Asian Games 2026: ಚೀನಾದ ಬಾಕ್ಸರ್ ಮಣಿಸಿ ಚಿನ್ನ ಗೆದ್ದ ಲವ್ಲೀನಾ ಬೋರ್ಗೋಹೈನ್

Lovlina Borgohain: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ 2026ರಲ್ಲಿ ಭಾರತದ ಬಾಕ್ಸಿಂಗ್ ತಾರೆ ಲವ್ಲೀನಾ ಬೋರ್ಗೋಹೈನ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ 75 ಕೆ.ಜಿ. ವಿಭಾಗದ ಫೈನಲ್ ಕದನದಲ್ಲಿ ಚೀನಾದ ಬಲಶಾಲಿ ಸ್ಪರ್ಧಿ ಜಿಯಿ ಬಾವೊ ಅವರನ್ನು ಪರಾಜಯಗೊಳಿಸುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಕೊಂಡಿದ್ದಾರೆ.

ಬಂಗಾರದ ಪದಕದವರೆಗಿನ ಲವ್ಲೀನಾ ಅವರ ಪಯಣ ಕಠಿಣ ಸವಾಲುಗಳಿಂದ ಕೂಡಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಸಿಯೊಂಗ್ ಸುಯೋನ್ ವಿರುದ್ಧ ಭರ್ಜರಿ ಜಯ ಸಾಧಿಸಿದರು. ಸೆಮಿಫೈನಲ್‌ನಲ್ಲಿ ಕಜಕಿಸ್ತಾನದ ಪ್ರಬಲ ಸ್ಪರ್ಧಿ ನಟಾಲಿಯಾ ಬೊಗ್ಡಾನೋವಾ ವಿರುದ್ಧ ತೀವ್ರ ಪೈಪೋಟಿ ನಡೆಸಿ 3-2 ಅಂತರದ ಸ್ಪ್ಲಿಟ್ ನಿರ್ಧಾರದಿಂದ ಜಯಭೇರಿ ಬಾರಿಸಿ ಫೈನಲ್ ತಲುಪಿದ್ದರು. ಅಂತಿಮವಾಗಿ 29 ವರ್ಷದ ಈ ಅನುಭವಿ ಬಾಕ್ಸರ್ ಫೈನಲ್‌ನಲ್ಲೂ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಚೀನಾದ ಆಟಗಾರ್ತಿಯನ್ನು ರಿಂಗ್‌ನಲ್ಲಿ ಧೂಳಿಪಟ ಮಾಡಿದರು.

Lovlina Borgohain Wins Historic Gold at Asian Games 2026 Defeats China s Bao Jiyi in 75kg Final

ಬಂಗಾರ ಗೆದ್ದ ಲವ್ಲೀನಾ

2022ರ ಹಾಂಗ್ಝೌ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದ ಅಸ್ಸಾಂ ಮೂಲದ ಲವ್ಲೀನಾಗೆ ಈ ಬಾರಿಯ ಸ್ಪರ್ಧೆಯು ಅತ್ಯಂತ ನಿರ್ಣಾಯಕವಾಗಿತ್ತು. ಕಳೆದ ಬಾರಿ ಕೈತಪ್ಪಿದ್ದ ಚಿನ್ನವನ್ನು ಈ ಬಾರಿ ಗೆಲ್ಲಲೇಬೇಕೆಂಬ ದೃಢ ಸಂಕಲ್ಪದೊಂದಿಗೆ ಕಣಕ್ಕಿಳಿದಿದ್ದ ಅವರು, ತಮ್ಮ ಅದ್ಭುತ ಪಂಚ್‌ಗಳ ಮೂಲಕ ಬೆಳ್ಳಿಯನ್ನು ಬಂಗಾರವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಶಸ್ವಿ ಕ್ರೀಡಾ ಜೀವನಕ್ಕೆ ಮತ್ತೊಂದು ಮೈಲಿಗಲ್ಲು..

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಪದಕ ಗೆದ್ದಿದ್ದ ಲವ್ಲೀನಾ, ಇದೀಗ ಏಷ್ಯನ್ ಗೇಮ್ಸ್‌ನಲ್ಲೂ ಚೊಚ್ಚಲ ಚಿನ್ನದ ಪದಕ ಜಯಿಸಿ ತಮ್ಮ ಕ್ರೀಡಾ ಪಯಣದಲ್ಲಿ ಮತ್ತೊಂದು ಸುವರ್ಣ ಅಧ್ಯಾಯ ಬರೆದಿದ್ದಾರೆ. ಇವರ ಈ ಅದ್ಭುತ ಗೆಲುವು ಭಾರತೀಯ ಬಾಕ್ಸಿಂಗ್ ಪಡೆಯ ಆತ್ಮವಿಶ್ವಸವನ್ನು ಹೆಚ್ಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+