RCB Vs DC: ಡೆಲ್ಲಿ ಕೋಟೆಯಲ್ಲಿ ಆರ್‌ಸಿಬಿ ಬೌಲರ್‌ಗಳ ಅಟ್ಟಹಾಸ: ಕೇವಲ 75 ರನ್‌ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಆಲೌಟ್

RCB Vs DC IPL 2026: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ (ಏಪ್ರಿಲ್‌ 27) ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‌ಗಳು ಡೆಲ್ಲಿ ಬ್ಯಾಟರ್‌ಗಳನ್ನು ಬೇಟೆಯಾಡಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಆರ್‌ಸಿಬಿ ತಂಡದ ಶಿಸ್ತುಬದ್ಧ ಬೌಲಿಂಗ್‌ ದಾಳಿಗೆ ತತ್ತರಿಸಿ ಕೇವಲ 16.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇಲವಲ 75 ರನ್‌ ಪೇರಿಸಿದೆ.

ಪಂದ್ಯದ ಆರಂಭದಲ್ಲೇ ಆರ್‌ಸಿಬಿ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಮಾರಕ ಬೌಲಿಂಗ್ ದಾಳಿ ನಡೆಸಿ ಡೆಲ್ಲಿ ಪಾಲಿಗೆ ಮುಳುವಾದರು. ಪವರ್‌ಪ್ಲೇ ಅವಧಿಯಲ್ಲೇ 6 ವಿಕೆಟ್ ಕಳೆದುಕೊಂಡ ಡೆಲ್ಲಿ ಚೇತರಿಸಿಕೊಳ್ಳಲೇ ಇಲ್ಲ. ಬದಲಿಗೆ ಸರದಿಯಲ್ಲಿ ವಿಕೆಟ್‌ ಕಳೆದುಕೊಂಡು ಬೃಹತ್ ಮೊತ್ತ ಪೇರಿಸಲು ವಿಫಲವಾಯಿತು. ಮೂರಂಕಿ ದಾಟದಂತೆ 75 ರನ್‌ ಪೇರಿಸಿ ಆರ್‌ಸಿಬಿಗೆ 76 ರನ್‌ಗಳ ಮೊತ್ತದ ಸಾಧಾರಣ ಗುರಿ ನೀಡಿದೆ.

RCB Bowlers Crush Delhi Capitals for 75 in IPL 2026 Bhuvneshwar Kumar amp amp Josh Hazlewood Star

ಆರ್‌ಸಿಬಿ ಪರ ವೇಗಿ ಜೋಶ್ ಹ್ಯಾಜಲ್‌ವುಡ್ ಒಟ್ಟು 4 ವಿಕೆಟ್ ಪಡೆದು ಮಿಂಚಿದರೆ, ಭುವನೇಶ್ವರ್ ಕುಮಾರ್ 3 ವಿಕೆಟ್ ಕಬಳಿಸಿ ಡೆಲ್ಲಿಯ ಬ್ಯಾಟರ್‌ಗಳಿಗೆ ಮುಳುವಾದರು. ಡೆಲ್ಲಿ ಕ್ಯಾಪಿಟಲ್ಸ್ ಪವರ್‌ಪ್ಲೇ ಅವಧಿಯಲ್ಲಿ ಕೇವಲ 13 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು. ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಪವರ್‌ಪ್ಲೇ ಸ್ಕೋರ್ ಎಂಬ ಕೆಟ್ಟ ದಾಖಲೆಗೆ ಸಾಕ್ಷಿಯಾಯಿತು.

ಮುಜುಗರದಿಂದ ಪಾರಾದ ಡೆಲ್ಲಿ ಕ್ಯಾಪಿಟಲ್ಸ್‌

ಒಂದು ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್‌ನ ಕನಿಷ್ಠ ಮೊತ್ತವಾದ 49 ರನ್‌ವೊಳಗೇ ಆಲೌಟ್ ಆಗುವ ಭೀತಿಯಲ್ಲಿತ್ತು (ಆರ್‌ಸಿಬಿಯ ಈ ಹಿಂದಿನ ದಾಖಲೆ 49). ಆದರೆ, ಅಂತಿಮವಾಗಿ 75 ರನ್ ಗಳಿಸುವ ಮೂಲಕ ಆ ಮುಜುಗರದಿಂದ ಪಾರಾಯಿತು. ಈಗ ಎಲ್ಲರ ಕಣ್ಣು ಕಿಂಗ್ ಕೊಹ್ಲಿಯ ಮೇಲಿದೆ.

ಐಪಿಎಲ್‌ ಇತಿಹಾಸದಲ್ಲಿ ಯಾರೂ ಮಾಡಿರದ ಸಾಧನೆ ಮಾಡಿದ ಕೊಹ್ಲಿ

ಈ ಪಂದ್ಯದಲ್ಲಿ ಕೇವಲ 11 ರನ್ ಗಳಿಸಿದರೆ ಐಪಿಎಲ್ ಇತಿಹಾಸದಲ್ಲಿ 9,000 ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಅಪ್ರತಿಮ ದಾಖಲೆಯನ್ನು ವಿರಾಟ್ ತಮ್ಮದಾಗಿಸಿಕೊಳ್ಳಲಿದ್ದಾರೆ. ಕೇವಲ 76 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಲಿರುವ ಆರ್‌ಸಿಬಿ, ವಿರಾಟ್ ಕೊಹ್ಲಿಯವರ ದಾಖಲೆಯೊಂದಿಗೆ ಭರ್ಜರಿ ಜಯ ದಾಖಲಿಸುವ ನಿರೀಕ್ಷೆಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+