IPL 2025 Playoffs: ಈ ಬಾರಿ ಐಪಿಎಲ್‌ನಲ್ಲಿ ಪ್ಲೇ ಆಫ್‌ ಪ್ರವೇಶಿಸುವ ತಂಡಗಳು

IPL 2025 IPL Playoffs: ಐಪಿಎಲ್‌ 2025ರ 46ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖಿ ಆಗಲಿದೆ. ಈಗಾಗಲೇ ಇದೇ ತಂಡದ ವಿರುದ್ಧ ಸೋತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸೇಡು ತೀರಿಸಿಕೊಳ್ಳೇಲೇಬೇಕೆಂಬ ಹಠದಲ್ಲಿದೆ. ಈ ನಡುವೆಯೇ ಬಹುತೇಕ ಪ್ಲೇ ಆಫ್‌ಗೆ ಸ್ಥಾನ ಪಡೆಯಲಿರುವ ನಾಲ್ಕು ತಂಡಗಳ ಪಟ್ಟಿಯೊಂದು ವೈರಲ್‌ ಆಗಿದೆ.

ಇದೀಗ ಪಾಯಿಂಟ್ಸ್‌ ಟೇಬಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ಅಗ್ರಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್‌ ದ್ವಿತೀಯ ಸ್ಥಾನ, ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ. ಈ ಮೂರು ತಂಡಗಳು ಮೂರು 12 ಅಂಕಗಳನ್ನು ಗಳಿಸಿವೆ. ಇನ್ನು ಆರ್‌ಸಿಯು ಇಂದು ಗೆಲುವು ಸಾಧಿಸಿದರೆ, ಡೆಲ್ಲಿ ಕೆಳಗಿಳಿಸಿ ಮೇಲೆರಲಿದೆ. ಹಾಗಾದ್ರೆ ಪ್ಲೇ ಆಫ್ ತಲುಪಲು ಯಾವ ತಂಡಗಳು ಮುಂಚೂಣಿಯಲ್ಲಿವೆ ಹಾಗೂ ಎಷ್ಟು % ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

IPL 2025 These Teams Likely to Qualify for Playoffs know details

ಯಾವುದೇ ತಂಡವು ಯಾವುದೇ ತೊಂದರೆಯಿಲ್ಲದೆ, ಪ್ಲೇ ಆಫ್‌ ಪ್ರವೇಶ ಮಾಡಬೇಕೆಂದರೆ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಉತ್ತಮ ರನ್‌ ರೇಟ್‌ ಮೂಲಕ 16 ಅಂಕಗಳನ್ನು ಗಳಿಸಬೇಕಾಗುತ್ತದೆ. ಆದರೆ ಇದೀಗ ಪಾಯಿಂಟ್ಸ್‌ ಟೇಬಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಆರ್‌ಸಿಬಿ 12 ಅಂಕಗಳನ್ನು ಪಡೆಯುವ ಮೂಲಕ ಕ್ರಮವಾಗಿ ರನ್‌ ರೇಟ್‌ ಆಧಾರದ ಮೇಲೆ 1, 2, 3ನೇ ಸ್ಥಾನದಲ್ಲಿವೆ.

ಇನ್ನು ನಾಲ್ಕು, ಐದನೇ ಸ್ಥಾನದಲ್ಲಿ ಕ್ರಮವಾಗಿ ಮುಂಬೈ ಇಂಡಿಯನ್ಸ್‌ ತಂಡಗಳು ಇದ್ದು, ಈ ಎರಡು ತಂಡಗಳ ನಡುವೆ ಭಾರೀ ಪೈಪೋಟಿ ನಡೆಯುವ ಸಾಧ್ಯತೆ ಹೆಚ್ಚಿದೆ. ಯಾಕಂದ್ರೆ ಮುಂಬೈ ಇಂಡಿಯನ್ಸ್‌ ರನ್‌ ರೇಟ್‌ ಮೂಲಕ ಇನ್ನೊಂದು ಪಂದ್ಯ ಗೆದ್ದರೆ ಸಾಕು ಪಂಜಾಬ್ ಕೆಳಗೆ ಬಂದು ಮುಂಬೈ ಸ್ಥಾನ ಪಡೆಯಲಿದೆ. ಆಗ ಕೊನೆಗೆ ಜಿಟಿ, ಡಿಸಿ, ಆರ್‌ಸಿಬಿ, ಎಂಐ ಪ್ಲೇ ಆಫ್‌ಗೆ ಅರ್ಹತೆ ಪಡೆಯುತ್ತವೆ.

ಇದೀಗ ರನ್‌ ರೇಟ್‌ ಗಮನಿಸುವುದಾದರೆ ಈ ನಾಲ್ಕು ತಂಡಗಳೇ ಬಹುತೇಕ ಪ್ಲೇ ಆಪ್‌ಗೆ ಪ್ರವೇಶ ಮಾಡಲಿವೆ ಎನ್ನಲಾಗುತ್ತಿದೆ. ಇನ್ನು ಪಂಜಾಬ್‌ ಕಿಂಗ್ಸ್‌ ಈ ರೇಸ್‌ನಿಂದ 47.0% ಹೊರಗಿಳಿಯುವ ಸಾಧ್ಯತೆಯಿದೆ. ಹಾಗೆಯೇ ಮುಂಬೈ ಇಂಡಿಯನ್ಸ್‌ 37.8%, ಆರ್‌ಸಿಬಿ 22.4%, ಡೆಲ್ಲಿ ಕ್ಯಾಪಿಟಲ್ಸ್‌ 21.6%, ಗುಜರಾತ್‌ ಟೈಟಾನ್ಸ್‌ 10.35% ಸಾಧ್ಯತೆಯಿದೆ ಎನ್ನುವ ಪಟ್ಟಿಯೊಂದು ಲಭ್ಯವಾಗಿದೆ. ಈ ನಾಲ್ಕು ತಂಡಗಳ ಅಂಕಗಳನ್ನು ಕೂಡ ಇಲ್ಲಿ ನೀಡಲಾಗಿದೆ.

ಗುಜರಾತ್‌ ಟೈಟಾನ್ಸ್‌ ತಂಡದ ಹಣೆಬರಹ: ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ ಗುಜರಾತ್‌ ಟೈಟಾನ್ಸ್‌ 6 ಗೆಲುವು 2 ಸೋಲು ಕಂಡಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 12 ಅಂಕಗಳನ್ನು ಪಡೆಯುವ ಮೂಲಕ ಅಗ್ರಸ್ಥಾನದಲ್ಲಿದೆ. ಇನ್ನೆರಡು ಪಂದ್ಯ ಗೆದ್ದರೂ ಈ ತಂಡ ಪ್ಲೇ ಆಫ್‌ಗೆ ಬಹುತೇಕ ಪ್ರವೇಶ ಪಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್‌: ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ 6 ಗೆಲುವು 2 ಸೋಲು ಕಂಡಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 12 ಅಂಕಗಳನ್ನು ಪಡೆಯುವ ಎಡರನೇ ಸ್ಥಾನದಲ್ಲಿದೆ. ಈ ತಂಡವೂ ಕೂಡ ಪ್ಲೇ ಆಫ್‌ ಪ್ರವೇಶಕ್ಕೆ ಕನಿಷ್ಠ ಇನ್ನೆರಡು ಪಂದ್ಯ ಗೆಲ್ಲಬೇಕಾಗುತ್ತದೆ.

ಆರ್‌ಸಿಬಿ: ಇದುವರೆಗೂ ಆಡಿರುವ 9 ಪಂದ್ಯಗಳಲ್ಲಿ 6 ಗೆಲುವು 3 ಸೋಲು ಕಂಡಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 12 ಅಂಕಗಳನ್ನು ಪಡೆಯುವ 3ನೇ ಸ್ಥಾನದಲ್ಲಿದೆ. ಇನ್ನು ಇಂದು ಡೆಲ್ಲಿ ವಿರುದ್ಧ ಉತ್ತಮ ರನ್‌ ರೇಟ್‌ ಮೂಲಕ ಗೆಲುವು ಸಾಧಿಸಿದರೆ, ಈ ತಂಡಕ್ಕೆ ಮತ್ತಷ್ಟು ಬಲ ಬಂದಂತಾಗಲಿದೆ. ಆಗ ಈ ತಂಡ ಪ್ಲೇ ಆಫ್‌ ಪ್ರವೇಶಕ್ಕೆ ಕನಿಷ್ಠ ಒಂದು ಗೆಲುವು ಅವಶ್ಯಕವಾಗುತ್ತದೆ. ಇಲ್ಲದಿದ್ದರೆ, ಮೂರು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ.

ಪಂಜಾಬ್‌ ಕಿಂಗ್ಸ್‌: ಇದುವರೆಗೂ ಆಡಿರುವ 9 ಪಂದ್ಯಗಳಲ್ಲಿ 5 ಗೆಲುವು 3 ಸೋಲು ಕಂಡಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 11 ಅಂಕಗಳನ್ನು ಪಡೆಯುವ 4ನೇ ಸ್ಥಾನದಲ್ಲಿದೆ. ಈ ಈ ತಂಡವೂ ಕೂಡ ಪ್ಲೇ ಆಫ್‌ ಪ್ರವೇಶ ಮಾಡಬೇಕೆಂದರೆ ಉತ್ತಮ ರನ್‌ ರೇಟ್‌ನೊಂದಿದೆ ಕನಿಷ್ಠ ಮೂರು ಗೆಲುವು ಅವಶ್ಯಕವಾಗಿದೆ.

ಮುಂಬೈ ಇಂಡಿಯನ್ಸ್: ಇದುವರೆಗೂ ಆಡಿರುವ 9 ಪಂದ್ಯಗಳಲ್ಲಿ 5 ಗೆಲುವು 4 ಸೋಲು ಕಂಡಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 10 ಅಂಕಗಳನ್ನು ಪಡೆಯುವ 5ನೇ ಸ್ಥಾನದಲ್ಲಿದೆ. ಈ ಈ ತಂಡವೂ ಕೂಡ ಪ್ಲೇ ಆಫ್‌ ಪ್ರವೇಶ ಮಾಡಬೇಕೆಂದರೆ ಉತ್ತಮ ರನ್‌ ರೇಟ್‌ನೊಂದಿದೆ ಕನಿಷ್ಠ ಮೂರು ಗೆಲುವು ಅವಶ್ಯಕವಾಗಿದೆ. ಇಲ್ಲದಿದ್ದರೆ, ಮುಂದಿನ ದಾರಿ ಕಷ್ಟ ಆದರೂ ಆಶ್ಚರ್ಯವಿಲ್ಲ. ಮಾಡು ಇಲ್ಲವೆ ಮಡಿ ಪಂದ್ಯ ಆಡಬೇಕಾಗುತ್ತದೆ. ಒಟ್ಟಿನಲ್ಲಿ ಇದೀಗ ರನ್‌ ರೇಟ್‌, ಅಂಗಳನ್ನು ಆಧಾರಿಸಿ ನೋಡುವುದಾದರೆ, ಗುಜರಾತ್‌ ಟೈಟಾನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌, ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಗಳು ಬಹುತೇಕ ಪ್ಲೇ ಆಫ್‌ ಪ್ರವೇಶ ಪಡೆಯಲಿವೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+