ಐಪಿಎಲ್‌ನಲ್ಲಿ ಬೌಂಡರಿ, ಸಿಕ್ಸರ್‌ಗಳಿಂದಲೇ ಶತಕ ಪೂರೈಸಿದ ಸ್ಫೋಟಕ ಬ್ಯಾಟ್ಸ್‌ಮನ್‌ಗಳಿವರು: ಆರ್‌ಸಿಬಿಯವರು ಎಷ್ಟು ಜನ?
IPL 2025: ವಿಶ್ವದಲ್ಲೇ ಅತ್ಯಂತ ದೊಡ್ಡ ಲೀಗ್ ಅಂದ್ರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್. ಸಾಮಾನ್ಯವಾಗಿ ಇದೇ ಐಪಿಎಲ್‌ನಲ್ಲಿ ತುಂಬಾ ಜನ ಅರ್ಧ ಶತಕ, ಶತಕಗಳನ್ನು ಸಿಡಿಸಿದ್ದಾರೆ. ಆದರೆ, ಬರೀ ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕ ಈ ಸಾಧನೆ ಮಾಡಿದವರು ಕೆಲವೇ ಕೆಲವರು ಮಾತ್ರ. ಹಾಗಾದ್ರೆ ಯಾರೆಲ್ಲ ಈ ಸಾಲಿನಲ್ಲಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಇದೀಗ ಐಪಿಎಲ್ 2025 ಅಂದರೆ 18ನೇ ಆವೃತ್ತಿ ಅದ್ಧೂರಿಯಾಗಿ ನಡೆಯುತ್ತಿದೆ. ಈ ಆವೃತ್ತಿ ಸೇರಿದಂತೆ ಇನ್ನೂ ಯಾವೆಲ್ಲಾ ಸೀಸನ್‌ಗಳಲ್ಲಿ ಯಾರು ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕ ಅರ್ಧ ಶತಕ ಹಾಗೂ ಶತಕ ಸಿಡಿಸಿದ್ದಾರೆ ಎನ್ನುವ ಸಂಪೂರ್ಣ ಪಟ್ಟಿ ಇಲ್ಲಿದೆ.

ಈ ಸಾಧನೆ ಮಾಡಿದವರಲ್ಲಿ ಕ್ರಿಸ್ ಗೇಲ್ (ಆರ್‌ಸಿಬಿ), ಬ್ರೆಂಡನ್ ಮೆಕಲಮ್ (ಕೆಕೆಆರ್), ಅಭಿಷೇಕ್ ಶರ್ಮಾ (ಎಸ್‌ಆರ್‌ಎಚ್), ಎಬಿ ಡಿವಿಲಿಯರ್ಸ್ (ಆರ್‌ಸಿಬಿ), ಯಶಸ್ವಿ ಜೈಸ್ವಾಲ್ (ರಾಜಸ್ಥಾನ್ ರಾಯಲ್ಸ್), ಸನತ್ ಜಯಸೂರ್ಯ (ಮುಂಬೈ ಇಂಡಿಯನ್ಸ್), ರಿಷಭ್ ಪಂತ್ ಮತ್ತು ಕ್ವಿಂಟನ್ ಡಿ ಕಾಕ್ ಅವರು ಇದ್ದಾರೆ.
ಐಪಿಎಲ್ 2008ರಿಂದ ಆರಂಭವಾಗಿದ್ದು, ಇಲ್ಲಿಗೆ 18 ಸೀಸನ್‌ವರೆಗೂ ನಡೆದುಕೊಂಡು ಬಂದಿದೆ. ಇಲ್ಲಿಯವರೆಗೂ ಅಂದರೆ 2025ರ ವೇಳೆಗೆ ಕೇವಲ 8 ಸ್ಫೋಟಕ ಬ್ಯಾಟ್ಸ್‌ರ್‌ಗಳು ಮಾತ್ರ ಈ ಸಾಧನೆ ಮಾಡಿದ ಕೀರ್ತಿ ಪಡೆದುಕೊಂಡಿದ್ದಾರೆ.
* ಕ್ರಿಸ್ ಗೇಲ್: ಸಿಕ್ಸರ್ ಮತ್ತು ಬೌಂಡರಿಗಳಿಂದ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಆರ್‌ಸಿಬಿಯ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಐಪಿಎಲ್ 2013ರಲ್ಲಿ ಆಡಿದ 175 ರನ್ ಇನ್ನಿಂಗ್ಸ್‌ನಲ್ಲಿ ಸಿಕ್ಸರ್ ಮತ್ತು ಬೌಂಡರಿಗಳಿಂದ 156 ರನ್ ಕಲೆಹಾಕಿದ್ದರು. ಗಳಿಸಿದ್ದರು. ತಮ್ಮ ಇನ್ನಿಂಗ್ಸ್‌ನಲ್ಲಿ ಒಟ್ಟು 13 ಬೌಂಡರಿ ಮತ್ತು 17 ಸಿಕ್ಸರ್‌ಗಳನ್ನು ಬಾರಿಸಿ ಗಮನ ಸೆಳೆದಿದ್ದರು. 2012 ರ ಐಪಿಎಲ್ನಲ್ಲಿಯೂ 128 ರನ್ಗಳ ಇನ್ನಿಂಗ್ಸ್‌ನಲ್ಲಿ ಬೌಂಡರಿಗಳ ಮೂಲಕ 106 ರನ್ ಚಚ್ಚಿದ್ದರು.
ಈ ವೇಳೆ ಗೇಲ್ 7 ಬೌಂಡರಿ ಮತ್ತು 13 ಸಿಕ್ಸರ್‌ಗಳನ್ನು ಬಾರಿಸಿದ್ದರು. ಅಲ್ಲದೆ, 2015 ರ ಐಪಿಎಲ್ನಲ್ಲಿಯೂ 115 ರನ್ಗಳ ಇನ್ನಿಂಗ್ಸ್ ಆಡಿದ್ದ ಅವರು ಬೌಂಡರಿಗಳಿಂದಲೇ ಶತಕ ಬಾರಿಸಿದ್ದರು. ಈ ವೇಳೆ ಅವರು 7 ಬೌಂಡರಿ ಮತ್ತು 12 ಸಿಕ್ಸರ್‌ಗಳನ್ನು ಚಚ್ಚಿದ್ದರು.
* ಬ್ರೆಂಡನ್ ಮೆಕಲಮ್: ಈ ಸಾಧನೆಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಂಡನ್ ಮೆಕಲಮ್ 2008ರ ಐಪಿಎಲ್ನಲ್ಲಿ 158 ರನ್ಗಳ ಇನ್ನಿಂಗ್ಸ್ ಆಡಿದ್ದರು. ಈ ವೇಳೆ ಬೌಂಡರಿಗಳಿಂದ 118 ರನ್ ಗಳಿಸಿದ್ದರು. ಮೆಕಲಮ್ ಆರ್‌ಸಿಬಿ ವಿರುದ್ಧದ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 13 ಸಿಕ್ಸರ್‌ಗಳನ್ನು ಬಾರಿಸಿದ್ದರು.
* ಅಭಿಷೇಕ್ ಶರ್ಮಾ: ಐಪಿಎಲ್ 2025ರಲ್ಲಿ ಇತ್ತೀಚೆಗಷ್ಟೇ ಪಂಜಾಬ್ ಕಿಂಗ್ಸ್ ವಿರುದ್ಧ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮಾಡಿ ಬರೋಬ್ಬರಿ ಒಬ್ಬರೇ 141 ರನ್ ಕಲೆಹಾಕಿದ್ದರು. ಈ ಮೂಲಕ ಸಿಕ್ಸರ್ ಮತ್ತು ಬೌಂಡರಿಗಳಿಂದ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಅವರ 141 ರನ್ ಇನ್ನಿಂಗ್ಸ್‌ನಲ್ಲಿ ಬೌಂಡರಿಗಳಿಂದ 116 ರನ್ ಗಳಿಸಿದರು. ಈ ವೇಳೆ 14 ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಸಿಡಿಸಿ ಎಆರ್‌ಎಸ್ ತಂಡವನ್ನು ಗೆಲುವಿನತ್ತ ಕೊಡೋಯ್ದರು. ಈ ಮೂಲಕ ಶಾಕ್‌ನಲ್ಲಿದ್ದ ಕಾವ್ಯ ಮಾರನ್ ಅವರ ಮುಖದಲ್ಲಿ ನಗು ಮೂಡುವಂತೆ ಮಾಡಿದರು.
* ಎಬಿ ಡಿವಿಲಿಯರ್ಸ್: ಮಿಸ್ಟರ್ 360 ಡಿಗ್ರಿ ಅಂತಲೇ ಪ್ರಸಿದ್ಧಿಯಾಗಿರುವ ಎಬಿ ಡಿವಿಲಿಯರ್ಸ್ 2016ರಲ್ಲಿ 129 ರನ್ಗಳ ಇನ್ನಿಂಗ್ಸ್ ಆಡಿದ್ದರು. 10 ಬೌಂಡರಿ ಮತ್ತು 12 ಸಿಕ್ಸರ್‌ಗಳ ಮೂಲಕ 112 ರನ್ ಕಲೆಹಾಕಿದ್ದರು. 2015ರ ಐಪಿಎಲ್‌ನಲ್ಲಿಯೂ 133 ರನ್ ಕಲೆಹಾಕಿ ಇನ್ನಿಂಗ್ಸ್‌ನಲ್ಲಿ ಬೌಂಡರಿಗಳ ಮೂಲಕ 100 ರನ್ ಗಳಿಸಿದ್ದರು. ಆ ಇನ್ನಿಂಗ್ಸ್‌ನಲ್ಲಿ ಅವರು 19 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಸಿಡಿಸಿದ್ದರು.
* ಯಶಸ್ವಿ ಜೈಸ್ವಾಲ್: ಆರ್‌ಆರ್ ತಂಡದ ಯಶಸ್ವಿ ಜೈಸ್ವಾಲ್ ಸಹ ಐಪಿಎಲ್ 2023ರಲ್ಲಿ 124 ರನ್ಗಳ ಇನ್ನಿಂಗ್ಸ್ ಆಡಿದ್ದರು. ಈ ವೇಳೆ 16 ಬೌಂಡರಿ ಮತ್ತು 8 ಸಿಕ್ಸರ್‌ಗಳ ಮೂಲಕ 112 ರನ್ ಕಲೆಹಾಕಿದ್ದರು.
2023ರಲ್ಲಿ 124 ರನ್ಗಳ ಇನ್ನಿಂಗ್ಸ್ ಆಡಿದ್ದರು. ಈ ವೇಳೆ 16 ಬೌಂಡರಿ ಮತ್ತು 8 ಸಿಕ್ಸರ್‌ಗಳ ನೆರವಿನಿಂದ 112 ರನ್ ಕಲೆಹಾಕಿದ್ದರು.
* ಸನತ್ ಜಯಸೂರ್ಯ: 2008ರ ಐಪಿಎಲ್‌ನಲ್ಲಿ ಸನತ್ ಜಯಸೂರ್ಯ 114 ರನ್ಗಳ ಇನ್ನಿಂಗ್ಸ್ ಆಡಿದ್ದರು. ಈ ವೇಳೆ ಬೌಂಡರಿಗಳ ಮೂಲಕ 102 ರನ್ ಗಳಿಸಿದ್ದರು. ಆ ಇನ್ನಿಂಗ್ಸ್‌ನಲ್ಲಿ ಜಯಸೂರ್ಯ 9 ಬೌಂಡರಿ ಮತ್ತು 11 ಸಿಕ್ಸರ್‌ಗಳನ್ನು ಚಚ್ಚಿದ್ದರು.
* ರಿಷಭ್ ಪಂತ್: ಐಪಿಎಲ್ 2018ರ ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ 128 ರನ್ಗಳ ಇನ್ನಿಂಗ್ಸ್ ಆಡಿದ್ದರು. ಈ ವೇಳೆ ಕೇವಲ ಬೌಂಡರಿಗಳಿಂದಲೇ 102 ರನ್ ಗಳಿಸಿದ್ದರು. ಆ ಇನ್ನಿಂಗ್ಸ್‌ನಲ್ಲಿ ಪಂತ್ 15 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಬಾರಿಸಿದ್ದರು.
* ಕ್ವಿಂಟನ್ ಡಿ ಕಾಕ್: ಐಪಿಎಲ್ 2022 ರಲ್ಲಿ ಕ್ವಿಂಟನ್ ಡಿ ಕಾಕ್ 140 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಈ ವೇಳೆ ಬೌಂಡರಿಗಳಿಂದ 100 ರನ್ ಕಲೆಹಾಕಿದ್ದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 10 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಬಾರಿಸಿದ್ದರು. ಐಪಿಎಲ್‌ನಲ್ಲಿ ಸಿಂಗಲ್, ಡಬಲ್, ತ್ರಿಬಲ್ ರನ್ ಓಡಿಕೊಂಡು ಅರ್ಧ ಶತಕ ಹಾಗೂ ಶತಕ ಮಾಡಿದ ಆಟಗಾರರು ತುಂಬಾ ಜನ ಇದ್ದಾರೆ. ಆದರೆ ಬರೀ ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕವೇ ಈ ಸಾಧನೆ ಮಾಡಿದವರು ಈ ಎಂಟು ಆಟಗಾರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಾಧನೆ ಪಟ್ಟಿಗೆ ಬೇರೆ ಆಟಗಾರರು ಸೇರಿದರೂ ಸೇರಬಹುದು, ಕಾದುನೋಡಬೇಕಿದೆ.
-
IPL 2026: ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯ, ಮಾರ್ಚ್ 28ಕ್ಕೆ ಬೆಂಗಳೂರಿನ ಯಾವ ರಸ್ತೆಗಳೆಲ್ಲ ಬಂದ್ ಆಗಲಿದೆ? ಇಲ್ಲಿದೆ ಮಾಹಿತಿ -
IPL 2026: ಆರ್‌ಸಿಬಿ-ಎಸ್‌ಆರ್‌ಎಚ್ ಪಂದ್ಯದ ಟಿಕೆಟ್ ಮಾರಾಟ ಶುರು; ಇಲ್ಲಿವೆ ಬುಕಿಂಗ್ ಮಾಡುವ ವಿಧಾನಗಳು -
ಐಪಿಎಲ್ಗೂ ಮುನ್ನ ಆರ್‌ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
RCB Yash Dayal: ಐಪಿಎಲ್ 2026ರ ಸೀಸನ್ನಿಂದ ಸ್ಟಾರ್ ವೇಗಿ ಯಶ್ ದಯಾಳ್ ಔಟ್; ಆರ್‌ಸಿಬಿ ಅಧಿಕೃತ ಮಾಹಿತಿ -
Nandini: ಆರ್‌ಸಿಬಿ ಜೊತೆ ರಾರಾಜಿಸಲಿದೆ ನಮ್ಮ ಹೆಮ್ಮೆಯ 'ನಂದಿನಿ': ಐಪಿಎಲ್-2026ರಲ್ಲಿ ಕನ್ನಡಿಗರಿಗೆ ಡಬಲ್ ಧಮಾಕಾ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು












Click it and Unblock the Notifications