ಐಪಿಎಲ್‌ ಇತಿಹಾಸದಲ್ಲೇ ಮೊದಲು.. ಸಿಎಸ್‌ಕೆಗೆ ಹಾರ್ದಿಕ್ ಪಾಂಡ್ಯ.. ಮುಂಬೈಗೆ ದುಬೆ, ಬ್ರೆವಿಸ್.. ಡೀಲ್ ಆದ್ರೆ ಯಾರಿಗೆ ಅನುಕೂಲ?

IPL 2027: ಈಗಾಗಲೇ ಐಪಿಎಲ್‌ 2026ನೇ ಸೀಸನ್ ಮುಗಿದಿದ್ದು, ಈ ವೇಳೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನೂ 2027ರ ಆವೃತ್ತಿ ಆರಂಭಕ್ಕೆ ತುಂಬಾ ಸಮಯ ಇರುವಾಗಲೇ ಇಂಡಿಯನ್ ಪ್ರೀಮಿಯರ್‌ ಲಿಂಗ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್‌ ನಡುವೆ ಪ್ರಮುಖ ಆಟಗಾರರ ಟ್ರೇಡ್ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ ಎನ್ನುವ ಬಿಗ್ ಅಪ್ಡೇಟ್‌ ಹೊರಬಿದ್ದಿದೆ. ಇದು ಕ್ರಿಕೆಟ್‌ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪ್ರಮುಖ ಆಟಗಾರರ ಟ್ರೇಡ್ ಒಪ್ಪಂದ ನಡೆಯುವ ಸಾಧ್ಯತೆಯಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮಾಹಿತಿ ಪ್ರಕಾರ, ಸಿಎಸ್‌ಕೆ ತಂಡದ ಶಿವಂ ದುಬೆ ಮತ್ತು ಡೆವಾಲ್ಡ್ ಬ್ರೆವಿಸ್ ಬದಲಿಗೆ ಮುಂಬೈ ಇಂಡಿಯನ್ಸ್ ತಂಡವು ತನ್ನ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಬಿಟ್ಟುಕೊಡಲು ಮುಂದಾಗಿದೆ ಎಂದು ತಿಳಿದುವಂದಿದೆ.

IPL 2027 Trade Buzz Hardik Pandya to CSK Shivam Dube And Dewald Brevis to Mumbai Indians Viral

ಭಾರಿ ಚರ್ಚೆಗೆ ಕಾರಣವಾದ ಈ ಟ್ರೇಡ್ ವಿಚಾರ

ಇದೀಗ ಈ ಟ್ರೇಡ್ ಒಪ್ಪಂದದ ವಿಚಾರ ಐಪಿಎಲ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಒಂದು ವೇಳೆ ಈ ಡೀಲ್ ನಿಜವಾಗಿಯೂ ನಡೆದರೆ ಯಾವ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ ಎಂಬುದರ ಬಗ್ಗೆ ಈಗಾಗಲೇ ಕ್ರಿಕೆಟ್ ವಲಯದಲ್ಲಿ ಗುಸುಗುಸು ಚರ್ಚೆ ಆರಂಭವಾಗಿದೆ. ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸಾಂಪ್ರದಾಯಿಕ ವೈರಿಗಳಂತೆ ಮುಖಾಮುಖಿ ಆಗುತ್ತಾ ಬಂದಿವೆ.

ಆದರೆ ಕಳೆದ ಮೂರು ವರ್ಷಗಳಿಂದ ಈ ಎರಡೂ ತಂಡಗಳಿಗೆ ಸಾಲು ಸಾಲು ಕಠಿಣ ಪರೀಕ್ಷೆಗಳು ಎದುರಾಗುತ್ತಲಿವೆ. ಅದರಲ್ಲೂ ವಿಶೇಷವಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ತಂಡಕ್ಕೆ ನಾಯಕನನ್ನಾಗಿ ಕರೆತಂದ ದಿನದಿಂದಲೂ ಆ ಫ್ರಾಂಚೈಸಿಗೆ ಭಾರಿ ಹಿನ್ನಡೆ ಆಗುತ್ತಲಿದೆ.

ನಿರೀಕ್ಷಿತ ಪ್ರದರ್ಶನ ನೀಡದ ಹಾರ್ದಿಕ್ ಪಂಡ್ಯ

ಹಾರ್ದಿಕ್ ಪಾಂಡ್ಯ ಅವರಿಂದ ಕಳೆದ 3 ಐಪಿಎಲ್ ಸೀಸನ್‌ಗಳಲ್ಲಿ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ. ಇದೇ ಕಾರಣದಿಂದಾಗಿ ಮುಂಬೈ ಇಂಡಿಯನ್ಸ್‌ ಅವರನ್ನು ಕೈಬಿಡಲು ನಿರ್ಧರಿಸಿದ್ದು, ಹೊಸ ನಾಯಕನನ್ನು ಕರೆತರಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಇನ್ನೂ ಈ ತಂಡದ ಮುಂದಿನ ನಾಯಕತ್ವದ ರೇಸ್‌ನಲ್ಲಿ ತಿಲಕ್ ವರ್ಮಾ ಅವರ ಹೆಸರು ಮುಂಚೂಣಿಯಲ್ಲಿದೆ.

ಯಾವೆಲ್ಲಾ ಫ್ರಾಂಚೈಸಿಗಳ ಜೊತೆ ಮಾತುಕತೆ?

ಆದರೆ ಹಾರ್ದಿಕ್ ಪಾಂಡ್ಯ ಅವರನ್ನು ನೇರವಾಗಿ ಬಿಡುಗಡೆ ಮಾಡುವುದಕ್ಕಿಂತ ಟ್ರೇಡ್ ಮೂಲಕ ಬೇರೆ ತಂಡಕ್ಕೆ ಬಿಟ್ಟುಕೊಟ್ಟರೆ ಅದು ಮುಂಬೈ ಇಂಡಿಯನ್ಸ್‌ಗೆ ಭಾರಿ ಲಾಭ ಆಗಲಿದೆ. ಈ ಮೂಲಕ ಹಾರ್ದಿಕ್ ಅವರಿಗೆ ಸಮಾನವಾದ ಸಾಮರ್ಥ್ಯವಿರುವ ಆಟಗಾರನನ್ನು ಪಡೆಯಲು ಸಾಧ್ಯವಾಗುತ್ತದೆ. ಈಗಾಗಲೇ ಮುಂಬೈ ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಸೇರಿದಂತೆ ಹಲವು ತಂಡಗಳೊಂದಿಗೆ ಮಾತುಕತೆ ನಡೆಸಿದೆ ಎನ್ನುವ ವಿಚಾರ ಬಹಿರಂಗವಾಗಿದೆ.

ಅದರಲ್ಲೂ ರಾಜಸ್ಥಾನ್ ರಾಯಲ್ಸ್ ಯಶಸ್ವಿ ಜೈಸ್ವಾಲ್ ಅವರನ್ನು ಬಿಟ್ಟುಕೊಡಲು ಮುಂದಾಯಿತು. ಕೆಕೆಆರ್ ರಿಂಕು ಸಿಂಗ್ ಅವರನ್ನು ನೀಡಲು ಸಿದ್ಧವಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಅಕ್ಷರ್ ಪಟೇಲ್ ಹಾಗೂ ಪೃಥ್ವಿ ಶಾ ಅವರನ್ನು ಬಿಟ್ಟುಕೊಡಲು ತಯಾಗಿತ್ತು. ಆದರೆ ಸಿಎಸ್‌ಕೆ ತಂಡವು ಶಿವಂ ದುಬೆ, ಡೆವಾಲ್ಡ್ ಬ್ರೇವಿಸ್, ಖಲೀಲ್ ಅಹಮದ್ ಮತ್ತು ಅಂಶುಲ್ ಕಂಬೋಜ್ ಅವರಲ್ಲಿ ಒಬ್ಬರನ್ನು ಬಿಟ್ಟುಕೊಡಲು ನಿರ್ಧರಿಸಿದೆ ಎನ್ನಲಾಗಿದೆ.

ಸಿಎಸ್‌ಕೆ ಸೇರಲು ಮುಂದಾದ್ರಾ ಹಾರ್ದಿಕ್ ಪಾಂಡ್ಯ?

ಹಾರ್ದಿಕ್ ಪಾಂಡ್ಯ ಸಹ ಸಿಎಸ್‌ಕೆ ತಂಡಕ್ಕೆ ಸೇರ್ಪಡೆ ಆಗಲು ಆಸಕ್ತಿ ತೋರಿದ್ದಾರೆ. ಅಂತಿಮವಾಗಿ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್‌ಕೆ ನಡುವೆ ಟ್ರೇಡ್ ಡೀಲ್ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಟ್ರೇಡ್‌ ಮೂಲಕ ಸಿಎಸ್‌ಕೆಗೂ ಭಾರಿ ಲಾಭ ಸಿಗಲಿದೆ. ಪ್ರಸ್ತುತ ಹಾರ್ದಿಕ್ ಅವರಿಗೆ 32 ವರ್ಷ ವಯಸ್ಸಾಗಿದ್ದು, ಅವರು ಇನ್ನೂ 5 ರಿಂದ 6 ಆವೃತ್ತಿಗಳ ಕಾಲ ಐಪಿಎಲ್‌ನಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದಾರೆ.

ಹಾರ್ದಿಕ್ ಪಾಂಡ್ಯ 'ತ್ರೀ-ಡಿ' ಅಂದರೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಾ ಬಂದಿದ್ದಾರೆ. ಇಂತಹ ಸಾಮರ್ಥ್ಯ ಹೊಂದಿರುವುದರಿಂದ ಇವರು ಸಿಎಸ್‌ಕೆಗೆ ಬಂದರೆ, ಫಿನಿಷರ್ ಹಾಗೂ ಬೌಲಿಂಗ್ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಲಿದೆ. ಆದರೆ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಶಿವಂ ದುಬೆ ಹೋದರೆ, ಅವರಿಂದ ಬ್ಯಾಟಿಂಗ್‌ನಲ್ಲಿ ಮಾತ್ರವೇ ಕೊಡುಗೆ ನೀಡಲು ಸಾಧ್ಯ. ಅಲ್ಲದೆ ಮುಂಬೈನಲ್ಲಿ ಈಗಾಗಲೇ ವಿಲ್ ಜಾಕ್ಸ್ ಇರುವುದರಿಂದ ಡೆವಾಲ್ಡ್ ಬ್ರೇವಿಸ್ ಅವರನ್ನು ಇಟ್ಟುಕೊಂಡು ಫ್ರಾಂಚೈಸಿ ಏನು ಮಾಡುತ್ತದೆ ಎಂಬ ಪ್ರಶ್ನೆಗಳು ಮೂಡಿವೆ. ಒಟ್ಟಿನಲ್ಲಿ ಇದೀಗ ಪಾಂಡ್ಯ ಅವರನ್ನು ಕೈಬಿಟ್ಟರೆ ಎಂಐ ಯಾರನ್ನು ಬರಮಾಡಿಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+