ಗ್ರ್ಯಾಂಡ್ ಚೆಸ್ ಟೂರ್ ಫೈನಲ್‌: ಅಮೆರಿಕನ್ ಆಟಗಾರನಿಗೆ ಮಣ್ಣುಮುಕ್ಕಿಸಿ ಹೊಸ ಇತಿಹಾಸ ಸೃಷ್ಟಿಸಿದ ಭಾರತದ ಪ್ರಜ್ಞಾನಂದ

R Praggnanandhaa: ಅಮೆರಿಕದ ಸೇಂಟ್ ಲೂಯಿಸ್‌ನಲ್ಲಿ ನಡೆದ ಪ್ರತಿಷ್ಠಿತ 'ಗ್ರ್ಯಾಂಡ್ ಚೆಸ್ ಟೂರ್' ಫೈನಲ್‌ನಲ್ಲಿ ಯುವ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಭರ್ಜರಿ ಜಯ ದಾಖಲಿಸಿದರು. ಈ ಮೂಲಕ ಅವರು ಚೆಸ್ ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಇನ್ನೊಮ್ಮೆ ಹಾರಿಸಿದರು. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಈ ಮಹತ್ವದ ಗ್ರ್ಯಾಂಡ್ ಚೆಸ್ ಟೂರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಪ್ರಥಮ ಭಾರತೀಯ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಆರ್.ಪ್ರಜ್ಞಾನಂದ ಅವರು ಪಾತ್ರರಾಗಿದ್ದಾರೆ. ಅಮೆರಿಕದ ಅತ್ಯಂತ ಪ್ರಬಲ ಹಾಗೂ ಅನುಭವಿ ಚೆಸ್ ಆಟಗಾರ ಫ್ಯಾಬಿಯಾನೊ ಕರುವಾನಾ ವಿರುದ್ಧ ನಡೆದ ಈ ರೋಚಕ ಫೈನಲ್ ಪಂದ್ಯದಲ್ಲಿ ಪ್ರಜ್ಞಾನಂದ ತೋರಿದ ಬುದ್ಧಿವಂತಿಕೆ ಕ್ರೀಡಾಭಿಮಾನಿಗಳ ಮನಗೆದ್ದಿದೆ.

R Praggnanandhaa Wins Grand Chess Tour Final At America St Louis Makes History Know Details

ಕೋಟಿ.. ಕೋಟಿ.. ನಗದು ಬಹುಮಾನ ಗೆದ್ಧ ಪ್ರಜ್ಞಾನಂದ

ಈ ಭರ್ಜರಿ ಜಯದೊಂದಿಗೆ ತಮ್ಮ ಚೊಚ್ಚಲ ಜಿಒಟಿ ಕಿರೀಟ ಮುಡಿಗೇರಿಸಿಕೊಂಡಿರುವ ಪ್ರಜ್ಞಾನಂದ ಅವರು, ಬೃಹತ್ ಮೊತ್ತದ ಅಂದರೆ ಸುಮಾರು 2,38,55,738 ಕೋಟಿ ರೂಪಾಯಿಗಳ (2,50,000 ಅಮೆರಿಕನ್ ಡಾಲರ್) ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕುಗ್ಗದೆ ಆಟ ಮುಂದುವರೆಸಿದ ಪ್ರಜ್ಞಾನಂದ

ಫೈನಲ್ ಪಂದ್ಯದ ಆರಂಭಿಕ ಹಂತದಲ್ಲಿ ಪ್ರಜ್ಞಾನಂದ ಭಾರಿ ಹಿನ್ನಡೆ ಅನುಭವಿಸಿದ್ದರು. ಕ್ಲಾಸಿಕಲ್ ವಿಭಾಗದಲ್ಲಿ ಅದ್ಭುತವಾಗಿ ಆಟವಾಡಿದ ಕರುವಾನಾ 6-0 ಅಂತರದ ಭರ್ಜರಿ ಮುನ್ನಡೆ ಸಾಧಿಸಿ ಪಂದ್ಯದ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿದ್ದರು. ಇದರಿಂದಾಗಿ ಅಂತಿಮ ದಿನದ ಆಟ ಆರಂಭವಾದಾಗ ಪ್ರಜ್ಞಾನಂದ ಗೆಲುವು ಸಾಧಿಸುವುದು ಅಸಾಧ್ಯ ಎಂದೇ ಭಾವಿಸಲಾಗಿತ್ತು. ಆದರೂ ದೃತಿಗೆಡದ ಅವರು, ಅಂತಿಮ ದಿನದಂದು ಪಂದ್ಯದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸಿದರು.

ರ್‍ಯಾಪಿಡ್‌ ವಿಭಾಗದಲ್ಲಿ ಅತ್ಯಂತ ಚಾಣಾಕ್ಷ ಆಟಕ್ಕೆ ಮುಂದಾದ ಪ್ರಜ್ಞಾನಂದ, ಸತತ ಎರಡು ಪಂದ್ಯಗಳಲ್ಲಿ ಗೆದ್ದು ಬೀಗಿದರು. ಕೇವಲ ಕೆಲವೇ ಗಂಟೆಗಳ ಅವಧಿಯಲ್ಲಿ ಕರುವಾನಾ ಹೊಂದಿದ್ದ ದೊಡ್ಡ ಮೊತ್ತದ ಅಂಕಗಳ ಅಂತರವನ್ನು ಸಂಪೂರ್ಣವಾಗಿ ಕಡಿಮೆ ಮಾಡಿಕೊಂಡು ಪಂದ್ಯವನ್ನು ಸಮಬಲಕ್ಕೆ ತಂದು ನಿಲ್ಲಿಸಿದರು. ಪ್ರಜ್ಞಾನಂದ ಅವರ ಈ ಆಟಗ ವೈಖರಿ ಎದುರಾಳಿಗೆ ತೀವ್ರ ಮಾನಸಿಕ ಒತ್ತಡ ಉಂಟುಮಾಡಿತು.

ತಾಳ್ಮೆ ಕಳೆದುಕೊಳ್ಳದೆ ಕೊನೆವರೆಗೂ ಅದ್ಭುತ ಪ್ರದರ್ಶನ

ರ್‍ಯಾಪಿಡ್‌ ಹಂತದ ಯಶಸ್ಸಿನ ಬಳಿಕ ಆರಂಭವಾದ ಬ್ಲಿಟ್ಜ್ ಸುತ್ತಿನಲ್ಲೂ ಪ್ರಜ್ಞಾನಂದ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದರು. ಅತ್ಯಂತ ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದ್ದ ಈ ಸುತ್ತಿನಲ್ಲಿ ಸಮಯದ ಅಭಾವದಿಂದಾಗಿ ಪ್ರಜ್ಞಾನಂದ ಸಣ್ಣ ಎಡವಟ್ಟು ಮಾಡಿದರು. ಆದರೂ ಕರುವಾನಾ ಅದರಿಂದ ಲಾಭ ಪಡೆದುಕೊಳ್ಳಲು ವಿಫಲರಾದರು. ತಾಳ್ಮೆ ಕಳೆದುಕೊಳ್ಳದೆ ಕೊನೆಯವರೆಗೂ ಪ್ರಜ್ಞಾನಂದ ಗೇಮ್‌ಗಳನ್ನು ಸಮಬಲದಲ್ಲಿ ಮುಗಿಸುವಲ್ಲಿ ಯಶಸ್ವಿಯಾದರು.

ಐತಿಹಾಸಿಕ ಸಾಧನೆ ಮಾಡಿದ ಆರ್.ಪ್ರಜ್ಞಾನಂದ

ಅಂತಿಮವಾಗಿ ಒಟ್ಟಾರೆ ಅಂಕಗಳ ಆಧಾರದಲ್ಲಿ 15-13 ಅಂತರದ ಭರ್ಜರಿ ಮುನ್ನಡೆ ಸಾಧಿಸಿದ ಆರ್.ಪ್ರಜ್ಞಾನಂದ, ಗ್ರ್ಯಾಂಡ್ ಚೆಸ್ ಟೂರ್ ಫೈನಲ್ಸ್‌ನ ನೂತನ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿದರು. ವಿಶ್ವ ಚಾಂಪಿಯನ್‌ಶಿಪ್ ಸರಣಿಯನ್ನು ಹೊರತುಪಡಿಸಿದರೆ, ಜಾಗತಿಕ ಚೆಸ್ ರಂಗದಲ್ಲಿ 'ಗ್ರ್ಯಾಂಡ್ ಚೆಸ್ ಟೂರ್' ಅತ್ಯಂತ ಕಠಿಣ ಮತ್ತು ಪ್ರತಿಷ್ಠಿತ ವೇದಿಕೆಯಾಗಿದೆ.

ಜಗತ್ತಿನ ಅತ್ಯುತ್ತಮ ಆಟಗಾರರು ಪಾಲ್ಗೊಳ್ಳುವ ಈ ಟೂರ್ನಿಯಲ್ಲಿ ಭಾರತೀಯರೊಬ್ಬರು ಪ್ರಶಸ್ತಿ ಎತ್ತಿಹಿಡಿದಿರುವುದು ಇದೇ ಮೊದಲ ಬಾರಿಯಾಗಿದೆ. ತಮ್ಮ ಅಪಾರ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ಪಂದ್ಯದ ಕಷ್ಟಕರ ಪರಿಸ್ಥಿತಿಯಲ್ಲೂ ಧೃತಿಗೆಡದ ಮನೋಭಾವದ ಮೂಲಕ ಗೆದ್ದು ಬೀಗಿರುವ ಆರ್.ಪ್ರಜ್ಞಾನಂದ ಅವರ ಈ ಐತಿಹಾಸಿಕ ಸಾಧನೆ, ಭಾರತದ ಕ್ರೀಡಾ ಇತಿಹಾಸದಲ್ಲಿ ಸುವರ್ಣಕ್ಷರಗಳಲ್ಲಿ ಬರೆದಿಡಬೇಕಾದ ಮಹತ್ವದ ಕ್ಷಣವಾಗಿದೆ. ದೇಶದ ಲಕ್ಷಾಂತರ ಯುವ ಚೆಸ್ ಪಟುಗಳಿಗೆ ಇವರ ಈ ಗೆಲುವು ದಾರಿ ದೀಪವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+