IPL 2026: ಐಪಿಎಲ್‌ 2026 ಮಿನಿ ಹರಾಜಿಗೂ ಮುನ್ನ ಹೊಸ ತಂಡಗಳಿಗೆ ಹೋದ ಸ್ಟಾರ್ ಆಟಗಾರರು

IPL 2026: ಐಪಿಎಲ್ 2025 ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ಚೊಚ್ಚಲ ಟ್ರೋಫಿಗೆ ಮುತ್ತಿಡುವ ಮೂಲಕ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಇದೀಗ ಎಲ್ಲರ ಚಿತ್ತ 19ನೇ ಆವೃತ್ತಿಯತ್ತ ನೆಟ್ಟಿದೆ. ಡಿಸೆಂಬರ್ 16 ರಂದು ಮಿನಿ ಹರಾಜು ನಡೆಯಲಿದ್ದು, ಇದಕ್ಕೂ ಮುನ್ನ 10 ಆಟಗಾರರನ್ನು ಈ ಫ್ರಾಂಚಿಗಳು ಬರಮಾಡಿಕೊಂಡಿವೆ. ಹಾಗಾದ್ರೆ, ಯಾರು ಯಾವ ತಂಡಕ್ಕೆ ಹೋಗಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಐಪಿಎಲ್ 2026 ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 16ರಂದು ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ನಡೆಯಲಿದೆ. ಈ ಹರಾಜಿನಲ್ಲಿ 349ಕ್ಕಿಂತ ಹೆಚ್ಚಿನ ಆಟಗಾರರ ಹೆಸರು ಇರಲಿದೆ. ಈ ಪೈಕಿ ಗರಿಷ್ಠ 77 ಆಟಗಾರರು ಮಾತ್ರ ಹರಾಜು ಆಗಲಿದ್ದಾರೆ. ಯಾಕೆಂದ್ರೆ, 10 ಫ್ರಾಂಚೈಸಿಗಳಲ್ಲಿ ಒಟ್ಟು 77 ಸ್ಥಾನಗಳು ಮಾತ್ರ ಖಾಲಿ ಒದ್ದು, ಈ ಸ್ಥಾನಗಳಿಗಾಗಿ ಬಿಡ್ಡಿಂಗ್ ನಡೆಯಲಿದೆ.

IPL 2026 List of 10 Players Traded Ahead of Mini Auction Full Team-Wise Details

* ಮಿನಿ ಹರಾಜಿಗೂ ಮುನ್ನ 10 ಆಟಗಾರರು ಬೇರೆ ತಂಡಗಳಿಗೆ ಸೇರ್ಪಡೆಗೊಂಡಿದ್ದಾರೆ. ಕೆಲ ಫ್ರಾಂಚೈಸಿಗಳು ಟ್ರೇಡಿಂಗ್ ಆಯ್ಕೆ ವೇಳೆ ಕೆಲ ಆಟಗಾರರನ್ನು ಖರೀದಿ ಮಾಡಿ ಸ್ವಾಗತಿಸಿವೆ. ರಾಜಸ್ಥಾನ್‌ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿದ್ದು, ಅವರು ಮುಂದಿನ ಆವೃತ್ತಿಯಲ್ಲಿ ಸಿಎಸ್‌ಕೆ ಪರ ಆಡಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರನ್ನು ಬಿಟ್ಟುಕೊಟ್ಟು ಸಂಜು ಸ್ಯಾಮ್ಸನ್ ಅವರನ್ನು ಸ್ವಾಪ್ ಡೀಲ್ ಮಾಡಿಕೊಂಡಿದೆ.

* ಸಿಎಸ್‌ಕೆ ತಂಡದ ಸ್ಟಾರ್ ಆಲ್​​ರೌಂಡರ್ ರವೀಂದ್ರ ಜಡೇಜಾ ಮುಂದಿನ ಆವೃತ್ತಿಯಲ್ಲಿ ಆರ್‌ಆರ್‌ ಪರ ಆಡಲಿದ್ದಾರೆ. ರವೀಂದ್ರ ಜಡೇಜಾ ಅವರನ್ನು ಸ್ವಾಪ್ ಡೀಲ್ ಮಾಡಿಕೊಳ್ಳುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್‌ ಸಂಜು ಸ್ಯಾಮ್ಸನ್ ಅವರನ್ನು ಖರೀದಿ ಮಾಡಿದೆ.

* ಸಿಎಸ್‌ಕೆ ಹಾಗೂ ಆರ್‌ಆರ್‌ ನಡುವೆ ಸ್ವಾಪ್ ಡೀಲ್​​​​ ನಡೆದಿದ್ದು, ಈ ವೇಳೆ ಸ್ಯಾಮ್ ಕರನ್ ಆರ್​ಆರ್​ ತಂಡಕ್ಕೆ ಬಿಟ್ಟುಕೊಡಲಾಗಿದೆ. ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರನ್ನು ಕೂಡ ರಾಜಸ್ಥಾನ್ ರಾಯಲ್‌ಗೆ ಬಿಟ್ಟುಕೊಡಲಾಗಿದ್ದು, ಇವರ ಬದಲಾಗಿದೆ ಸಂಜು ಸ್ಯಾಮ್ಸನ್‌ ಅವರನ್ನು ಸಿಎಸ್‌ಕೆಗೆ ಕಳುಹಿಸಲಾಗಿದೆ.

* ಕೆಕೆಆರ್‌ ತಂಡದಲ್ಲಿದ್ದ ಯುವ ಸ್ಪಿನ್ನರ್​ ಮಯಾಂಕ್ ಮಾರ್ಕಂಡೆ ಅನ್ನು ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಯು 30 ಲಕ್ಷ ರೂಪಾಯಿ ಕ್ಯಾಶ್ ಡೀಲ್​ನೊಂದಿಗೆ ಖರೀದಿ ಮಾಡಿದೆ. ಅದರಂತೆಯೇ ಮುಂದಿನ ಆವೃತ್ತಿಯಲ್ಲಿ ಅವರು ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ.

* ಐಪಿಎಲ್ 2025ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ನಿತೀಶ್ ರಾಣಾ ಮುಂದಿನ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 4.2 ಕೋಟಿ ರೂಪಾಯಿ ನೀಡಿ ಆರ್​ಆರ್ ತಂಡದಿಂದ ನಿತೀಶ್ ರಾಣಾ ಅವರನ್ನು ಖರೀದಿ ಮಾಡಿದೆ.

* ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಅರ್ಜುನ್ ತೆಂಡೂಲ್ಕರ್ ಮುಂಬರುವ ಆವೃತ್ತಿಯಲ್ಲಿ ಎಲ್‌ಎಸ್‌ಜಿ ಪರ ಆಡಲಿದ್ದಾರೆ. 30 ಲಕ್ಷ ರೂಪಾಯಿಗೆ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಅವರನ್ನು ಟ್ರೇಡ್ ಮಾಡಿಕೊಂಡಿದೆ.

* ಗುಜರಾತ್ ಟೈಟಾನ್ಸ್ (GT) ತಂಡದಲ್ಲಿದ್ದ ವೆಸ್ಟ್ ಇಂಡೀಸ್‌ನ ಶೆರ್ಫೆನ್ ರದರ್​ಫೋರ್ಡ್ ಅವರನ್ನು 2.6 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್ ಟ್ರೇಡ್‌ ಮಾಡಿಕೊಂಡಿದೆ. ಅದರಂತೆಯೇ ಮುಂದಿನ ಆವೃತ್ತಿಯಲ್ಲಿ ರದರ್ಫೋರ್ಡ್​​ ಅವರು ಎಂಐ ಪರ ಆಡಲಿದ್ದಾರೆ.

* ಡೆಲ್ಲಿ ಕ್ಯಾಪಿಟಲ್‌ನಲ್ಲಿದ್ದ ಸೌತ್ ಆಫ್ರಿಕಾದ ಡೊನೊವನ್ ಫೆರೀರಾ ಅವರನ್ನು ರಾಜಸ್ಥಾನ ರಾಯಲ್ಸ್‌ 1 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.

* ಸನ್​​ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಟ್ರೇಡ್ ಮಾಡಿಕೊಂಡಿದೆ. 10 ಕೋಟಿ ರೂಪಾಯಿ ನೀಡಿ ಶಮಿಯನ್ನು ಲಕ್ನೋ ಸೂಪರ್ ಜೈಂಟ್ಸ್ ಖರೀದಿ ಮಾಡಿದೆ.

* ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದ ಆಲ್​​ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿ ಮಾಡಿದೆ. 2 ಕೋಟಿ ರೂಪಾಯಿ ನೀಡುವ ಮೂಲಕ ಮುಂಬೈ ಇಂಡಿಯನ್ಸ್ ಶಾರ್ದೂಲ್ ಠಾಕೂರ್ ಅವರನ್ನು ಕಬಳಿಸಿಕೊಂಡಿದೆ. ಹೀಗೆ ಹತ್ತು ಆಟಗಾರರನ್ನು ಐಪಿಎಲ್‌ 2026 ಮಿನಿ ಹರಾಜಿಗೂ ಮುನ್ನ ಬೇರೆ ತಂಡಗಳಿಗೆ ಬರಮಾಡಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+