RCB: ಆರ್‌ಸಿಬಿಯಿಂದ ಕನ್ನಡಿಗ ಮಯಾಂಕ್ ಅಗರ್ವಾಲ್ ಸೇರಿ ನಾಲ್ವರು ಸ್ಟಾರ್ ಆಟಗಾರರು ಔಟ್..
RCB: ಆರ್‌ಸಿಬಿ 2025 ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗಿ ಗೆದ್ದು 17 ವರ್ಷಗಳ ಬಳಿಕ ಮೊದಲ ಬಾರಿ ಟ್ರೋಫಿಗೆ ಮುತ್ತಿಟ್ಟಿದೆ. ಈ ನಡುವೆಯೇ ಆಘಾತಕಾರಿ ವಿಚಾರವೊಂದು ಹೊರಬಿದ್ದಿದ್ದು, ಮುಂದಿನ ಆವೃತ್ತಿಯಿಂದ ಕನ್ನಡಿಗ ಮಯಾಂಕ್ ಅಗರ್ವಾಲ್ ಸೇರಿ ನಾಲ್ವರು ಆಟಗಾರರನ್ನು ಕೈಬಿಡಲು ಪ್ರಾಂಚೈಸಿ ನಿರ್ಧರಿಸಿದೆ. ಹಾಗಾದ್ರೆ ಕಾರಣ ಏನು ಹಾಗೂ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿದ 17 ಸೀಸನ್‌ಗಳಿಂದಲೂ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ, ಈ ಬಾರಿ 2025ರಲ್ಲಿ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಬೀಗುವ ಮೂಲಕ ಟ್ರೋಫಿ ಇಲ್ಲ ಎಂಬ ಕೊರಗನ್ನು ದೂರ ಮಾಡಿತು. ಅಹಮದಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜೂನ್ 3ರಂದು ಫೈನಲ್ ಪಂದ್ಯ ನಡೆಯಿತು.

ಈ ಬಾರಿ ಆರ್‌ಸಿಬಿ ಬಲಿಷ್ಠ ತಂಡ ಹೊಂದಿದ್ದು, ಬ್ಯಾಟಿಂಗ್, ಬೌಲಿಂಗ್ ಹಾಗೂ ಪೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿತು. ಕೊನೆಯವರೆಗೂ ಇದೇ ಪ್ರದರ್ಶನ ತೋರುತ್ತಾ ಉಳಿದ ಬಲಿಷ್ಠ ತಂಡಗಳನ್ನೆಲ್ಲ ಬಗ್ಗುಬಡಿದು ಫೈನಲ್ ಹಂತಕ್ಕೆ ತಲುಪಿ, ಬಲಿಷ್ಠ ಪಂಜಾಬ್ ವಿರುದ್ಧ ಸೆಳೆಸಾಡಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರ ಪಾತ್ರ ಕೂಡ ಪ್ರಮುಖವಾಗಿದೆ. ಆದರೆ, ಮುಂದಿನ ಬಾರಿ 2026ರಿಂದ ಮಯಾಂಕ್ ಸೇರಿದಂತೆ ನಾಲ್ವರು ಸ್ಟಾರ್ ಆಟಗಾರರನ್ನು ಕೈಬಿಡುವ ಸಾಧ್ಯತೆಯಿದೆ ಎನ್ನುವ ಶಾಕಿಂಗ್ ವಿಚಾರ ಹೊರಬಿದ್ದಿದೆ.
ಐಪಿಎಲ್ 2026 ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಣ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಈ ವೇಳೆ ಮೂವರು ಸ್ಟಾರ್ ಆಟಗಾರರನ್ನು ಕೈಬಿಡಲು ನಿರ್ಧರಿಸಿದೆ ಎನ್ನುವ ಶಾಕಿಂಗ್ ವಿಚಾರ ಹೊರಬಿದ್ದಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್, ಲಿಯಾಮ್ ಲಿವಿಂಗ್‌ಸ್ಟೋನ್, ರಸಿಕ್ ದಾರ್ ಸಲಾಂ ಹಾಗೂ ಲುಂಗಿ ಎನ್ಗಿಡಿ ಅವರನ್ನಯ ಕೈಬಿಡುವ ಸಾಧ್ಯತೆಯಿದೆ ಎನ್ನುವ ವಿಚಾರ ಅಭಿಮಾನಿಗಳಿಗೆ ಶಾಕ್ ನೀಡಿದಂತಾಗಿದೆ.
ಈ ನಿರ್ಧಾರದಿಂದ ಸ್ವಲ್ಪ ಮಟ್ಟಿಗೆ ಹಣವನ್ನು ಉಳಿಸಬಹುದು ಎನ್ನುವ ಆಯೋಚನೆಯಲ್ಲಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ಫ್ರಾಂಚೈಸಿ ಐಪಿಎಲ್ 2025ರ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿದ ಹಾಗೂ ಬದಲಿ ಆಟಗಾರರನ್ನಾಗಿ ಆಡಿಸಿದ ಕೆಲವರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
ಲಿಯಾಮ್ ಲಿವಿಂಗ್‌ಸ್ಟೋನ್: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 8.75 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಆದರೂ, ಅವರು ಈ ಬಾರಿ ಆರ್‌ಸಿಬಿ ಪರ ಹೇಳಿಕೊಳ್ಳುವಷ್ಟು ಪ್ರದರ್ಶನ ತೋರಲಿಲ್ಲ. 10 ಪಂದ್ಯಗಳಲ್ಲಿ 16.00ರ ಸಾಮಾನ್ಯ ಸರಾಸರಿಯೊಂದಿಗೆ ಕೇವಲ 112 ರನ್‌ಗಳನ್ನು ಗಳಿಸಿದರು ಮತ್ತು ಕೇವಲ ಎರಡು ವಿಕೆಟ್‌ಗಳನ್ನಷ್ಟೇ ಪಡೆದು ನಿರಾಸೆ ಮೂಡಿಸಿದ್ದಾರೆ.
ಪಂದ್ಯಾವಳಿಯ ಮಧ್ಯದಲ್ಲೇ ಲಿವಿಂಗ್‌ಸ್ಟೋನ್ ಅವರನ್ನು ಆಡುವ 11ರ ಬಳಗದಿಂದ ಕೈಬಿಡಲಾಯಿತು ಮತ್ತು ನಂತರ ನಾಕೌಟ್‌ಗಳ ಸಮಯದಲ್ಲಿ ಗಾಯಗೊಂಡ ಟಿಮ್ ಡೇವಿಡ್ ಬದಲಿಗೆ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು. ಇವರು ಆಲ್‌ರೌಂಡರ್ ಉತ್ತಮವಾಗಿ ಆಡುತ್ತಾರೆ ಎನ್ನುವ ಆರ್‌ಸಿಬಿ ಭರವಸೆಯನ್ನು ಸುಳ್ಳು ಮಾಡಿದರು. ಆದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದು, 2026ರ ಮಿನಿ ಹರಾಜಿನಲ್ಲಿ ಹೆಚ್ಚು ಪ್ರಭಾವಶಾಲಿ ಆಲ್‌ರೌಂಡರ್ ಅನ್ನು ಖರೀದಿ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇನ್ನು ಇದೀಗ ಆರ್‌ಸಿಬಿ ಕೈಬಿಡಲಿದೆ ಎನ್ನಲಾಗುತ್ತಿರುವ ಲಿಯಾಮ್ ಲಿವಿಂಗ್‌ಸ್ಟೋನ್ ಇದುವರೆಗೆ 49 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದು, 26.27 ಸರಾಸರಿ ಮತ್ತು 158.76 ಸ್ಟ್ರೈಕ್ ರೇಟ್‌ನೊಂದಿಗೆ 1,051 ರನ್‌ಗಳನ್ನು ಕಲೆಹಾಕಿದ್ದಾರೆ ಹಾಗೂ 13 ವಿಕೆಟ್‌ಗಳನ್ನು ಕೂಡ ಪಡೆದಿದ್ದಾರೆ.
ರಸಿಕ್ ದಾರ್ ಸಲಾಂ: ಐಪಿಎಲ್ ಮೆಗಾ ಹರಾಜಿನಲ್ಲಿ ಜಮ್ಮು ಮತ್ತು ಕಾಶ್ಮೀರದ ವೇಗಿ ರಸಿಕ್ ಸಲಾಂ ಅವರನ್ನು ಆರ್‌ಸಿಬಿ 6 ಕೋಟಿ ರೂಪಾಯಿಗೆ ಖರೀದಿಸಿತ್ತು. ಆದರೆ, ಅವರು ಐಪಿಎಲ್ 2025ರಲ್ಲಿ ಆರ್‌ಸಿಬಿ ಪರ ಕೇವಲ 2 ಪಂದ್ಯಗಳನ್ನು ಆಡಿದರು. ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಮತ್ತು ಇತರ ವೇಗಿಗಳ ಉಪಸ್ಥಿತಿಯಲ್ಲಿ, ಇವರು ಆರ್‌ಸಿಬಿ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದುಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ಆದ್ದರಿಂದ ಮುಂದಿನ ಬಾರಿಯಿಂದ ಇವರನ್ನು ಕೈಬಿಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಯುವ ವೇಗಿ ರಸಿಕ್ ದಾರ್ ಸಲಾಂ ಅವರು ನಾಲ್ಕು ಫ್ರಾಂಚೈಸಿಗಳಿಗೆ ಆಡಿದ್ದಾರೆ. ಇದುವರೆಗೂ 13 ಐಪಿಎಲ್ ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ, ಆರ್‌ಸಿಬಿಯಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಪ್ರದರ್ಶನ ಕಂಡುಬರದ ಕಾರಣ ಅವರನ್ನು ಕೈಬಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಕನ್ನಡಿದ ಮಯಾಂಕ್ ಅಗರ್ವಾಲ್: ಐಪಿಎಲ್ 2025ರಲ್ಲಿ ಆರ್‌ಸಿಬಿ ದೇವದತ್ ಪಡಿಕ್ಕಲ್ ಗಾಯದಿಂದ ಬಳಲುತ್ತಿದ್ದ ಕಾರಣ ಅವರ ಬದಲಿಯಾಗಿ ಮಾಯಾಂಕ್ ಅಗರ್ವಾಲ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು. ಪಡಿಕ್ಕಲ್ ಪಂದ್ಯಾವಳಿಯಿಂದ ಹೊರಗೆ ಉಳಿಯುವ ಮುಂಚೆ ಉತ್ತಮ ಫಾರ್ಮ್‌ನಲ್ಲಿದ್ದರು. ಒಟ್ಟು 10 ಪಂದ್ಯಗಳಲ್ಲಿ ಎರಡು ಅರ್ಧಶತಕಗಳೊಂದಿಗೆ 247 ರನ್‌ಗಳನ್ನು ಕಲೆಹಾಕಿದ್ದಾರೆ.
ದೇವದತ್ ಪಡಿಕ್ಕಲ್ ಅನುಪಸ್ಥಿತಿಯಲ್ಲಿ ಮಯಾಂಕ್ ಅಗರ್ವಾಲ್ ಅವರು ಐಪಿಎಲ್ 2025ರಲ್ಲಿ ಆರ್‌ಸಿಬಿ ಪರ ಕೇವಲ 4 ನಾಲ್ಕು ಪಂದ್ಯಗಳನ್ನು ಆಡಿದ್ದಾರೆ. ಸರಾಸರಿ 31.66 ಮತ್ತು ಸ್ಟ್ರೈಕ್ ರೇಟ್ 148.43 ರೊಂದಿಗೆ 94 ರನ್ನು ಕಲೆಹಾಕಿದ್ದಾರೆ. ಆದರೂ, ಮುಂದಿನ ಸೀಸನ್‌ನಿಂದ ಪಡಿಕ್ಕಲ್ ಮರಳುವ ನಿರೀಕ್ಷೆಯಿರುವುದರಿಂದ 2026ರ ಮಿನಿ ಹರಾಜಿಗೆ ಮುಂಚಿತವಾಗಿ ಆರ್‌ಸಿಬಿ ಮಯಾಂಕ್ ಅಗರ್ವಾಲ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎನ್ನುವ ಶಾಕಿಂಗ್ ವಿಚಾರದಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಇನ್ನು ಹಲವು ಫ್ರಾಂಚೈಸಿಗಳ ಪರವಾಗಿ ಆಡಿರುವ ಕನ್ನಡಿದ ಮಯಾಂಕ್ ಅಗರ್ವಾಲ್, ಇದುವರೆಗೆ 131 ಐಪಿಎಲ್ ಪಂದ್ಯಗಳಲ್ಲಿ 22.96 ಸರಾಸರಿ ಮತ್ತು 133.52 ಸ್ಟ್ರೈಕ್ ರೇಟ್‌ನೊಂದಿಗೆ 2,756 ರನ್‌ಗಳನ್ನು ಕಲೆಹಾಕಿದ್ದಾರೆ. ಇವರು ಈ ಬಾರಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದರೂ, ಬದಲಿ ಆಟಗಾರರನ್ನಾಗಿ ತೆಗೆದುಕೊಂಡ ಕಾರಣ ಕೈಬಿಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಲುಂಗಿ ಎನ್ಗಿಡಿ: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್ಗಿಡಿ ಅವರನ್ನು ಆರ್‌ಸಿಬಿ 1 ಕೋಟಿ ರೂಪಾಯಿಗೆ ಖರೀದಿಸಿತ್ತು. ಜೋಶ್ ಹ್ಯಾಜಲ್‌ವುಡ್ ಗಾಯಗೊಂಡು ಹೊರಗುಳಿದ ಕಾರಣ ಅವರನ್ನು ಕೊಂಡುಕೊಳ್ಳಲಾಯಿತು. ಆರ್‌ಸಿಬಿ ಪರ ಕೇವಲ ಎರಡು ಪಂದ್ಯಗಳನ್ನಾಡಿದ ಎನ್ಗಿಡಿ 4 ವಿಕೆಟ್‌ಗಳನ್ನು ಪಡೆದರು. ಮತ್ತೆ ಹ್ಯಾಜಲ್‌ವುಡ್ ಮರಳುವ ಕಾರಣ ಐಪಿಎಲ್ 2026ರ ಮಿನಿ ಹರಾಜಿಗೂ ಮುಂಚಿತವಾಗಿ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇವರು ಹಲವು ಪ್ರಾಂಚೈಸಿಗಳ ಪರವಾಗಿ ಆಡಿದ್ದು, ಇದುವರೆಗೆ 16 ಐಪಿಎಲ್ ಪಂದ್ಯಗಳಲ್ಲಿ 29 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.
ಆರ್‌ಸಿಬಿಯಿಂದ ಯಾರೆಲ್ಲಾ ಔಟ್ ಸಾಧ್ಯತೆ
* ಲಿಯಾಮ್ ಲಿವಿಂಗ್‌ಸ್ಟೋನ್
* ರಸಿಕ್ ದಾರ್ ಸಲಾಂ
* ದೇವದತ್ ಪಡಿಕ್ಕಲ್
* ಲುಂಗಿ ಎನ್ಗಿಡಿ
-
ಐಪಿಎಲ್ನಲ್ಲಿ ಯಾರೂ ಕೊಳ್ಳದಿದ್ದರೂ ಅಯೋಧ್ಯೆಯಲ್ಲಿ ಅಬ್ಬರಿಸಿದ ಆರ್‌ಸಿಬಿ ಮಾಜಿ ಆಟಗಾರ; 195 ರನ್ ಚಚ್ಚಿದ ಸ್ವಸ್ತಿಕ್ ಚಿಕಾರ -
Nandini: ಆರ್‌ಸಿಬಿ ಜೊತೆ ರಾರಾಜಿಸಲಿದೆ ನಮ್ಮ ಹೆಮ್ಮೆಯ 'ನಂದಿನಿ': ಐಪಿಎಲ್-2026ರಲ್ಲಿ ಕನ್ನಡಿಗರಿಗೆ ಡಬಲ್ ಧಮಾಕಾ -
RCB Yash Dayal: ಐಪಿಎಲ್ 2026ರ ಸೀಸನ್‌ನಿಂದ ಸ್ಟಾರ್ ವೇಗಿ ಯಶ್ ದಯಾಳ್ ಔಟ್; ಆರ್‌ಸಿಬಿ ಅಧಿಕೃತ ಮಾಹಿತಿ -
IPL 2026: ಆರ್‌ಸಿಬಿ-ಎಸ್ಆರ್ಎಚ್ ಪಂದ್ಯದ ಟಿಕೆಟ್ ಮಾರಾಟ ಶುರು; ಇಲ್ಲಿವೆ ಬುಕಿಂಗ್ ಮಾಡುವ ವಿಧಾನಗಳು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ











Click it and Unblock the Notifications