Lionel Messi Retirement: ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಲಿಯೋನೆಲ್ ಮೆಸ್ಸಿ ವಿದಾಯ; ಭಾವನಾತ್ಮಕ ಬರಹ ವೈರಲ್
ಜಾಗತಿಕ ಫುಟ್‌ಬಾಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ಅರ್ಜೆಂಟೀನಾ ತಂಡವನ್ನು ಸತತ ಎರಡು ಬಾರಿ ಫಿಫಾ ವಿಶ್ವಕಪ್ ಫೈನಲ್ ವರೆಗೆ ಮುನ್ನಡೆಸಿದ ಒಂದು ತಿಂಗಳ ನಂತರ ಸೋಶಿಯಲ್ ಮೀಡಿಯಾದಲ್ಲಿ ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಆಗುತ್ತಿರುವುದಾಗಿ ಲಿಯೋನೆಲ್ ಮೆಸ್ಸಿ (39) ಅವರು ಘೋಷಿಸಿದ್ದಾರೆ.
ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿರುವ ಬಗ್ಗೆ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ದೀರ್ಘ ಮತ್ತು ಭಾವನಾತ್ಮಕ ಬರಹವನ್ನು ಮೆಸ್ಸಿ ಹಂಚಿಕೊಂಡಿದ್ದಾರೆ. ಅರ್ಜೆಂಟೀನಾ /ರಾಷ್ಟ್ರೀಯ ತಂಡಕ್ಕೆ ತಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ನೀಡಿದ್ದೇನೆ ಮತ್ತು ನಿವೃತ್ತಿ ಹೊಂದುವ ಸಮಯ ಈಗ ಬಂದಿದೆ ಎಂದು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಮುಂದುವರಿದು ಫೈನಲ್ ಪಂದ್ಯದ ನಂತರ ಕಳೆದ ಸಮಯ ಮತ್ತು ಅದರ ಬಗ್ಗೆ ಸಾಕಷ್ಟು ಯೋಚಿಸಿದ ನಂತರ ರಾಷ್ಟ್ರೀಯ ತಂಡದಿಂದ ನಿವೃತ್ತಿ ಹೊಂದುವುದಕ್ಕೆ ಮುಂದಾಗಿರುವುದಾಗಿ ಮೆಸ್ಸಿ ಅವರು ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

Lionel Messi Retirement: ಈ ನಿರ್ಧಾರ ನೋವನ್ನುಂಟು ಮಾಡಿದೆ
ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳುವುದು ನೋವನ್ನುಂಟು ಮಾಡುವ ನಿರ್ಧಾರವಾಗಿತ್ತು. ಆದರೆ, ಈಗ ವಿದಾಯ ಹೇಳುವ ಸಮಯ ಬಂದಿದೆ ಎಂದು ನನಗೆ ಅರ್ಥವಾಗಿದೆ. ನಾನು ಯಾವಾಗಲೂ ನನ್ನ ಎಲ್ಲವನ್ನೂ ನೀಡಿದ್ದೇನೆ. ಕಳೆದ ಕೆಲವು ವರ್ಷಗಳಲ್ಲಿ ನಾವು ಎಲ್ಲವನ್ನೂ ಗೆದ್ದಾಗ ಮಾತ್ರವಲ್ಲ, ಅದಕ್ಕೂ ಮೊದಲು ಅಂದರೆ, ದೇಶದ ಜೆರ್ಸಿಗಾಗಿ ನಾನು ಯಾವಾಗಲೂ ಹೋರಾಡಿದೆ. ಮೈದಾನದಲ್ಲಿ ಎಲ್ಲವನ್ನೂ ಬಿಟ್ಟು ಬಂದಿದ್ದೇನೆ, ನಿಮ್ಮ ಸಂತೋಷಕ್ಕಾಗಿ ಮತ್ತು ಫುಟ್‌ಬಾಲ್ ಮೂಲಕ ಅರ್ಜೆಂಟೀನಾದ ಬಗ್ಗೆ ನೀವು ಹೆಮ್ಮೆಪಡುವಂತೆ ಮಾಡಲು ಶ್ರಮಿಸಿದ್ದೇನೆ ಎಂದಿದ್ದಾರೆ.
ಸಮಯ ಕಡಿಮೆಯಾಗುತ್ತಿದ್ದು, ಅಧ್ಯಾಯಗಳು ಮುಗಿಯುತ್ತಿವೆ. ಈ ನಿರ್ಧಾರವು ನನಗೆ ತುಂಬಾ ನೋವನ್ನುಂಟು ಮಾಡಿದೆ. ನಾನು ಪ್ರೀತಿಸುತ್ತೇನೆ, ಪ್ರೀತಿಸಿದ್ದೇನೆ ಮತ್ತು ಯಾವಾಗಲೂ ರಾಷ್ಟ್ರೀಯ ತಂಡದ ಭಾಗವಾಗಿರುವುದನ್ನು ಇಚ್ಛಿಸುತ್ತೇನರ. ನಾನು ನನ್ನಲ್ಲಿದ್ದ ಎಲ್ಲವನ್ನೂ ನೀಡಿದ್ದೇನೆ; ನೀಡಲು ನನ್ನಲ್ಲಿ ಈಗ ಏನೂ ಉಳಿದಿಲ್ಲ, ಜೊತೆಗೆ, ಇಲ್ಲಿರಲು ಅರ್ಹರಾದ ಕೆಲವು ಉತ್ತಮ ಯುವ ಆಟಗಾರರು ಹೊರಹೊಮ್ಮುತ್ತಿದ್ದಾರೆ ಎಂದೂ ತಮ್ಮ ವಿದಾಯದ ಬರಹದಲ್ಲಿ ಮೆಸ್ಸಿ ಅವರು ಹೇಳಿಕೊಂಡಿದ್ದಾರೆ.
Lionel Messi Retirement: ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದ: ಮೆಸ್ಸಿ
ಮೆಸ್ಸಿ ಅವರು ತಮ್ಮ ವಿದಾಯದ ಬರಹದಲ್ಲಿ ತಮ್ಮ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ. ಕಳೆದ 20 ವರ್ಷಗಳಲ್ಲಿ ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ಮೈದಾನದಿಂದ ನಿಮ್ಮ ಮಾತುಗಳನ್ನು ಕೇಳುವುದನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳಲಿದ್ದೇನೆ. ಇನ್ಮುಂದೆ ನಾನು ನಿಮ್ಮಲ್ಲಿ ಒಬ್ಬನಾಗಿರುತ್ತೇನೆ, ಹೊರಗಿನಿಂದ ಹುರಿದುಂಬಿಸುತ್ತೇನೆ ಮತ್ತು ಬೆಂಬಲಿಸಲಿದ್ದೇನೆ.
ಈ ಪ್ರಯಾಣದಲ್ಲಿ ನನ್ನೊಂದಿಗೆ ಯಾವಾಗಲೂ ಇದ್ದಿದ್ದಕ್ಕೆ, ನನ್ನ ಕುಟುಂಬಕ್ಕೆ ಧನ್ಯವಾದಗಳು - ತುಂಬಾ ಸುಂದರ, ಆದರೆ ತುಂಬಾ ಕಷ್ಟಕರ. ನನ್ನ ಈ ಪಯಣದಲ್ಲಿ ಜೊತೆಯಾದ ತರಬೇತುದಾರ, ತಂಡದ ಸಹ ಆಟಗಾರ ಮತ್ತು ಅಧಿಕಾರಿಗಳಿಗೆ ಧನ್ಯವಾದಗಳು. ನಾನು ಮರೆಯಲಾಗದ ನೆನಪುಗಳು ಮತ್ತು ಕ್ಷಣಗಳೊಂದಿಗೆ ವಿದಾಯ ಹೇಳುತ್ತಿದ್ದೇನೆ. ದೇವರೇ, ನನ್ನನ್ನು ಅರ್ಜೆಂಟೀನಾಗಾರನ್ನಾಗಿ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಮೆಸ್ಸಿ ಹೇಳಿದ್ದಾರೆ.


Click it and Unblock the Notifications
