IPL 2025: ಆರ್‌ಸಿಬಿ ಸೇರಿ ಮೂರು ತಂಡಗಳು ಪ್ಲೇ ಆಫ್‌ ಪ್ರವೇಶ

IPL 2025: ಭಾರತ-ಪಾಕಿಸ್ತಾನ ಯುದ್ಧ ಬಿಕ್ಕಟ್ಟು ಕಾರಣ ಅರ್ಧಕ್ಕೆ ನಿಂತಿದ್ದ ಐಪಿಎಲ್ ಟೂರ್ನಿ ಮೇ 17ರಿಂದ ಆರಭ ಆಗಿದೆ. ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ನಡೆಯಬೇಕಿದ್ದ ಮೊದಲ ಪಂದ್ಯ ಮಳೆ ಹಿನ್ನೆಲೆ ರದ್ದಾಗಿದ್ದು, ಎರಡು ತಂಡಗಳಿಗೆ ತಲಾ ಒಂದೊಂದು ಪಾಯಿಂಟ್ಸ್‌ ನೀಡಲಾಗಿತ್ತು. ಮೇ 18ರಂದು ಆರ್‌ಆರ್‌ ವಿರುದ್ಧ ಪಂಜಾಬ್‌ ಹಾಗೂ ಡಿಸಿ ವಿರುದ್ಧ ಜಿಟಿ ಗೆದ್ದು ಬೀಗಿದೆ. ಇದರ ಬೆನ್ನಲ್ಲೇ ಬಹುತೇಕ ಪ್ಲೇ ಆಫ್‌ ಪ್ರವೇಶಿಸಿದ ಮೂರು ತಂಡಗಳ ಪಟ್ಟಿ ಹೊರಬಿದ್ದಿದೆ.

ಆರ್‌ಸಿಬಿ ಸೇರಿದಂತೆ ಮೂರು ತಂಡಗಳು ಈಗಾಗಲೇ ಪ್ಲೇ ಆಫ್‌ ಪ್ರವೇಶ ಮಾಡಿವೆ ಎನ್ನುವ ಪಟ್ಟಿಯೊಂದು ಬಿಡುಗಡೆಯಾಗಿದೆ. ಹಾಗಾದ್ರೆ ಯಾವೆಲ್ಲ ತಂಡಗಳು ಈ ಪಟ್ಟಿಯಲ್ಲಿವೆ ಹಾಗೂ ಈ ರೇಸ್‌ನಲ್ಲಿರುವ ತಂಡಗಳು ಯಾವುವು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ...

IPL 2025 Three Teams Qualify for Playoffs including RCB

ಹೊಸ ವೇಳಾಪಟ್ಟಿ ಪ್ರಕಾರ, ಆರ್‌ಸಿಬಿ-ಕೆಕೆಆರ್ ನಡುವೆ ಮೇ 17ರಂದು ಮೊದಲ ಪಂದ್ಯ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ, ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದ ಕಾರಣ ಪಂದ್ಯ ರದ್ದಾಗಿದ್ದು, ಎರಡು ತಂಡಗಳಿಗೂ ತಲಾ ಒಂದು ಪಾಂಟ್ಸ್‌ ನೀಡಲಾಗಿದೆ. ಈ ಮೂಲಕ ಆರ್‌ಸಿಬಿ ಪಾಯಿಂಟ್ಸ್‌ ಟೇಬಲ್‌ನಲ್ಲಿ 17 ಅಂಕಗಳನ್ನು ಪಡೆದು ಪ್ಲೇ ಆಫ್‌ ಪ್ರವೇಶ ಮಾಡಿದೆ. ಆದರೆ ಕೆಕೆಆರ್ ಬುತೇಕ ಟೂರ್ನಿಯಿಂದ ಹೊರಬಿದ್ದಿದೆ.

ಇನ್ನೂ ಭಾನುವಾರ (ಮೇ 18) ಪಂಜಾಬ್‌ ಕಿಂಗ್ಸ್‌ ಆರ್‌ಆರ್‌ ವಿರುದ್ಧ ಗೆದ್ದು ಬೀಗುವ ಮೂಲಕ ಪ್ಲೇ ಆಫ್‌ ಪ್ರವೇಶ ಮಾಡಿದೆ. ಈ ಪಂದ್ಯ ಮಧ್ಯಾಹ್ನ 3:30ಕ್ಕೆ ಜೈಪುರದಲ್ಲಿ ನಡೆದಿದೆ. ಅಂದೇ ಗುಜಾರಾತ್ ಟೈಟಾನ್ಸ್‌ ಡೆಲ್ಲಿ ಕ್ಯಾಪಿಟಲ್ಸ್‌ ಅನ್ನು ಸೋಲಿಸುವ ಮೂಲಕ ಪ್ಲೇ ಆಫ್‌ ಪ್ರವೇಶ ಮಾಡಿದೆ. ಈ ಪಂದ್ಯ ಸಂಜೆ 7:30ಕ್ಕೆ ಡೆಲ್ಲಿಯಲ್ಲಿರುವ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಆಡಿಸಲಾಗಿತ್ತು.

ಪ್ಲೇ ಆಫ್‌ ಪ್ರವೇಶ ಪಡೆದ ಮೂರು ತಂಡಗಳು

* ಗುಜರಾಜ್‌ ಟೈಟಾನ್ಸ್
* ರಾಯಲ್ ಚಾಲೆಂಜರ್ಸ್ ಬೆಂಗಳೂರು
* ಪಂಜಾಬ್ ಕಿಂಗ್ಸ್‌

ನಾಲ್ಕನೇ ಸ್ಥಾನಕ್ಕೆ ಯಾವೆಲ್ಲಾ ತಂಡಗಳಿಂದ ಪೈಪೋಟಿ?

ಈಗಾಗಲಾ ಗುಜರಾತ್ ಟೈಟನ್ಸ್, ಆರ್ಸಿಬಿ ಮತ್ತೆಉ ಪಂಜಾಬ್ ಕಿಂಗ್ಸ್ ಪಾಯಿಂಟ್ ಟೇಬಲ್ನಲ್ಲಿ ಅಗ್ರ ಮೂರು ಸ್ಥಾನಗಳನ್ನು ಅಲಂಕರಿಸಿ ಪ್ಲೇ ಆಫ್ ಅನ್ನು ಖಚಿತಪಡಿಸಿಕೊಂಡಿವೆ. ಆದರೆ 4ನೇ ಸ್ಥಾನದ ಪ್ಲೇ ಆಫ್ಗಾಗಿ ಮೂರು ತಂಡಗಳ ನಡುವೆ ಭಾರೀ ಪೈಪೋಟಿ ನಡೆಯಿತ್ತಿದೆ. ಆದರೆ, ಈ ತಂಡಗಳು ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದರೇ ಮಾತ್ರ 4ನೇ ಸ್ಥಾನದ ಪ್ಲೇ ಆಫ್‌ಗೆ ಪ್ರವೇಶ ಮಾಡಲಿದೆ.

* ಮುಂಬೈ ಇಂಡಿಯನ್ಸ್ ಇದುವರೆಗೂ ಆಡಿರುವ 12 ಪಂದ್ಯಗಳಲ್ಲಿ 7ರಲ್ಲಿ ಗೆಲುವು, 5ರಲ್ಲಿ ಸೋಲು ಕಾಣುವ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ 14 ಅಂಕ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ಆದರೂ ಇನ್ನೂ ಪ್ಲೇ ಆಫ್‌ ಟಿಕೆಟ್‌ ಕನ್ಫರ್ಮ್‌ ಆಗಿಲ್ಲ. ಉಳಿದ ಎರಡು ಪಂದ್ಯಗಳಲ್ಲಿ ಉತ್ತಮ ರನ್‌ ರೇಟ್‌ ಮೂಲಜ ಗೆದ್ದು 18 ಅಂಕ ಪಡೆದ್ರೆ ಪ್ಲೇ ಆಫ್ಗೆ ಪ್ರವೇಶ ಮಾಡಲಿದೆ. ಇಲ್ಲದಿದ್ದರೆ ಡೌಟ್‌ ಎನ್ನಲಾಗುತ್ತಿದೆ.

* ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ಸ್‌ ಟೇಬಲ್‌ನಲ್ಲಿ 13 ಅಂಕ ಪಡೆದಿದ್ದು, ಇನ್ನೂ 2 ಪಂದ್ಯ ಬಾಕಿಯಿವೆ. ಈ ಎರಡರಲ್ಲಿಯೂ ಉತ್ತಮ ರನ್‌ ರೇಟ್‌ ಮೂಲಕ ಗೆದ್ದರೆ ಮಾತ್ರ ಪ್ಲೇ ಆಫ್‌ ತಲುಪಲು ತುಸು ಅವಲಾಶ ಇರುತ್ತದೆ. ಇಲ್ಲದಿದ್ರೆ ಟೂರ್ನಿಯಿಂದ ಔಟ್‌ ಖಚಿತವಾದಂತಾಗಲಿದೆ.

* ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇ ಆಫ್ ಪ್ರವೇಶ ಮಾಡಬೇಕೆಂದರೆ ಮೇಲಿರುವ ತಂಡಗಳ ಕಾಲೆಳೆಯಬೇಕಾಗುತ್ತದೆ. ಉಳಿದ 3 ಪಂದ್ಯಗಳ ಗೆಲ್ಲುವ ಉತ್ತಮ ರನ್‌ ರೇಟ್‌ ಮೂಲಕ ಗೆಲ್ಲಬೇಕು. ಈ ಪವಾಡ ಆದ್ರೆ ಮಾತ್ರ ಪ್ಲೇ ಆಫ್‌ ಸ್ಥಾನ ನಾಲ್ಕರಲ್ಲಿ ಕೂರುವ ಸಾಧ್ಯತೆಯಿದೆ. ಇಲ್ಲದಿದ್ರರೆ ಟೂರ್ನಿಯಿಂದ ಔಟ್‌ ಆಗೋದಂತೂ ಖಚಿತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+