RCB Vs KKR: ಸ್ಪೋಟಕ ಆಟಗಾರನನ್ನು ಕೈಬಿಟ್ಟು ದೊಡ್ಡ ತಪ್ಪು ಮಾಡಿದ ಕೆಕೆಆರ್
RCB Vs KKR: ಐಪಿಎಲ್ 2025ರ ಸೀಸನ್ ಹಬ್ಬಕ್ಕೆ ಇಂದು (ಮಾರ್ಚ್ 22) ಚಾಲನೆ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 175 ರನ್‌ಗಳ ಟಾರ್ಗೆಟ್ ನೀಡಿದೆ. ಈ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭದಲ್ಲೇ ಅಬ್ಬರಿಸಿದ್ದು, ಈ ಮೂಲಕ ಕೆಕೆಆರ್ ಬೌಲರ್‌ಗಳಿಗೆ ನಡುಕ ಹುಟ್ಟಿಸಿದೆ. ಇನ್ನು ಈ ಬಾರಿ ಕೊಲ್ಕತ್ತಾ ದೊಡ್ಡ ತಪ್ಪೊಂದನ್ನು ಮಾಡಿ ಎಡವಿದೆ.
ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಸೆಣಸಾಟ ಆರಂಭಿಸಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಇನ್ನು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಪಡೆ ಆರ್‌ಸಿಗೆ 175 ರನ್‌ಗಳ ಗುರಿಯನ್ನು ನೀಡಿದೆ.

ಈ ಗುರು ಬೆನ್ನತ್ತಿದ್ದ ಆರ್‌ಸಿಬಿ ಇದೀಗ ಕೇವಲ 11.1 ಓವರ್ಗಳಿಗೆ 116 ರನ್‌ಗಳನ್ನು ಕಲೆಹಾಕಿದೆ. ಅದರಲ್ಲೂ ಆರಂಭಿಕರಾಗಿ ವಿರಾಟ್ ಕೊಹ್ಲಿ ಜೊತೆ ಬಂದ ಫಿಲಿಪ್ ಸಾಲ್ಟ್ ಕೇವಲ 31 ಬಾಲ್‌ಗೆ 2 ಸಿಕ್ಸ್, 9 ಬೌಂಡರಿಗಳನ್ನು ಬಾರಿಸುವ ಮೂಲಕ 56 ರನ್‌ಗಳನ್ನು ಕಲೆಹಾಕಿದ್ದಾರೆ. ಈ ಮೂಲಕ ಕೆಕೆಆರ್ ಬೌಲರ್‌ಗಳಿಗೆ ನೆನಪಿಸಿಕೊಳ್ಳುವ ಹಾಗೆ ತಮ್ಮ ಬ್ಯಾಟ್ ಮೂಲಕ ಉತ್ತರ ನೀಡಿದ್ದಾರೆ.
ಈ ವಿಚಾರ ಯಾಕೆ ಅಂದರೆ, ಕಳೆದ ಬಾರಿ ಫಿಲಿಪ್ ಸಾಲ್ಟ್ ಅವರು ಕೆಕೆಆರ್‌ನಲ್ಲಿ ಆಡಿದ್ದು, ಈ ಬಾರಿ ಕೈಬಿಟ್ಟಿದ್ದಾರೆ. ಇದೇ ಸರಿಯಾದ ಸಮಯ ಎಂದು ಆರ್‌ಸಿಬಿ ಫಿಲಿಪ್ ಸಾಲ್ಟ್ ಅವರನ್ನು ತೆಗೆದುಕೊಂಡು ಒಳ್ಳೇ ಕೆಲಸ ಮಾಡಿದೆ. ಈ ಮೂಲಕ ಕೈಬಿಟ್ಟ ತಂಡಕ್ಕೆ ತಮ್ಮ ಬ್ಯಾಟ್‌ನಲ್ಲೇ ಸಾಲ್ಟ್ ಆನ್ಸರ್ ಮಾಡಿದ್ದಾರೆ.
ಆರಂಭದಲ್ಲಿ ಕೆಕೆಆರ್ ತಂಡದ ಆಟಗಾರರು ಭರ್ಜರಿ ಬ್ಯಾಟಿಂಗ್ ಮಾಡಿದರು. ಆದರೆ ಕೊನೆ ಕೊನೆಗೆ ಆರ್‌ಸಿಬಿ ಬೌಲರ್‌ಗಳ ಅಬ್ಬರ ಶುರುವಾಗಿದ್ದು, ಏರುಗತಿಯಲ್ಲಿ ರನ್‌ಗಳನ್ನು ಇಳಿಸಿದರು. ಮೊದಲಿಗೆ ಕೆಕೆಆರ್ ಪರ ಬ್ಯಾಟ್ ಮಾಡಿದ ಕ್ವಿಂಟನ್ ಡಿ ಕಾಕ್ 4, ಸನೀಲ್ ನರೈನ್ 44, ಅಜಿಂಕ್ಯಾ ರಹಾನೆ 56, ವೆಂಕಟೇಶ್ ಅಯ್ಯರ್ 6, ಅಂಗ್ರಿಶ್ 30, ರಿಂಕು ಸಿಂಗ್ 12, ಆಂಡ್ರೆ ರಸೆಲ್ 4, ರಂದೀಪ್ ಸಿಂಗ್ 6, ಹರ್ಷಿತ್ ರಾಣಾ 5, ಸ್ಪೆನ್ಸರ್ ಜಾನ್ಸನ್ 1 ರನ್ ಕಲೆಹಾಕಿದರು.
ಇನ್ನೂ ಆರ್‌ಸಿಬಿ ಪರ ಬೌಲಿಂಗ್ ಮಾಡಿದ ಜೋಶ್ ಹೇಜಲ್‌ವುಡ್ 2, ಯಶ್ ದಯಾಳ್ 1, ರಶಿಕ್ ದಾರ್ ಸಲಾಮ್ 1, ಕ್ರುನಾಲ್ ಪಾಂಡ್ಯ 3, ಸುಯಾಶ್ ಶರ್ಮಾ 1 ವಿಕೆಟ್ ಕೀಳುವ ಮೂಲಕ ಕೆಕೆಆರ್ ಅನ್ನು 175 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಈ ಗುರಿ ಬೆನ್ನತ್ತಿದ ಆರ್‌ಸಿಬಿ ಪಡೆ ಕೂಡ ತಾವೇನು ಕಡಿಮೆಯಿಲ್ಲ ಎಂಬಂತೆ ಕೆಕೆಆರ್ ಬೌಲರ್‌ಗಳ ಬೆವರಿಳಿಸಿದ್ದಾರೆ. ಅದರಲ್ಲೂ ಈ ಬಾರಿ ಕೈಬಿಟ್ಟ ಆಟಗಾರನೇ ಕೆಕೆಆರ್‌ಗೆ ಗುನ್ನ ಕೊಟ್ಟಿದ್ದಾರೆ.
ಈ ಬಾರಿ ಕೆಕೆಆರ್ ಕೈಬಿಟ್ಟ ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ ಅವರನ್ನು ಖರೀದಿ ಮಾಡುವಲ್ಲಿ ಆರ್‌ಸಿಬಿ ಯಶಸ್ವಿ ಆಗಿದೆ. ಇವರಿಗೆ ಬರೋಬ್ಬರಿ 11.50 ಕೋಟಿ ನೀಡಿ ಆರ್‌ಸಿಬಿ ತಂಡಕ್ಕೆ ಸ್ವಾಗತಿಸಿದೆ. ಆರ್‌ಸಿಬಿ ವಿದೇಶಿ ಆರಂಭಿಕ ಆಟಗಾರನ ಹುಡುಕಾಟ ನಡೆಸಿತ್ತು. ನಮಗೆ ಉತ್ತಮ ಸ್ಟ್ರೈಕ್ ರೇಟ್ನೊಂದಿಗೆ ದೊಡ್ಡ ಇನಿಂಗ್ಸ್ ಕಟ್ಟುವ ಸ್ಟಾರ್ ಆಟಗಾರರ ಬೇಕಿತ್ತು. ಈ ರೀತಿಯ ಸ್ಫೋಟಕ ಇನಿಂಗ್ಸ್ಗೆ ಫಿಲ್ ಸಾಲ್ಟ್ ಹೆಸರುವಾಸಿಯಾಗಿದ್ದಾರೆ ಎಂಬುದಕ್ಕೆ ಇಂದಿನ ಅವರ ಸ್ಫೋಟಕ ಬ್ಯಾಂಟಿಗ್ ಸಾಕ್ಷಿ.
28 ವರ್ಷದ ಇಂಗ್ಲೆಂಡ್ ತಂಡದ ಸ್ಫೋಟಕ ಆಟಗಾರ ಫಿಲ್ ಸಾಲ್ಟ್ ತಮ್ಮ ಅಬ್ಬರದ ಬ್ಯಾಟಿಂಗ್‌ನಿಂದಲೇ ಹೆಸರುವಾಸಿಯಾಗಿದ್ದಾರೆ. ಇವರು ಇಂಗ್ಲೆಂಡ್ ತಂಡದ ಪರ 38 ಟಿ20 ಪಂದ್ಯಗಳಲ್ಲಿ 165.32 ಸ್ಟ್ರೈಕ್ ರೇಟ್‌ನಲ್ಲಿ 1,106 ರನ್ ಸಿಡಿಸಿದ್ದಾರೆ. ಅದರಲ್ಲೂ ಇವರ ಟ್ರ್ಯಾಕ್ ರೆಕಾರ್ಡ್ ನೋಡಿಯೇ ಆರ್‌ಸಿಬಿ ಖರೀದಿಸಿದೆ ಅಂತಲೇ ಹೇಳಬಹುದು.
2024ರ ಐಪಿಎಲ್ನಲ್ಲಿ ಕೆಕೆಆರ್ ತಂಡದ ಪರ ಫಿಲ್ ಸಾಲ್ಟ್ ಆರಂಭಿಕ ಬ್ಯಾಟರ್ ಆಗಿ ಬಿಗ್ ಇನ್ನಿಂಗ್ಸ್ ಆಡಿದ್ದರು. ಅಲ್ಲದೆ, ಕೆಕೆಆರ್ ಫೈನಲ್ ತಲುಪಲು ನೆರವಾಗಿದ್ದರು. ಇದುವರೆಗೂ ತಾನು ಆಡಿರುವ 21 ಐಪಿಎಲ್ ಪಂದ್ಯಗಳಲ್ಲಿ 653 ರನ್ ಕಲೆಹಾಕಿದ್ದಾರೆ. ಇದರಲ್ಲಿ 6 ಅರ್ಧಶತಕಗಳು ಸೇರಿವೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ತಂಡವನ್ನು ಎಷ್ಟೋ ಪಂದ್ಯಗಳನ್ನು ಏಕಾಂಗಿಯಾಗಿ ನಿಂತು ಗೆಲ್ಲಿಸಿರುವ ಉದಾಹರಣೆಗಳಿವೆ
ಆರ್‌ಸಿಬಿ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟೀದಾರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕ್ರುನಾಲ್ ಪಾಂಡ್ಯ, ರಶಿಕ್ ದಾರ್ ಸಲಾಮ್, ಸುಯಾಶ್ ಶರ್ಮಾ, ಜೋಶ್ ಹೇಜಲ್‌ವುಡ್, ಯಶ್ ದಯಾಳ್
ಕೆಕೆಆರ್ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್, ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ(ನಾಯಕ), ರಿಂಕು ಸಿಂಗ್, ಅಂಗ್ರಿಶ್ ರಘುವಂಶಿ, ಸುನಿಲ್ ನರೈನ್, ಆ್ಯಂಡ್ರೆ ರಸೆಲ್, ರಮನ್‌ದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ,












Click it and Unblock the Notifications