England Captain: ಐಪಿಎಲ್‌ನಿಂದ ಬ್ಯಾನ್ ಆದ ಆಟಗಾರನಿಗೆ ನಾಯಕತ್ವ ನೀಡಿದ ಇಂಗ್ಲೆಂಡ್‌

ಐಪಿಎಲ್‌ನಿಂದ ಎರಡು ವರ್ಷ ಬ್ಯಾನ್ ಆಗಿರುವ ಇಂಗ್ಲೆಂಡ್ ಸ್ಫೋಟಕ ಬ್ಯಾಟರ್ ಗೆ ಅದೃಷ್ಟ ಒಲಿದಿದೆ. ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪಾಲಾಗಿದ್ದ ಹ್ಯಾರಿ ಬ್ರೂಕ್ ಬಳಿಕ ವೈಯಕ್ತಿಕ ಕಾರಣದಿಂದ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದರು. ಇದೀಗ ಅವರು ಇಂಗ್ಲೆಂಡ್ ಏಕದಿನ ಮತ್ತು ಟಿ20 ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಹ್ಯಾರಿ ಬ್ರೂಕ್ ಅವರನ್ನು ಇಂಗ್ಲೆಂಡ್ ಏಕದಿನ ಮತ್ತು ಟಿ20 ಕ್ರಿಕೆಟ್ ತಂಡದ ನಾಯಕನಾಗಿ ಘೋಷಣೆ ಮಾಡಿದೆ. 2022 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ, ಬ್ರೂಕ್ ಅವರನ್ನು ಭವಿಷ್ಯದ ಸಂಭಾವ್ಯ ನಾಯಕ ಎಂದು ಹೇಳಲಾಗಿತ್ತು. ಟೆಸ್ಟ್, ಏಕದಿನ ಮತ್ತು ಟಿ20 ಮಾದರಿಯಲ್ಲಿ ಇಂಗ್ಲೆಂಡ್ ಅನ್ನು ಪ್ರತಿನಿಧಿಸುವ ಕೆಲವೇ ಬ್ಯಾಟ್ಸ್‌ಮನ್‌ಗಳಲ್ಲಿ ಅವರು ಒಬ್ಬರಾಗಿದ್ದಾರೆ.

ipl ban harry brook replaces jos buttler as england white ball captain

ಕಳೆದ ವರ್ಷ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಹ್ಯಾರಿ ಬ್ರೂಕ್ ಅವರನ್ನು ಜೋಸ್ ಬಟ್ಲರ್ ಅವರ ಉಪನಾಯಕ ಎಂದು ಘೋಷಣೆ ಮಾಡಿತ್ತು. ಬಟ್ಲರ್ ಅನುಪಸ್ಥಿತಿಯಲ್ಲಿ, ಬ್ರೂಕ್ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಅನ್ನು ಮುನ್ನಡೆಸಿದರು. 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೀನಾಯ ಪ್ರದರ್ಶನ ನೀಡಿದ ಬಳಿಕ ಜೋಸ್ ಬಟ್ಲರ್ ನಾಯಕನ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಮಾಡಿದರು.

26 ವರ್ಷ ವಯಸ್ಸಿನ ಹ್ಯಾರಿ ಬ್ರೂಕ್ ಇಂಗ್ಲೆಂಡ್ ಪರ 70 ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 2020ರಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಗೆದ್ದಾಗ ಹ್ಯಾರಿ ಬ್ರೂಕ್ ತಂಡದಲ್ಲಿದ್ದರು. ಬಟ್ಲರ್ ಬಳಿಕ ಬೆನ್ ಸ್ಟೋಕ್ಸ್ ನಾಯಕರಾಗುವ ಬಗ್ಗೆ ಕೆಲವು ಮಾತುಗಳು ಕೇಳಿಬಂದಿದ್ದವು, ಆದರೆ ಫಿಟ್ನೆಸ್ ಸಮಸ್ಯೆಗಳಿರುವ ಕಾರಣ, ನವೆಂಬರ್ 2023 ರಿಂದ ಇಂಗ್ಲೆಂಡ್ ಪರ ಏಕದಿನ ಮತ್ತು ಟಿ20 ಪಂದ್ಯವನ್ನು ಆಡದ ಬೆನ್‌ಸ್ಟೋಕ್ಸ್‌ರನ್ನು ಆಯ್ಕೆಗೆ ಪರಿಗಣಿಸಿಲ್ಲ.

ಹ್ಯಾರಿ ಬ್ರೂಕ್ ಹೇಳಿದ್ದೇನು?

ತಮಗೆ ನಾಯಕತ್ವದ ಜವಾಬ್ದಾರಿ ಸಿಕ್ಕ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹ್ಯಾರಿ ಬ್ರೂಕ್, ಇಂಗ್ಲೆಂಡ್ ತಂಡದ ನಾಯಕನಾಗಿರುವುದು ನಿಜವಾದ ಗೌರವ. ನಾನು ವಾರ್ಫೆಡೇಲ್‌ನ ಬರ್ಲಿಯಲ್ಲಿ ಕ್ರಿಕೆಟ್ ಆಡುವ ಬಾಲ್ಯದಿಂದಲೂ, ಯಾರ್ಕ್‌ಷೈರ್ ಅನ್ನು ಪ್ರತಿನಿಧಿಸುವ, ಇಂಗ್ಲೆಂಡ್ ಪರ ಆಡುವ ಮತ್ತು ಬಹುಶಃ ಒಂದು ದಿನ ತಂಡವನ್ನು ಮುನ್ನಡೆಸುವ ಕನಸು ಕಂಡಿದ್ದೆ. ಈಗ ಅದು ನನಸಾಗುತ್ತಿದೆ ಎಂದು ಹೇಳಿದ್ದಾರೆ.

ನನ್ನ ಕುಟುಂಬ, ತರಬೇತುದಾರರು ನನ್ನನ್ನು ಪ್ರತಿ ಹಂತದಲ್ಲೂ ಬೆಂಬಲಿಸಿದ್ದಾರೆ ಅವರಿಗೆ ತುಂಬಾ ಧನ್ಯವಾದ. ಅವರು ನನ್ನನ್ನು ನಂಬಿದ್ದರಿಂದಲೇ ನಾನು ಇಂದು ಈ ಹಂತಕ್ಕೆ ಬೆಳೆದಿದ್ದೇನೆ. ಈ ದೇಶದಲ್ಲಿ ತುಂಬಾ ಪ್ರತಿಭಾವಂತರಿದ್ದಾರೆ, ತಂಡವನ್ನು ಮುನ್ನಡೆಸಲು ರಣಿ, ವಿಶ್ವಕಪ್ ಮತ್ತು ಪ್ರಮುಖ ಪಂದ್ಯಾವಳಿಗಳನ್ನು ಗೆಲ್ಲುವತ್ತ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ತಂಡಕ್ಕಾಗಿ ಎಲ್ಲಾ ರೀತಿಯ ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+