ಪಂಜಾಬ್ ಕಿಂಗ್ಸ್‌ ಸದೆಬಡಿದು ಮುಂಬೈಗೆ ವಿಜಯದ ತಿಲಕ ಇಟ್ಟ ತಿಲಕ್ ವರ್ಮಾ

MI Vs PBKS IPL 2026: ಧರ್ಮಶಾಲಾದಲ್ಲಿ ಗುರುವಾರ (ಮೇ 14) ನಡೆದ ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ತಿಲಕ್ ವರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್‌ಗಳಿಂದ ಭರ್ಜರಿ ಜಯ ದಾಖಲಿಸಿದೆ. ಇದು ಪಂಜಾಬ್‌ಗೆ ಸತತ ಐದನೇ ಸೋಲಾಗಿದ್ದು, ಪ್ಲೇ-ಆಫ್‌ ಹಾದಿ ಮತ್ತಷ್ಟು ಕಠಿಣವಾಗಿದೆ.

ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಜಸ್ಪ್ರಿತ ಬುಮ್ರಾ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಶ್ರೇಯಸ್‌ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್‌ ಪ್ರಭ್‌ಸಿಮ್ರನ್ ಸಿಂಗ್ ಸ್ಫೋಟಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 200 ರನ್‌ ಕಲೆಹಾಕಿತು. 201 ರನ್‌ಗಳ ಗುರಿಯನ್ನು ಮುಂಬೈ ಇಂಡಿಯನ್ಸ್ 19.5 ಓವರ್‌ಗಳಲ್ಲಿ ತಲುಪಿ ಗೆದ್ದು ಬೀಗಿತು.

MI vs PBKS IPL 2026 Tilak Varma s Explosive 75 Helps Mumbai Indians Beat Punjab Kings by 6 Wickets

ಮುಂಬೈ ಪರ ಮಿಂಚಿದ ತಿಲಕ್ ವರ್ಮಾ

ಪಂಜಾಬ್ ಕಿಂಗ್ಸ್ ನೀಡಿದ 201 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡಕ್ಕೆ ತಿಲಕ್ ವರ್ಮಾ ಆಪತ್ಬಾಂಧವರಾದರು. ಅವರು ಕೇವಲ 33 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್‌ಗಳೊಂದಿಗೆ ಅಜೇಯ 75 ರನ್ ಸಿಡಿಸುವ ಮೂಲಕ ಕೊನೆಯ ಓವರ್‌ನ ಒಂದು ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮುಂಬೈ ಪರ ಯಾರು ಎಷ್ಟು ರನ್ ಬಾರಿಸಿದರು?

ಮುಂಬೈ ಇಂಡಿಯನ್ಸ್ ಪಂದ್ಯದ ಕೊನೆಯ ಒಂದು ಎಸೆತ ಬಾಕಿ ಇರುವಂತೆಯೇ ಗುರಿ ತಲುಪಿ ಜಯಭೇರಿ ಬಾರಿಸಿತು. ಆರಂಭದಲ್ಲಿ ರಯಾನ್ ರಿಕಲ್ಟನ್ 48(23) ರನ್‌ ಚಚ್ಚಿ ಉತ್ತಮ ಆರಂಭ ನೀಡಿದರೆ, ಕೊನೆಯಲ್ಲಿ ತಿಲಕ್ ವರ್ಮಾ ಅವರಿಗೆ ಸಾಥ್ ನೀಡಿದ ವಿಲ್ ಜಾಕ್ಸ್ 10 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ ಅಜೇಯ 25 ರನ್‌ ಸಿಡಿಸಿ ಉತ್ತಮ ಸಾಥ್ ನೀಡಿದರು. ಉಳಿದಂತೆ ರೋಹಿತ್ ಶರ್ಮಾ 25(26), ಶೇರ್ಪನ್ ರುಥರ್ಫೋರ್ಡ್ 20(21) ರನ್‌ಗಳ ಕೊಡುಗೆ ನೀಡಿದರು.

ಪ್ರಭ್‌ಸಿಮ್ರಾನ್ ಸಿಂಗ್ ಅರ್ಧಶತಕ ವ್ಯರ್ಥ

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತ್ತು. ಆರಂಭಿಕ ಆಟಗಾರ ಪ್ರಭ್‌ಸಿಮ್ರಾನ್ ಸಿಂಗ್ (57) ಗರಿಷ್ಠ ಸ್ಮೋರರ್ ಎನಿಸಿಕೊಂಡರು. ಕೊನೆಯಲ್ಲಿ ಅಜ್ಮತುಲ್ಲಾ ಒಮರ್ಜಾಯ್, ವಿಷ್ಣು ವಿನೋದ್ ಮತ್ತು ಕ್ಸೇವಿಯರ್ ಬಾರ್ಟ್ಲೆಟ್ ಅವರ ಬಿರುಸಿನ ಆಟದಿಂದ ತಂಡದ ಮೊತ್ತ 200ರ ಗಡಿ ತಲುಪಿತ್ತು.

4 ವಿಕೆಟ್‌ ಕಿತ್ತು ಮಿಂಚಿದ ಶಾರ್ದೂಲ್ ಠಾಕೂರ್

ಮುಂಬೈ ಪರ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ತಂಡವನ್ನು ಅಚ್ಚುಕಟ್ಟಾಗಿ ಮುನ್ನಡೆಸಿದರು. ಶಾರ್ದೂಲ್ ಠಾಕೂರ್ 4 ವಿಕೆಟ್ ಕೀಳುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಶಾರ್ದೂಲ್ ನಾಲ್ಕು ಓವರ್‌ ಬೌಲಿಂಗ್ ದಾಳಿ ನಡೆಸಿ 39 ರನ್‌ ನೀಡಿ 4 ವಿಕೆಟ್‌ ಕಿತ್ತು ಮಿಂಚಿದರು. ಉಳಿದಂತೆ ದೀಪಕ್ ಚಹಾರ್ 2, ಕಾರ್ಬಿನ್ ಬಾಷ್ ಹಾಗೂ ರಾಜಾ ಬಾವಾ ತಲಾ ಒಂದು ವಿಕೆಟ್‌ ಪಡೆದರು. ಇನ್ನೂ ಈ ಸೋಲಿನೊಂದಿಗೆ ಪಂಜಾಬ್ ಕಿಂಗ್ಸ್ ಸತತ ಐದನೇ ಬಾರಿಗೆ ಪರಾಜಯಗೊಂಡಂತಾಗಿದೆ.
ಪಂಜಾಬ್ ಕಿಂಗ್ಸ್‌ ಸೋಲಿಗೆ ಕಾರಣ ಏನು?

ಮಾರ್ಕೊ ಜಾನ್ಸೆನ್ 55, ಕ್ಸಾವಿಯರ್ ಬಾರ್ಟ್‌ಲೆಟ್ 53 ರನ್‌ ಬಿಟ್ಟುಕೊಟ್ಟಿದ್ದು ಪಂಜಾಬ್‌ ಕಿಂಗ್ಸ್‌ ಸೋಲಿಗೆ ಪ್ರಮುಖ ಕಾರಣವಾಯಿತು. ಒಟ್ಟಾರೆಯಾಗಿ ತಿಲಕ್ ವರ್ಮಾ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಮುಂಬೈ ಇಂಡಿಯನ್ಸ್ ಧರ್ಮಶಾಲಾದಲ್ಲಿ ಗೆಲುವಿನ ನಗೆ ಬೀರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+