IPL 2025 RCB: ಐಪಿಎಲ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ಆರ್‌ಸಿಬಿ ಸ್ಥಾನ; ಆರೆಂಜ್‌, ಪರ್ಪಲ್‌ ಕ್ಯಾಪ್‌

IPL 2025 Points Table: ಐಪಿಎಲ್‌ 2025ರ ಆವೃತ್ತಿ ಅದ್ಧೂರಿಯಾಗಿ ನಡೆಯುತ್ತಿದೆ. ಹಾಗಾದ್ರೆ ಇದುವರೆಗೂ ಅಂದರೆ ಆರ್‌ಸಿಬಿ ಸೇರಿದಂತೆ ಉಳಿದ ತಂಡಗಳು ಎಷ್ಟು ಪಂದ್ಯಗಳನ್ನು ಆಡಿ ಎಷ್ಟು ಗೆದ್ದಿವೆ? ಪಾಯಿಂಟ್ಸ್‌ ಟೇಬಲ್‌ನಲ್ಲಿ ಸ್ಥಾನ ಏನು ಹಾಗೂ ಆರೆಂಜ್‌, ಪರ್ಪಲ್‌ ಕ್ಯಾಪ್‌ ಯಾರ ಬಳಿಯಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ವಿಶ್ವದಲ್ಲೇ ಅತ್ಯಂತ ದೊಡ್ಡ ಲೀಗ್‌ ಅಂದ್ರೆ ಅದು ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್‌). ಈ ಬಾರಿ ಅಂದರೆ 18ನೇ ಆವೃತ್ತಿ ಭರ್ಜರಿಯಾಗಿ ನಡೆಯುತ್ತಿದ್ದು, 10 ತಂಡಗಳ ಪರ್ಫಾಮೆನ್ಸ್ ಹೇಗಿದೆ? ಅದರಲ್ಲೂ ಐಪಿಎಲ್‌ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ತಂಡ ಪಂಜಾಬ್‌ ಕಿಂಗ್ಸ್‌ಗೆ ಸೋಲುಣಿಸುವ ಮೂಲಕ ಅಂಕಪಟ್ಟಿಯಲ್ಲಿ ಕಳಗಿನಿಂದ ಮೇಲೆ ಜಿಗಿದಿದೆ.

IPL 2025 Points Table Know RCB position and Orange Cap And Purple Cap Standings on April 23

1. ಇದುವರೆದೂ ಆಡಿರುವ 8 ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್‌ ತಂಡವು 2ಲ್ಲಿ ಸೋತು ಉಳಿದ 6 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ 12 ಅಂಕಗಳನ್ನು ಪಡೆಯುವ ಮೂಲಕ ಅಗ್ರ ಸ್ಥಾನದಲ್ಲಿದೆ.

2. ಇದುವರೆದೂ ಆಡಿರುವ 8 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಟ್‌ ತಂಡವು 2ರಲ್ಲಿ ಸೋತು ಉಳಿದ 6ರಲ್ಲಿ ಗೆದ್ದು 12 ಅಂಕಗಳನ್ನು ಪಡೆಯುವ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ.

3. ಆಡಿರುವ 8 ಪಂದ್ಯಗಳಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಮೂರರಲ್ಲಿ ಸೋತು ಉಳಿದ 5 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ 10 ಅಂಕಗಳನ್ನು ಪಡೆಯುವ ಮೂಲಕ 3ನೇ ಸ್ಥಾನದಲ್ಲಿದೆ.

4. ಆಡಿರುವ 8 ಪಂದ್ಯಗಳಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವು 3ಲ್ಲಿ ಸೋತು ಉಳಿದ 5 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ 10 ಅಂಕಗಳನ್ನು ಪಡೆಯುವ ಮೂಲಕ 4ನೇ ಸ್ಥಾನದಲ್ಲಿದೆ.

5. ಆಡಿರುವ 9 ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ತಂಡವು 4ರಲ್ಲಿ ಸೋತು ಉಳಿದ 5 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ 10 ಅಂಕಗಳನ್ನು ಪಡೆಯುವ ಮೂಲಕ 5ನೇ ಸ್ಥಾನದಲ್ಲಿದೆ.

6. ಆಡಿರುವ 8 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್‌ ತಂಡವು 4ರಲ್ಲಿ ಸೋತು ಉಳಿದ 4 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ 8 ಅಂಕಗಳನ್ನು ಪಡೆಯುವ ಮೂಲಕ 6ನೇ ಸ್ಥಾನದಲ್ಲಿದೆ.

7. ಆಡಿರುವ 8 ಪಂದ್ಯಗಳಲ್ಲಿ ಕೊಲ್ಕಾತ್ತಾ ನೈಟ್‌ ರೈಡರ್ಸ್‌ ತಂಡವು 5ಲ್ಲಿ ಸೋತು ಉಳಿದ 3 ಪಂದ್ಯಗಳಲ್ಲಿ ಗೆದ್ದು ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ 6 ಅಂಕಗಳನ್ನು ಪಡೆಯುವ 7ನೇ ಸ್ಥಾನದಲ್ಲಿದೆ.

8. ಆಡಿರುವ 8 ಪಂದ್ಯಗಳಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವು 6ರಲ್ಲಿ ಸೋತು ಉಳಿದ 2 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ 4 ಅಂಕಗಳನ್ನು ಪಡೆಯುವ ಮೂಲಕ 8ನೇ ಸ್ಥಾನದಲ್ಲಿದೆ.

9. ಆಡಿರುವ 7 ಪಂದ್ಯಗಳಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು 5ರಲ್ಲಿ ಸೋತು ಉಳಿದ 2 ಪಂದ್ಯಗಳಲ್ಲಿ ಮಾತ್ರ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ 4 ಅಂಕಗಳನ್ನು ಪಡೆಯುವ ಮೂಲಕ 9ನೇ ಸ್ಥಾನದಲ್ಲಿದೆ.

10. ಆಡಿರುವ 8 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 6ರಲ್ಲಿ ಸೋತು ಉಳಿದ 2 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ 4 ಅಂಕಗಳನ್ನು ಪಡೆಯುವ ಮೂಲಕ ಕೊನೇ ಸ್ಥಾನವನ್ನು ಅಂದರೆ ಕಳಗಿನಿಂದ ಒಂದನೇ ಸ್ಥಾನ ಅಲಂಕರಿಸಿದೆ. ಪ್ರತಿ ಬಾರಿಯೂ ಪಾಯಿಂಟ್ಸ್‌ ಟೇಬಲ್‌ನಲ್ಲ ಮೇಲೆ ಇರುತ್ತಿದ್ದ ತಂಡಗಳೇ ಈ ಬಾರಿ ಕೆಳಗಿಳಿದಿರುವುದೇ ಆಶ್ಚರ್ಯಕರ ಸಂಗತಿಯಾಗಿದೆ.

ಪಾಯಿಂಟ್ಸ್‌ ಟೇಬಲ್‌ನಲ್ಲಿ ಯಾವ ತಂಡ ಎಷ್ಟನೇ ಸ್ಥಾನದಲ್ಲಿದೆ?

1. ಗುಜರಾತ್ ಟೈಟಾನ್ಸ್‌
2. ಡೆಲ್ಲಿ ಕ್ಯಾಪಿಟಲ್ಸ್‌
3. ರಾಯಲ್‌ ಚಾಲೆಂಜರ್ಸ್ ಬೆಂಗಳೂರು
4. ಪಂಜಾಬ್‌ ಕಿಂಗ್ಸ್‌
5. ಲಕ್ನೋ ಸೂಪರ್ ಜೈಂಟ್ಸ್‌
6. ಮುಂಬೈ ಇಂಡಿಯನ್ಸ್‌
7. ಕೊಲ್ಕತ್ತಾ ನೈಟ್ ರೈಡರ್ಸ್‌
8. ರಾಜಸ್ಥಾನ್‌ ರಾಯಲ್ಸ್‌
9. ಸನ್‌ ರೈಸರ್ಸ್‌ ಹೈದರಾಬಾದ್‌
10. ಚೆನ್ನೇ ಸೂಪರ್ ಕಿಂಗ್ಸ್‌

ಇನ್ನು ಐಪಿಎಲ್ 2025ರಲ್ಲಿ ಪಂಜಾಬ್ ಕಿಂಗ್ಸ್ ತಂಡವು ಗೆಲುವಿನ ಹಾದಿಯನ್ನು ಹಿಡಿದಿತ್ತು. ಆದರೆ ನಿನ್ನೆ ಆರ್‌ಸಿಬಿ ಅವರ ಓಟಕ್ಕೆ ಬ್ರೇಕ್‌ ಹಾಕಿಬಿಟ್ಟಿದೆ. ಈ ಮೂಲಕ ಮೂರನೇ ಸ್ಥಾನದಲ್ಲಿ ಪಂಜಾಬ್‌ ಅನ್ನು ಕೆಳಗಿಟ್ಟು ಆರ್‌ಸಿಬಿ ಆ ಸ್ಥಾನವನ್ನು ಅಲಂಕರಿಸಿದೆ.

ಇನ್ನು ಆರ್‌ಸಿಬಿಯು ತವರಿನಲ್ಲಿ ಸತತ ಮೂರು ಪಂದ್ಯಗಳನ್ನು ಸೋತಿದ್ದು, ಬೇರೆ ರಾಜ್ಯಗಳಲ್ಲಿ 5 ಗೆಲವು ಸಾಧಿಸಿದೆ. ಏಪ್ರಿಲ್‌ 20ರಂದು ನಡೆದ 37ನೇ ಪಂದ್ಯದಲ್ಲಿ ಆರ್‌ಸಿಬಿಯು ಪಂಜಾಬ್‌ ವಿರುದ್ಧ ಸೋಲಿನ ಸೇಡು ತೀರಿಸಿಕೊಂಡು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೇಲೇರಿದೆ. ಹಾಗೆಯೇ ನಾಳೆ ಅಂದರೆ (ಏಪ್ರಿಲ್‌ 24) ತವರು ಮೈದಾನ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಪಂದ್ಯದಲ್ಲೂ ಗೆಲ್ಲಲ್ಲೇಬೇಕೆನ್ನುವ ಹಠದಲ್ಲಿದೆ. ಯಾಕಂದ್ರೆ ಇದುವರೆಗೂ ತವರಿನಲ್ಲಿ ಸತತ ಸೋಲು ಕಂಡಿದೆ. ಆದ್ದದರಿಂದ ನಾಳೆಯಾದರೂ ಹೋಂ ಗ್ರೌಂಡ್‌ನಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೇಲೆರುವ ಭರವಸೆಯಲ್ಲಿದೆ.

ಆರೆಂಜ್ ಕ್ಯಾಪ್ ಯಾರಿಗೆ?: ಈ ಆವೃತ್ತಿಯಲ್ಲಿ ಇಲ್ಲಿಯವರೆಗೂ ಆಡಿದ ಪಂದ್ಯಗಳಲ್ಲಿ ಅತೀ ಹೆಚ್ಚು ರನ್‌ಗಳಿಸುವ ಮೂಲಕ ಗುಜರಾತ್ ಟೈಟಾನ್ಸ್ ತಂಡದ ಎಸ್‌.ಸುದರ್ಶನ್‌ ಅಗ್ರಸ್ಥಾನದಲ್ಲಿದ್ದಾರೆ. ಅವರು 8 ಪಂದ್ಯಗಳಲ್ಲಿ 417 ರನ್ ಗಳಿಸಿದ್ದಾರೆ.

ಅತೀ ಹೆಚ್ಚು ರನ್‌ ಬಾರಿಸಿದವರು

* ಗುಜರಾತ್ ಟೈಟಾನ್ಸ್ ತಂಡದ ಎಸ್‌.ಸುದರ್ಶನ್‌: 417
* ಲಕ್ನೋ ಸೂಪರ್ ಜೈಂಟ್ಸ್‌ ತಂಡದ ನಿಕೋಲಸ್ ಪೂರನ್: 377
* ಗುಜರಾತ್‌ ಟೈಟಾನ್ಸ್ ತಂಡದ ಜೋಶ್‌ ಬಟ್ಲರ್‌: 356
* ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಮಿಚಲ್‌ ಮಾರ್ಷ್‌: 344
* ಮುಂಬೈ ಇಂಡಿಯನ್ಸ್‌ ತಂಡದ ಸೂರ್ಯಕುಮಾರ್ ಯಾದವ್‌: 333

ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?:
ಗುಜರಾತ್ ಟೈಟಾನ್ಸ್‌ ತಂಡದ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ಅವರು ಅತೀ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಪರ್ಪಲ್‌ ಕ್ಯಾಪ್‌ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಅವರು 16 ವಿಕೆಟ್ ಪಡೆದಿದ್ದಾರೆ.

ಅತೀ ಹೆಚ್ಚು ವಿಕೆಟ್‌ ಪಡೆದವರು

* ಗುಜರಾತ್ ಟೈಟಾನ್ಸ್‌ ತಂಡದ ಪ್ರಸಿದ್ಧ್‌ ಕೃಷ್ಣ: 16 ವಿಕೆಟ್
* ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪಿನ್ನರ್ ಕುಲ್‌ದೀಪ್‌ ಯಾದವ್: 12 ವಿಕೆಟ್‌
* ಚೈನ್ನೈ ಸೂಪರ್ ಕಿಂಗ್ಸ್‌ ತಂಡದ ನೂರ್ ಅಹ್ಮದ್‌: 12 ವಿಕೆಟ್‌
* ಗುಜರಾತ್ ಟೈಟಾನ್ಸ್‌ ತಂಡದ ಎಸ್‌.ಕಿಶೋರ್: 12
* ಆರ್‌ಸಿಬಿ ತಂಡದ ವೇಗಿ ಜೋಶ್ ಹ್ಯಾಜಲ್‌ವುಡ್: 12 ವಿಕೆಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+