Get Updates
Get notified of breaking news, exclusive insights, and must-see stories!

Ranji Trophy 2026 Final: ಕನ್ನಡದ ನೆಲದಲ್ಲೇ ಕರ್ನಾಟಕದ ವಿರುದ್ಧ ಗೆಲುವು: ಚೊಚ್ಚಲ ಟ್ರೋಫಿಗೆ ಮುತ್ತಿಟ್ಟ ಜಮ್ಮು-ಕಾಶ್ಮೀರ

Ranji Trophy 2026: ಜಮ್ಮು ಮತ್ತು ಕಾಶ್ಮೀರ ತಂಡವು ಮೊಟ್ಟ ಮೊದಲ ಬಾರಿ ರಣಜಿ ಟ್ರೋಫಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. 2025-26ರ ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕವನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಹಾಗಾದ್ರೆ, ಜೆ & ಕೆ ಪರ ಅದ್ಭುತ ಪ್ರದರ್ಶನ ತೋರಿದವರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕವನ್ನು ಮಣಿಸಿ ಜಮ್ಮು ಮತ್ತು ಕಾಶ್ಮೀರ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಮೊದಲ ಬಾರಿ ಟ್ರೋಫಿ ಗೆಲ್ಲುವ ಮೂಲಕ ದೇಶಾದ್ಯಂತ ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ. ಹಲವು ವರ್ಷಗಳ ಪರಿಶ್ರಮ ಮತ್ತು ಶ್ರಮದ ಫಲವಾಗಿ ಬಂದಿರುವ ಈ ಗೆಲುವು ತಂಡದ ಸಂಕಲ್ಪ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

Ranji Trophy 2026 Jammu amp amp Kashmir Clinch Maiden Title After Historic Win Over Karnataka Know detail

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಜೆ & ಕೆ ಸಿಎಂ

ಈ ವಿಜಯ ಕೇವಲ ಕ್ರೀಡಾ ಸಾಧನೆ ಮಾತ್ರವಲ್ಲ, ಜಮ್ಮು ಮತ್ತು ಕಾಶ್ಮೀರದ ಯುವಕರಿಗೆ ಇದು ಹೊಸ ಆತ್ಮವಿಶ್ವಾಸ ಮತ್ತು ಪ್ರೇರಣೆಯಾಗಿದೆ. ಸವಾಲುಗಳ ನಡುವೆ ಬೆಳೆದ ಪ್ರತಿಭೆಗಳು ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಬಹುದೆಂಬ ಸಂದೇಶವನ್ನು ಈ ಗೆಲುವು ನೀಡಿದೆ. ಈ ಐತಿಹಾಸಿಕ ಕ್ಷಣಕ್ಕೆ ಜಮ್ಮು ಮತ್ತು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ಕೂಡ ಸಾಕ್ಷಿಯಾಗಿದ್ದು, ತಂಡದ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ತಂಡದ ಈ ಯಶಸ್ಸು ಮುಂದಿನ ತಲೆಮಾರಿಗೆ ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ಕನಸುಗಳನ್ನು ಕಾಣುವ ಧೈರ್ಯ ನೀಡಲಿದೆ.

ಕನ್ನಡ ನೆಲದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ

ಹುಬ್ಬಳ್ಳಿಯ ರಾಜ್ ನಗರದಲ್ಲಿರುವ ಕೆಎಸ್​ಸಿಎ ಸ್ಟೇಡಿಯಂನಲ್ಲಿ ಪೆಬ್ರವರಿ 24ರಿಂದ ರಣಜಿ ಪೈನಲ್ ಪಂದ್ಯ ಆರಂಭವಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಜಮ್ಮು-ಕಾಶ್ಮೀರ ತಂಡವು ರನ್‌ಗಳ ಸುರಿಮಳೆಯನ್ನೇ ಹರಿಸಿತ್ತು. ಒಂದೂರೆ ದಿನ ಆಟವಾಡಿದ ಜೆ & ಕೆ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ ಬರೋಬ್ಬರಿ 584 ರನ್‌ಗಳನ್ನು ಕಲೆಹಾಕಿತು. ಶುಭಂ ಪಂಡಿತ್ (121) ಶತಕದೊಂದಿಗೆ ತಂಡದ ಬೃಹತ್‌ ಮೊತ್ತಕ್ಕೆ ಪ್ರಮುಖ ಕಾರಣರಾದರು.

ಮಯಾಂಕ್ ಅಗರ್ವಾಲ್ ಶತಕ ವ್ಯರ್ಥ

ಬೌಲಿಂಗ್ ವಿಭಾಗದಲ್ಲಿ ಜಮ್ಮು ಮತ್ತು ಕಾಶ್ಮೀರ ಅದ್ಭುತ ಪ್ರದರ್ಶನ ನೀಡಿ ಕರ್ನಾಟಕವನ್ನು 293 ರನ್‌ಗಳಿಗೆ ಆಲ್‌ಔಟ್ ಮಾಡಿತು. ವೇಗಿ ಔಕಿಬ್ ನಬಿ ಐದು ವಿಕೆಟ್‌ಗ ಪಡೆದು ಮಾಡುತ್ತ ಪ್ರಮುಖ ಪಾತ್ರವಹಿಸಿದರು. ಕರ್ನಾಟಕ ಪರ ಮಯಾಂಕ್ ಅಗರ್ವಾಲ್ 160 ರನ್‌ಗಳ ಭರ್ಜಡಿ ಶತಕ ಬಾರಿಸಿದರು. ಆದರೂ ತಂಡ ಗೆಲುವಿನ ದಡ ಮುಟ್ಟಲು ಸಾಧ್ಯವಾಗಿಲ್ಲ.

ಜಮ್ಮು-ಕಾಶ್ಮೀರ ಅದ್ಭುತ ಬ್ಯಾಟಿಂಗ್ ಪ್ರದರ್ಶನ

ಮೊದಲ ಇನಿಂಗ್ಸ್‌ನಲ್ಲಿ 291 ರನ್‌ಗಳ ಮುನ್ನಡೆ ಸಾಧಿಸಿದ ಜಮ್ಮು ಮತ್ತು ಕಾಶ್ಮೀರ, ಎರಡನೇ ಇನಿಂಗ್ಸ್‌ನಲ್ಲಿ ಆ ಮುನ್ನಡೆಯನ್ನು 633 ರನ್‌ಗಳಿಗೆ ವಿಸ್ತರಿಸಿತು. ಕಾಮ್ರಾನ್ ಇಕ್ಬಾಲ್ ಮತ್ತು ಸಾಹಿಲ್ ಲೋತ್ರಾ ಇಬ್ಬರೂ ಶತಕಗಳನ್ನು ಸಿಡಿಸಿ ತಂಡದ ಸ್ಥಿತಿಯನ್ನು ಮತ್ತಷ್ಟು ಬಲಪಡಿಸಿದರು. 5ನೇ ದಿನ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೂ, ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡದ ಪಯಣವು ಒಂದು ರೋಚಕ ಕಥೆಯಾಗಿದೆ. ಸುಮಾರು 67 ವರ್ಷಗಳಿಂದ ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸುತ್ತಿರುವ ಈ ತಂಡಕ್ಕೆ ಮೊದಲ ಜಯಕ್ಕಾಗಿ ಭಾರೀ ನಿರೀಕ್ಷೆಯಿತ್ತು. ಆ ನಿರೀಕ್ಷೆ ಇದೀಗ ನಿಜ ಆದಂತಾಗಿದೆ. 1982-83ರ ಸೀಸನ್‌ನಲ್ಲಿ ಸರ್ವಿಸಸ್ ವಿರುದ್ಧ ದಾಖಲಿಸಿದ ಜಯವು ತಂಡದ ಇತಿಹಾಸದಲ್ಲಿ ಮೊದಲ ಮಹತ್ವದ ಮೈಲಿಗಲ್ಲಾಗಿತ್ತು. ಬಳಿಕ ಹಲವು ವರ್ಷಗಳ ಕಾಲ ತಂಡದಿಂದ ಗಮನಾರ್ಹ ಸಾಧನೆಗಳು ಹೆಚ್ಚು ಕಾಣಿಸಿಕೊಳ್ಳಲಿಲ್ಲ. ದೇಶೀಯ ಕ್ರಿಕೆಟ್‌ನಲ್ಲಿ ಸ್ಪರ್ಧಾತ್ಮಕವಾಗಿ ಮುಂದುವರಿದಿದ್ದರೂ, ಪ್ರಶಸ್ತಿ ಪೈಪೋಟಿಯಲ್ಲಿ ಅಂತಿಮ ಹಂತ ತಲುಪುವ ಅವಕಾಶ ಸಿಕ್ಕಿರಲಿಲ್ಲ. ಆದರೆ, ಕಳೆದ ಕೆಲವು ಸೀಸನ್‌ಗಳಿಂದ ಜಮ್ಮು-ಕಾಶ್ಮೀರ ಬ್ಯಾಟಿಂಗ್‌, ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಬಂದಿತು. ಈ ಮೂಲಕ ಇದೀಗ ಕರ್ನಾಟಕದ ವಿರುದ್ಧ ರಣಜಿ ಫೈನಲ್‌ ಪಂದ್ಯದಲ್ಲಿ ಗೆಲುವು ಸಾಧಿಸಿ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟು ಐತಿಹಾಸಿಕ ದಾಖಲೆ ಮಾಡಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+