ಐಪಿಎಲ್‌ನಲ್ಲಿ ಟಾಪ್ 5 ಬೃಹತ್ ರನ್ ಚೇಸ್‌ ಮಾಡಿ ಯಶಸ್ವಿಯಾದ ತಂಡಗಳು

IPL: ಐಪಿಎಲ್ 2026ರಲ್ಲಿ ಪಂಜಾಬ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದಾಖಲೆಯ ರನ್ ಬೆನ್ನಟ್ಟುವ ಮೂಲಕ ಹೊಸ ಇತಿಹಾಸ ಬರೆದಿದೆ. ಹಾಗಾದ್ರೆ, ಐಪಿಎಲ್ ಇತಿಹಾಸದ ಟಾಪ್ 5 ಅತಿ ಹೆಚ್ಚು ರನ್ ಬೆನ್ನಟ್ಟಿದ ಪಂದ್ಯಗಳ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಐಪಿಎಲ್ 2026ರ ಸೀಸನ್ ಬ್ಯಾಟರ್‌ಗಳ ಪಾರಮ್ಯಕ್ಕೆ ಸಾಕ್ಷಿಯಾಗುತ್ತಿದೆ. ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು 265 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಹಾಗಾದ್ರೆ ಅತೀ ಹೆಚ್ಚು ರನ್‌ಗಳನ್ನು ಗುರಿ ಬೆನ್ನಟ್ಟುವ ಮೂಲಕ ಯಶಸ್ವಿಯಾದ ತಂಡಗಳು ಯಾವುದು ಹಾಗೂ ಯಾವಾಗ ಎಂಬ ಮಾಹಿತಿಯನ್ನ ಕೆಳಗೆ ನೀಡಲಾಗಿದೆ.

IPL 2026 Punjab Kings Script History with Record 265 Chase Top 5 Highest Run Chases Know details

ಐಪಿಎಲ್‌ನಲ್ಲಿ ಟಾಪ್ 5 ರನ್ ಚೇಸ್‌ ಪಂದ್ಯಗಳ ವಿವರ

* ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (2026)

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೆ.ಎಲ್.ರಾಹುಲ್ ಅವರ ಅಜೇಯ 152 ರನ್‌ಗಳ ನೆರವಿನಿಂದ 264/2 ರನ್ ಗಳಿಸಿತು. ಬಳಿಕ ಬ್ಯಾಟ್‌ ಬೀಸಿದ ಪಂಜಾಬ್ ಕಿಂಗ್ಸ್ ಕೇವಲ 18.5 ಓವರ್‌ಗಳಲ್ಲಿ 265 ರನ್ ಗಳಿಸಿ ಗೆಲುವು ಸಾಧಿಸಿತು. ಇದು ಐಪಿಎಲ್ ಹಾಗೂ ವೃತ್ತಿಪರ ಟಿ20 ಕ್ರಿಕೆಟ್‌ನಲ್ಲೇ ಅತಿ ದೊಡ್ಡ ರನ್ ಚೇಸ್ ಆಗಿದೆ.

* ಪಂಜಾಬ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ (2024)

ಐಪಿಎಲ್‌ 2024ರಲ್ಲಿ ಈಡನ್ ಗಾರ್ಡನ್‌ನಲ್ಲಿ ಕೆಕೆಆರ್ ನೀಡಿದ್ದ 261 ರನ್‌ಗಳ ಗುರಿಯನ್ನು ಪಂಜಾಬ್ 18.4 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ ತಲುಪಿ ಗೆಲುವು ಸಾಧಿಸಿತ್ತು.

* ಸನ್‌ರೈಸರ್ಸ್ ಹೈದರಾಬಾದ್ vs ಪಂಜಾಬ್ ಕಿಂಗ್ಸ್ (2025)

2025ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 245 ರನ್‌ಗಳ ಗುರಿಯನ್ನು ಬೆನ್ನಟ್ಟಿ 247 ರನ್ ಗಳಿಸುವ ಮೂಲಕ ಜಯ ಸಾಧಿಸಿತ್ತು.

* ಸನ್‌ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್ (2026)

2026ರ ಇದೇ ಸೀಸನ್‌ನಲ್ಲಿ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 228 ರನ್ ಗಳಿಸಿತು. ಆದರೂ ಸನ್‌ರೈಸರ್ಸ್ ಹೈದರಾಬಾದ್ ಆ ಗುರಿಯನ್ನು ಯಶಸ್ವಿಯಾಗಿ ತಲುಪಿ ಭರ್ಜರಿ ಗೆಲುವು ಸಾಧಿಸಿತು.

* ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್ ಜೈಂಟ್ಸ್ (2025)

2025ರ ಪಂದ್ಯವೊಂದರಲ್ಲಿ ರಾಯಲ್ ಚಾಲೆಂಜರ್ಸ್‌ ತಂಡವು ಲಕ್ನೋ ವಿರುದ್ಧ 227 ರನ್‌ಗಳ ಗುರಿಯನ್ನು ಬೆನ್ನಟ್ಟಿ 230 ರನ್ ಗಳಿಸಿ ರೋಚಕ ಜಯ ದಾಖಲಿಸಿತ್ತು.

ಒಟ್ಟಿನಲ್ಲಿ ಐಪಿಎಲ್ 2026ರಲ್ಲಿ ಪಂಜಾಬ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 265 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ಮೂಲಕ ಹೊಸ ದಾಖಲೆ ಸೃಷ್ಟಿ ಮಾಡಿದೆ. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ರನ್ ಚೇಸ್ ಎನಿಸಿಕೊಂಡಿದೆ. ಈ ಹಿಂದಿನ ದಾಖಲೆಗಳಾದ ಕೆಕೆಆರ್ ವಿರುದ್ಧದ 261 ರನ್ (2024), ಸನ್‌ರೈಸರ್ಸ್ ಹೈದರಾಬಾದ್ ಸಿಡಿಸಿದ 247 ರನ್ (2025) ಹಾಗೂ ಇತ್ತೀಚೆಗೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೈದರಾಬಾದ್ ದಾಖಲಿಸಿದ 229 ರನ್‌ಗಳ ಸಾಧನೆಯನ್ನು ಪಂಜಾಬ್ ಹಿಂದಿಕ್ಕಿದೆ. ವಿಶೇಷ ಅಂದರೆ ಐಪಿಎಲ್‌ನಲ್ಲಿ ಎರಡು ಬಾರಿ 250ಕ್ಕೂ ಅಧಿಕ ರನ್‌ಗಳನ್ನು ಬೆನ್ನಟ್ಟಿದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪಂಜಾಬ್ ಕಿಂಗ್ಸ್, ಟಾಪ್-5 ರನ್ ಚೇಸ್ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಅಲಂಕರಿಸಿ ಬ್ಯಾಟಿಂಗ್ ಪರಾಕ್ರಮ ಮೆರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+