Jasprit Bumrah: ಕೊನೆಗೂ ಈ ಸೀಸನ್‌ನಲ್ಲಿ ಮೊದಲ ವಿಕೆಟ್ ಪಡೆದು ಸಂಭ್ರಮಿಸಿದ ವಿಶ್ವದ ನಂ.1 ಬೌಲರ್ ಜಸ್ಪ್ರಿತ್ ಬುಮ್ರಾ

Jasprit Bumrah: ಅಹಮದಾಬಾದ್‌ನಲ್ಲಿ ಸೋಮವಾರ (ಏಪ್ರಿಲ್ 20) ನಡೆದ ಐಪಿಎಲ್‌ 2026ರ 30ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ 99 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು. ವಿಶೇಷ ಅಂದ್ರೆ, ಈ ಸೀಸನ್‌ ಆರಂಭದಿಂದ ಕಳೆದ ಐದು ಪಂದ್ಯಗಳಲ್ಲಿ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗದೆ ಪರದಾಡುತ್ತಿದ್ದ ವಿಶ್ವದ ನಂ.1 ಬೌಲರ್ ಜಸ್ಪ್ರೀತ್ ಬುಮ್ರಾ, ಅಂತಿಮವಾಗಿ ವಿಕೆಟ್ ಕೀಳುವ ಮೂಲಕ ಫಾರ್ಮ್‌ಗೆ ಮರಳಿದರು.

ಜಸ್ಪ್ರೀತ್ ಬುಮ್ರಾ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವ ಮೂಲಕ ಗುಜರಾತ್ ಟೈಟಾನ್ಸ್‌ಗೆ ಆಘಾತ ನೀಡಿದರು. ಅವರ ಈ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಸಾಯಿ ಸುದರ್ಶನ್ 'ಗೋಲ್ಡನ್ ಡಕ್' (ಶೂನ್ಯಕ್ಕೆ) ಔಟ್ ಆಗಿ ಪೆವಿಲಿಯನ್ ಸೇರಿದರು. ಹೀಗೆ ಹೊಸ ಚೆಂಡಿನೊಂದಿಗೆ ದಾಳಿಗಿಳಿದ ಬುಮ್ರಾ, ಮೊದಲ ಓವರ್‌ನಲ್ಲೇ ತಮ್ಮ ವಿಶ್ವದರ್ಜೆಯ ಬೌಲಿಂಗ್ ಪ್ರದರ್ಶಿಸಿ ಮಿಂಚಿದರು.

Jasprit Bumrah Ends Wicket Drought with Golden Duck in Mumbai Indians vs Gujarat Titans IPL 2026

ಮೊದಲ ವಿಕೆಟ್‌ ಪಡೆದ ಬುಮ್ರಾ

ಈ ಸೀಸನ್‌ ಆರಂಭದಿಂದಲೂ ಕಳೆದ ಐದು ಪಂದ್ಯಗಳಲ್ಲಿ ಬುಮ್ರಾ ಅವರು ಒಂದೇ ಒಂದು ವಿಕೆಟ್‌ ಪಡೆದಿರಲಿಲ್ಲ. ಇದೀಗ ಈ ಚೊಚ್ಚಲ ವಿಕೆಟ್ ಭಾರತದ ಈ ಪ್ರಮುಖ ವೇಗಿಗೆ ಹೆಚ್ಚಿನ ಆತ್ಮವಿಶ್ವಾಸ ನೀಡುವುದರಲ್ಲಿ ಸಂಶಯವಿಲ್ಲ. ಐಪಿಎಲ್ 2026ರಲ್ಲಿ ಜಸ್ಪ್ರೀತ್ ಬುಮ್ರಾ ಮೊದಲ ಓವರ್ ಬೌಲಿಂಗ್ ಮಾಡಿದ್ದು ಇದೇ ಮೊದಲು. ಈವರೆಗೆ ಟ್ರೆಂಟ್ ಬೌಲ್ಟ್ ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸುತ್ತಿದ್ದರು.

ಬಳಿಕ ಹಾರ್ದಿಕ್ ಪಾಂಡ್ಯ ಅಥವಾ ದೀಪಕ್ ಚಹರ್ ಬೌಲಿಂಗ್ ಮಾಡುತ್ತಿದ್ದರು. ಬುಮ್ರಾ ಅವರಿಗೆ ಆರಂಭಿಕ ಓವರ್‌ಗಳಲ್ಲಿ ಬೌಲಿಂಗ್ ಮಾಡಲು ಅವಕಾಶ ಸಿಗದಿದ್ದುದು, ಅವರು ಪಂದ್ಯದಲ್ಲಿ ಬ್ಯಾಟರ್‌ಗಳ ಮೇಲೆ ಹೆಚ್ಚಿನ ಒತ್ತಡ ಹೇರಲು ಸಾಧ್ಯವಾಗದಿರಲು ಒಂದು ಪ್ರಮುಖ ಕಾರಣವಾಗಿತ್ತು.

7 ಬಾರಿ ಮೊದಲ ಓವರ್ ಬೌಲಿಂಗ್ ಮಾಡಿದ ಬುಮ್ರಾ

ಐಪಿಎಲ್ ಇತಿಹಾಸದಲ್ಲಿ ಜಸ್ಪ್ರೀತ್ ಬುಮ್ರಾ ಇನಿಂಗ್ಸ್‌ನ ಮೊದಲ ಓವರ್ ಬೌಲಿಂಗ್ ಮಾಡಿದ್ದು ಇದು 7ನೇ ಬಾರಿ. ಇದಕ್ಕೂ ಮೊದಲು ಅವರು 2014ರಲ್ಲಿ ಎರಡು ಬಾರಿ, 2018 ರಲ್ಲಿ ಮೂರು ಬಾರಿ ಮತ್ತು 2022ರಲ್ಲಿ ಒಂದು ಬಾರಿ ಮೊದಲ ಓವರ್ ಎಸೆದಿದ್ದರು. ಮತ್ತೊಂದು ವಿಶೇಷವೆಂದರೆ, ಐಪಿಎಲ್‌ನಲ್ಲಿ ಬರೋಬ್ಬರಿ 146 ಎಸೆತಗಳ ನಂತರ ಅವರಿಗೆ ಈ ವಿಕೆಟ್ ಲಭಿಸಿದೆ. ಇನ್ನು ಒಟ್ಟಾರೆ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ 114 ಎಸೆತಗಳ ಬಳಿಕ ಸಿಕ್ಕ ಮೊದಲ ಯಶಸ್ಸು ಇದಾಗಿದೆ.

ತಿಲಕ್ ವರ್ಮಾ ಅಬ್ಬರದ ಬ್ಯಾಟಿಂಗ್ ಪ್ರದರ್ಶನ

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ತಿಲಕ್ ವರ್ಮಾ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಗುಜರಾತ್ ಟೈಟಾನ್ಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬೌಲಿಂಗ್‌ನಲ್ಲಿ ಉತ್ತಮ ಆರಂಭ ಪಡೆದ ಜಿಟಿ, ಆರಂಭದಲ್ಲೇ ಮುಂಬೈ ತಂಡಕ್ಕೆ ಆಘಾತ ನೀಡಿತು. ಕಗಿಸೊ ರಬಾಡ ಅವರ ಮಾರಕ ದಾಳಿಗೆ ಸಿಲುಕಿ ಪದಾರ್ಪಣೆ ಪಂದ್ಯವಾಡುತ್ತಿದ್ದ ದನೀಶ್ ಮಾಲೇರ್ ಮತ್ತು ಅನುಭವಿ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಇಬ್ಬರೂ ಪೆವಿಲಿಯನ್ ಸೇರಿದರು.

ಸೂರ್ಯಕುಮಾರ್ ಯಾದವ್ ಕೇವಲ 15 ರನ್ ಗಳಿಸಿ ಔಟಾದ ನಂತರ, ಮುಂಬೈ ಇಂಡಿಯನ್ಸ್ ತಂಡಕ್ಕೆ ನಮನ್ ಧೀರ್ ಮತ್ತು ತಿಲಕ್ ವರ್ಮಾ ಆಸರೆಯಾದರು. ಇವರಿಬ್ಬರು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ನಮನ್ ಧೀರ್ 45 ರನ್ ಗಳಿಸಿ ಔಟಾದ ಬಳಿಕ, ತಿಲಕ್ ವರ್ಮಾ ಅವರು ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಸೇರಿ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರು. ಇವರಿಬ್ಬರ ಜೋಡಿ ತಂಡದ ಮೊತ್ತಕ್ಕೆ ಭರ್ಜರಿ 81 ರನ್‌ಗಳ ಕಾಣಿಕೆ ನೀಡಿತು.

101 ರನ್‌ ಸಿಡಿಸಿದ ತಿಲಕ್ ವರ್ಮಾ

ತಿಲಕ್ ವರ್ಮಾ ಕೇವಲ 45 ಎಸೆತಗಳಲ್ಲಿ ಅಜೇಯ 101 ರನ್‌ ಸಿಡಿಸಿ ಮಿಂಚಿದರು. ಇದು ಐಪಿಎಲ್‌ನಲ್ಲಿ ಅವರ ಚೊಚ್ಚಲ ಶತಕವಾಗಿದ್ದು, ಮುಂಬೈ ಇಂಡಿಯನ್ಸ್‌ ಪರ ಈ ಟೂರ್ನಿಯಲ್ಲಿ ದಾಖಲಾದ ಅತಿ ವೇಗದ ಜಂಟಿ ಶತಕ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಗುಜರಾತ್ ಟೈಟಾನ್ಸ್ ತಂಡವು 200 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ಹಾದಿಯಲ್ಲಿ ಆರಂಭಿಕ ಆಘಾತ ಅನುಭವಿಸಿತು. ಜಿಟಿ 15.5 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 100 ರನ್‌ಗಳನ್ನು ಕಲೆಹಾಕಿ ಹೀನಾಯ ಸೋಲನುಭವಿಸಿತು.

ಮುಂಬೈ ಇಂಡಿಯನ್ಸ್‌ಗೆ ಶರಣಾದ ಗುಜರಾತ್ ಟೈಟಾನ್ಸ್

ಮುಂಬೈ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಜಿಟಿ, ಪವರ್‌ಪ್ಲೇ ಮುಕ್ತಾಯದ ವೇಳೆಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಕೇವಲ 45 ರನ್ ಗಳಿಸಿತು. ಸಾಯಿ ಸುದರ್ಶನ್, ನಾಯಕ ಶುಭಮನ್ ಗಿಲ್ ಮತ್ತು ಜೋಸ್ ಬಟ್ಲರ್ ಅವರಂತಹ ದಿಗ್ಗಜ ಆಟಗಾರರು ಆರಂಭದಲ್ಲೇ ಪೆವಿಲಿಯನ್ ಸೇರಿದರು. ತಂಡದ ಪರ ವಾಷಿಂಗ್ಟನ್‌ ಸುಂದರ್ ಅತೀ ಹೆಚ್ಚು 26 ರನ್‌ ಸಿಡಿಸಿದರು. ಇವರನ್ನು ಬಿಟ್ಟರೆ ಉಳಿದವರೆಲ್ಲಾ 20 ರನ್‌ ಒಳಗೆ ವಿಕೆಟ್‌ ಒಪ್ಪಿಸಿದರು. ಕೊನೆಗೆ ತಂಡವು ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಮುಂಬೈ ಇಂಡಿಯನ್ಸ್‌ಗೆ ಶರಣಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+