RCB Green Jersey: ಗ್ರೀನ್ ಜೆರ್ಸಿಯಲ್ಲಿ ಆರ್‌ಆರ್‌ ತವರಲ್ಲೇ ಆರ್‌ಸಿಬಿಗೆ ಗೆಲುವು.. ಮರುಕಳಿಸುತ್ತಾ 2023ರ ನೆನಪು?

RCB Green Jersey: ಐಪಿಎಲ್‌ ಎಲ್ಲಾ ಆವೃತ್ತಿಗಳಲ್ಲೂ ಒಂದು ಪಂದ್ಯದಲ್ಲಿ ಆರ್‌ಸಿಬಿ ಹಸಿರು ಜೆರ್ಸಿ ಧರಿಸಿ ಆಡಿಕೊಂಡು ಬರುತ್ತಿದೆ. ಈ ಜೆರ್ಸಿ ಧರಿಸಿ ಆರ್‌ಸಿಬಿ ಹೆಚ್ಚು ಪಂದ್ಯಗಳನ್ನು ಸೋಲು ಕಂಡಿದೆ. ಇಂದು (ಏಪ್ರಿಲ್‌ 13) ಕೂಡ ಅದೇ ಲುಕ್‌ನಲ್ಲಿ ಕಣಕ್ಕಿಳಿಯುತ್ತಿರುವ ಹಿನ್ನೆಲೆ ಅಭಿಮಾನಿಗಳಿಗೆ ಆತಂಕ ಹೆಚ್ಚಾಗಿದೆ, ಮತ್ತೊಂದೆಡೆ ಸಂತಸದ ಸುದ್ದಿಯೂ ಇದೆ.

ಇಂದು (ಏಪ್ರಿಲ್‌ 13) ಆರ್‌ಆರ್ ವಿರುದ್ಧದ 28ನೇ ಪಂದ್ಯದಲ್ಲಿ ಗ್ರೀನ್‌ ಜೆರ್ಸಿ ಧರಿಸಿ ಆರ್‌ಸಿಬಿ ಕಣಕ್ಕಿಳಿಯಲು ಸಜ್ಜಾಗಿದೆ. ಆದ್ದರಿಂದ ಅಭಿಮಾನಿಗಳು ಆರ್‌ಸಿಬಿ ಸೋಲುವ ಆತಂಕದಲ್ಲಿದ್ದಾರೆ. ಆದರೆ ಈ ಹಿಂದೆ ಅಂದರೆ ತವರಲ್ಲೇ ಇದೇ ಜೆರ್ಸಿ ತೊಟ್ಟು ಆರ್‌ಸಿಬಿಯು ಆರ್‌ಆರ್ ವಿರುದ್ಧ ಗೆಲುವು ಸಾಧಿಸಿದೆ. ಇಂದು ಸಹ ಇದು ಜೈಪುರದಲ್ಲಿಯೂ ಮುಂದುವರೆದರೂ ಆಶ್ಚರ್ಯವಿಲ್ಲ. ಯಾಕೆಂದ್ರೆ ಆರ್‌ಸಿಬಿ ಈ ಬಾರಿ ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ಪ್ರಬಲವಾಗಿದೆ.

IPL 2025 RCB Players Prepared to Defeat RR in Green Jersey

ಐಪಿಎಲ್‌ 2025ರ 28ನೇ ಪಂದ್ಯ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿ ಆಗಲಿದ್ದು, ಆರ್‌ಸಿಬಿ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಆದರೆ ಈ ಗ್ರೀನ್‌ ಜೆರ್ಸಿಯೇ ಇದೀಗ ಅಭಿಮಾನಿಗಳನ್ನು ಚಿಂತೆಗೊಳಗಾಗುವಂತೆ ಮಾಡಿದೆ.

ಇದುವರೆಗೂ ಐಪಿಎಲ್‌ನಲ್ಲಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿದು ಆರ್‌ಸಿಬಿ ಗೆದ್ದಿರುವುದು ಕೇವಲ 4 ಪಂದ್ಯಗಳಲ್ಲಿ ಬಾರಿ ಮಾತ್ರ. 2011ರಿಂದ ಆರ್ಸಿಬಿ ತಂಡ ಗ್ರೀನ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ನಮ್ಮ ಸುತ್ತಲಿನ ಹಸಿರು ಪರಿಸರವನ್ನು ಸಂರಕ್ಷಣೆ ಮಾಡುವಂತೆ ಜಾಗೃತಿ ಮೂಡಿಸುವ ಇದರ ಉದ್ದೇಶವಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗ್ರೀನ್ ಜೆರ್ಸಿಯಲ್ಲಿ ಈವರೆಗೆ 14 ಪಂದ್ಯಗಳನ್ನಾಡಿದ್ದು, ಈ ವೇಳೆ ನಾಲ್ಕು ಬಾರಿ ಮಾತ್ರ ಗೆಲುವು ಸಾಧಿಸಿದೆ. ಇನ್ನುಳಿದ 8 ಪಂದ್ಯಗಳಲ್ಲಿ ಸೋಲು ಕಂಡಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಬರಲಿಲ್ಲ.

2011ರಲ್ಲಿ ಗೆಲುವು, 2012ರಲ್ಲಿ ಸೋಲು, 2013 ರಲ್ಲಿ ಸೋಲು, 2014ರಲ್ಲಿ ಸೋಲು, 2015ರಲ್ಲಿ ಫಲಿತಾಂಶ ಇಲ್ಲ, 2016ರಲ್ಲಿ ಗೆಲುವು, 2017 ಸೋಲು, 2018 ಸೋಲು, 2019 ಸೋಲು, 2020 ಸೋಲು, 2021 ರಲ್ಲಿ ನೀಲಿ ಜೆರ್ಸಿ ಧರಿಸಿ ಸೋಲು ಕಂಡಿತ್ತು, 2022ರಲ್ಲಿ ಗೆಲುವು, 2023ರಲ್ಲಿ ಆರ್‌ಆರ್ ವಿರುದ್ಧ ಆರ್‌ಸಿಬಿ ಗೆಲುವು ಸಾಧಿಸಿತ್ತು, 2024 ರಲ್ಲಿ ಸೋಲನುಭವಿಸಿತ್ತು.

ಇಂದಿನ ಪಂದ್ಯ ಜೈಪುರದಲ್ಲಿ ಇದ್ದು, ಆರ್‌ಸಿಬಿಯು ಆರ್‌ಆರ್ ವಿರುದ್ಧ 2023ರಂತೆ ಗೆಲ್ಲುವ ಭರವಸೆಯಲ್ಲಿದೆ. ಈ ಮೂಲಕ ಹಸಿರು ಜೆರ್ಸಿ ತೊಟ್ಟಾಗಲೆಲ್ಲಾ ಸೋಲು ಖಚಿತ ಎಂಬ ಮಾತನ್ನು ಸುಳ್ಳು ಮಾಡಲು ಆರ್‌ಸಿಬಿ ಸಜ್ಜಾಗಿದೆ.

2011ರ ಆವೃತ್ತಿಯಿಂದಲೂ ಪ್ರತಿ ಆವೃತ್ತಿಯ ಒಂದು ಪಂದ್ಯದಲ್ಲಿ ಆರ್‌ಸಿಬಿ ಹಸಿರು ಜೆರ್ಸಿ ತೊಟ್ಟು ಪಂದ್ಯ ಆಡಲು ಆರಂಭಿಸಿತು. ನಮ್ಮ ಸುತ್ತಲಿನ ಹಸಿರು ಪರಿಸರವನ್ನು ಸಂರಕ್ಷಣೆ ಮಾಡುವಂತೆ ಜಾಗೃತಿ ಮೂಡಿಸುವ ಉದ್ದೇಶ ಆಗಿದೆ. ಹಾಗಾದ್ರೆ ಈ ಜೆರ್ಸಿಯಲ್ಲಿ ಆಡಿದ ಆರ್‌ಸಿಬಿ ಇತಿಹಾಸ ಏನೆಂದು ಇಲ್ಲಿ ತಿಳಿಯಿರಿ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲಿಪ್‌ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಸುಯಾಶ್ ಶರ್ಮಾ.

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ/ವಿ.ಕೀ.), ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+