲಿ? ಇಲ್ಲಿದೆ ಮಾಹಿತಿ
IPL 2025 Final: ಎಲ್ಲಾ ಸೀಸನ್‌ಗಿಂತಲೂ 2025ರ ಐಪಿಎಲ್ ಆವೃತ್ತಿ ತುಂಬಾ ವಿಶೇಷವಾಗಿತ್ತು. ಯಾಕಂದ್ರೆ 17 ವರ್ಷಗಳಿಂದ ಟ್ರೋಫಿ ಗೆಲ್ಲದ ಆರ್‌ಸಿಬಿ ಈ ಬಾರಿ ಕೊನೆಗೂ ಟ್ರೋಫಿ ಮುಡಿಗೇರಿಸಿಕೊಂಡು ದಾಖಲೆ ನಿರ್ಮಿಸಿದೆ. ಜೊತೆಗೆ ಬೆಂಗಳೂರಿನಲ್ಲಿ ನಡೆದ ಕಾಲ್ತಳಿತ ದುರಂತದಿಂದ ಕಪ್ಪುಚುಕ್ಕೆಯನ್ನು ಅಂಟಿಸಿಕೊಂಡಿತು. ಈ ನಡುವೆಯೂ ಫೈನಲ್ ಪಂದ್ಯ ಐತಿಹಾಸಿಕ ದಾಖಲೆ ಬರೆದಿರುವುದು ಇದೀಗ ಬಯಲಾಗಿದೆ. ಹಾಗಾದ್ರೆ ಏನದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹೌದು.. ಸಾಮಾನ್ಯವಾಗಿ ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂದ್ರೆ ಅದು ಆರ್‌ಸಿಬಿ. ಈ ತಂಡದ ಪಂದ್ಯವನ್ನು ದಾಖಲೆ ಮಟ್ಟದಲ್ಲಿ ವೀಕ್ಷಣೆ ಮಾಡಿರುವ ಸುಮಾರು ಉದಾಹರಣೆಗಳಿವೆ. ಅದರಲ್ಲೂ ಈ ಬಾರಿಯ ಆರ್‌ಸಿಬಿ-ಪಂಜಾಬ್ ಕಿಂಗ್ಸ್ ಫೈನಲ್ ಪಂದ್ಯ ವೀಕ್ಷಣೆಯಲ್ಲಿ ಇದುವರೆಗೂ ಇದ್ದ ಎಲ್ಲಾ ದಾಖಲೆಗಳನ್ನು ನುಚ್ಚುನೂರು ಮಾಡಿದೆ.

ಐಪಿಎಲ್ 2025ರ ಆವೃತ್ತಿಯನ್ನು ದಾಖಲೆ ಮಟ್ಟದಲ್ಲಿ ವೀಕ್ಷಣೆ ಮಾಡಿದ್ದಾರೆ. ಜಿಯೋ ಹಾಟ್‌ಸ್ಟಾರ್ ಪ್ರಕಾರ, ಈ ಆವೃತ್ತಿಯಲ್ಲಿ ಟಿವಿ ಮತ್ತು ಡಿಜಿಟಲ್ ವೇದಿಕೆಗಳಲ್ಲಿ 840 ಬಿಲಿಯನ್ ನಿಮಿಷಗಳ ವೀಕ್ಷಣೆ ದಾಖಲಾಗಿದೆ. ಒಂದು ಬಿಲಿಯನ್‌ಗಿಂತಲೂ ಹೆಚ್ಚು ಜನರು ಪಂದ್ಯಗಳನ್ನು ವೀಕ್ಷಿಸಿದ್ದಾರೆ.
ಅದರಲ್ಲೂ ಆರ್‌ಸಿಬಿ-ಪಂಜಾಬ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯ 31.7 ಬಿಲಿಯನ್ ನಿಮಿಷಗಳ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದು ಎಲ್ಲಾ ಬಾರಿಗಿಂತಲೂ ಅತೀ ಹೆಚ್ಚು ಜನರು ವೀಕ್ಷಣೆ ಮಾಡಿದ ನೋಡಿದ ಟಿ-20 ಪಂದ್ಯ ಆಗಿದ್ದು, ಈ ಹಿಂದೆ ಇದ್ದ ಎಲ್ಲಾ ದಾಖಲೆಗಳನ್ನು ನುಚ್ಚು ನೂರು ಮಾಡಿದೆ. ಈ ಪಂದ್ಯವನ್ನು 31.7 ಬಿಲಿಯನ್ ನಿಮಿಷಗಳ ಕಾಲ ವೀಕ್ಷಿಸಲಾಗಿದೆ. ಟಿವಿಯಲ್ಲಿ 169 ಮಿಲಿಯನ್ ಜನರು ಮತ್ತು ಡಿಜಿಟಲ್‌ನಲ್ಲಿ 892 ಮಿಲಿಯನ್ ವೀಡಿಯೊ ವೀಕ್ಷಣೆ ಮಾಡಿರುವುದು ದಾಖಲಾಗಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು 17 ವರ್ಷಗಳ ಬಳಿಕ 18ನೇ ಸೀಸನ್‌ನಲ್ಲಿ ಇದೇ ಮೊದಲ ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಇನ್ನು ಈ ಸೀಸನ್‌ನಲ್ಲಿ ದಾಖಲೆಯ ಪ್ರಮಾಣದಲ್ಲಿ ವೀಕ್ಷಕರು ಪಂದ್ಯಗಳನ್ನು ವೀಕ್ಷಿಸಿದ್ದಾರೆ. jiotstar ಪ್ರಕಾರ, ಟಿವಿ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಒಟ್ಟು 840 ಬಿಲಿಯನ್ ನಿಮಿಷಗಳಷ್ಟು ವೀಕ್ಷಣೆ ಸಮಯ ದಾಖಲಾಗಿದೆ. ಒಂದು ಬಿಲಿಯನ್‌ಗಿಂತಲೂ ಹೆಚ್ಚು ಜನರು ಪಂದ್ಯಗಳನ್ನು ವೀಕ್ಷಣೆ ಮಾಡಿದ್ದಾರೆ.
17ನೇ ಆವೃತ್ತಿಗೆ ಹೋಲಿಕೆ ಮಾಡಿಗೆ JioHotstarನಲ್ಲಿ ಡಿಜಿಟಲ್ ವೀಕ್ಷಣೆ ಶೇಕಡಾ 29ರಷ್ಟು ಹೆಚ್ಚಳ ಆಗಿದೆ. ಟೆಲಿವಿಷನ್‌ನಲ್ಲಿ ಸ್ಟಾರ್ ಸ್ಪೋರ್ಟ್ಸ್ 456 ಬಿಲಿಯನ್ ನಿಮಿಷಗಳ ಲೈವ್ ಪ್ರಸಾರ ಮಾಡಿದೆ. ಇದು ಟೂರ್ನಿಯಲ್ಲಿಯೇ ಅತೀ ಹೆಚ್ಚು ಎಂಬ ದಾಖಲೆ ನಿರ್ಮಾಣವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಟಿದ 17 ಸೀನನ್‌ಗಳಲ್ಲಿ ಒಂದೇ ಒಂದು ಐಪಿಎಲ್ ಟ್ರೋಫಿ ಗೆದ್ದಿರಲಿಲ್ಲಿ. ಆದರೆ ಈ ಬಾರಿ ಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಭರ್ಜರಿಯಾಗಿ ಗೆದ್ದು ಮೊದಲ ಟ್ರೊಫಿ ತನ್ನದಾಗಿಸಿಕೊಳ್ಳುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ. ಅಲ್ಲದೆ, ಈ ಪಂದ್ಯವನ್ನು ಸಹ ದಾಖಲೆ ಮಟ್ಟದಲ್ಲಿ ವೀಕ್ಷಣೆ ಮಾಡಿದ್ದಾರೆ ಎನ್ನುವ ಮಾಹಿತಿ ಇದೀಗ ಬಯಲಾಗಿದೆ.












Click it and Unblock the Notifications