RCB Playoff Prediction: ಆರ್‌ಸಿಬಿ ಪ್ಲೇ ಆಫ್ ಭವಿಷ್ಯ: ಮೇ 18ರಂದು ಆರೆಂಜ್ ಮತ್ತು ಪರ್ಪಲ್ ಕ್ಯಾಪ್..
IPL 2025 RCB Playoffs Prediction: ಭಾರತ-ಪಾಕ್ ನಡುವೆ ಪರಿಸ್ಥಿತಿ ಉಗ್ವಿಗ್ನಗೊಂಡ ಕಾರಣ ಐಪಿಎಲ್ 2025 ಟೂರ್ನಿಯನ್ನು ಅರ್ಧಕ್ಕೆ ರದ್ದಪಡಿಸಿ ಮುಂದೂಡಲಾಗಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ಮತ್ತೆ ಮುಂದುವರೆಸಲಾಗಿದೆ. ಹೊಸ ವೇಳೆಪಟ್ಟಿಯಂತೆಯೇ ಶನಿವಾರ ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ನಡೆಯಬೇಕಿದ್ದ ಪಂದ್ಯ ಮಳೆಯಿಂದ ರದ್ದಾಗಿದೆ. ಹಾಗಾದ್ರೆ ಆರ್‌ಸಿಬಿ ಪ್ಲೇ ಆಫ್ ಭವಿಷ್ಯ ಹೇಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ವಿಶ್ವದಲ್ಲೇ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆಗಿದೆ. ಅದರಲ್ಲೂ ಐಪಿಎಲ್‌ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಆರ್‌ಸಿಬಿ ಆಗಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಊಹಿಸಲಾರದ ಸ್ಥಾನಕ್ಕೆ ಬಂದು ನಿಂತಿದೆ. ಅಷ್ಟರ ಮಟ್ಟಿಗೆ ಈ ಬಾರಿ ಉತ್ತಮ ಪ್ರದರ್ಶನ ತೋರುತ್ತಾ, ಸ್ಟ್ರಾಂಗ್ ಟೀಂಗಳನ್ನು ಬಗ್ಗುಬಡಿದು ಪ್ಲೇ ಆಫ್ ಹೊಸ್ತಿಲಿಗೆ ಬಂದು ನಿಂತಿದೆ.

ಪ್ಲೇ ಆಫ್ ರೇಸ್‌ನಲ್ಲಿರುವ ತಂಡಗಳು
* ರಾಯಲ್ ಚಾಲೆಂಜರ್ಸ್ ಬೆಂಗಳೂರು
* ಗುಜರಾತ್ ಟೈಟಾನ್ಸ್
* ಪಂಜಾಬ್ ಕಿಂಗ್ಸ್
* ಮುಂಬೈ ಇಂಡಿಯನ್ಸ್
* ಡೆಲ್ಲಿ ಕ್ಯಾಪಿಟಲ್ಸ್
* ಆರ್‌ಸಿಬಿ: 12 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೂರರಲ್ಲಿ ಸೋತು ಉಳಿದ 8 ಪಂದ್ಯಗಳಲ್ಲಿ ಗೆದ್ದು, ಒಂದು ಪಂದ್ಯ ರದ್ದಿನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 17 ಅಂಕಗಳನ್ನು ಪಡೆಯುವ ಮೂಲಕ ಅಗ್ರ ಸ್ಥಾನಕ್ಕೇರಿದೆ. ಆದರೂ ಪ್ಲೇ ಆಫ್‌ಗೇರಲು ಉಳಿದ ಎರಡರಲ್ಲಿ ಇನ್ನೊಂದು ಪಂದ್ಯವನ್ನಾದರೂ ಗೆಲ್ಲಲ್ಲೇಬೇಕಿದೆ. ಯಾಕಂದ್ರೆ ರನ್ ರೇಟ್ ಕೆಳಗಿರುವ ತಂಡಕ್ಕಿಂತ ತುಸು ಕಡಿಮೆಯಿದೆ.
ಉಳಿದ ತಂಡಗಳಿಗೂ ಇನ್ನೂ ಎರಡ್ಮೂರು ಪಂದ್ಯಗಳು ಬಾಕಿಯಿವೆ. ಆದ್ದರಿಂದ ಆರ್‌ಸಿಬಿ ಉತ್ತಮ ರನ್ ರೇಟ್‌ನ ಮೂಲಕ ಇನ್ನೊಂದು ಪಂದ್ಯ ಗೆದ್ದರೆ ಸಾಕು 19 ಅಂಕಗಳನ್ನು ಪಡೆದು ಪ್ಲೇ ಆಫ್‌ಗೇರಲಿದೆ. ಹೊಸ ವೇಳಾಪಟ್ಟಿ ಪ್ರಕಾರ ಇಂದು (ಮೇ 17) ಆರ್‌ಸಿಬಿಯು ಕೆಕೆಆರ್ ವಿರುದ್ಧ ಸೆಣಸಬೇಕಿತ್ತು. ಆದರೆ, ಮಳೆ ಕಾರಣ ಪಂದ್ಯ ರದ್ದಾಗಿದ್ದು, ಎರಡು ತಂಡಗಳಿಗೂ ತಲಾ ಒಂದೊಂದು ಅಂಕಗಳನ್ನು ನೀಡಲಾಗಿದೆ. ಮುಂದಿನ ಪಂದ್ಯಗಳು ಎಸ್‌ಆರ್‌ಎಚ್ ಹಾಗೂ ಎಲ್‌ಎಸ್‌ಜಿ ವಿರುದ್ಧ ಇವೆ.
* ಗುಜರಾತ್ ಟೈಟಾನ್ಸ್: ಇದುವರೆದೂ ಆಡಿರುವ 11 ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವು 3ರಲ್ಲಿ ಸೋತು ಉಳಿದ 8 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 16 ಅಂಕಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯಗಳು ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಬೇಕಿದೆ. ಇವುಗಳಲ್ಲಿ ಒಂದು ಪಂದ್ಯ ಗೆದ್ದರೆ ಪ್ಲೇ ಆಫ್ ಪ್ರವೇಶ ಮಾಡಲಿದೆ.
* ಪಂಜಾಬ್ ಕಿಂಗ್ಸ್: ಆಡಿರುವ 11 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವು 3ಲ್ಲಿ ಸೋತು 7 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 15 ಅಂಕಗಳನ್ನು ಪಡೆಯುವ ಮೂಲಕ 3ನೇ ಸ್ಥಾನದಲ್ಲಿದೆ. ಇನ್ನು ಮೂರು ಪಂದ್ಯಗಳು ಉಳಿದಿದ್ದು, ಇದರಲ್ಲಿ ಕನಿಷ್ಠ ಎರಡರಲ್ಲಿ ಗೆದ್ದರೆ, ಪ್ಲೇ ಆಫ್‌ಗೆ ಎಂಟ್ರಿ ಕೊಡಬಹುದು. ಮುಂದಿನ ಪಂದ್ಯಗಳನ್ನು ಆರ್‌ಆರ್, ಡಿಸಿ, ಮುಂಬೈ ವಿರುದ್ಧ ಆಡಬೇಕಿದೆ.
* ಮುಂಬೈ ಇಂಡಿಯನ್ಸ್: ಆಡಿರುವ 12 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವು 5ರಲ್ಲಿ ಸೋತು ಉಳಿದ 7 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 14 ಅಂಕಗಳನ್ನು ಪಡೆಯುವ ಮೂಲಕ 4ನೇ ಸ್ಥಾನದಲ್ಲಿದೆ. ಇನ್ನೂ ಎರಡು ಪಂದ್ಯಗಳು ಉಳಿದಿದ್ದು, ಆ ಎರಡರಲ್ಲೂ ಗೆದ್ದರೆ ಮಾತ್ರ ಪ್ಲೇ ಆಫ್‌ಗೆ ಅರ್ಹತೆ ಪಡೆಯಲಿದೆ. ಮುಂದಿನ ಪಂದ್ಯಗಳನ್ನು ಡೆಲ್ಲಿ ಹಾಗೂ ಪಂಜಾಬ್ ವಿರುದ್ಧ ಆಡಬೇಕಿದೆ.
* ಡೆಲ್ಲಿ ಕ್ಯಾಪಿಟಲ್ಸ್: ಇದುವರೆದೂ ಆಡಿರುವ 11 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಟ್ ತಂಡವು 4ರಲ್ಲಿ ಸೋತು ಉಳಿದ 6ರಲ್ಲಿ ಗೆದ್ದು 13 ಅಂಕಗಳನ್ನು ಪಡೆಯುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 5ನೇ ಸ್ಥಾನದಲ್ಲಿದೆ. ಇನ್ನೂ ಉಳಿದಿರುವ ಮೂರರಲ್ಲೂ ಗೆದ್ದರೆ ಪ್ಲೇ ಆಫ್ ಪ್ರವೇಶಕ್ಕೆ ಅವಕಾಶ ಸಿಕ್ಕರೂ ಸಿಗಬಹುದು. ಮುಂದಿನ ಪಂದ್ಯಗಳನ್ನು ಜಿಟಿ, ಮುಂಬೈ, ಪಂಜಾಬ್ ಕಿಂಗ್ಸ್ ವಿರುದ್ಧ ಆಡಬೇಕಿದೆ.
ಇನ್ನುಳಿದಂತೆ ಕೊಲ್ಕತ್ತಾ ನೈಟ್ ರೈಡರ್ಸ್, ಲಕ್ಕೋ ಸೂಪರ್ ಜೈಂಟ್ಸ್ ಸರ್ ಸನ್ ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಬಹುತೇಕ ಟೂರ್ನಿಯಿಂದ ಹೊರಬಿದ್ದಿದ್ದು, ಈ ಮೂಲಕ ಪ್ಲೇ ಆಫ್ ಪ್ರವೇಶದಿಂದ ವಂಚಿತ ಆಗಿವೆ ಅಂತಲೇ ಹೇಳಬಹದು. ಒಟ್ಟಿನಲ್ಲಿ ಆರ್‌ಸಿಬಿ, ಗುಜರಾಟ್ ಟೈಟಾನ್ಸ್ ಹೊರತುಪಡಿಸಿ ಮತ್ತೆರಡು ಯಾವ ತಂಡಗಳು ಪ್ಲೇ ಆಫ್ ಪ್ರವೇಶ ಪಡೆಯಲಿವೆ ಎನ್ನುವುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ.
ಪಾಯಿಂಟ್ಸ್ ಟೇಬಲ್‌ನಲ್ಲಿ ಯಾವ ತಂಡ ಎಷ್ಟನೇ ಸ್ಥಾನ?
1. ಗುಜರಾತ್ ಟೈಟಾನ್ಸ್
2. ರಾಯಲ್ ಚಾಲೆಂಜರ್ಸ್ ಬೆಂಗಳೂರು
3. ಪಂಜಾಬ್ ಕಿಂಗ್ಸ್
4. ಮುಂಬೈ ಇಂಡಿಯನ್ಸ್
5. ಡೆಲ್ಲಿ ಕ್ಯಾಪಿಟಲ್ಸ್
6. ಕೊಲ್ಕತ್ತಾ ನೈಟ್ ರೈಡರ್ಸ್
7. ಲಕ್ನೋ ಸೂಪರ್ ಜೈಂಟ್ಸ್
8. ಸನ್ ರೈಸರ್ಸ್ ಹೈದರಾಬಾದ್
9. ರಾಜಸ್ಥಾನ್ ರಾಯಲ್ಸ್
10. ಚೆನ್ನೈ ಸೂಪರ್ ಕಿಂಗ್ಸ್
ಇನ್ನು ಐಪಿಎಲ್ 2025ರಲ್ಲಿ ಆರ್‌ಸಿಬಿ ತಂಡವು ಗೆಲುವಿನ ಹಾದಿಯನ್ನು ಹಿಡಿದಿದ್ದು, ಟ್ರೋಫಿ ಗೆಲ್ಲುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಯಾಕಂದ್ರೆ ಇದುವರೆಗೂ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದೆ. ಈ ಮೂಲಕ ಮೂಲಕ ಪ್ಲೇ ಆಫ್ ಪ್ರವೇಶದ ಹಾದಿಯನ್ನು ಸುಗಮಗೊಳಿಸಿಕೊಂಡಿದೆ.
ಆರ್‌ಸಿಬಿಯು ತವರಿನಲ್ಲಿ ಮೂರು ಪಂದ್ಯಗಳನ್ನು ಸೋತು, ಒಂದರಲ್ಲಿ ರದ್ದು ಬಿಟ್ಟರೆ ಉಳಿದ ಎಲ್ಲಾ ಪಂದ್ಯಗಳಲ್ಲೂ ಗೆದ್ದು ಬೀಗಿದೆ. ಎರಡು ತವರಿನಲ್ಲಿ ಗೆದ್ದರೆ, ಉಳಿದ ಆರು ಪಂದ್ಯಗಳನ್ನು ತವರಿನಂದಾಚೆ ಗೆದ್ದು ಬೀಗಿದೆ. ಇದೀಗ ಪ್ಲೇ ಆಫ್ ರೇಸ್‌ನಲ್ಲಿ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಭಾರೀ ಪೈಪೋಟಿ ನಡೆಸುತ್ತಿವೆ.
ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವಿರಾಟ್ ಕೊಹ್ಲಿ
* ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್: 510 ರನ್
* ಗುಜರಾಜ್ ಟೈಟಾನ್ಸ್ ತಂಡದ ಎಸ್.ಸುದರ್ಶನ್: 509 ರನ್
* ಗುಜರಾಜ್ ಟೈಟಾನ್ಸ್ ತಂಡದ ಶುಭ್ಮನ್ ಗಿಲ್: 508 ರನ್
* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ: 505 ರನ್
* ಗುಜರಾತ್ ಟೈಟಾನ್ಸ್ ತಂಡದ ಜೋಶ್ ಬಟ್ಲರ್: 500 ರನ್
ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಆರ್‌ಸಿಬಿ ಸ್ಫೋಟಕ ಬೌಲರ್
* ಗುಜರಾತ್ ಟೈಟಾನ್ಸ್ ತಂಡದ ಪ್ರಸಿದ್ಧ್ ಕೃಷ್ಣ: 20 ವಿಕೆಟ್
* ಚೈನ್ನೈ ಸೂಪರ್ ಕಿಂಗ್ಸ್ ತಂಡದ ನೂರ್ ಅಹ್ಮದ್: 20 ವಿಕೆಟ್
* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೋಶ್ ಹ್ಯಾಜಲ್‌ವುಡ್: 18 ವಿಕೆಟ್
* ಮುಂಬೈ ಇಂಡಿಯನ್ಸ್ ತಂಡದ ಟ್ರೆಂಟ್ ಬೋಲ್ಟ್: 18 ವಿಕೆಟ್
* ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವರುಣ್ ಚಕ್ರವರ್ತಿ: 17 ವಿಕೆಟ್
ಸಾಮಾನ್ಯವಾಗಿ ಐಪಿಎಲ್‌ನಲ್ಲಿ ಅತೀ ಹೆಚ್ಚು ರನ್ ಬಾರಿಸಿದವರಿಗೆ ಆರೆಂಜ್ ಕ್ಯಾಪ್ ಹಾಗೂ ಅತೀ ಹೆಚ್ಚು ವಿಕೆಟ್ ಕಬಳಿಸಿದವರಿಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಇವೆರಡು ಕ್ಯಾಪ್‌ಗಳನ್ನು ಆರ್‌ಸಿಬಿ ವಶಪಡಿಸಿಕೊಳ್ಳಲು ಕಾತರದಿಂದ ಕಾಯುತ್ತಿದೆ. ಅಲ್ಲದೆ, ಪ್ರಮುಖವಾಗಿ ಈ ಬಾರಿಯ ಟ್ರೋಫಿ ಮೇಲೆ ಹೆಚ್ಚು ಗಮನಹರಿಸಿ ಜವಾಬ್ದಾರಿಯುತ ಆಟ ಆಡುವ ಮೂಲಕ ಸ್ಟ್ರಾಂಗ್ ಟೀಂಗಳನ್ನೇ ಬಗ್ಗುಬಡಿಯುತ್ತಾ ಬಂದಿದೆ.












Click it and Unblock the Notifications