ಇನ್ಸ್ಟಾದಲ್ಲಿ ಆರ್‌ಸಿಬಿ ಪೋಸ್ಟರ್‌ ಹಂಚಿಕೊಂಡ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ: ಭಾರೀ ವೈರಲ್‌

Hardik Pandya: ಐಪಿಎಲ್‌ 2025ರ ಆವೃತ್ತಿಗೆ ನಿನ್ನೆ ಭರ್ಜರಿ ಚಾಲನೆ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಆರ್‌ಸಿಬಿ ಗೆದ್ದು ಬೀಗಿದೆ. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿಯಲ್ಲಿ ಆರ್‌ಸಿಬಿ ಪರ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದು, ಇದೀಗ ಭಾರೀ ವೈರಲ್‌ ಆಗುತ್ತಿದೆ. ಹಾಗಾದ್ರೆ ಕಾರಣ ಏನೆಂದು ಇಲ್ಲಿ ತಿಳಿಯಿರಿ.

ಐಪಿಎಲ್‌ ಲೀಗ್‌ನ 18ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಉದ್ಘಾಟನಾ ಪಂದ್ಯ ಕೆಕೆಆರ್ ಮತ್ತು ಆರ್‌ಸಿಬಿ ನಡುವೆ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಆರ್‌ಸಿಬಿ ಕೆಕೆಆರ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಟಾಸ್ ಗೆದ್ದ ಆರ್‌ಸಿಬಿ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದು, ಆರಂಭದಲ್ಲಿ ಕೆಕೆಆರ್‌ ಉತ್ತಮ ಬ್ಯಾಟಿಂಗ್‌ ಮಾಡಿತು. ಆದರೆ, ಬರಬರುತ್ತಾ ಕೊನೆಗೆ ಆರ್‌ಸಿಬಿ ಬೌಲರ್‌ಗಳ ಆರ್ಭಟಿಸಿ ಕೊಲ್ಕಾತ್ತಾ ತಂಡದ ಸ್ಫೋಟಕ ಬ್ಯಾಟರ್‌ಗಳ ವಿಕೆಟ್‌ ಕಬಳಿಸುತ್ತಾ ಬಂದರು.

Mumbai Indians Captain Hardik Pandya Shares A RCB poster on Instagram Goes viral

ಕೊಲ್ಕತ್ತಾ ನೈಟ್‌ ರೈಡರ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ ಬರೀ 174 ರನ್‌ಗಳನ್ನು ಮಾತ್ರ ಕಲೆಹಾಕಿ, ಆರ್‌ಸಿಗೆ 175 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ್ದ ಆರ್‌ಸಿಬಿ ಕೇವಲ 16.2 ಓವರ್‌ಗಳಿಗೆ ಪಂದ್ಯವನ್ನು ಮುಗಿಸುವ ಮೂಲಕ ಸುಲಭವಾಗಿ ಗೆದ್ದು ಬೀಗಿತು. ಆರ್‌ಸಿಬಿ ಗೆಲುವಿನ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಇನ್​ಸ್ಟಾದಲ್ಲಿ ಸ್ಟೇಟಸ್ ಹಂಚಿಕೊಳ್ಳುವ ಮುಳಕ ಸಂಭ್ರಮಿಸಿದ್ದಾರೆ.

ಆರ್‌ಸಿಬಿ ತಂಡದ ಉತ್ತಮ ಪ್ರದರ್ಶನದಿಂದ ಹಾರ್ದಿಕ್ ಪಾಂಡ್ಯ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯನ್ನು ಸಂತಸ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಏನೆಂದರೆ, ಆರ್‌ಸಿಬಿ ಪರ ಸಹೋದರ ಕೃನಾಲ್ ಪಾಂಡ್ಯ ಆಡಿದ್ದು, ಈ ಆವೃತ್ತಿಯ ಮೊದಲ ಪಂದ್ಯದಲ್ಲೇ ಅವರು ಬೌಲಿಂಗ್ನಲ್ಲಿ ಅತ್ಯದ್ಭುತ ಪ್ರದರ್ಶನ್‌ ನೀಡುವ ಮೂಲಕ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆದ್ದರಿಂದ ಆರ್‌ಸಿಬಿ ಗೆದ್ದ ಬಳಿಕ ಪಾಂಡ್ಯ ತಮ್ಮ ಸಹೋದರನ ಪೋಸ್ಟರ್‌ ಹಂಚಿಕೊಂಡಿದ್ದು, ಅದರಲ್ಲಿ 'ಯೂ ಬ್ಯೂಟಿ ಮೈ ಬ್ರೋ' ಎಂದು ಬರೆದುಕೊಂಡಿದ್ದಾರೆ. ಇದು ಇದೀಗ ಭಾರೀ ವೈರಲ್‌ ಆಗುತ್ತಿದೆ.

ಈಗಂತಲ್ಲ ಮೊದಲಿನಿಂದಲೂ ಒಬ್ಬರ ಗೆಲುವನ್ನು ಮತ್ತಬ್ಬರು ಸಂಭ್ರಮಿಸುತ್ತಲೇ ಬಂದಿದ್ದಾರೆ ಈ ಇಬ್ಬರು ಸಹೋದರರು. ಈಗಿನ ಕಾಲದಲ್ಲಿ ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಎನ್ನುವ ಮಾತಿದೆ. ಈ ಮಾತನ್ನು ಹಾರ್ದಿಕ್‌ ಪಾಂಡ್ಯ ಹಾಗೂ ಕೃನಾಲ್‌ ಪಾಂಡ್ಯ ಸುಳ್ಳು ಮಾಡಿದ್ದಾರೆ ಎನ್ನುವುದಕ್ಕೆ ಅವರ ನಡುವೆ ಇರುವ ಉತ್ತಮ ಬಾಂದವ್ಯವೇ ಸಾಕ್ಷಿ.

ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ನಡುವಿನ ಸಂಬಂಧವು ಕ್ರಿಕೆಟ್ ಜಗತ್ತಿನಲ್ಲಿ ವಿಶೇಷವಾಗಿದೆ. ಇಬ್ಬರೂ ಸಹೋದರರು ಒಟ್ಟಿಗೆ ಮೈದಾನದಲ್ಲಿ ಹಲವು ಪಂದ್ಯಗಳನ್ನು ಗೆಲ್ಲುಸಿಕೊಟ್ಟ ಉದಾಹರಣೆಗಳಿವೆ. ಅದರಲ್ಲೂ ಈ ಹಿಂದೆ ಅವರಿಬ್ಬರು ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಆಡಿದ್ದರು. ಆದರೆ ಕಳೆದ ಕೆಲ ವರ್ಷಗಳಿಂದ ಇವರಿಬ್ಬರೂ ಐಪಿಎಲ್‌ನಲ್ಲಿ ಬೇರೆ ಬೇರೆ ತಂಡಗಳಿಗೆ ಆಡುತ್ತಾ ಬಂದಿದ್ದಾರೆ. ಆದರೆ ಒಬ್ಬರ ಗೆಲುವನ್ನು ಮತ್ತೊಬ್ಬರು ಸಂಭ್ರಮಿಸುತ್ತಲೇ ಬಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+