IPL 2023: ಎಂಎಸ್ ಧೋನಿ ಹಿಂದಿಕ್ಕಿ CSK ಪರ ಈ ದಾಖಲೆ ಮಾಡಿದ 3ನೇ ಬ್ಯಾಟರ್ ಅಜಿಂಕ್ಯಾ ರಹಾನೆ

ಶನಿವಾರ, ಏಪ್ರಿಲ್ 8ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 12ನೇ ಪಂದ್ಯದಲ್ಲಿ ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಇದೇ ವೇಳೆ ಸಿಎಸ್‌ಕೆ ತಂಡದ ಬ್ಯಾಟ್ಸ್‌ಮನ್ ಅಜಿಂಕ್ಯಾ ರಹಾನೆ ಅವರು ಐಪಿಎಲ್ ಇತಿಹಾಸದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರು. ಅಲ್ಲದೇ, ಅಜಿಂಕ್ಯ ರಹಾನೆ 2023ರ ಐಪಿಎಲ್ ಋತುವಿನ ವೇಗದ ಅರ್ಧಶತಕ ಬಾರಿಸಿದರು. ಅಂತಿಮವಾಗಿ ಕೇವಲ 27 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 61 ರನ್ ಚಚ್ಚಿದರು.

MI vs CSK: Ajinkya Rahane Became Joint 2nd Batsman To Score Fastest Fifty For Chennai Super Kings

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಚೊಚ್ಚಲ ಪಂದ್ಯವನ್ನು ಆಡಿದ ಅಜಿಂಕ್ಯಾ ರಹಾನೆ ಕೇವಲ 19 ಎಸೆತಗಳಲ್ಲಿ ಅರ್ಧಶತಕದ ಮೈಲಿಗಲ್ಲು ಸ್ಥಾಪಿಸಿದರು. ರಹಾನೆ ತಮ್ಮ "ತವರು' ಮೈದಾನವಾದ ವಾಂಖೆಡೆ ಸ್ಟೇಡಿಯಂನಲ್ಲಿ ಅವರ ಅದ್ಭುತ ಪ್ರದರ್ಶನ ಬಂದಿತು. ಈ ಅನುಭವಿ ಬ್ಯಾಟರ್ ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ ವೇಳೆ ಸಿಎಸ್‌ಕೆ ತಂಡದ ನಾಯಕ ಎಂಎಸ್ ಧೋನಿ ಹಿಂದಿಕ್ಕಿದರು.

ಸಿಎಸ್‌ಕೆ ತಂಡದ ಪರ ಎರಡನೇ ಅತಿವೇಗದ ಅರ್ಧಶತಕ ಬಾರಿಸಿದ ಅಜಿಂಕ್ಯಾ ರಹಾನೆ ಆಲ್‌ರೌಂಡರ್ ಮೊಯಿನ್ ಅಲಿ ಅವರೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಪರ 16 ಎಸೆತಗಳಲ್ಲಿ ಅತಿವೇಗದ ಅರ್ಧಶತಕ ದಾಖಲಿಸಿರುವ ಸುರೇಶ್ ರೈನಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

MI vs CSK: Ajinkya Rahane Became Joint 2nd Batsman To Score Fastest Fifty For Chennai Super Kings

ಅಜಿಂಕ್ಯಾ ರಹಾನೆ 19 ಎಸೆತಗಳಲ್ಲಿ ಅಧಶತಕ ಬಾರಿಸುತ್ತಿದ್ದಂತೆಯೇ ತಮ್ಮ ತಂಡದ ನಾಯಕ ಎಂಎಸ್ ಧೋನಿ ದಾಖಲೆಯನ್ನು ಮುರಿದರು. 2012ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಎಂಎಸ್ ಧೋನಿ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.

ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಅತಿ ವೇಗದ ಅರ್ಧಶತಕ ಗಳಿಸಿದವರು

ಸುರೇಶ್ ರೈನಾ - 2014ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ - 16 ಎಸೆತಗಳು

ಮೊಯಿನ್ ಅಲಿ - 2022ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ - 19 ಎಸೆತಗಳು

ಅಜಿಂಕ್ಯಾ ರಹಾನೆ - 2023ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ - 19 ಎಸೆತಗಳು

ಎಂಎಸ್ ಧೋನಿ - 2012ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ - 20 ಎಸೆತಗಳು

ಪಂದ್ಯದ ನಂತರ ತಮ್ಮ ದಾಖಲೆಯ ಪ್ರದರ್ಶನದ ಬಗ್ಗೆ ಮಾತನಾಡಿದ ಅಜಿಂಕ್ಯಾ ರಹಾನೆ, ""ವಾಂಖೆಡೆಯಲ್ಲಿ ಆಡುವುದನ್ನು ನಾನು ಯಾವಾಗಲೂ ಆನಂದಿಸುತ್ತೇನೆ. ಇಲ್ಲಿ ನಾನು ಎಂದಿಗೂ ಟೆಸ್ಟ್ ಪಂದ್ಯ ಆಡಿಲ್ಲ, ಇಲ್ಲಿ ನಾನು ಟೆಸ್ಟ್ ಆಡಲು ಬಯಸುತ್ತೇನೆ,'' ಎಂದು ತಿಳಿಸಿದರು.

ಆಲ್‌ರೌಂಡರ್ ಮೊಯಿನ್ ಅಲಿ ಅವರು ವಿಷಪೂರಿತ ಆಹಾರ ಸೇವಿಸಿದ್ದರಿಂದಾಗಿ, ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯಾ ರಹಾನೆ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡುವ ಅವಕಾಶ ಪಡೆದರು. "ನಾನು ಆಡುವ 11ರಲ್ಲಿ ಸ್ಥಾನ ಸಿಗುವ ಬಗ್ಗೆ ನನಗೆ ಖಚಿತತೆ ಇರಲಿಲ್ಲ. ನಾನು ಟಾಸ್‌ಗೆ ಮುಂಚೆಯೇ ತಿಳಿದುಕೊಂಡೆ," ಎಂದು ಅಜಿಂಕ್ಯಾ ರಹಾನೆ ಬಹಿರಂಗಪಡಿಸಿದ್ದರು.

ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ಬುಧವಾರ, ಏಪ್ರಿಲ್ 12ರಂದು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಆಡಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿದ 3 ಪಂದ್ಯಗಳಿಂದ 2 ಜಯ ದಾಖಲಿಸಿ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+