ಐಪಿಎಲ್ 2025 ಬಹುಮಾನ ಮೊತ್ತಗಳ ವಿವರ
IPL 2025: ಐಪಿಎಲ್ 2025 ಆವೃತ್ತಿ ಮುಕ್ತಾಯದ ಹಂತದಲ್ಲಿದೆ. ಮಂಗಳವಾರ (ಜೂನ್ 3) ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಹಾಗಾದ್ರೆ ವಿಜೇತ, ರನ್ನರ್ ಅಪ್, ಮೂರನೇ ಸ್ಥಾನ ಪಡೆದ ತಂಡಗಳು ಹಾಗೂ ಪರ್ಪಲ್ ಮತ್ತು ಆರೆಂಜ್ ಕ್ಯಾಪ್ ವಿಜೆತರಿಗೆ ನೀಡಲಾಗುವ ಬಹುಮಾನಗಳ ಮೊತ್ತದ ಸಂಪೂರ್ಣ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.
ವಿಶ್ವದಲ್ಲೇ ದೊಡ್ಡ ಲೀಗ್‌ಗಳಲ್ಲಿ ಐಪಿಎಲ್ ಕೂಡ ಒಂದಾಗಿದೆ. ಇನ್ನು ಐಪಿಎಲ್ 2025 ಫೈನಲ್ ಟ್ರೋಫಿ ಗೆಲ್ಲುವ ತಂಡ ಯಾವುದು ಎಂದು ನಾಳೆ ಅಂದರೆ, ಜೂನ್ 3ರಂದು ನಿರ್ಧಾರ ಆಗಲಿದೆ. ಈ ನಡುವೆಯೂ ಐಪಿಎಲ್ ಬಹುಮಾನಗಳ ಮೊತ್ತ ಎಷ್ಟಿರುತ್ತದೆ ಎನ್ನುವ ಪ್ರಶ್ನೆ ಬಹುತೇಕರಿಗೆ ಇದ್ದೇ ಇರುತ್ತದೆ. ಅದಕ್ಕೆಲ್ಲ ಉತ್ತರವನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.

IPL 2025 ಬಹುಮಾನ ಮೊತ್ತಗಳ ವಿವರ
* ಐಪಿಎಲ್ 2025ರಲ್ಲಿ ವಿಜೇತ ತಂಡಕ್ಕೆ ₹20 ಕೋಟಿ ಬಹುಮಾನ ನೀಡಲಾಗುತ್ತದೆ (ಟ್ರೋಫಿ ಮೌಲ್ಯ)
* ರನ್ನರ್-ಅಪ್ (ಎರಡನೇ ಸ್ಥಾನ) ತಂಡಕ್ಕೆ ₹13 ಕೋಟಿ ಬಹುಮಾನ ದೊರೆಯುತ್ತದೆ
* ಮೂರನೇ ಸ್ಥಾನ ಪಡೆದ ತಂಡಕ್ಕೆ ₹7 ಕೋಟಿ ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ₹6.5 ಕೋಟಿ ಬಹುಮಾನ ನೀಡಲಾಗುತ್ತದೆ.
ವೈಯಕ್ತಿಕ ಬಹುಮಾನ
* ಹೆಚ್ಚು ಗಳಿಸಿ ಆರೆಂಜ್ ಕ್ಯಾಪ್ ಪಡೆದವರಿಗೆ ₹10 ಲಕ್ಷ ನೀಡಲಾಗುತ್ತದೆ.
ಹೆಚ್ಚು ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಪಡೆದವರಿಗೆ ₹10 ಲಕ್ಷ ನೀಡಲಾಗುತ್ತದೆ.
* ಎಮರ್ಜಿಂಗ್ ಪ್ಲೇಯರ್: ₹20 ಲಕ್ಷ
* ಮೋಸ್ಟ್ ವಾಲ್ಯೂಯಬಲ್ ಪ್ಲೇಯರ್: ₹10 ಲಕ್ಷ
* ಸೂಪರ್ ಸ್ಟ್ರೈಕರ್: ₹10 ಲಕ್ಷ
* ಪವರ್ ಪ್ಲೇಯರ್: 10 ಲಕ್ಷ
* ಮ್ಯಾಕ್ಸಿಮಂ ಸಿಕ್ಸಸ್: ₹10 ಲಕ್ಷ
* ಗೇಮ್ ಚೇಂಜರ್: ₹10 ಲಕ್ಷ
ವಿಜೇತ ಮತ್ತು ರನ್ನರ್-ಅಪ್ ತಂಡಗಳ ಬಹುಮಾನ ಮೊತ್ತವನ್ನು ಆಟಗಾರರು ಮತ್ತು ಸಪೋರ್ಟ್ ಸ್ಟಾಫ್ ನಡುವೆ ಹಂಚಲಾಗುತ್ತದೆ. ಪ್ರತಿ ಆಟಗಾರನಿಗೆ ಕಾನ್ಟ್ರಾಕ್ಟ್ ಮೊತ್ತಕ್ಕಿಂತ ಹೊರತಾಗಿ ಪ್ರತಿ ಪಂದ್ಯಕ್ಕೆ ಪ್ರತ್ಯೇಕವಾಗಿ ಮ್ಯಾಚ್ ಮೊತ್ತ ಸಹ ದೊರೆಯುತ್ತದೆ. ಐಪಿಎಲ್ 2025ನಲ್ಲಿ ವಿಜೇತ ತಂಡಕ್ಕೆ ₹20 ಕೋಟಿ, ರನ್ನರ್-ಅಪ್‌ಗೆ ₹13 ಕೋಟಿ ಮತ್ತು ವೈಯಕ್ತಿಕ ಪ್ರಶಸ್ತಿಗಳಿಗೆ ₹10-₹20 ಲಕ್ಷದವರೆಗೆ ಬಹುಮಾನ ನೀಡಲಾಗುತ್ತದೆ.
ಜೂನ್ 3ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಹೈ ವೋಲ್ಟೇಜ್ ಫೈನಲ್ ಪಂದ್ಯ ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ವೀಕ್ಷಣೆ ಮಾಡಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಕೂಡ ಆರ್‌ಸಿಬಿ ಅಭಿಮಾನಿಗಳು ದೇವಸ್ಥಾನಗಳಿಗೆ ಹೋಗಿ ವಿಶೇಷ ಪೂಜೆ ಮಾಡಿಸುತ್ತಲೇ ಇದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇವೆ. ಮತ್ತೊಂದೆಡೆ ರಾಜ್ಯ ರಾಜಕಾರಣಿಗಳು, ಸಿನಿ ತಾರೆಯರು, ಗಣ್ಯ ವ್ಯಕ್ತಿಗಳು ಸೇರಿದಂತೆ ಹಲವರು ಆರ್‌ಸಿಬಿ ಈ ಬಾರಿಯಾದರೂ ಟ್ರೋಫಿ ಗೆದ್ದು ಬರಲಿ ಎಂದು ಶುಭಹಾರೈಸಿದ್ದಾರೆ.












Click it and Unblock the Notifications