RCB vs MI Live Streaming: ಆರ್‌ಸಿಬಿ ಮತ್ತು ಮುಂಬೈ ಪಂದ್ಯದ ಸಮಯ, ಸ್ಥಳ ಮತ್ತು ನೇರ ಪ್ರಸಾರದ ವಿವರ
RCB vs MI Live Streaming: ಐಪಿಎಲ್ 2025ರ ಆವೃತ್ತಿಯ 20ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಅಭಿಮಾನಿಗಳನ್ನು ಕಾತರದಿಂದ ಕಾಯುತ್ತಿದ್ದಾರೆ. ಹಾಗಾದ್ರೆ ಸಮಯ, ಸ್ಥಳ ಹಾಗೂ ನೇರಪ್ರಸಾರ ಎಲ್ಲಿ ನೋಡಬಹುದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಬಹುನಿರೀಕ್ಷಿತ ಪಂದ್ಯ ಇಂದು (ಏಪ್ರಿಲ್ 7) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದು ಈ ಆವರತ್ತಿಯ 20ನೇ ಪಂದ್ಯವಾಗಿದೆ. ಈ ಎರಡು ತಂಡಗಳ ಕಾದಾಟ ವೀಕ್ಷಣೆಗೆ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.

ಸ್ಥಳ ಹಾಗೂ ಸಮಯದ ವಿವರ: ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಇಂದು ಸಂಜೆ 7:30ಕ್ಕೆ ಪ್ರಾರಂಭ ಆಗುತ್ತದೆ. ಟಾಸ್ ಸಂಜೆ 7 ಗಂಟಗೆ ಆಗಲಿದೆ. ಈ ಬಾರಿ ಹಾರ್ದಿಕ್ ಪಂದ್ಯ ನಾಯಕತ್ವದಲ್ಲಿ ಮುಂಬೈ ಮತ್ತು ಆರ್‌ಸಿಬಿಯನ್ನು ರಜತ್ ಪಾಟಿದಾರ್ ಮುನ್ನಡೆಸುತ್ತಿದ್ದಾರೆ. ಈ ಎರಡು ತಂಡಗಳು ಹಿಂದಿನಿಂದಲೂ ಸಹ ಪರಸ್ಪರ ಸ್ಪರ್ಧೆ ನೀಡಿಕೊಂಡು ಬರುತ್ತಿವೆ.
ಪಂದ್ಯದ ನೇರಪ್ರಸಾರ ಎಲ್ಲಿ?: ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯುವ ಪಂದ್ಯದ ನೇರಪ್ರಸಾರವನ್ನು ಸ್ಟಾರ್ ಸ್ಪರ್ಟ್ಸ್ ಹಾಗೂ Jio Hotstarನಲ್ಲಿ ವೀಕ್ಷಣೆ ಮಾಡಬಹುದು.
ಮುಂಬೈ ಇಂಡಿಯನ್ಸ್ ಸಾಂಭಾವ್ಯ ತಂಡ: ವಿಲ್ ಜಾಕ್ಸ್, ರಿಯಾನ್ ರಿಕೆಲ್ಟನ್ (ವಿ.ಕೀ), ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಮಿಚೆಲ್ ಸ್ಯಾಂಟ್ನರ್, ರಾಜ್ ಬಾವಾ, ಟ್ರೆಂಟ್ ಬೌಲ್ಟ್, ಅಶ್ವಿನಿ ಕುಮಾರ್, ದೀಪಕ್ ಚಹಾರ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್(ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ(ವಿ.ಕೀ), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್ವುಡ್, ಯಶ್ ದಯಾಳ್.












Click it and Unblock the Notifications