RCB Vs PBKS: ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಗೆಲುವಿನ ಗುಟ್ಟು ಬಿಟ್ಟುಕೊಟ್ಟ ನಾಯಕ ರಜತ್ ಪಾಟಿದಾರ್
RCB Vs PBKS: ಐಪಿಎಲ್ 2025ರ 37ನೇ ಪಂದ್ಯದಲ್ಲಿ ಆರ್‌ಸಿಬಿಯು ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೋಲಿನ ಸೇಡು ತೀರಿಸಿಕೊಂಡಿದೆ. ಹಾಗಾದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಗುಟ್ಟು ಏನು ಹಾಗೂ ಯಾರು ಪ್ರಮುಖ ಕಾರಣ ಎಂಬ ಮಾಹಿತಿಯನ್ನು ನಾಯಕ ಪಡಿದಾರ್ ಹಂಚಿಕೊಂಡಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
ಚಂಡೀಗಢದ ಮುಲ್ಲನ್‌ಪುರ್ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧ ಆರ್‌ಸಿಬಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 157 ರನ್‌ಗಳನ್ನು ಕಲೆಹಾಕುವ ಮೂಲಕ 158 ರನ್‌ಗಳ ಸಾಧಾರಣ ಗುರಿ ನೀಡಿತು. ಈ ಗುರಿ ಬೆನ್ನತ್ತಿದ್ದ ಆರ್‌ಸಿಬಿ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.

ಕಳೆದ ಪಂದ್ಯದಲ್ಲಿ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಪಂಜಾಬ್ ಕಿಂಗ್ಸ್ ಆರ್‌ಸಿಬಿಯನ್ನು ಸೋಲಿಸಿತ್ತು. ಇದೇ ಸೇಡನ್ನು ಆರ್‌ಸಿಬಿ ಚಂಡೀಗಢದಲ್ಲಿ ತೀರಿಸಿಕೊಂಡಿದೆ. ಇನ್ನು ಆರ್‌ಸಿಬಿ 8ರಲ್ಲಿ ಮೂರು ಪಂದ್ಯಗಳನ್ನು ತವರು ಮೈದಾನದಲ್ಲೇ ಸೋಲು ಕಂಡಿದ್ದು, ತವರಿನಿಂದ ಆಚೆ ನಿನ್ನೆ ಪಂದ್ಯ ಸೇರಿ 5 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಇನ್ನು ಪಂಜಾಬ್ ವಿರುದ್ಧ ಗೆಲುವಿನ ಗುಟ್ಟನ್ನು ರಜತ್ ಪಾಟಿದಾರ್ ಬಿಟ್ಟುಕೊಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಾಯಕ ರಜತ್ ಪಾಟಿದಾರ್, ನಾವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡೆವು. ಅದಂತಯೇ ನಮ್ಮ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಪ್ರದರ್ಶನ ಮಾಡಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡವನ್ನು ಬರೀ 157 ರನ್‌ಗಳಿಗೆ ಕಟ್ಟಿಹಾಕಿದರು. ಇದರಿಂದ ನಂತರ ಬ್ಯಾಟರ್‌ಗಳಿಗೆ ತುಂಬಾ ಸಹಾಯವಾಯಿತು ಎಂದರು. ಆದ್ದರಿಂದ ಗೆಲುವಿನ ಕ್ರೆಡಿಟ್ ಬೌಲರ್‌ಗಳಿಗೆ ಸಲ್ಲುತ್ತದೆ ಎಂದರು.
ಅಷ್ಟೇ ಅಲ್ಲದೆ, ಬ್ಯಾಟಿಂಗ್ ವಿಭಾಗಕ್ಕೆ ಬಂದರೆ, ನಮ್ಮ ಪರ ದೇವದತ್ತ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಅವರು ಪ್ಲಾನ್ ಕಾರ್ಯಗತಗೊಳಿಸಿದ ರೀತಿ ಅದ್ಭುತವಾಗಿಯೇ ಇತ್ತು. ಜೊತೆಗೆ ನಮ್ಮ ಬೌಲರ್‌ಗಳು ವಿಭಿನ್ನ ಹಂತಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರು ಎಂದು ಹೇಳಿದರು.
ವಿಕೆಟ್ ಸ್ವಲ್ಪ ನಿಧಾನ ಆಗಿದ್ದರಿಂದ ಉತ್ತಮವಾಗಿ ಬೌಲಿಂಗ್ ಮಾಡಬೇಕಾಗಿತ್ತು. ಈ ಬಗ್ಗೆ ಎಲ್ಲಾ ಬೌಲರ್ಗಳಿಗೂ ಸಂದೇಶ ಹೋಗಿತ್ತು. ಫೀಲ್ಡಿಂಗ್ ಬಗ್ಗೆ ಕಳೆದ ರಾತ್ರಿಯೇ ಪ್ಲಾನ್ ಮಾಡಿದ್ದೆವು. ಎಲ್ಲರೂ ಉತ್ತರ ಪ್ರಯತ್ನಗಳನ್ನು ಮಾಡಿದರು. ಒಟ್ಟಿನಲ್ಲಿ ನಿನ್ನೆಯ ಪಂದ್ಯವಂತೂ ಅತ್ಯದ್ಭುತವಾಗಿತ್ತು. ಮುಂದಿನ ಪಂದ್ಯದಲ್ಲಿ ತವರು ಮೈದಾನ ಚಿನ್ನಸ್ವಾಮಿಯಲ್ಲಿ ನಾನು ಮೊದಲು ಟಾಸ್ ಗೆಲ್ಲಲು ಬಯಸುತ್ತೇನೆ. ಈ ಮೂಲಕ ತವರಿನಲ್ಲಿ ಅದ್ಭುತ ಆಟ ಆಡಲು ಬಯಸುತ್ತೇನೆ. ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.












Click it and Unblock the Notifications