Mohammed Shami: ದುಲೀಪ್ ಟ್ರೋಫಿ ಗೆದ್ದ ಬೆನ್ನಲ್ಲೇ ವೈಭವ್ ಸೂರ್ಯವಂಶಿ ಕುರಿತು ಮೊಹಮ್ಮದ್ ಶಮಿ ಅಚ್ಚರಿ ಹೇಳಿಕೆ

Mohammed Shami: ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಈಸ್ಟ್‌ ಝೋನ್ ತಂಡವು ದಕ್ಷಿಣ ವಲಯದ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್ ಆಗಿದೆ. ಇದರ ಬೆನ್ನಲ್ಲೇ ಪೂರ್ವ ವಲಯ ಟೀಮ್‌ನ ಮೊಹಮ್ಮದ್ ಶಮಿ ಅವರು ಸಹ ಆಟಗಾರನಾದ 15 ವರ್ಷದ ವೈಭವ್ ಸೂರ್ಯವಂಶಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದು ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಇತ್ತೀಚೆಗೆ ಈಸ್ಟ್ ಝೋನ್ ಪರ ದುಲೀಪ್ ಟ್ರೋಫಿ ಚಾಂಪಿಯನ್ ಪಟ್ಟ ಗೆದ್ದ ನಂತರ, ತಮ್ಮ ತಂಡದ ಕಿರಿಯ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಬಗ್ಗೆ ತಮಾಷೆಯಾಗಿ ಹಾಗೂ ಹೆಮ್ಮೆಯಿಂದ ಮಾತನಾಡಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ.

Mohammed Shami Praises Team India Youngest Cricketer Vaibhav Sooryavanshi After Duleep Trophy Win

100ನೇ ಪ್ರಥಮ ದರ್ಜೆ ಪಂದ್ಯ, ಟ್ರೋಫಿ ಜಯದ ಸಂತಸ

ಈಸ್ಟ್ ಝೋನ್ ತಂಡವು ಸೌತ್ ಝೋನ್ ವಿರುದ್ಧ ಮೊದಲ ಇನ್ನಿಂಗ್ಸ್‌ ಮುನ್ನಡೆಯ ಆಧಾರದ ಮೇಲೆ ದುಲೀಪ್ ಟ್ರೋಫಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಈ ಪಂದ್ಯವು ಮೊಹಮ್ಮದ್ ಶಮಿ ಅವರಿಗೆ 100ನೇ ಪ್ರಥಮ ದರ್ಜೆ ಪಂದ್ಯವಾಗಿತ್ತು. ಈ ಐತಿಹಾಸಿಕ ಪಂದ್ಯದಲ್ಲಿ ಶಮಿ ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದು ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು.

ವೈಭವ್‌ ಸೂರ್ಯವಂಶಿಗೆ ಶಮಿ ಮೆಚ್ಚುಗೆ

ಪಂದ್ಯದ ನಂತರ ಕಿರಿಯ ಆಟಗಾರರ ಮಾರ್ಗದರ್ಶನದ ಕುರಿತು ಮಾತನಾಡಿದ 36 ವರ್ಷದ ಶಮಿ, 'ನಮ್ಮ ತಂಡದಲ್ಲಿದ್ದ ಪುಟ್ಟ ಹುಡುಗ ವೈಭವ್ ಸೂರ್ಯವಂಶಿ ಅವರ ವಯಸ್ಸು, ನನ್ನ ಕ್ರಿಕೆಟ್ ಕೆರಿಯರ್‌ನಷ್ಟೇ ಇದೆ. ಆತನಲ್ಲಿ ಮುಗ್ಧತೆ ಇದೆ, ತಮಾಷೆ ಮಾಡುತ್ತಿರುತ್ತಾನೆ ಮತ್ತು ವಿಷಯಗಳನ್ನು ಬೇಗ ಅರ್ಥ ಮಾಡಿಕೊಳ್ಳುತ್ತಾನೆ. ಅವನೊಂದಿಗೆ ಸಮಯ ಕಳೆದಿದ್ದು ನನಗೆ ತುಂಬಾ ಇಷ್ಟವಾಯಿತು,' ಎಂದು ಹೇಳಿದರು.

ಇನ್ನು ಮೊಹಹ್ಮದ್ ಶಮಿ ಅವರು ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ನವೆಂಬರ್ 2010ರಲ್ಲಿ. ವೈಭವ್ ಸೂರ್ಯವಂಶಿ ಜನಿಸಿದ್ದು ಮಾರ್ಚ್ 2011ರಲ್ಲಿ. ಆದ್ದರಿಂದ ಅವರು ಈ ಹೋಲಿಕೆ ಮಾಡಿ ಗಮನ ಸೆಳೆದಿದ್ದಾರೆ. ಮುಂದುವರಿದು ಮಾತನಾಡಿದ ಶಮಿ, ಇಂದಿನ ಪೀಳಿಗೆಯ ಯುವ ಕ್ರಿಕೆಟಿಗರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಯುವ ಆಟಗಾರರ ಕುರಿತು ಶಮಿ ಹೇಳಿದ್ದೇನು?

ಇಂದಿನ ಯುವ ಆಟಗಾರರು ಐಪಿಎಲ್ ಮತ್ತು ಹೆಚ್ಚಿನ ಒತ್ತಡವಿರುವ ಪಂದ್ಯಾವಳಿಗಳಲ್ಲಿ ಆಡುವುದರಿಂದ ಚಿಕ್ಕ ವಯಸ್ಸಿನಲ್ಲೇ ಅವರಿಗೆ ಹೆಚ್ಚಿನ ಪರಿಪಕ್ವತೆ ಸಿಗುತ್ತದೆ. ಇಂತಹ ಆಟಗಾರರಿಗೆ ಅತಿಯಾಗಿ ತರಬೇತಿ ನೀಡುವ ಅಗತ್ಯವಿರುವುದಿಲ್ಲ. ಬದಲಿಗೆ, ಪಂದ್ಯಾವಳಿಗಳು ಸವಾಲಾಗಿ ಪರಿಣಮಿಸಿದಾಗ ಸಣ್ಣಪುಟ್ಟ ತಾಂತ್ರಿಕ ಸಲಹೆಗಳನ್ನು ಮತ್ತು ಮಾನಸಿಕ ಧೈರ್ಯವನ್ನು ನೀಡಿದರೆ ಸಾಕಾಗುತ್ತದೆ ಎಂದು ಹೇಳಿದ್ದಾರೆ.

'ತಂಡಕ್ಕೆ ಗರಿಷ್ಠ ಕೊಡುಗೆ ನೀಡುವುದೇ ನನ್ನ ಗುರಿ'

ಸುದೀರ್ಘ ಕಾಲದಿಂದ ಭಾರತ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದರೂ, ಶಮಿ ಅವರ ಉತ್ಸಾಹ ಕಡಿಮೆಯಾಗಿಲ್ಲ. 'ನೀವು ಯಾವುದೇ ಹಂತದ ಕ್ರಿಕೆಟ್‌ನಲ್ಲಿ ಆಡಲಿ, ಎದೆಯ ಮೇಲೆ ಆ ಬ್ಯಾಡ್ಜ್ ಧರಿಸಿದಾಗ ಕ್ರಿಕೆಟ್ ಮಟ್ಟ ಮುಖ್ಯವಾಗುವುದಿಲ್ಲ. ತಂಡಕ್ಕಾಗಿ ಆಡುವ ಹಸಿವು ಮತ್ತು ಹೋರಾಟ ಮನೋಭಾವ ತಾನಾಗಿಯೇ ಬರುತ್ತದೆ. ನನಗೆ ಸಿಗುವ ಪ್ರತಿಯೊಂದು ಅವಕಾಶದಲ್ಲೂ ತಂಡಕ್ಕೆ ಗರಿಷ್ಠ ಕೊಡುಗೆ ನೀಡುವುದೇ ನನ್ನ ಗುರಿ,' ಎಂದು ಅವರು ಹೇಳಿದ್ದಾರೆ.

ತುಂಬಾ ವರ್ಷಗಳ ಬಳಿಕ ಈಸ್ಟ್ ಝೋನ್ ತಂಡ ದುಲೀಪ್ ಟ್ರೋಫಿ ಗೆದ್ದಿದ್ದು ಮತ್ತು ತಮ್ಮ 100ನೇ ಪಂದ್ಯದಲ್ಲೇ ಈ ಸಾಧನೆ ಮಾಡಿದ್ದು ಅತ್ಯಂತ ವಿಶೇಷ ಎಂದು ಶಮಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ದುಲೀಪ್ ಟ್ರೋಫಿ ಗೆಲುವಿನ ನಂತರ ವೈಭವ್ ಸೂರ್ಯವಂಶಿ ಕುರಿತು ಮೊಹಮ್ಮದ್ ಶಮಿ ಹೇಳಿದ ಹೇಳಿಕೆ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+