IPL 2027: ಇಂದೇ ರಿಟೆನ್ಷನ್ ಪಟ್ಟಿ ಸಲ್ಲಿಕೆಗೆ ಕೊನೆಯ ದಿನ; ಹರಾಜು ಯಾವಾಗ, ಎಲ್ಲಿ?

IPL 2027 Mini Auction: ಬಹುನಿರೀಕ್ಷಿತ 2027ರ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ ವೇದಿಕೆ ಸಜ್ಜಾಗುತ್ತಿದೆ. ಎಲ್ಲಾ 10 ಫ್ರಾಂಚೈಸಿಗಳು ತಮ್ಮ ತಂಡದ ಆಟಗಾರರನ್ನು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಅಂತಿಮ ಪಟ್ಟಿಯನ್ನು ಸಲ್ಲಿಸಲು ಇಂದೇ (ನವೆಂಬರ್ 17, 2026) ಕೊನೆಯ ದಿನವಾಗಿದೆ. ಮುಂಬರುವ ಆವೃತ್ತಿಗೆ ಬಲಿಷ್ಠ ಹಾಗೂ ಸಮತೋಲಿತ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಎಲ್ಲಾ ತಂಡಗಳು ಕೊನೆಯ ಕ್ಷಣದ ಲೆಕ್ಕಾಚಾರಗಳಲ್ಲಿ ತೊಡಗಿವೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆರಂಭದಲ್ಲಿ ಆಟಗಾರರ ಪಟ್ಟಿ ಸಲ್ಲಿಕೆಗೆ ನವೆಂಬರ್ 15ರ ಗಡುವು ನಿಗದಿಪಡಿಸಿತ್ತು. ಆದರೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದನೇ ಏಕದಿನ ಪಂದ್ಯದ ವೇಳಾಪಟ್ಟಿಯೊಂದಿಗೆ ದಿನಾಂಕ ಹೊಂದಾಣಿಕೆ ಆಗದ ಕಾರಣ ಎರಡು ದಿನಗಳ ಕಾಲಾವಕಾಶ ವಿಸ್ತರಿಸಿ ನವೆಂಬರ್ 17ನ್ನು ಅಂತಿಮ ದಿನವಾಗಿ ಘೋಷಣೆ ಮಾಡಿತು.

IPL 2027 Mini Auction Retention Deadline Today Nov 17 Check Auction Date Rules and Purse Details

ಮಿನಿ ಹರಾಜು ಯಾವಾಗ ಹಾಗೂ ಎಲ್ಲಿ?

ಐಪಿಎಲ್ 2027ರ ಮಿನಿ ಹರಾಜು ಪ್ರಕ್ರಿಯೆಯು ಡಿಸೆಂಬರ್ 16, 2026ರಂದು ಗೋವಾದಲ್ಲಿ ನಡೆಯಲಿದೆ. ರಿಟೆನ್ಷನ್ ಗಡುವು ಮುಗಿದ ನಂತರ ಹರಾಜಿಗೆ ಒಂದು ತಿಂಗಳಿಗಿಂತಲೂ ಕಡಿಮೆ ಅವಧಿ ಇರುವುದರಿಂದ, ತಂಡಗಳ ನಡುವಿನ ಟ್ರೇಡ್‌ಗಳು ಹಾಗೂ ಬಿಡುಗಡೆ ಪಟ್ಟಿಯು ಎಲ್ಲಾ ತಂಡಗಳ ಮುಂದಿನ ಕಾರ್ಯತಂತ್ರವನ್ನು ನಿರ್ಧರಿಸಲಿದೆ.

ರಿಟೆನ್ಷನ್ ನಿಯಮಗಳು ಮತ್ತು ತಂಡದ ಮಿತಿಯ ವಿವರ

* ಮೆಗಾ ಹರಾಜಿಗೆ ಹೋಲಿಸಿದರೆ ಮಿನಿ ಹರಾಜಿನ ನಿಯಮಗಳು ಫ್ರಾಂಚೈಸಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುತ್ತವೆ. ಮಿನಿ ಹರಾಜಿಗೂ ಮುನ್ನ ತಂಡಗಳು ಇಷ್ಟೇ ಸಂಖ್ಯೆಯ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬ ಯಾವುದೇ ನಿರ್ಬಂಧ ಇರುವುದಿಲ್ಲ.

* ಫ್ರಾಂಚೈಸಿಗಳು ತಮ್ಮ ಪ್ರಮುಖ ಆಟಗಾರರನ್ನು ಉಳಿಸಿಕೊಂಡು, ಟೀಮ್‌ಗೆ ಹೊಂದಿಕೆಯಾಗದ ಆಟಗಾರರನ್ನು ಮಾತ್ರ ಬಿಡುಗಡೆ ಮಾಡಬಹುದು.

* ಪ್ರತಿಯೊಂದು ಫ್ರಾಂಚೈಸಿಯ ಅಂತಿಮ ತಂಡದಲ್ಲಿ ಗರಿಷ್ಠ 25 ಆಟಗಾರರಿಗೆ ಮಾತ್ರ ಅವಕಾಶ ಇರುತ್ತದೆ. ಇದರಲ್ಲಿ ಗರಿಷ್ಠ 8 ವಿದೇಶಿ ಆಟಗಾರರು ಇರಬಹುದು.

ಹರಾಜಿನ ಲೆಕ್ಕಾಚಾರ ಹೇಗಿರಲಿದೆ? ಇಲ್ಲಿದೆ ಮಾಹಿತಿ

ಐಪಿಎಲ್ 2027ರ ಆವೃತ್ತಿಗಾಗಿ ಪ್ರತಿ ಫ್ರಾಂಚೈಸಿಗೆ ಒಟ್ಟು 157 ಕೋಟಿ ರೂಪಾಯಿಗಳ ವೇತನ ಮಿತಿಯನ್ನು ನಿಗದಿಪಡಿಸಲಾಗಿದೆ. ತಂಡಗಳು ಉಳಿಸಿಕೊಂಡ ಆಟಗಾರರ ವೇತನ ಹಾಗೂ ಈಗಾಗಲೇ ಪೂರ್ಣಗೊಂಡಿರುವ ಟ್ರೇಡ್‌ಗಳ ಮೊತ್ತವನ್ನು ಈ 157 ಕೋಟಿ ರೂಪಾಯಿಗಳಿಂದ ಕಡಿತಗೊಳಿಸಲಾಗುತ್ತದೆ. ಬಾಕಿ ಉಳಿಯುವ ಹಣವನ್ನು ಡಿಸೆಂಬರ್ 16ರ ಹರಾಜಿನಲ್ಲಿ ಹೊಸ ಆಟಗಾರರನ್ನು ಖರೀದಿಸಲು ಬಳಸಬಹುದು.

ಹೆಚ್ಚು ಆಟಗಾರರನ್ನು ಉಳಿಸಿಕೊಂಡ ಮಾತ್ರಕ್ಕೆ ಹರಾಜಿನಲ್ಲಿ ತಂಡಕ್ಕೆ ಲಾಭವಾಗುತ್ತದೆ ಎಂದರ್ಥವಲ್ಲ. ಏಕೆಂದರೆ, ದುಬಾರಿ ಆಟಗಾರರನ್ನು ಉಳಿಸಿಕೊಂಡರೆ ಹರಾಜಿಗೆ ಉಳಿಯುವ ಮೊತ್ತ ಕಡಿಮೆಯಾಗುತ್ತದೆ. ಆದ್ದರಿಂದ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವುದರ ಜೊತೆಗೆ, ತಂಡದ ದುರ್ಬಲ ವಿಭಾಗಗಳನ್ನು ಬಲಪಡಿಸಲು ಹರಾಜಿನಲ್ಲಿ ಅಗತ್ಯವಿರುವಷ್ಟು ಹಣ ಹಾಗೂ ಆಟಗಾರರ ಸ್ಥಾನಗಳನ್ನು ಕಾಯ್ದುಕೊಳ್ಳುವ ಸಮತೋಲಿತ ನಿರ್ಧಾರವನ್ನು ಎಲ್ಲಾ 10 ತಂಡಗಳು ತೆಗೆದುಕೊಳ್ಳಬೇಕಿದೆ. ಇಂದು ಸಂಜೆ ಅಂತಿಮ ಪಟ್ಟಿ ಹೊರಬಿದ್ದ ಬಳಿಕ ಯಾವ ತಂಡದ ಬಳಿ ಎಷ್ಟು ಹಣವಿದೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ.

ಒಟ್ಟಿನಲ್ಲಿ ಬಿಡುಗಡೆಯಾದವರು ಹಾಗೂ ಉಳಿಸಿಕೊಂಡವರ ಪಟ್ಟಿ ಹೊರಬಿದ್ದ ಬಳಿಕ ಫ್ರಾಂಚೈಸಿಗಳ ಬಳಿ ಎಷ್ಟು ಹಣ ಇದೆ ಎಂಬ ಸ್ಪಷ್ಟತೆ ಸಿಗಲಿದೆ. ಇದರ ಆಧಾರದ ಮೇಲೆ ಮಿನಿ ಹರಾಜಿನಲ್ಲಿ ಯಾವ ತಂಡ ಯಾವ ಆಟಗಾರರನ್ನು ಖರೀದಿ ಮಾಡಬಹುದು ಎನ್ನುವ ಊಹೆಯೂ ಸಿಕ್ಕಂತಾಗಲಿದೆ. ಒಟ್ಟಿನಲ್ಲಿ ಇದೀಗ ಐಪಿಎಲ್‌ ಅಭಿಮಾನಿಗಳ ಕಣ್ಣು ಪಟ್ಟಿ ಅಂತಿಗೊಳ್ಳುವಿಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+