IPL 2025 RCB Playoff: ಪ್ಲೇ ಆಫ್ ತಲುಪಲು ಆರ್‌ಸಿಬಿ ಇನ್ನೆಷ್ಟು ಪಂದ್ಯ ಗೆಲ್ಲಬೇಕು?
RCB Playoff Prediction: ಐಪಿಎಲ್ 2025ರ ಆವೃತ್ತಿಯಲ್ಲಿ ಇದುವರೆಗೂ ಆಡಿರುವ 9 ಪಂದ್ಯಗಳಲ್ಲಿ ಆರ್‌ಸಿಬಿ 6 ಗೆದ್ದು, ಮೂರರಲ್ಲಿ ಸೋಲನುಭವಿಸಿದೆ. ಹಾಗಾದ್ರೆ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ತಲುಪಬೇಕೆಂದರೆ ಇನ್ನು ಪಂದ್ಯಗಳನ್ನು ಗೆಲ್ಲಬೇಕಿದೆ ಎಂವ ಲೆಕ್ಕಾಚಾರವನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ಗಮನಿಸಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಆವೃತ್ತಿಯಲ್ಲಿ ಆರಂಭದಿಂದಲ್ಲೂ ಇಲ್ಲಿಯವರೆಗೂ ಉತ್ತಮ ಪ್ರದರ್ಶನ ತೋರುತ್ತಾ ಬಂದಿದೆ. ತವರಿನಿಂದ ಆಚೆ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದು, ತವರಿನಲ್ಲೇ ಸತತ ಮೂರು ಸೋಲು ಕಂಡಿತ್ತು. ಆದರೆ, ಇದೀಗ ಗುರುವಾರ ತವರು ಅಂಗಳ ಚಿನ್ನಸ್ವಾಮಿಯಲ್ಲಿ ಆರ್‌ಆರ್ ವಿರುದ್ಧ ಗೆದ್ದು ಬೀಗಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಕೆಳಗಿಳಿಸಿದೆ.

ಏಪ್ರಿಲ್ 24ರಂದು ನಡೆದ 42ನೇ ಪಂದ್ಯದಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಜೋಶ್ ಹ್ಯಾಜಲ್‌ವುಡ್ ಅವರ ಮಾರಕ ಬೌಲಿಂಗ್ ದಾಳಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಗೆಲುವು ಸಾಧಿಸಿದೆ.
ಆರ್‌ಸಿಬಿಯೂ ಇಲ್ಲಿವರೆಗೂ ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸು 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. ಲೀಗ್ ಹಂತದಲ್ಲಿ ಆರ್‌ಸಿಬಿ ಇನ್ನೂ 5 ಪಂದ್ಯಗಳನ್ನು ಆಡಬೇಕಿದೆ. ಈ ಪೈಕಿ ಆರ್‌ಸಿಬಿಯು ಎರಡರಲ್ಲಿ ಉತ್ತಮ ರನ್ ರೇಟ್‌ನೊಂದಿಗೆ ಗೆದ್ದರೆ, ಪ್ಲೇಆಫ್ ಹಾದಿಯನ್ನು ಸುಗಮಗೊಳಿಸಿಕೊಂಡಂತೆ ಆಗುತ್ತದೆ.
ಆರ್‌ಸಿಬಿ ಪ್ಲೇ ಆಫ್ ಲೆಕ್ಕಾಚಾರ: ಸಾಮಾನ್ಯವಾಗಿ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಯಾವುದೇ ತಂಡಕ್ಕೆ 16 ಅಂಕಗಳು ಬೇಕಾಗುತ್ತವೆ. ಆದ್ದರಿಂದ ಐಪಿಎಲ್ 2025 ಪ್ಲೇಆಫ್‌ಗೆ ತಲುಪಲು, ಆರ್‌ಸಿಬಿ ಉಳಿದ 5 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಅಲ್ಲದೆ, ತಂಡವು ಉತ್ತಮ ನೆಟ್ ರನ್ ರೇಟ್ ಅನ್ನು ಕಾಯ್ದುಕೊಳ್ಳುವುದು ಕೂಡ ಪ್ರಮುಖವಾಗಿದೆ.
ಅಂಕಪಟ್ಟಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸಹ ಹಿಂದೆಯೇ ಇರುವುದರಿಂದ ಆರ್‌ಸಿಬಿ ಉತ್ತಮ ನೆಟ್ ರನ್ ರೇಟ್ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಆರ್‌ಸಿಬಿಗೆ ಲೀಗ್ ಹಂತದಲ್ಲಿ 5 ಪಂದ್ಯಗಳನ್ನು ಬಾಕಿಯಿವೆ. ಮೂರು ಪಂದ್ಯಗಳು ತವರಿನಲ್ಲಿ ಹಾಗೂ ಉಳಿದ ಎರಡು ಪಂದ್ಯಗಳನ್ನು ತವರಿನಿಂದ ಆಚೆ ಆಡಲಿದೆ.
ಏಪ್ರಿಲ್ 27ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ದೆಹಲಿಯಲ್ಲಿ, ಮೇ 3ರಂದು ಬೆಂಗಳೂರಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಮೇ 13ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಬೆಂಗಳೂರಿನಲ್ಲೇ ಪಂದ್ಯ ನಡೆಯಲಿದೆ. ಮೇ 17ರಂದು ಆರ್‌ಸಿಬಿ ತವರಿನಲ್ಲೇ ಹಾಲಿ ಚಾಂಪಿಯನ್ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಸೆಣಸಲಿದೆ.












Click it and Unblock the Notifications