Rahul Dravid: ಶಿಶ್ಯ ವೈಭವ್ ಸೂರ್ಯವಂಶಿ ಕುರಿತು ಕನ್ನಡಿಗ ರಾಹುಲ್ ದ್ರಾವಿಡ್ ಮಹತ್ವದ ಹೇಳಿಕೆ, ಭಾರಿ ವೈರಲ್

Rahul Dravid: ಟೀಮ್ ಇಂಡಿಯಾ ಯುವ ಕ್ರಿಕೆಟರ್ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್‌ನಿಂಲೇ ಹೆಸರಾಗಿದ್ದಾರೆ. ಇವರಿಗೆ ಆಗಾಗ ದಿಗ್ಗಜರು ಸಲಹೆಗಳನ್ನು ನೀಡುತ್ತಲಿರುತ್ತಾರೆ. ಇದೀಗ ಭಾರತ ತಂಡದ ಮಾಜಿ ಮುಖ್ಯ ಕೋಚ್ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್‌ ಅವರು 'ವಂಡರ್ ಕಿಡ್' ಕುರಿತು ಮಹತ್ವದ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.

ಆಧುನಿಕ ಕ್ರಿಕೆಟ್‌ನಲ್ಲಿ ಟೆಸ್ಟ್ ಮಾದರಿಯು ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ವೈಭವ್ ಸೂರ್ಯವಂಶಿಯಂತಹ ಪ್ರತಿಭಾವಂತ ಯುವ ಆಟಗಾರರು ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲಿ ಆಡುವುದು ಅತ್ಯಗತ್ಯ ಎಂದು ಭಾರತ ತಂಡದ ಮಾಜಿ ನಾಯಕ ಹಾಗೂ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Rahul Dravid on Vaibhav Sooryavanshi Big Advice for India s Young Cricketer Viral on Social media

ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ನಡೆದ ಯೂರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 15 ವರ್ಷದ ಯುವ ಆಟಗಾರ ವೈಭವ್ ಅವರ ಕ್ರಿಕೆಟ್ ಭವಿಷ್ಯದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಇದು ಇದೀಗ ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಟೆಸ್ಟ್ ಕ್ರಿಕೆಟ್‌ಗೆ ಆದ್ಯತೆ ಅಗತ್ಯ

ಐಪಿಎಲ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಈಗಾಗಲೇ ಸ್ಫೋಟಕ ಬ್ಯಾಟಿಂಗ್‌ ಮೂಲಕ ಮಿಂಚಿರುವ ವೈಭವ್ ಸೂರ್ಯವಂಶಿ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ. ಈ ಕುರಿತು ಮಾತನಾಡಿದ ರಾಹುಲ್ ದ್ರಾವಿಡ್ ಅವರು, 'ವೈಭವ್ ಐಪಿಎಲ್ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅನುಭವ ಪಡೆಯುತ್ತಿರುವುದು ಉತ್ತಮ ವಿಷಯ,' ಎಂದು ಹೇಳಿದರು.

'ವೈಭವ್ ಸೂರ್ಯವಂಶಿ ಅವರು ಭಾರತದ ದೇಶೀಯ ಕ್ರಿಕೆಟ್‌ಗೆ ಹಿಂತಿರುಗಿ ಟೆಸ್ಟ್‌ ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿರುವುದು ನಿಜಕ್ಕೂ ಗ್ರೇಟ್‌. ಟೆಸ್ಟ್ ಕ್ರಿಕೆಟ್ ಬೆಳೆಯಬೇಕಾದರೆ ಮತ್ತು ಜೀವಂತವಾಗಿರಬೇಕಾದರೆ, ಅವರಂತಹ ಆಟಗಾರರು ಎಲ್ಲಾ ಮಾದರಿಯ ಪಂದ್ಯಗಳಲ್ಲೂ ಪಾಲ್ಗೊಳ್ಳುವುದು ಅಗತ್ಯ,' ಎಂದು ಹೇಳಿದ್ದಾರೆ.

ರಾಹುಲ್ ದ್ರಾವಿಡ್ ಮಹತ್ವದ ಸಲಹೆ

2025ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ತರಬೇತುದಾರರಾಗಿದ್ದ ರಾಹುಲ್ ದ್ರಾವಿಡ್‌ ಅವರು ವೈಭವ್ ಅವರನ್ನು ಹತ್ತಿರದಿಂದ ನೋಡಿದ್ದಾರೆ. ಈ ಹಿನ್ನೆಲೆ ಇದೀಗ ಆ ಬಾಲಕನ ಬಗ್ಗೆ ಮಹತ್ವದ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. 'ವೈಭವ್ ಸೂರ್ಯವಂಶಿಗೆ ಕೇವಲ 15 ವರ್ಷ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ಅನುಭವ ಹೆಚ್ಚಾಗಲು ಸಮಯ ಬೇಕು. ಯಾವುದೇ ಒಬ್ಬ ಆಟಗಾರನ ಪಯಣದಲ್ಲಿ ಏಳು-ಬೀಳುಗಳು ಸಾಮಾನ್ಯ. ಅವರು ಆರಂಭದಲ್ಲೇ ಉತ್ತಮ ಯಶಸ್ಸು ಕಂಡಿರಬಹುದು, ಆದರೆ ಮುಂದಿನ ದಿನಗಳಲ್ಲಿ ಹಿನ್ನಡೆ ಉಂಟಾದರೂ ಅಭಿಮಾನಿಗಳು ಮತ್ತು ಕ್ರಿಕೆಟ್ ಜಗತ್ತು ಅವರ ವಿಷಯದಲ್ಲಿ ತಾಳ್ಮೆಯಿಂದಿರಬೇಕು,' ಎಂದು ದ್ರಾವಿಡ್ ಹೇಳಿದ್ದಾರೆ.

ವೈಭವ್ ಸೂರ್ಯವಂಶಿ ಮುಂದಿರುವ ಸವಾಲುಗಳು

ವೈಭವ್ ಸೂರ್ಯವಂಶಿ ಅವರ ಮುಂದಿನ ಪ್ರಮುಖ ಸವಾಲು ದುಲೀಪ್ ಟ್ರೋಫಿ ಟೂರ್ನಿ. ಅವರು ಈ ಟೆಸ್ಟ್‌ ಸರಣಿಯಲ್ಲಿ ಈಸ್ಟ್ ಝೋನ್ ತಂಡದ ಪರವಾಗಿ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಈವರೆಗೆ ಕೇವಲ 8 ಪ್ರಥಮ ದರ್ಜೆ ಪಂದ್ಯಗಳನ್ನಷ್ಟೇ ಆಡಿದ್ದು, 17.25 ರ ಸರಾಸರಿ ಹೊಂದಿದ್ದಾರೆ. ಆದ್ದರಿಂದ ಈ ಸರಣಿಯು ಅವರಿಗೆ ಉತ್ತಮ ವೇದಿಕೆಯಾಗಲಿದೆ. ಈ ಟ್ರೋಫಿಯ ನಂತರ, ಆಸ್ಟ್ರೇಲಿಯಾ 'ಎ' ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯಗಳಲ್ಲೂ ಅವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಹೊಸ ಭರವಸೆ ವ್ಯಕ್ತಪಡಿಸಿದ ದ್ರಾವಿಡ್

ಪ್ರಪಂಚದಾದ್ಯಂತ ವಿವಿಧ ಟಿ-20 ಲೀಗ್‌ಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಯುವ ಆಟಗಾರರು ಕೇವಲ ಟಿ-20, ಏಕದಿನ ಕ್ರಿಕೆಟ್‌ಗೆ ಸೀಮಿತವಾಗದೆ ಟೆಸ್ಟ್‌ ಕಡೆಗೂ ಗಮನಹರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. 'ವೈಭವ್ ಅವರು ವಿಶ್ವದಾದ್ಯಂತ ಲೀಗ್‌ಗಳನ್ನು ಆಡುವ ಬದಲು ಭಾರತದ ದೇಶೀಯ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಭವಿಷ್ಯದಲ್ಲಿ ಅವರು ಟೀಮ್ ಇಂಡಿಯಾ ಪರ ಪ್ರಮುಖ ಟೆಸ್ಟ್ ಆಟಗಾರನಾಗಿ ಹೊರಹೊಮ್ಮಬೇಕು. ಅದೇ ನನ್ನ ಆಸೆಯಾಗಿದೆ,' ಎಂದು ರಾಹುಲ್ ದ್ರಾವಿಡ್ ಅವರು ಹೇಳಿದರು. ಒಟ್ಟಿನಲ್ಲಿ ಇದೀಗ ತಮ್ಮ ಶಿಶ್ಯ ವೈಭವ್ ಬಗ್ಗೆ ದ್ರಾವಿಡ್‌ ನೀಡಿದ ಈ ಹೇಳಿಕೆ ಇದೀಗ ಸಖತ್ ಸದ್ದು ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+