ವಿರಾಟ್ ಕೊಹ್ಲಿ ಸರಳತೆಗೆ ಮನಸೋತ ಜೇಕಬ್ ಡಫಿ: ಆರ್‌ಸಿಬಿ ಡ್ರೆಸ್ಸಿಂಗ್ ರೂಮ್ ಸೀಕ್ರೆಟ್ ರಿವೀಲ್

ಭಾರತದ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರ ಸರಳತೆ ಹಾಗೂ ಕಾರ್ಯನಿಷ್ಠೆಯನ್ನು ನ್ಯೂಜಿಲೆಂಡ್ ವೇಗಿ ಜೇಕಬ್ ಡಫಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಪಟ್ಟಕ್ಕೇರಿದಾಗ ಕೊಹ್ಲಿ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ಡಫಿ, ಮುಂಬರುವ ಏಕದಿನ ಸರಣಿಯಲ್ಲಿ ಅವರ ವಿರುದ್ಧ ಆಡಲು ಕಾತರದಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿ ಆಕ್ಲೆಂಡ್‌ನಲ್ಲಿ ನವೆಂಬರ್ 4ರಿಂದ ಆರಂಭ ಆಗಲಿದೆ. ಈ ಹಿನ್ನೆಲೆಯಲ್ಲಿ ಜಿಮ್‌ನಲ್ಲಿ ಕೊಹ್ಲಿ ಅವರನ್ನು ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡ ಜೇಕಬ್ ಡಫಿ, ಕೊಹ್ಲಿ ಅವರ ನಡೆಯನ್ನು ಕೊಂಡಾಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Jacob Duffy Praises Team India Star Virat Kohli s Humility Eager to Face Him in India vs NZ ODIs

ಜೇಕಬ್ ಡಫಿ ಹೇಳಿದ್ದೇನು?

'ಭಾರತದಲ್ಲಿ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ, ಅವರು ಉತ್ತಮ ಸ್ಥಾನಮಾನ ಹೊಂದಿರುವ ವ್ಯಕ್ತಿ. ಆದರೂ ಅವರು ಅತ್ಯಂತ ನಮ್ರತೆಯಿಂದ ನಡೆದುಕೊಳ್ಳುತ್ತಾರೆ. ಐಪಿಎಲ್ ವೇಳೆ ಆರ್‌ಸಿಬಿ ತಂಡದಲ್ಲಿದ್ದ ವಿದೇಶಿ ಆಟಗಾರರನ್ನು ಅವರು ಬರಮಾಡಿಕೊಂಡ ರೀತಿ ಮತ್ತು ಎಲ್ಲರನ್ನೂ ಪ್ರೀತಿಯಿಂದ ನಡೆಸಿಕೊಂಡದ್ದು ಅತ್ಯದ್ಭುತವಾಗಿತ್ತು,' ಎಂದು ಕ್ರಿಕ್‌ಇನ್ಫೋಗೆ ನೀಡಿದ ಸಂದರ್ಶನದಲ್ಲಿ ಡಫಿ ಹೇಳಿದ್ದಾರೆ.

ಕೊಹ್ಲಿ ಜೊತೆ ಕಳೆದ ಕ್ಷಣವನ್ನು ನೆನಪಿಸಿಕೊಂಡ ಡಫಿ

ಐಪಿಎಲ್ ಅಭ್ಯಾಸದ ಅವಧಿಯಲ್ಲಿನ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಅಭ್ಯಾಸದ ಬಗ್ಗೆ ವಿವರಿಸಿದ ಡಫಿ, 'ಕೊಹ್ಲಿ ಅವರ ಶ್ರಮದ ಗುಣ ಪ್ರತಿಯೊಬ್ಬರಿಗೂ ಪ್ರೇರಣೆ. ನೆಟ್ಸ್‌ನಲ್ಲಿ ಸದಾ ಅವರೇ ಮೊದಲ ಬ್ಯಾಟರ್ ಆಗಿ ಕ್ರೀಸ್‌ಗೆ ಬಂದರೆ, ನಾನು ಮೊದಲ ಬೌಲರ್ ಆಗಿ ಎಸೆಯುತ್ತಿದ್ದೆ. ಹೀಗಾಗಿ ನಾವು ನೆಟ್ಸ್‌ನಲ್ಲಿ ಸಾಕಷ್ಟು ಬಾರಿ ಮುಖಾಮುಖಿಯಾಗಿದ್ದೇವೆ. ನನ್ನ ಬೌಲಿಂಗ್ ಅನ್ನು ಅವರು ಹತ್ತಿರದಿಂದ ನೋಡಿರುವುದರಿಂದ ಏಕದಿನ ಸರಣಿಗೆ ಅವರ ಸಿದ್ಧತೆಯೂ ಚೆನ್ನಾಗಿಯೇ ಇರಲಿದೆ,' ಎಂದು ಹೇಳಿ ಗಮನ ಸೆಳೆದಿದ್ದಾರೆ.

ಜೇಕಬ್ ಡಫಿಗೆ ಯಾವ ಸವಾಲೆಂದರೆ ಇಷ್ಟ?

ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ 4 ವಿಕೆಟ್ ಪಡೆದು ತಂಡದ 87 ರನ್‌ಗಳ ಭರ್ಜರಿ ಗೆಲುವಿಗೆ ಕಾರಣರಾಗಿದ್ದ ಡಫಿ, ಏಕದಿನ ಸರಣಿಯ ಸವಾಲಿಗೆ ಸಿದ್ಧರಾಗಿದ್ದಾರೆ. ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡುವುದು ಹಾಗೂ ಪಂದ್ಯದ ಕೊನೆಯ ಓವರ್‌ಗಳಲ್ಲಿ ಬೌಲಿಂಗ್ ಮಾಡುವುದು ತಮಗೆ ಇಷ್ಟವಾದ ಸವಾಲು ಎಂದು ಅವರು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್‌ಗೆ ಇನ್ನು ಒಂದು ವರ್ಷ ಮಾತ್ರ ಬಾಕಿ ಇದ್ದು, ಮುಂಬರುವ ಪಂದ್ಯಗಳು ಪ್ರತಿಯೊಬ್ಬ ಆಟಗಾರನಿಗೂ ಮುಖ್ಯವಾಗಿವೆ. ಬಾಲ್ಯದಲ್ಲಿ 2015 ಹಾಗೂ 2019ರ ವಿಶ್ವಕಪ್ ಪಂದ್ಯಗಳನ್ನು ನೋಡಿ ಬೆಳೆದ ತಮಗೆ ವಿಶ್ವಕಪ್‌ನಲ್ಲಿ ಆಡುವುದು ದೊಡ್ಡ ಕನಸಾಗಿದೆ ಅಂತಲೂ ಹೇಳಿದ್ದಾರೆ.

ನ್ಯೂಜಿಲೆಂಡ್ ತಂಡದ ಮುಖ್ಯ ಆದ್ಯತೆಗಳಲ್ಲಿ ವಿಶ್ವಕಪ್ ಒಂದಾಗಿದ್ದು, ಅಂತಿಮ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಭಾರತದ ವಿರುದ್ಧದ ಈ ಏಕದಿನ ಸರಣಿಯು ಪ್ರಮುಖ ವೇದಿಕೆಯಾಗಲಿದೆ ಎಂದು ಜೇಕಬ್ ಡಫಿ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಐಪಿಎಲ್‌ನಲ್ಲಿ ಕಳೆದ ಬಾರಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಚಾಂಪಿಯನ್ ಆಗಲು ಇವರ ಪಾತ್ರ ಪ್ರಮುಖವಾಗಿದೆ. ಅದೇ ವೇಳೆ ವಿರಾಟ್ ಕೊಹ್ಲಿ ಅವರ ಜೊತೆ ಕಳೆದ ಸಮಯದ ಬಗ್ಗೆ ವಿವರಿಸಿ ಗಮನ ಸೆಳೆದಿದ್ದಾರೆ.

ಜೊತೆಗೆ ಅವರ ವಿರುದ್ಧ ಬೌಲಿಂಗ್ ಮಾಡಲು ತಾನು ಹೇಗೆ ಸಿದ್ಧನಾಗಿದ್ದೇನೆಯೋ, ಅದೇ ರೀತಿ ಕೊಹ್ಲಿ ಸಹ ಸಜ್ಜಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಮೈದಾನದಲ್ಲಿ ಇವರಿಬ್ಬರ ನಡುವೆ ಯಾವ ರೀತಿ ಪ್ರದರ್ಶನ ನಡೆಯಲಿದೆ ಎಂಬುದನ್ನು ನೋಡಲು ಅಭಿಮಾನಿಗಳಂತೂ ಕಾತರದಿಂದ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+