IPL 2025 RCB Vs RR: ಆರ್‌ಸಿಬಿಗೆ ಸಾಧಾರಣ ರನ್‌ಗಳ ಗುರಿ ನೀಡಿದ ಆರ್‌ಆರ್
RCB Vs RR: ಐಪಿಎಲ್ 2025ರ ಆವೃತ್ತಿಯ 28ನೇ ಪಂದ್ಯ ಆರ್‌ಸಿಬಿ ಮತ್ತು ಆರ್‌ಆರ್ ನಡುವೆ ಇಂದು (ಏಪ್ರಿಲ್ 13) ನಡೆಯುತ್ತಿದೆ. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 174 ಸಾಧಾರಣ ಮೊತ್ತದ ರನ್‌ಗಳ ಗುರಿ ನೀಡಿದೆ. ಹಾಗಾದ್ರೆ ಆರ್‌ಆರ್ ಪರ ಯಾರೆಲ್ಲಾ ಎಷ್ಟು ರನ್‌ಗಳನ್ನು ಚಚ್ಚಿದರು ಎಂದು ತಿಳಿಯಿರಿ.
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಆರ್‌ಆರ್ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 173 ಸಾಧಾರಣ ರನ್‌ಗಳನ್ನು ಕಲೆಹಾಕಿತು.

ಆರ್‌ಆರ್ ಪರ ಯಶಸ್ವಿ ಜೈಸ್ವಾಲ್ 47 ಬಾಲ್‌ಗಳಿಗೆ 75 ರನ್‌ಗಳನ್ನು ಬಾರಿಸಿದರು. ಸಂಜು ಸ್ಯಾಮ್ಸನ್ 15 (15), ರಿಯಾನ್ ಪರಾಗ್ 30 (22), ದೃವ್ ಜುರೇಲ್ 35 (23), ಹಿಟ್ಮೇಯರ್ 9 (8), ನಿತೀಶ್ ರಾಣ ಕೊನೆ ಎಸೆತದಲ್ಲಿ ಒಂದು ಬೌಂಡರಿ ಸಿಡಿಸುವ ಮೂಲಕ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು. ಇಲ್ಲಿವೆಗೂ ಬರಲು ಯಶಸ್ವಿ ಜೈಸ್ವಾಲ್ ಕಲೆಹಾಕಿದ ಬೃಹತ್ ರನ್‌ಗಳೇ ಕಾರಣ.
ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹಜಲ್‌ವುಡ್, ಕೃನಾಲ್ ಪಾಂಡೆ ತಲಾ ಒಂದು ವಿಕೆಟ್ ಕಬಳಿಸಿದರು. ಈ ಮೂಲಕ ಆರ್‌ಆರ್ ತಂಡದ ನಾಲ್ಕು ವಿಕೆಟ್ ಕಿತ್ತು 173 ರನ್‌ಗಳಿಗೆ ಕಟ್ಟಿಹಾಕಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಸುಯಾಶ್ ಶರ್ಮಾ.
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ/ವಿ.ಕೀ.), ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ.












Click it and Unblock the Notifications