IPL 2025 Playoffs: ಟೂರ್ನಿಯಿಂದ ಹೊರಬಿದ್ದ ಕೆಕೆಆರ್, ಆರ್‌ಸಿಬಿ ಪ್ಲೇ ಆಫ್ ಭವಿಷ್ಯ; ಆರೆಂಜ್, ಪರ್ಪಲ್ ಕ್ಯಾಪ್..
IPL 2025 Playoffs: ಐಪಿಎಲ್ 2025ರ ಆವೃತ್ತಿ ಅದ್ಧೂರಿಯಾಗಿ ನಡೆಯುತ್ತಿದೆ. ಈ ಬಾರಿ ಆರ್‌ಸಿಬಿ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರುತ್ತಾ ಬಂದಿದೆ. ಹಾಗಾದ್ರೆ ಪ್ಲೇ ಆಫ್ ಪ್ರವೇಶ ಮಾಡಲು ಇನ್ನೆಷ್ಟು ಪಂದ್ಯಗಳನ್ನು ಗೆಲ್ಲಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇದುವರೆಗೂ ಆರ್‌ಸಿಬಿ ಸೇರಿದಂತೆ ಉಳಿದ ತಂಡಗಳು ಎಷ್ಟು ಪಂದ್ಯಗಳನ್ನು ಆಡಿ ಎಷ್ಟು ಗೆದ್ದಿವೆ? ಪಾಯಿಂಟ್ಸ್ ಟೇಬಲ್‌ನಲ್ಲಿ ಸ್ಥಾನ ಏನು ಹಾಗೂ ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿವೆ ಹಾಗೂ ಈ ರೇಸ್‌ನಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ವಿಶ್ವದಲ್ಲೇ ಅತ್ಯಂತ ದೊಡ್ಡ ಲೀಗ್ ಅಂದ್ರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್). ಈ ಬಾರಿ ಅಂದರೆ 18ನೇ ಆವೃತ್ತಿ ಭರ್ಜರಿಯಾಗಿ ನಡೆಯುತ್ತಿದ್ದು, 10 ತಂಡಗಳ ಪರ್ಫಾಮೆನ್ಸ್ ಹೇಗಿದೆ? ಅದರಲ್ಲೂ ಐಪಿಎಲ್‌ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ ಎಷ್ಟನೇ ಸ್ಥಾನದಲ್ಲಿದೆ ಗಮನಿಸಿ.
1. ಇದುವರೆದೂ ಆಡಿರುವ 11 ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವು 3ರಲ್ಲಿ ಸೋತು ಉಳಿದ 8 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 16 ಅಂಕಗಳನ್ನು ಪಡೆಯುವ ಮೂಲಕ ಅಗ್ರ ಸ್ಥಾನದಲ್ಲಿದೆ.
2. ಆಡಿರುವ 11 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೂರರಲ್ಲಿ ಸೋತು ಉಳಿದ 8 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 16 ಅಂಕಗಳನ್ನು ಪಡೆಯುವ ಮೂಲಕ 2ನೇ ಸ್ಥಾನದಲ್ಲಿದೆ. ಆದರೂ ಪ್ಲೇ ಆಫ್‌ಗೇರಲು ಮೂರರಲ್ಲಿ ಇನ್ನೊಂದು ಪಂದ್ಯವನ್ನು ಗೆಲ್ಲಲ್ಲೇಬೇಕಿದೆ.
ಯಾಕಂದ್ರೆ ರನ್ ರೇಟ್ ಕೆಳಗಿರುವ ತಂಡಕ್ಕಿಂತ ಕಡಿಮೆ ಇದೆ. ಅಲ್ಲದೆ, ಉಳಿದ ನಾಲ್ಕೂ ತಂಡಗಳಿಗೂ ಇನ್ನೂ ಎರಡ್ಮೂರು ಪಂದ್ಯಗಳು ಬಾಕಿಯಿವೆ. ಒಂದು ವೇಳೆ ಅವುಗಳಲ್ಲಿ ಎಲ್ಲಾ ಗೆದ್ದರೆ, ಆರ್‌ಸಿಬಿಗೆ ಕಷ್ಟ ಆಗಬಹುದು. ಆದ್ದರಿಂದ ಉತ್ತಮ ರನ್ ರೇಟ್‌ನ ಮೂಲಕ ಇನ್ನೊಂದು ಪಂದ್ಯ ಗೆದ್ದು18 ಅಂಕಗಳನ್ನು ಪಡೆದರೆ ಪ್ಲೇ ಆಫ ಹಾದಿ ಸುಗಮವಾಗಲಿದೆ.
ಒಂದು ವೇಳೆ ಮೂರಕ್ಕೆ ಮೂರು ಪಂದ್ಯಗಳನ್ನು ಗೆದ್ದರೂ ಪ್ಲೇ ಆಫ್ ಪ್ರವೇಶ ಬಹುತೇಕ ಖಚಿತ ಆದಂತಾಗಲಿದೆ. ಆರ್‌ಸಿಬಿ ತಂಡದ ಸ್ಥಾನವನ್ನು ಯಾರು ಕೂಡ ಕಿತ್ತುಕೊಳ್ಳಲು ಸಾಧ್ಯವಿಲ್ಲದಂತಾಗುತ್ತದೆ.
3. ಆಡಿರುವ 11 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವು 3ಲ್ಲಿ ಸೋತು 7 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 15 ಅಂಕಗಳನ್ನು ಪಡೆಯುವ ಮೂಲಕ 3ನೇ ಸ್ಥಾನದಲ್ಲಿದೆ.
4. ಆಡಿರುವ 12 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವು 5ರಲ್ಲಿ ಸೋತು ಉಳಿದ 7 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 14 ಅಂಕಗಳನ್ನು ಪಡೆಯುವ ಮೂಲಕ 4ನೇ ಸ್ಥಾನದಲ್ಲಿದೆ.
5. ಇದುವರೆದೂ ಆಡಿರುವ 11 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಟ್ ತಂಡವು 4ರಲ್ಲಿ ಸೋತು ಉಳಿದ 6ರಲ್ಲಿ ಗೆದ್ದು 13 ಅಂಕಗಳನ್ನು ಪಡೆಯುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 5ನೇ ಸ್ಥಾನದಲ್ಲಿದೆ.
6. ಆಡಿರುವ 12 ಪಂದ್ಯಗಳಲ್ಲಿ ಕೊಲ್ಕಾತ್ತಾ ನೈಟ್ ರೈಡರ್ಸ್ ತಂಡವು 5ಲ್ಲಿ ಸೋತು ಉಳಿದ 6 ಪಂದ್ಯಗಳಲ್ಲಿ ಗೆದ್ದು ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 11 ಅಂಕಗಳನ್ನು ಪಡೆಯುವ 6ನೇ ಸ್ಥಾನದಲ್ಲಿದೆ. ಇನ್ನು ಎರಡು ಪಂದ್ಯಗಳಲ್ಲಿ ಎರಡನ್ನು ಗೆದ್ದರೂ ಪ್ಲೇ ಆಫ್ ಪ್ರವೇಶ ಕಷ್ಟವಾಗಿದ್ದು, ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ.
7. ಆಡಿರುವ 11 ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು 6ರಲ್ಲಿ ಸೋತು ಉಳಿದ 5 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 10 ಅಂಕಗಳನ್ನು ಪಡೆಯುವ ಮೂಲಕ 7ನೇ ಸ್ಥಾನದಲ್ಲಿದೆ.
8. ಆಡಿರುವ 11 ಪಂದ್ಯಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು 7ರಲ್ಲಿ ಸೋತು ಉಳಿದ 3 ಪಂದ್ಯಗಳಲ್ಲಿ ಮಾತ್ರ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 7 ಅಂಕಗಳನ್ನು ಪಡೆಯುವ ಮೂಲಕ 8ನೇ ಸ್ಥಾನದಲ್ಲಿದೆ.
9. ಆಡಿರುವ 12 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು 9ರಲ್ಲಿ ಸೋತು ಉಳಿದ 3 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 6 ಅಂಕಗಳನ್ನು ಪಡೆಯುವ ಮೂಲಕ 9ನೇ ಸ್ಥಾನದಲ್ಲಿದೆ.
10. ಆಡಿರುವ 12 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 9ರಲ್ಲಿ ಸೋತು ಉಳಿದ 3 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 4 ಅಂಕಗಳನ್ನು ಪಡೆಯುವ ಮೂಲಕ ಕೊನೇ ಸ್ಥಾನವನ್ನು ಅಂದರೆ ಕಳಗಿನಿಂದ ಒಂದನೇ ಸ್ಥಾನ ಅಲಂಕರಿಸಿದೆ. ಪ್ರತಿ ಬಾರಿಯೂ ಪಾಯಿಂಟ್ಸ್ ಟೇಬಲ್‌ನಲ್ಲ ಮೇಲೆ ಇರುತ್ತಿದ್ದ ತಂಡಗಳೇ ಈ ಬಾರಿ ಕೆಳಗಿಳಿದಿರುವುದೇ ಆಶ್ಚರ್ಯಕರ ಸಂಗತಿ.
ಪಾಯಿಂಟ್ಸ್ ಟೇಬಲ್‌ನಲ್ಲಿ ಯಾವ ತಂಡ ಎಷ್ಟನೇ ಸ್ಥಾನ?
1. ಗುಜರಾತ್ ಟೈಟಾನ್ಸ್
2. ರಾಯಲ್ ಚಾಲೆಂಜರ್ಸ್ ಬೆಂಗಳೂರು
3. ಪಂಜಾಬ್ ಕಿಂಗ್ಸ್
4. ಮುಂಬೈ ಇಂಡಿಯನ್ಸ್
5. ಡೆಲ್ಲಿ ಕ್ಯಾಪಿಟಲ್ಸ್
6. ಕೊಲ್ಕತ್ತಾ ನೈಟ್ ರೈಡರ್ಸ್
7. ಲಕ್ನೋ ಸೂಪರ್ ಜೈಂಟ್ಸ್
8. ಸನ್ ರೈಸರ್ಸ್ ಹೈದರಾಬಾದ್
9. ರಾಜಸ್ಥಾನ್ ರಾಯಲ್ಸ್
10. ಚೆನ್ನೈ ಸೂಪರ್ ಕಿಂಗ್ಸ್
ಇನ್ನು ಐಪಿಎಲ್ 2025ರಲ್ಲಿ ಆರ್‌ಸಿಬಿ ತಂಡವು ಗೆಲುವಿನ ಹಾದಿಯನ್ನು ಹಿಡಿದಿದ್ದು, ಕಪ್ ಗೆಲ್ಲುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಯಾಕಂದ್ರೆ ಇದುವರೆಗೂ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದೆ. ಇತ್ತೀಚೆಗಷ್ಟೇ ಸಿಎಸ್‌ಕೆ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಮೇಲೇರುವ ಮೂಲಕ ಮೂಲಕ ಪ್ಲೇ ಆಫ್ ಪ್ರವೇಶದ ಹಾದಿಯನ್ನು ತುಸು ಸುಗಮಗೊಳಿಸಿಕೊಂಡಿದೆ.
ಆರ್‌ಸಿಬಿಯು ತವರಿನಲ್ಲಿ ಮೂರು ಪಂದ್ಯಗಳನ್ನು ಸೋತಿದ್ದು, ಬಿಟ್ಟರೆ ಉಳಿದ ಎಲ್ಲಾ ಪಂದ್ಯಗಳಲ್ಲೂ ಗೆದ್ದು ಬೀಗಿದೆ. ಎರಡು ತವರಿನಲ್ಲಿ ಗೆದ್ದರೆ, ಉಳಿದ ಆರು ಪಂದ್ಯಗಳನ್ನು ತವರಿನಂದಾಚೆ ಗೆದ್ದು ಬೀಗಿದೆ. ಈ ಮೂಲಕ ಪ್ಲೇ ಆಫ್ ತಲುಪುವ ಸನಿಹದಲ್ಲಿದೆ.
ಪ್ಲೇ ಆಫ್ ರೇಸ್‌ನಲ್ಲಿ ಇದೀಗ ಐದು ತಂಡಗಳು ಪೈಪೋಟಿ ನಡೆಸುತ್ತಿದೆ. ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಭಾರೀ ಪೈಪೋಟಿ ನಡೆಸುತ್ತಿವೆ. ಯಾಕಂದ್ರೆ ಈ ತಂಡಗಳಿಗೆ ಇನ್ನೂ ಎರಡ್ಮೂರು ಪಂದ್ಯಗಳು ಬಾಕಿ ಇವೆ.
ಇನ್ನು ಆರ್‌ಸಿಬಿಯು ಮತ್ತೊಂದು ಪಂದ್ಯವನ್ನು ಉತ್ತಮ ರನ್ ರೇಟ್‌ನ ಮೂಲಕ ಗೆಲ್ಲಲೇಬೇಕಿದೆ. ಇನ್ನೂ ಮೂರು ಪಂದ್ಯಗಳು ಬಾಕಿಯಿವೆ. ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆಲುವು ಸಾಧಸುವ ಮೂಲಕ ಪ್ಲೇ ಆಫ್ ದಾರಿಯನ್ನು ತುಸು ಸುಲಭ ಮಾಡಿಕೊಂಡಿದೆ. ಆದರೂ ಉಳಿದ ಮುಂದಿನ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆಲ್ಲಲೇಬೇಕಿದೆ.
ಆರೆಂಜ್ ಕ್ಯಾಪ್ ಯಾರ ಬಳಿ ಇದೆ?: ಈ ಆವೃತ್ತಿಯಲ್ಲಿ ಇಲ್ಲಿಯವರೆಗೂ ಆಡಿದ ಪಂದ್ಯಗಳಲ್ಲಿ ಅತೀ ಹೆಚ್ಚು ರನ್‌ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ ಅಗ್ರ ಸ್ಥಾನದಲ್ಲಿದ್ದಾರೆ. ಅವರು 12 ಪಂದ್ಯಗಳಲ್ಲಿ 510 ರನ್ ಕಲೆ ಹಾಕಿದ್ದಾರೆ.
ಅತೀ ಹೆಚ್ಚು ರನ್ ಬಾರಿಸಿದವರು
* ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್: 510
* ಗುಜರಾಜ್ ಟೈಟಾನ್ಸ್ ತಂಡದ ಎಸ್.ಸುದರ್ಶನ್: 509
* ಗುಜರಾಜ್ ಟೈಟಾನ್ಸ್ ತಂಡದ ಶುಭ್ಮನ್ ಗಿಲ್: 508
* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ: 505
* ಗುಜರಾತ್ ಟೈಟಾನ್ಸ್ ತಂಡದ ಜೋಶ್ ಬಟ್ಲರ್: 500
ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?: ಗುಜರಾತ್ ಟೈಟಾನ್ಸ್ ತಂಡದ ಪ್ರಸಿದ್ಧ್ ಕೃಷ್ಣ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಪರ್ಪಲ್ ಕ್ಯಾಪ್ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಅವರು 20 ವಿಕೆಟ್ ಪಡೆದಿದ್ದಾರೆ.
ಅತೀ ಹೆಚ್ಚು ವಿಕೆಟ್ ಪಡೆದವರು
* ಗುಜರಾತ್ ಟೈಟಾನ್ಸ್ ತಂಡದ ಪ್ರಸಿದ್ಧ್ ಕೃಷ್ಣ: 20 ವಿಕೆಟ್
* ಚೈನ್ನೈ ಸೂಪರ್ ಕಿಂಗ್ಸ್ ತಂಡದ ನೂರ್ ಅಹ್ಮದ್: 20 ವಿಕೆಟ್
* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೋಶ್ ಹ್ಯಾಜಲ್‌ವುಡ್: 18 ವಿಕೆಟ್
* ಮುಂಬೈ ಇಂಡಿಯನ್ಸ್ ತಂಡದ ಟ್ರೆಂಟ್ ಬೋಲ್ಟ್: 18 ವಿಕೆಟ್
* ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವರುಣ್ ಚಕ್ರವರ್ತಿ: 17 ವಿಕೆಟ್












Click it and Unblock the Notifications